Friday, August 28, 2009

ಬಳುಕುವ ಬಿಂಕದ ಬಳ್ಳಾರಿ ....

ನನ್ನ ಟೀಂ ಲೀಡರ್ ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ (ಏಕೆ ಎಂದು ತಿಳಿಯಬೇಕಾದರೆ ಓದಿ ಮನಸೂರೆಗೊಳ್ಳುವ ಮೈಸೂರು.... ) ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ ವಿಲನ್ ಉದ್ಗಾರ. ಇಲ್ಲವೊ ಬಳ್ಳಾರಿ ಜೈಲಿಗೆ ಕಳುಹಿಸಿಬಿಡುತ್ತೇನೆ ಎಂದು ವಿಲನ್ ಪೋಲಿಸ್ ಹೇಳುವ ಪರಿ ಸಿನಿಮಾದಲ್ಲಿ ನೋಡಿದ್ದೇ. ಇಲ್ಲಿ ನನ್ನ ತಪ್ಪು ಮಾತ್ರ ನನಗೆ ಅರಿವಾಗಿರಲಿಲ್ಲ. ಆದರು ಬಳ್ಳಾರಿಯಲ್ಲಿ ಇದ್ದೆ. ಗುಡ್ಡದ ಕೆಳಗೆ ಬಸ್ ಸ್ಟ್ಯಾಂಡ್. ಆಗಿನ್ನೂ 8.00 ಘಂಟೆ ಉರಿಬಿಸಿಲಿನಿಂದ ಮಧ್ಯಾಹ್ನ 11.00 ಘಂಟೆ ಆದ ಹಾಗೆ ಅನ್ನಿಸಿತು. ಇಳಿದ ಮೇಲೆ ಅಲ್ಲೇ ಇದ್ದ ಬೇಕರಿಗೆ ಹೋಗಿ "ಟೀ ಕೊಡಿ ಸ್ವಾಮಿ" ಎಂಬ ಸವಿನಯದಿಂದ ಕೇಳಿದೆ. ಟೀ ಅದ ಮೇಲೆ "ಎ ಟೀ ತಗೋ" ಎಂದು ಒರಟು ಭಾಷೆಯಿಂದ ಹೇಳಿದ. ಆದು ತುಂಬಾ ಚೆನ್ನಾಗಿರುವ "ಇರಾನಿ ಟೀ" ಅಂತಹ ಟೀ ನಾನು ಜೀವನದಲ್ಲೇ ಸವಿದಿರಲಿಲ್ಲ. ಅನಂತರನೇ ಗೊತ್ತಾಗಿದ್ದು ಇದು ಧಾರವಾಡದ ಭಾಷೆ ಹಾಗೇನೇ ಎಂದು ಆದರೆ ಅದಕ್ಕಿಂತಲೂ ತುಂಬ ಒರಟು ಭಾಷೆ.

ಆಟೋ ಹಿಡಿದು ಅಡ್ರೆಸ್ ದಾರಿಹೋಕರನ್ನು ಕೇಳಿ ತಿಳಿದು ಮನೆ ತಲುಪಿದೆ. ಅದು ಮನೆ ಹಾಗಿರದೆ ಒಂದು ಚಿಕ್ಕದಾದ ಕೋಣೆ. ಒಬ್ಬರು ಮಾತ್ರ ಇರಬಹುದಾಗಿತ್ತು. ಅರ್ಧ ಘಂಟೆ ಹಾಗೆ ವಿಶ್ರಾಂತಿ ತೆಗೆದುಕೊಂಡು ನಿತ್ಯಕರ್ಮಗಳನ್ನು ಮುಗಿಸಿ ಆಫೀಸ್ ತಲುಪಿದೆ. ಗೇಟಿನಲ್ಲಿ ಸೆಕ್ಯೂರಿಟಿ ಕೇಳಿದ ಯಾರು ಬೇಕು ಎಂದು "ನಾನು ನಿದ್ದೆಗಣ್ಣಲ್ಲಿ" ಡೈರಿ ಎಂದೆ. ಹೌದು ಡೈರಿನೆ ಹಾಲು ಬೇಕಾದರೆ ಆ ಕೌಂಟರ್ ಗೆ ಹೋಗಿ ಕೈ ಮಾಡಿ ಕೌಂಟರ್ ತೋರಿಸಿದ. ನಾನು ಅನಂತರ ಸಾಫ್ಟವೇರ್ Implementation ಗೆ ಬಂದಿದ್ದೇನೆ ಎಂದು ಹೇಳಿದಾಗ ಒಳಗಡೆ ಬಿಟ್ಟ.

ನಾನು ಮೈಸೂರಿನಲ್ಲಿ ಪ್ರತಿದಿನವು ಶ್ರೀರಾಮ ಮಂದಿರಕ್ಕೆ ಹೋಗುತ್ತಿದ್ದೆ. ಇಲ್ಲಿ ಏನು ಗೊತ್ತಿಲ್ಲವಾದ್ದರಿಂದ. ಹಾಗೆ ಬಂದಿದ್ದೆ. ಏನು ಆಘಾತ ಕಾದಿದೆ ಎಂದು ಮನದಲ್ಲೇ ಶ್ರೀರಾಮನನ್ನು ನೆನೆದು ಒಳಗಡೆ ಕಾಲಿಟ್ಟೆ. ಒಳಗಡೆ ಒಂದು ಆಕಳು ನಿಂತಿತ್ತು. ತುಂಬಾ ಖುಷಿ ಆಯಿತು. "ಗೋ ಮಾತೆ ತಾಯಿ" ಎಂದು ಹೋಗಿ ಅದನ್ನು ಹಿಂದಿನಿಂದ ನಮಸ್ಕರಿಸಿದೆ. ಆಗಲೇ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು "ಸರ್, ಏನಾದ್ರು ಮಾಡಿ ನನ್ನ ಆಕಳಿಗೆ ಹಾಲು ಬರುವ ಹಾಗೆ ಮಾಡಿ" ಎಂದು ಕಾಲಿಗೆ ಬಿದ್ದ. ನೋಡುವಷ್ಟರಲ್ಲೇ ಗೊಳೋ ಎಂದು ಅಳಲಾರಂಬಿಸಿದ. ನನಗೆ ದಿಕ್ಕೇ ತೋಚದಾಗಿತ್ತು. ನಾನು ಏನು ಇದೆಲ್ಲ? ನನ್ನ ಕಾಲುಬಿಡು ಎಂದೆ. ಇಲ್ಲ ನಾನು ಕಾಲು ಬಿಡುವದಿಲ್ಲ. ನೀವು ಸಹಾಯ ಮಾಡುತ್ತೇನೆ ಎಂದರೆ ಮಾತ್ರ ಬಿಡುತ್ತೇನೆ ಎಂದ. ನಾನು ....ನಾನು ಎಂದು ತಡವರಿಸಿದೆ. ಡಾಕ್ಟರೆ ಏನಾದರು ಮಾಡಿ ಹಾಲು ಬರಿಸಿ ಎಂದು ಹೇಳಿದ. ಆಗ ನನಗೆ ತಿಳಿಯಿತು. ನಾನು ಡಾಕ್ಟರ ಅಲ್ಲ ಎಂದೆ. ಮತ್ತೆ ನೀವು ಡಾಕ್ಟರ ಅಲ್ಲವಾ? ಎಂದ. ಇಲ್ಲ ನಾನು ಕಂಪ್ಯೂಟರ್ ನವನು ಎಂದು ಹೇಳಿದೆ. ಓ ಕಂಪ್ಯೂಟರಾ... ಎಂದು ರಾಗವೆಳೆದು. ನನ್ನನ್ನು ಓರೆಗಣ್ಣಿಂದ ನೋಡಿ. ಮೊದಲೇ ಹೇಳಬಾರದ ಎಂದು ನನ್ನನ್ನು ಜಬರಿಸಿ. ಮತ್ತೆ ಹೋಗಿ ಮರದ ಕೆಳೆಗೆ ಕುಳಿತ. ಹೇಳಿಕೊಳ್ಳಲು ಬಿಟ್ಟಿದ್ದೆಲ್ಲಿ ಎಂದು ನಾನು ಮನದಲ್ಲೇ ಅಂದುಕೊಂಡೆ. ಆಗ ಅನ್ನಿಸಿತು ಬಿಳಿ ಅಂಗಿ ಹಾಕಿಕೊಂಡು ಬರಬಾರದಿತ್ತೆಂದು.
ಮತ್ತೆ ಹೆದರಿಕೆಯಿಂದಲೇ ಒಳಗಡೆ ಕಾಲಿಟ್ಟ ಕೂಡಲೇ ಒಬ್ಬ ಮನುಷ್ಯ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ. ನನಗೆ ಈಗ ಪೂರ್ತಿ ಭಯ ಶುರು ಆಗಿತ್ತು. ನನಗೆ ಆ ಸೆಕ್ಯೂರಿಟಿ ಗಾರ್ಡ್ ಮೇಲೆ ಡೌಟ್ ಬಂತು. ಎಲ್ಲಿ ಡೈರಿ ಅಂತ ಹೇಳಿ ಹುಚ್ಚರ ಆಸ್ಪತ್ರೆ ಒಳಗಡೆ ಬಿಟ್ಟಿದ್ದಾನೋ ಎಂದು. ಸ್ವಲ್ಪ ಹೊತ್ತು ಕಾದ ಮೇಲೆ ಕಂಪ್ಯೂಟರ್ ಡಿಪಾರ್ಟ್ಮೆಂಟ್ ಹೆಡ್ ಆದ ಹೆಗಡೆ ಬಂದರು ತಾವಯಿಗೆಯೇ ನನ್ನನ್ನು ಪರಿಚಯ ಮಾಡಿಕೊಂಡರು. ತುಂಬ ಒಳ್ಳೆಯ ಮನುಷ್ಯ. ಅನಂತರ ಎಲ್ಲ ಡಿಪಾರ್ಟ್ಮೆಂಟ್ ಪರಿಚಯಿಸಲು ಕರೆದು ಕೊಂಡು ಹೋದರು.ಮ್ಯಾನೇಜರ್ ರೂಂ ಪ್ರವೇಶಿಸಿದೊಡನೆ ಮತ್ತೊಂದು ಆಘಾತ ಕಾದಿತ್ತು. ಮ್ಯಾನೇಜರ್ ತನ್ನ ತಲೆಯ ಕೂದಲನ್ನು ಕಿತ್ತಿ ಕೊಳ್ಳುತ್ತಿದ್ದರು. ಪರಿಚಯ ವಾದ ಮೇಲೆ ಹೊರಗೆ ಬಂದೊಡನೆ ಹೆಗಡೆ ನನಗೆ ಹೇಳಿದರು ಇವರೆಲ್ಲ ಹೀಗೆ ನೀವೇನು ತಲೆ ಕೆಡಿಸಿಕೊಳ್ಳಬೇಡಿ ಎಂದು. ತಲೆ ಕೆಡಿಸಿ ಕೊಳ್ಳಲು ತಲೆಯಲ್ಲಿ ಏನು ಉಳಿದಿದೆ ಎಂದು ಕೇಳಬೇಕೆಂದೆ ಆದರೆ ಕೇಳಲಿಲ್ಲ... ಅನಂತರ ಭೇಟಿಯಾಗಿದ್ದು ಆ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ ವ್ಯಕ್ತಿ ಅವರು ಮಿಲ್ಕ್ ಬಿಲ್ ಆಫೀಸರ್ ಎಂದು ಆಗಲೇ ತಿಳಿದಿದ್ದು. ಅವರಿಗೆ ಬಿಲ್ ಬೇಕು ಎಂದು ಮ್ಯಾನೇಜರ್ ಪೀಡಿಸಿದ್ದರು ಕಾರಣ ಆ ಆಸಾಮಿ ತಲೆ ಚಚ್ಚಿ ಕೊಳ್ಳುತಿದ್ದ. ಹಾಗು ಹೀಗು ಎಲ್ಲರ ಪರಿಚಯವಾದ ಮೇಲೆ ಕ್ಯಾಬಿನ್ನಿನಲ್ಲಿ ಬಂದು ಕುಳಿತೆ. ಅಷ್ಟರಲ್ಲೇ ಫೈನಾನ್ಸ್ ಆಫೀಸರ್ ಗಳು ನನಗೆ ಕಾಯುತ್ತಿದ್ದರು ಅವರಿಗೆ ಮಿಲ್ಕ್ ಬಿಲ್ ಬ್ಯಾಲೆನ್ಸ್ ಶೀಟ್ ಬೇಕಾಗಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ತಯಾರಾಗಿತ್ತು. ಹಾಗು ಹೀಗು ಅವರಿಗೆ ಓಪನಿಂಗ್ ಬ್ಯಾಲೆನ್ಸ್ ಎಂಟ್ರಿ ಮಾಡಲು ಹೇಳಿ. ಮರುದಿವಸ ಬ್ಯಾಲೆನ್ಸ್ ಶೀಟ್ ರೆಡಿ ಮಾಡಿ ಕೊಟ್ಟಿದ್ದೆ.

ಗುಡ್ಡದ ಕೆಳಗೆ ಚಿಕ್ಕ ಕೋಣೆ. ತುಂಬ ಉರಿಬಿಸಿಲು ಒಬ್ಬನೇ ಹೇಗೆ ಕಾಲ ಕಳೆಯುವದು ಒಂದು ದೊಡ್ಡ ಪ್ರಶ್ನೆ ಯಾಗಿತ್ತು. ಆಗ ನನಗೆ ಪುಸ್ತಕ ಓದುವ ಹವ್ಯಾಸ ಹತ್ತಿಕೊಂಡಿತ್ತು. ಮತ್ತೆ ಸಮಯ ಸಿಕ್ಕಾಗ ಶ್ರೀ ರಾಮ ನಾಮವನ್ನು ಬರೆಯುವದು. ತುಂಬಾ ಒಳ್ಳೊಳ್ಳೆ ವಿಷಯಗಳನ್ನು ಅರಿತಿದ್ದೆ. ಅದಕ್ಕೆ ಹೇಳಿರಬೇಕು ಹಿರಿಯರು "ದೇಶ ಸುತ್ತು ಇಲ್ಲ ಕೋಶ ಓದು" ಎಂದು. ನನಗೆ ಅಕಸ್ಮಾತ್ತಾಗಿ ಎರಡು ಸದಾವಕಾಶಗಳು ದೊರೆತಿದ್ದವು. ನನಗೆ ನಿಜವಾಗಿಯು ಬಳ್ಳಾರಿ ಸಿನಿಮಾದಲ್ಲಿ ತೋರಿಸುವ ಹಾಗೆ ಅನ್ನಿಸಲೇ ಇಲ್ಲ. ಅಲ್ಲಿಯ ಖಾರವಾಗಿರುವ ರೋಟಿ ಊಟ. ಈಗಲೂ ಬಾಯಿಗೆ ಚಪಲತೆ ನೆನಪಿಸುತ್ತದೆ. ಮತ್ತೆ "ತುಂಗಾ ಪಾನ ಗಂಗಾ ಸ್ನಾನ" ಎಂದು ಹಿರಿಯರು ಹೇಳಿದ ಹಾಗೆ ತುಂಗೆಯ ನೀರನ್ನು ಸವಿಯುವ ಅವಕಾಶ ದೊರೆತಿತ್ತು. ತುಂಬಾ ಒಳ್ಳೆಯ ಸಿಹಿ ನೀರು.
ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ ಆದರೆ 4 ತಿಂಗಳಿಗೆ ಪಾಂಡುರಂಗನಿಗೆ ಬೇರೆ ನೌಕರಿ ಸಿಕ್ಕಿತ್ತು. ಎಲ್ಲ ಜವಾಬ್ದಾರಿ ನನ್ನ ತಲೆಯ ಮೇಲೆ ಹೇರಿ ಹೋಗಿದ್ದರು ಇದು ರಾಮ ನಾಮದ ಫಲವೋ ಗೊತ್ತಿಲ್ಲ. ನಾನು ಮೊದಲ ಬಾರಿ ಟೀಂ ಲೀಡರ್ ಆಗಿದ್ದೆ. ಅದನ್ನು ನಿಭಾಯಿಸುವ ಪರಿಪಕ್ವತೆ ನನಗೆ ಬಂದಿತ್ತು. ಹೀಗೆ ಬಳ್ಳಾರಿ ನನಗೆ ತುಂಬ ಪಾಠ ಕಲಿಸಿತ್ತು. ಅಲ್ಲಿಯ ಫೈನಾನ್ಸ್ ಆಫೀಸರ್ ಗಳಾದ ಹಯವದನ ಆಚರ್ಯರಿಂದ ತುಂಬಾ ಕಲಿತ್ತಿದ್ದೆ. ಮತ್ತೆ ನನಗೆ ಹೆಗಡೆಯವರ ಸಹಾಯದಿಂದ 4 department computerise ಮಾಡಿದ್ದೆ.

ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ. ನಮ್ಮ MD ನನಗೆ ಫೋನ್ ಮಾಡಿ ನೀನು ನಾಳೆ ಶಿವಮೊಗ್ಗಕ್ಕೆ ಬರಬೇಕು ಮೀಟಿಂಗ್ ಇದೆ ಎಂದಾಗ ಯಾಕಾದರೂ ಟೀಂ ಲೀಡರ್ ಆದೆ ಎಂದು ಮನಸಿನಲ್ಲಿ ಅನ್ನಿಸಿತ್ತು. ಆದರೂ ಬೇಡದ ಮನಸಿನಿಂದ ಶಿವಮೊಗ್ಗ ಬಸ್ ಹತ್ತಿದ್ದೆ.

ಬಳ್ಳಾರಿಯಲ್ಲೇ ಇದ್ದಾಗ ಒಮ್ಮೆ ಮಂತ್ರಾಲಯಕ್ಕೆ ಹೋಗಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ ಬಂದಿದ್ದೆ. ಮತ್ತೆ ಒಂದು ದಿನ ಕರ್ನಾಟಕ ಇತಿಹಾಸದಲ್ಲೇ ಅತ್ಯುನ್ನತವಾದ ವಿಜಯನಗರ ಸಮ್ರಾಜ್ಯವಾದ ಹಂಪಿಯನ್ನು. ಆದರೆ ಅದನ್ನು ಹಾಳು ಮಾಡಿದ್ದೂ ನೋಡಿದರೆ ಮನ ಕಲುಕುತಿತ್ತು.

ಬಳ್ಳಾರಿ ನನಗೆ ನಿಜವಾಗಿಯು ಬಳುಕುವ ಬಿಂಕದ ಸಿಂಗಾರಿ ಇದ್ದ ಹಾಗೆ. ಅಲ್ಲಿ ಕಳೆದ 4 ತಿಂಗಳು ನನಗೆ ಜೀವನದ ಪ್ರತಿ ಕ್ಷಣವನ್ನು ಹೇಗೆ ಸವಿಯಬೇಕು ಎಂದು ಕಲಿಸಿದ ಊರು. ಅದಕ್ಕೆ ನಾನು ಹೇಳುವದು ಅದು ಬಳುಕುವ ಬಿಂಕದ ಸಿಂಗಾರಿ ನನ್ನ ಪ್ರೀತಿಯ ಬಳ್ಳಾರಿ ಎಂದು ......

ತರ್ಲೆ ಮಂಜ(ಗ)ನ ಎದಿರೇಟು....

ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.


ಒಂದು ದಿವಸ ಕ್ರಿಕೆಟ್ ಆಡುತ್ತಿದ್ದಾಗ ಮನೋಜನ ಟೀಂ, ಮಂಜನ ಟೀಂ ಮೊದಲ ಬಾರಿ ಸೋಲಿಸಿ ಬಿಟ್ಟಿತ್ತು. ಆಟದ ನಡುವೆ ಸ್ವಲ್ಪ ಜಿದ್ದಾ - ಜಿದ್ದಿನಿಂದ ಮಂಜನ ಜೊತೆ ಜಗಳ ಆಯಿತು .. ಮನೋಜನ ಗೆಲುವಿನ ಖುಷಿಗೆ ಪಾರವೇ ಇರಲಿಲ್ಲ. ತಮ್ಮ ಟೀಂ ಫೋಟೋ ತಗಿಸಿ ನೋಟೀಸ್ ಬೋರ್ಡ್ ಗೆ ಅಂಟಿಸಿದ್ದ. ಮಂಜನಿಗೆ ಎಲ್ಲಿಲ್ಲದ ಕೋಪ ಉಕ್ಕಿ ಹರಿದಿತ್ತು. ಇವನನ್ನು ಹೇಗಾದರೂ ಮಾಡಿ ಎದಿರೇಟು ಕೊಡಬೇಕಾಗಿತ್ತು. ಮನೋಜ ಆನಂತರ ಕ್ಷಮೇ ಕೇಳಿದನಾದರೂ ಪ್ರಯೋಜನವಾಗಿರಲಿಲ್ಲ....
6 ತಿಂಗಳ ಪರೀಕ್ಷೆಯ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಮಂಜ ಮತ್ತು ಮನೋಜನ ಸೀಟ್ ಹಿಂದೆ ಮುಂದೆಯೇ ಬರುತಿತ್ತು. ಮನೋಜನಿಗೆ ಪಾಸಾಗಲು ಸಹಾಯ ಮಾಡುವ ಏಕೈಕ ವೈಕ್ತಿ ನಮ್ಮ ಮಂಜ. ಅವನೇ ಕೈಕೊಟ್ಟಿದ್ದರಿಂದ ಮನೋಜನಿಗೆ ಪಾಸಾಗುವದು ಸಾಧ್ಯವೇ ಇರಲಿಲ್ಲ.


ಆವತ್ತು ವಿಜ್ಞಾನ ಪರೀಕ್ಷೆ ಇತ್ತು. ಮಂಜ ನಮ್ಮ ಹತ್ತಿರ ಬಂದು. "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಬೀಗಿದ. ಏನು ಮಾಡಿದೆ? ಎಂದು ನಾವೆಲ್ಲರೂ ಕೇಳಿದರು ಮಂಜ ಹೇಳಲಿಲ್ಲ. ರಿಸಲ್ಟ್ ಬರಲಿ ನಿನಗೆ ಗೊತ್ತಾಗುತ್ತೆ ಎಂದ. ಏನು ಮಾಡಿದ್ದ ಎಂದು ಯಾರಿಗೂ ತಿಳಿಯದಾಗಿತ್ತು.


ಮರುದಿನ ಕನ್ನಡ ಪೇಪರ್ ಇತ್ತು. ಮನೋಜ ಮಂಜನ ಕಾಲಿಗೆ ಬಿದ್ದು ಕ್ಷಮೇ ಕೇಳಿದ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು. ಕಡೆಗೆ ಮಂಜ ಮನೋಜನಿಗೆ ಸಹಾಯ ಮಾಡಲು ಒಪ್ಪಿದ. ಪರೀಕ್ಷೆಯ ಮುಂಚೆ ಮನೋಜನಿಗೆ ಮಂಜ "ಸೀದಾ ಸೀದಾ ನನ್ನ ಪೇಪರ್ ಕಾಪಿ ಮಾಡಬೇಡ ಸ್ವಲ್ಪ ತಿರುಚಿ ಬರಿ" ಎಂದು ತಕೀತ ಮಾಡಿದ್ದ .


ಪರೀಕ್ಷೆಯಲ್ಲಿ ನಿಜವಾಗಿಯು ಮಂಜ ಸಹಾಯ ಮಾಡಿದ್ದ. ಮನೋಜನಿಗೆ ತನ್ನ ತಪ್ಪಿನ ಅರಿವಾಗಿತ್ತು.


ಒಂದು ವಾರದ ನಂತರ ಎಲ್ಲರು ನೋಟೀಸ್ ಬೋರ್ಡ್ ಕಡೆಗೆ ಜಮಾಯಿಸಿದ್ದರು. ನೋಡಿದರೆ ಮನೋಜನ ವಿಜ್ಞಾನ ಪೇಪರ್ ನೇತಾಡುತಿತ್ತು. Alcohol ತಯಾರಿಸುವ ಹೊಸ ವಿಧಾನ ಕಂಡು ಹಿಡಿದವರು ಮನೋಜ್ ಎಂದು ಬರೆದಿತ್ತು. Alcohol ತಯಾರಿಸಲು ಬೇಕಾದ ಸಾಮಾನು ಏಲಕ್ಕಿ ಬಾಳೆ ಹಣ್ಣು, ಸಕ್ಕರೆ , ಹಾಲು, ಏಲಕ್ಕಿ, ತುಪ್ಪ ಮತ್ತು ಜೇನು ತುಪ್ಪ. ಎಲ್ಲ ಸಾಮಾನುಗಳ ಮಿಶ್ರಣ ಮಾಡಿ. ಅದನ್ನು ಒಂದು ಬಾಟಲಿಯಲ್ಲಿ ಹಾಕಿ ಅನಂತರ ಅದನ್ನು ನೆಲದಲ್ಲಿ ಮೂರೂ ದಿವಸ ಹುಗಿದು ಇಡಿ ಎಂದು ಬರೆದಿತ್ತು. ಮತ್ತೆ ಅವುಗಳ ಚಿತ್ರ ಬೇರೆ ಬರೆದಿತ್ತು.


ರಾಜಣ್ಣ ಮಾಸ್ತರ ಆಗಲೇ ಬಂದು "ಎಲ್ಲಿ ಮನ್ಯಾ ಎಂದು ಕೂಗಲಾರಮ್ಬಿಸಿದರು". "Alcohol ತಯಾರಿಸುವ ವಿಧಾನ ಬರೆಯಿರಿ ಎಂದರೆ ಪಂಚಾಮೃತ ಮಾಡ್ಯಾನ ಎಂದು" ಮನೋಜನಿಗೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.
ಅನಂತರ ತಿಳಿಯಿತು ಇದರಲ್ಲಿ ಮಂಜನ ಕೈವಾಡ ಇದೆ ಎಂದು. ಪರೀಕ್ಷೆಯ ದಿವಸ ಮನೋಜ ಮಂಜನಿಗೆ ಭೇಟಿಯಾಗಿ "ನೀನು ಪೇಪರ್ ತೋರಿಸದಿದ್ದರೂ ಪರವಾಗಿಲ್ಲ. ಯಾವ ಯಾವ ಪ್ರಶ್ನೆ ಬೀಳುತ್ತವೆ ಅದನ್ನಾದರೂ ಹೇಳು" ಎಂದು ಕೇಳಿದ್ದ . ಅದಕ್ಕೆ ಮಂಜ Alcohol ತಯಾರಿಸುವ ವಿಧಾನ ಗ್ಯಾರಂಟೀ ಬಿಳುತ್ತೆ ಎಂದು ಹೇಳಿದ್ದ. "ಅದು ಹೇಗೆ ಅಷ್ಟು ಖಚಿತವಾಗಿ ಹೇಳುತ್ತಿ?" ಎಂದು ಮನೋಜ ಕೇಳಿದಾಗ. ಮಂಜ ರಾಜಣ್ಣ ಮಾಸ್ತರ್ ನ ನಿನ್ನೆ ಶೆರೆ ಅಂಗಡಿ ಒಳಗೆ ನೋಡಿದೆ. ಅವರು ಗ್ಯಾರಂಟೀ ಅದನ್ನೇ ಕೊಡುತ್ತಾರೆ ಎಂದ. ಅದಕ್ಕೆ ಅದರ ತಯಾರಿಸುವ ವಿಧಾನವನ್ನು ಹೇಳು ಎಂದಾಗ. ಮಂಜ ಈ ತರ್ಲೆ ಮಾಡಿದ್ದ. ಅದಕ್ಕೆ ನಮಗೆ "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಹೇಳಿದ್ದು.


ಮತ್ತೆ ಮರುದಿನ ಕನ್ನಡ ಮಾಸ್ತರ ಬಂದು ಎಲ್ಲಿ ಆ "ಪಂಚಾಮೃತ ಮನ್ಯಾ". ಎಂದು ಎಲ್ಲರೆದುರು ಕೇಳಿದರು. ಮನೋಜನಿಗೆ ಅಳು ಉಕ್ಕಿ ಬಂದಿತ್ತು. ಮನೋಜನನ್ನು staff ರೂಮಿಗೆ ಕರೆದು ಕೊಂಡು ಹೋಗಿ ಮಾಸ್ತರ "ನೋಡು ಮನೋಜ ನೀನು ಹೊಸದಾಗಿ ತಯಾರಿಸಿರೋ Alcohol ನನಗೆ ಬೇಕು" ಎಂದು ಹೇಳಿದರು "ಇಲ್ಲ ಅಂದರೆ ನಿನ್ನ ಕನ್ನಡ ಪೇಪರ್ ನು ನೋಟೀಸ್ ಬೋರ್ಡ್ ಮ್ಯಾಲೆ ಇರ್ತದ" ಎಂದರು. ಅನಂತರ ಎಲ್ಲರು ಮನೋಜನನ್ನು "ಪಂಚಾಮೃತ ಮನ್ಯಾ" ಎಂದು ಅಂಕಿತ ನಾಮ ಕೊಟ್ಟು ಬಿಟ್ಟಿದ್ದರು.


ಮನೋಜನಿಗೆ ಅರ್ಥವೇ ಆಗಿರಲಿಲ್ಲ. ನಾನು ಕಾಪಿ ಹೊಡೆದದ್ದು ಮಂಜಂದು ಪೇಪರ್ ಅದು ಹೆಂಗ ತಪ್ಪು ಇರಲಿಕ್ಕೆ ಸಾಧ್ಯ? ಎಂದು ಪಂಚಾಮೃತ ತರದೇ ಸುಮ್ಮನೆ ಇದ್ದುಬಿಟ್ಟ.


ಮರುದಿವಸ ಮತ್ತೆ ಕನ್ನಡ ಪೇಪರ್ ನೋಟೀಸ್ ಬೋರ್ಡ್ ಮೇಲೆ. ಮನೋಜ ತಿರುಚಿ ಉತ್ತರ ಬರಿ ಎಂದು ಹೇಳಿದ್ದಕ್ಕೆ ಈ ವಾಕ್ಯವನ್ನು " ಭಾರತಿಗೆ ಮದುವೆ ಆಯಿತು. ಅನಂತರ 2 ಮಕ್ಕಳು ಜನಿಸಿದವು" ಎಂದು ಬರೆಯುವ ಬದಲು "ಭಾರತಿಗೆ ಮಕ್ಕಳು ಜನಿಸಿದವು. ಅನಂತರ 2 ಮದುವೆ ಆಯಿತು." ಎಂದು ತಿರುಚಿ ಬರೆದು ಬಿಟ್ಟಿದ್ದ. ಮತ್ತೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.


ಹೀಗೆ ಮಂಜ ತನ್ನ ಸೇಡನ್ನು ತಿರಿಸಿಕೊಂಡಿದ್ದ. ಅನಂತರ ಮನೋಜ ಯಾವತ್ತು ಮಂಜನ ತಂಟೆಗೆ ಹೋಗಲಿಲ್ಲ. ಮಂಜನ ಪಕ್ಕ ಭಂಟನಾಗಿ ಹೋದ....

ತರ್ಲೆ ಮಂಜ(ಗ)ನ ಪ್ರೇಮ ಪಾಠ ....

ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....

ಸಂದೀಪ ಶಾಂತಿಯನ್ನು ತುಂಬಾ ಪ್ರೀತಿಸುತ್ತಿದ್ದ. ಸದಾ ಅವಳ ಗುಂಗಿನಲ್ಲೇ ಇರುತ್ತಿದ್ದ. ಆದರು ಯಾರಿಗೂ ಹೇಳದೆ ಸುಮ್ಮನೆ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದ. ಮಂಜನ ಸಹಾಯ ಬೇಕೆನಿಸಿದರು ಕೇಳಿರಲಿಲ್ಲ. ನನಗೆ ಈ ವಿಷಯ ತಿಳಿದಿತ್ತು. ಶಾಂತಿಯ ಮನೆ ನಮ್ಮ ಮನೆಯ ಸಮೀಪವೇ ಇತ್ತು. ಸದಾ ನಮ್ಮ ಓಣಿಯನ್ನು ಸುತ್ತುತ್ತಿದ್ದ. ನಮ್ಮ ಅಪ್ಪ ಅಥವಾ ಅಮ್ಮ ನೋಡಿದರೆ ಮಾತ್ರ ಗೋಪಾಲನನ್ನು ನೋಡಲು ಬಂದಿದ್ದೆ ಎಂದು ಭೂಸಿ ಬಿಡುತ್ತಿದ್ದ. ಹೀಗೆ ಒಂದು ದಿವಸ ನಾನು ಕೇಳಿಯೇ ಬಿಟ್ಟೆ. ಏನಪ್ಪಾ ಶಾಂತಿ .. ಎಂದು ಕೂಡಲೇ. ಏನಾದರು ಮಾಡಿ ಸಹಾಯ ಮಾಡು ಎಂದು ಗೋಗರಿದ. ನಾನು, ನವೀನ ಶಾಂತಿಯ ಅಕ್ಕಪಕ್ಕದ ಮನೆ ಹುಡುಗರು. ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾವ ಹುಡುಗರನ್ನು ಶಾಂತಿ ಮಾತನಾಡಿಸಿರಲಿಲ್ಲ. ಇವನ ಪ್ರೇಮ್ ಪ್ರಸ್ತಾಪ ಮಾಡಿದ್ದೂ ನಮ್ಮ ಅಪ್ಪನಿಗೇನಾದರೂ ಗೊತ್ತಾದರೆ ನನ್ನನ್ನು ಅಪ್ಪ ಫೋಟೋ ಫ್ರೇಮ್ ಮಾಡುವದು ಗ್ಯಾರಂಟೀ. ಅದ್ದರಿಂದ ನವೀನನಿಗೆ ಕೇಳು ಎಂದು ಹೇಳಿದೆ. ನವೀನ ಒಂಥರಾ ರೇಡಿಯೋ ಇದ್ದ ಹಾಗೆ, ಅವಿನಿಗೆ ಹೇಳಿದರೆ ಊರಿಗೆ ಡಂಗುರ ಸಾರುತ್ತಾನೆ ಎಂದು ಸಂದೀಪ ಹೇಳಿದ. ಮತ್ತೆ ನಮ್ಮಿಬ್ಬರಿಗೂ ಹೊಳೆದಿದ್ದು ದಿ ಗ್ರೇಟ್ ಮಂಜ.

ಮತ್ತೆ ನಾವಿಬ್ಬರು ಮಂಜನ ಹತ್ತಿರ ಹೋಗಿ, ಇವನ ಪ್ರೇಮದ ಬಗ್ಗೆ ತಿಳಿಸಿದೆವು. ಮಂಜ ಬೇರೆ ಯಾವದೇ ವಿಷಯಕ್ಕೆ ಕಾಲೆಳೆಯುತ್ತಿದ್ದ. ಆದರೆ ಪ್ರೀತಿಯ ವಿಷಯದಲ್ಲಿ ಮಾತ್ರ ತನ್ನ ಅಭಯ ಹಸ್ತವನ್ನು ತೋರಿಸುತ್ತಿದ್ದ. ಕೂಡಲೇ ಒಪ್ಪಿಗೆ ಸೂಚಿಸಿದ. ಸಂದೀಪನ ಖುಷಿಗೆ ಪಾರವೇ ಇರಲಿಲ್ಲ.

ಮತ್ತೆ ಸಂಜೆ ನಾನು, ಸಂದೀಪ ಮತ್ತು ಮಂಜ ಅಜಾದ್ ಪಾರ್ಕ್ ನಲ್ಲಿರುವ ಉಪಾಹಾರ ಗ್ರಹದಲ್ಲಿ ಸಂಧಿಸಿದೆವು. ಮಂಜ ಹೇಳಿದ "ನೋಡು ಸಂದೀಪ ಶಾಂತಿನ್ನ ಪಟಾಯಿಸಬೇಕು ಎಂದರೆ ಅವಳ ಜೊತೆ ಇರುತ್ತಾಳಲ್ಲ ನಿಮ್ಮ ಪಕ್ಕದ ಮನಿ ಹುಡುಗಿ ರಾಣಿ ಆಕಿ ಜೊತೆ ಸ್ವಲ್ಪ ಸಲುಗಿಯಿಂದ ಇರು. ಆವಾಗ ಶಾಂತಿಗೆ ಹೊಟ್ಟಿ ಉರ್ಕೊಂಡು ನಿನ್ನ ಹತ್ರ ಓಡಿ ಬರ್ತಾಳ. ನೀನು ಬಾಳ ಚಂದ ಇದ್ದಿ. ನಿನ್ನoತಹ ಹುಡುಗನ್ನ ಯಾರು ಬಿಟ್ಟು ಕೊಡಂಗಿಲ್ಲ ಎಂದ. ಹುಡುಗ್ಯಾರಿಗೆ ಸ್ವಲ್ಪ ಹೊಟ್ಟಿ ಕಿಚ್ಚು ಜ್ಯಾಸ್ತಿ. ಇನ್ನೊಂದು ಹುಡುಗಿಗೆ ಸಿಕ್ಕಿದ್ದು ತಮಗೂ ಸಿಗಬೇಕು ಅಂತ ಅಸೆ ಪಡ್ತಾರ." ತೆಜಾಬ್ ಸಿನಿಮ ನೋಡಿಯಿಲ್ಲ ......? ಅದರೊಳಗ ಮಾಧುರಿ ದಿಕ್ಷಿತ ಪಟಾಯಿಸ್ಲಿಕ್ಕೆ ಮಂದಾಕಿನಿಗೆ ಅನಿಲ್ ಕಪೂರ್ ಗಾಳ ಹಾಕಿದ್ದ. ಹಂಗ ನೀನು ಮಾಡಬೇಕು ಎಂದ.

ಮಂಜ ಈ ಹೇಳಿಕೆಯನ್ನು ವೇದ ವಾಕ್ಯವೆಂದು ತಿಳಿಯುತ್ತೇನೆ ಎಂದು ಹೇಳಿ. ನಮ್ಮಿಬ್ಬರಿಗೂ ಮಸಾಲೆ ದೋಸೆ ಮತ್ತು ಟೀ ಕೊಡಿಸಿ ಬೀಳ್ಕೊಟ್ಟಿದ್ದ.

ಮತ್ತೆ ಶುರು ಆಯಿತು ಸಂದೀಪನ ಸಂದ್ಯರಾಗ...ದಿನವು ರಾಣಿಗೆ ನೋಟ್ಸ್ ಕೇಳುವದು. ತನ್ನ ನೋಟ್ಸ್ ಕೊಡುವದು ಹೀಗೆ.. ದಿನವು ಅವಳನ್ನು ಮಾತನಾಡಿಸುತ್ತಿದ್ದ. ಹೀಗೆ ಒಂದು ತಿಂಗಳು ನಡಿಯಿತು. ಆದರು ಏನು ಪ್ರಯೋಜನವಾಗಲಿಲ್ಲ. ಶಾಂತಿ ಮಾತ್ರ ಇನ್ನು ಶಾಂತವಾಗಿಯೇ ಇದ್ದಳು.

ಮತ್ತೆ ಬಂದು ಮಂಜನಿಗೆ ತನ್ನ ಕಷ್ಟವನ್ನು ಅಲವತ್ತುಕೊಂಡ. ಮಂಜ ಹೇಳಿದ "ಶಾಂತಳ ಮುಂದೆ ರಾಣಿನ್ನ ಹೊಗಳು ಎಂದು ಹೇಳಿದ". ಸಂದೀಪನಿಗೆ ದಿಕ್ಕೇ ತೋಚದಾಗಿತ್ತು. ಆ ಕಪ್ಪು ಕೃಷ್ಣವೇಣಿ, ದಪ್ಪ ನಾಸಿಕ, ಅನಹುತವಾದ ದೇಹ ಧಾರ್ಡ್ಯ ಹೇಗೆ ವರ್ಣಿಸುವದು ಎಂದು. ಕಣ್ಣನ್ನಾದರೂ.. ವರ್ಣಿಸೋಣವೆಂದರೆ ಮೆಳ್ಳಗಣ್ಣು.. ಆಗ ಮಂಜ "ಕುರುಡುಗಣ್ಣಲ್ಲಿ ಮೆಳ್ಳಗಣ್ಣು ಶ್ರೇಷ್ಟ.." ಎಂದು ಬಿಡು ಎಂದ ತಮಾಶೆಯಾಗಿ. ಹಾಗು.. ಹೀಗು.. ಶಾಂತಳೆದುರಿಗೆ ರಾಣಿನ್ನ ಮಹಾರಾಣಿಯ ಹಾಗೆ ವರ್ಣಿಸಿದ್ದ. ಆದರು ಶಾಂತಿಯ ಶಾಂತತೆ ಕೆಡಲಿಲ್ಲ. ರಾಣಿ ಇನ್ನಷ್ಟು ಉಬ್ಬಿ ಹೋಗಿದ್ದಳು. ಎರಡೇ ತಿಂಗಳಲ್ಲಿ 6 Kg ಜ್ಯಾಸ್ತಿ ಆಗಿತ್ತು.

ಶಾಂತಿಗೆ ಗೊತ್ತಾಗುವ ಹಾಗೆ, ಕಡೆಯ ಪ್ರಯತ್ನವಾಗಿ ನೋಟ್ಸ್ ಪುಸ್ತಕದಲ್ಲಿ ಪ್ರೇಮ ಪತ್ರ ರವಾನಿಸಿದ್ದ. ಅದೇ ಕೊನೆ ಕೃಷ್ಣವೇಣಿ ರಾಣಿ ಹಸಿರು ನಿಶಾನೆ ತೋರಿಸಿ, ಮನೆಯವರಿಗೆಲ್ಲ ಪತ್ರ ತೋರಿಸಿ ಅವನನ್ನು ಮದುವೇಯಾಗುವವರೆಗೆ ಬಿಡಲೇ ಇಲ್ಲ. ಶಾಂತ ಸ್ವರೂಪದ ಶಾಂತಿ ಮಾತ್ರ ದಕ್ಕಲೇ ಇಲ್ಲ. ಇದು ಮಂಜ ಮತ್ತೆ ನನಗು ತಿಳಿಯದಾಗಿತ್ತು. ಮಂಜನ ಈ ಐಡಿಯಾ ತಲೆಕೆಳಗಾಗಿತ್ತು.
ಬಾಯಿಬಿಡದೆ ರಾಣಿಯನ್ನು ತೆಪ್ಪಗೆ ಮದುವೆಯಾಗಿದ್ದ. ಮದುವೆಗೆ ಅವನ ಶಾಂತಿನು ಬಂದಿದ್ದಳು.

ಮೊನ್ನೆ ಒಂದು ದಿವಸ ನಾನು, ಮಂಜ ,ಸಂದೀಪ ಮತ್ತು ನವೀನ ಸೇರಿದ್ದವು. ಸಂದೀಪ ತನಗೆ ಗಂಡು ಮಗು ಆಯಿತು ಎಂದು ಸಂದೀಪ ಪಾರ್ಟಿ ಕೊಟ್ಟಿದ್ದ. ಕಂಠ ಪೂರ್ತಿ ಎಲ್ಲರು ಕುಡಿದಿದ್ದೆವು. ಹಾಗೆ ಗಾಂಧಿ ಚೌಕದವರೆಗೆ ಬಂದು ಹರುಟುತ್ತಿದ್ದೆವು. ಆಗ ನವೀನ "ನಿನ್ನೆ ಶಾಂತಿ ಬಂದಿದ್ದಳು" ಎಂದ. ಸಂದೀಪನ ಕಿವಿ ನಿವೀರೆಳಿದ್ದವು. "ಅವಳ ಮದುವೇ ಅಂತೆ ಕಣೋ" ಎಂದ. ಮೊತ್ತೊಂದು ವಿಷಯ "ಅವಳು ಸಂದೀಪನನ್ನು ತುಂಬಾ ಇಷ್ಟ ಪಡುತ್ತಿದ್ದಳು ಅಂತ ಹೇಳಿ, ಅವನು ಮಾತ್ರ ರಾಣಿನ ಪ್ರೀತಿಸಿದ ಎಂದು ಕಣ್ಣೀರಿಟ್ಟು ಬಿಟ್ಟಳು." ಎಂದು ಬಿಟ್ಟ.

ಸಂದೀಪ ನನ್ನನ್ನು ಮತ್ತು ಮಂಜನನ್ನು ಕೆಟ್ಟ ಕೋಪದಿಂದ ನೋಡಿ, ಏನು ಮಾಡಬೇಕೋ ತಿಳಿಯದೆ ತನ್ನ ಚಪ್ಪಲ ತೆಗೆದು "ರಪ.. ರಪ.. " ನೆ ತನ್ನ ತಲೆಗೆ ಹೊಡೆದುಕೊಂಡು ಸಂದಿಗೊಂದಿಯಿಂದ ಮನೆ ಸೇರಿಕೊಂಡಿದ್ದ.

ನಾನು ಮಂಜನಿಗೆ "ಲೇ ತೆಜ್ಯಾಬ್ , ಗಿಜ್ಯಾಬ್ ಅಂತ ಹೇಳಿ ತಲಿ ಕೆಡಿಸಿ " ಅವನ ಪ್ರೀತಿ ಹಾಳು ಮಾಡಿಬಿಟ್ಟಿಯಲ್ಲೋ ಸೀದಾ ಶಾಂತಿಗೆ ಹೋಗಿ ಹೇಳಿದ್ರ ಆಗುತಿತ್ತು ಎಂದೆ. ಅದಕ್ಕೆ ಮಂಜ "ನೋಡು "ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಅವನ ಹಣಿ ಮೇಲೆ ರಾಣಿ ಅಂತ ಬರೆದಿತ್ತು ಅಂತ ಕಾಣಿಸ್ತದ ಅದಕ ' ಶಾಂತಿನ ಬಿಟ್ಟು ವಾಂತಿನ ಕಟ್ಗೊಂಡ ' ನಾವೇನು ಮಾಡಬೇಕು" ಎಂದ. ನಾವಿಬ್ಬರು ನಕ್ಕಿದ್ದೆ.. ನಕ್ಕಿದ್ದು... ನವೀನನಿಗೆ ಮಾತ್ರ ಏನು ಅರ್ಥ ಆಗದೆ ಪೆಕರನಂತೆ ನೋಡುತ್ತಿದ್ದ.
ಮಂಜನ ಇನ್ನಷ್ಟು ತರಲೆಗಳು ಬರಲಿವೆ ನಿರೀಕ್ಷಿಸಿ ....

ತರ್ಲೆ ಮಂಜ(ಗ) ನಾಟ....

ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎಂದು" ಆಸೆ ಹುಟ್ಟಿಸಿದ. ಮಂಜ ಎಷ್ಟೇ ತರ್ಲೆ ಇದ್ದರು ಅವನ ಜೊತೆ ಹೋದರೆ ಪಾನಿಪುರಿ ಗ್ಯಾರಂಟೀ. ಆದರು ಮನಸ್ಸಿನಲ್ಲಿ ಏನೋ ಒಂದು ದುಗುಡ.

ಆಯಿತು ಎಂದು ಹೊರಟೆವು. ಅವತ್ತು ಬಸ್ಸಿನಲ್ಲಿ ಕಾಲು ಇಡಲಿಕ್ಕು ಬಾರದಷ್ಟು ಜನ ಜಂಗುಳಿ ಇತ್ತು.

ಹೀಗೆ ಮತ್ತೊಂದು ಬಸ್ ಬರುವವರೆಗೆ ಕಾಯುತ್ತಾ ಇದ್ದಾಗ ಒಂದು ಹುಡುಗಿ ನಮ್ಮ ಸಮೀಪ ಬಂದು ನಿಂತಳು. ಅವಳನ್ನು ನೋಡಿ ಹಲ್ಲು ಕಿರಿದ ಮಂಜ. ಇವನನ್ನು ನೋಡಿ ಹೆದರಿ ಆ ಹುಡುಗಿ ಬೇರೆ ಕಡೆಗೆ ಹೋಗಿ ನಿಂತು ಬಿಟ್ಟಳು. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆಗಲೇ ಬೇರೊಂದು ಬಸ್ ಬಂತು. ನಾವು ಅದೇ ಬಸ್ ಹತ್ತಿದರೂ ಸಿಟ್ ಸಿಕ್ಕಲಿಲ್ಲ. ಆ ಹುಡುಗಿಯೂ ಅದೇ ಬುಸ್ ಹತ್ತಿದಳು. ಆದರೆ ಅವಳಿಗೆ ಸೀಟ್ ಸಿಕ್ಕಿತ್ತು. ಮಂಜ ನನಗೆ ಒಂದು ಸೀಟ್ ಕೊಡಿಸುವೆ ಎಂದು ಹೇಳಿದ ನಾನು ಬೇಡ ಎಂದೆ. ಇವನು ಮೊದಲೇ ದೊಡ್ಡ ತರ್ಲೆ ಏನು ಮಹಾಪ್ರಲಾಪ ಮಾಡುತ್ತಾನೋ ಎಂದು. ಕಡೆಗೂ ತನ್ನ ಪಾಠ ಪುರಾಣಗಳಿಂದ ಒಪ್ಪಿಸಿಯೇ ಬಿಟ್ಟ.

ಮೆಲ್ಲನೆ ಆ ಹುಡುಗಿಯ ಸೀಟ್ ಹತ್ತಿರ ಹೋಗಿ ನಿಂತ. ಮತ್ತೆ ಎಲ್ಲಿ ತರ್ಲೆ ಮಾಡುತ್ತಾನೋ ಎಂದು ತುಂಬಾ ಹೆದರಿದ್ದೆ. ಹೋದವನೇ ಹುಡುಗಿಗೆ ನಾನು "Dr ಮಂಜುನಾಥ ಅಂತ" ಎಂದ. ನೀವು ಹೀಗೆ ಕುಳಿತು ಕೊಳ್ಳಬೇಡಿ ಮುಖಕ್ಕೆ ಏನಾದರು ಧರಿಸಿ ಎಂದು "H1N1" ಬಗ್ಗೆ ದೊಡ್ಡದಾದ ಲೆಕ್ಚರ್ ಕೊಟ್ಟ. ಮತ್ತೆ ರೋಗ ತಡೆಹಿಡಿಯುವ Homeopathic ಔಷಧಿ - Gelsemium 30 ( one dram ) for one week (5+5) ಎಂದು ಅವಳಿಗೆ ಹೇಳಿದ. ಮತ್ತೆ ದಿನವೂ ಮುಂಜಾನೆ ಎದ್ದಮೇಲೆ ಒಂದು ತುಳಸಿ ದಳ ತಿನ್ನಿರಿ ಎಂದು ಅಭಯವನ್ನಿತ್ತ. ಆ ಹುಡುಗಿ ಮುಖಕ್ಕೆ ತನ್ನ ಕರ್ಚಿಫ್ ಸುತ್ತಿಕೊಂಡಳು. ಚೆನ್ನಾಗಿ ಹಚ್ಚಿದ್ದ ಲಿಪ್ಸ್ಟಿಕ್ ವೇಸ್ಟ್ ಆಗಿತ್ತು. ಅಷ್ಟರಲ್ಲೇ ನನ್ನನ್ನು ತೋರಿಸಿ "ಈವ ನನ್ನ ಗೆಳೆಯ" ಎಂದು ಪರಿಚಯ ಮಾಡಿ ಕೊಟ್ಟ. ಆ ಹುಡುಗಿ ನನ್ನ ನೋಡಿ ನಮಸ್ಕರಿಸಿತು. ಇವನಿಗೆ ಸ್ವಲ್ಪ ನೆಗಡಿ ಎಲ್ಲಿ "H1N1" ಇದೆಯೋ ಅಂತ ಸ್ವಲ್ಪ ಪರೀಕ್ಷೆ ಮಾಡಿಸಲು ಕರೆದು ಕೊಂಡು ಹೊರಟಿದ್ದೇನೆ ಪ್ಲೀಸ್ ಸ್ವಲ್ಪ ಕೆಟಕಿ ಸೀಟ್ ಬಿಟ್ಟು ಕೊಡುತ್ತೀರಾ ಎಂದು ಅಂದು ಬಿಟ್ಟ. ಎಲ್ಲರು ಒಮ್ಮೆ ನನ್ನ ಹುಚ್ಚನಂತೆ ನೋಡಿದ್ದರು. ನಾನು ಖುದ್ದಾಗಿ ಹೋಗಿ ನಿಮ್ಹಾನ್ಸ್ ಸೇರುವದೊಂದೇ ಬಾಕಿ. ಆನಂತರ ಡ್ರೈವರ್ ಮತ್ತು ಕಂಡಕ್ಟರ್ ಸಮೇತ ಪೂರ್ತಿ ಬಸ್ ಖಾಲಿ ಆಗಿ ಬಿಟ್ಟಿತ್ತು. ಬಸ್ನಲ್ಲಿ ಇದ್ದದ್ದು ನಾನು ಮತ್ತು ಮಂಜು ಮಾತ್ರ. ಒಬ್ಬರನೊಬ್ಬರು ಮುಖ ಮುಖ ನೋಡಿಕೊಂಡು ನಗು ತಡಿಯಲಾರದೆ ಜೋರಾಗಿ ನಕ್ಕು ಬಿಟ್ಟೆವು. ಮತ್ತೆ ಬಸ್ನಿಂದ ಇಳಿದು ಆಟೋ ಹತ್ತಿ ಗೂಡು ಸೇರಿಕೊಂಡೆವು.

ಈ ಗದ್ದಲದಲ್ಲಿ ಪಾನಿಪುರಿ ಮತ್ತು ಮಿರ್ಚಿ ನೆನಪು ಹಾರಿ ಹೋಗಿತ್ತು. ಆದರೆ ಮಂಜನ ತರ್ಲೆಗಳು ಮಾತ್ರ ತಲೆಯಲ್ಲಿ ಗುನುಗುಡುತಿತ್ತು.

ಒಂದು ದಿವಸ ಮಂಜ ರಾಜಣ್ಣ ಮಾಸ್ತರ ಮನೆಗೆ ಹೋಗಿದ್ದ. ಅವರು ಆಗಲೇ ದಾಡಿ ಮಾಡಿಕೊಳ್ಳಲು ನೊರೆ ಮುಖಕ್ಕೆ ಹಚ್ಚಿಕೊಂಡು ಶೇವಿಂಗ್ ಮಾಡಲು ರೆಡಿ ಆಗಿದ್ದರು. ಆಗಲೇ ಈ ಮಂಜ "ಸರ್ ಹೆಡ್ ಮಾಸ್ತರ್ ಕರಿತಿದ್ದಾರೆ ತುಂಬಾ ಅರ್ಜೆಂಟ್ " ಎಂದ. ಮಾಸ್ತರರು ಏನು ಮಾಡಬೇಕೆಂದು ತಿಳಿಯದೆ ಮುಖಕ್ಕೆ ಹಚ್ಚಿದ ಶೇವಿಂಗ್ ಕ್ರೀಂ ಟೊವೆಲ್ನಿಂದ ಒರಿಸಿ ಹೆಡ್ ಮಾಸ್ತರ್ ಮನೆಗೆ ಹೋದರು.

ಹೆಡ್ ಮಾಸ್ತರು ಹೆಂಡತಿಯೊಂದಿಗೆ ಜಗಳವಾಡಿದ್ದರು. ಅವರೇ ತಮ್ಮ ಬಟ್ಟೆ ಮತ್ತು ಹೆಂಡತಿಯ ಸೀರೆಯನ್ನು ತೊಳೆಯುತ್ತಿದ್ದರು. ಹೆಡ್ ಮಾಸ್ತರರನ್ನು ಹುಡುಕುತ್ತ ಪೂರ್ತಿ ಮನೆಯಲ್ಲ ಜಾಲಾಡಿ ಹಿತ್ತಲ ಮನೆಗೆ ಕಾಲಿಟ್ಟು "ಏನ್ ಸರ್ ಅರ್ಜೆಂಟ್ ಕರೆದಿರಲ್ಲ" ಎಂದು ಕೇಳಿದರು. ಮೊದಲೇ ಕೆಂಡ ಮಂಡಲಾಗಿದ್ದ ಹೆಡ್ ಮಾಸ್ತರ್ ಹೆಂಡತಿ ಸೀರೆ ಬೇರೆ ನೋಡಿಬಿಟ್ಟ ಎಂಬ ಕೋಪದಿಂದ. ಯಾರು ರೀ ನಿಮಗೆ ಕರೆದಿದ್ದು ಎಂದು ಕೋಪಿಸಿಕೊಂಡು, ಅಷ್ಟು ಬಟ್ಟೆ ರಾಜಣ್ಣ ಮಾಸ್ತರ ಕಡೆ ಒಗಿಯಿಸಿ ಕಳುಸಿದ್ದರು. ಮನೆಗೆ ಬರುವ ದಾರಿಯಲ್ಲಿ ಈ ಮಂಜ "ಏಪ್ರಿಲ್ ಫೂಲ್ ಸರ್" ಎಂದು ಬಿಟ್ಟ. ಮೊದಲೇ ಉರಿದು ಹೋಗಿದ್ದ ಮಾಸ್ತರರಿಗೆ ಕೆಟ್ಟ ಕೋಪ ಬಂದು ಹುಣಿಸಿ ಬರಲು ತೆಗೆದು ಬಾಸುಂಡೆ ಬರುವ ಹಾಗೆ ಬಾರಿಸಿದ್ದರು.

ಹೀಗೆ ಒಂದು ದಿವಸ ಟ್ರೈನಿನಲ್ಲು ತುಂಬಾ ಜನ ಜಂಗುಳಿ ಇತ್ತು. ಮಂಜನಿಗೆ ಮಲಗಲು ಜಾಗ ಬೇಕಾಗಿತ್ತು. ಆಗ ಮಂಜ "ಹಾವು... ಹಾವು.... " ಎಂದು ಚೀರಿದ. ಒಂದೇ ನಿಮಿಷದಲ್ಲಿ ಪೂರ್ತಿ ಟ್ರೈನ್ ಖಾಲಿಯಾಗಿತ್ತು. ಮಂಜ ಮತ್ತು ರಾಜು ಸಿಟಿನಲ್ಲಿ ಮಲಗಿ ಬಿಟ್ಟರು. ಮರುದಿನ ಎದ್ದು ನೋಡಿದಾಗ ಇಬ್ಬರು ಅದೇ ಊರಲ್ಲಿ ಇದ್ದರು. ಆನಂತರ ಕೇಳಿದಾಗ ಗೊತ್ತಾಯಿತು ಹಾವು ಇದ್ದಿದ್ದರಿಂದ ಅದೊಂದು ಭೋಗಿ ಬಿಟ್ಟು ಟ್ರೈನ್ ಹೊರಟು ಹೋಗಿದೆ ಎಂದು.

ಅದಕ್ಕೆ ಇವನಿಗೆ ನಾವೆಲ್ಲರೂ ಕರೆಯುವದು ತರ್ಲೆ ಮಂಜ(ಗ) ಅಂತ....ಇವನ ಪಾಠ ಪ್ರವಚನಗಳು ಇನ್ನೂ ತುಂಬಾ ಇವೆ.
(ಇವನ ಕಾಲ ಸೆಂಟರ್ ಪ್ರವಚನನು ಓದಿ).

ಕಾಲ್ ಸೆಂಟರ್ ....

ನಿನ್ನ ಜನ್ಮದಲ್ಲಿ ನೀನು PUC ಪಾಸಾಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊಟ್ಟ ಕಡೆಯ ಚಾನ್ಸ್ ಅದು ಕೂಡ ಕೈ ಕೊಟ್ಟಿತ್ತು. ಇಲ್ಲಿಯೇ ಏನಾದರು ನೌಕರಿ ಮಾಡು ಎಂದು ಅವನ ಅಪ್ಪ ತಾಕಿತ ಮಾಡಿದ್ದರು. ಸುಬ್ಬನಿಗೆ ಊರಲ್ಲಿ ಯಾರಿಗೂ ಮುಖ ತೋರಿಸುವ ಮನಸಿರಲಿಲ್ಲ. ತಂದೆಯ ಮಾತನ್ನು ಮೀರುವಂತಿಲ್ಲ.

ಹೀಗಿರುವಾಗ ಬೆಂಗಳೂರಿಂದ ಪಕ್ಕದ ಮನೆ ಪಚ್ಚು(ಪ್ರಶಾಂತ) ಬಂದಿದ್ದ. ತನ್ನ ಗೋಳನ್ನು ಪಚ್ಚು ಮುಂದೆ ಗೊಗರಿದ. ಆಯಿತು ನಾನು ಬೆಂಗಳೂರಿಗೆ ಹೋದ ಮೇಲೆ ನಿನಗೆ ಒಂದು ಕೆಲಸ ಹುಡುಕಿ ನಿನಗೆ ತಿಳಿಸುವೆ ಎಂದು ಹೇಳಿ ಬೆಂಗಳೂರು ಬಸ್ ಹತ್ತಿದ್ದ ಪಚ್ಚು.

ಕೆಲ ದಿನಗಳ ನಂತರ ಪಚ್ಚು ಫೋನ್ ಮಾಡಿ, ನಿನಗೆ ಒಂದು ಒಳ್ಳೆಯ ಕೆಲಸ ಹುಡುಕಿದ್ದೇನೆ. ತಿಂಗಳಿಗೆ 15000 ಸಂಬಳ. "ಕಾಲ್ ಸೆಂಟರ್" ನಲ್ಲಿ ಕೆಲಸ ಎಂದು ಹೇಳಿ. ಬೆಂಗಳೂರಿಗೆ ಬರುವ ವ್ಯವಸ್ಥೆ ಮಾಡಿಕೋ ಎಂದು ಹೇಳಿದ್ದ. ಪಚ್ಚು ಸಂಬಳದ ವಿಷಯ ಕೇಳಿದ ಮೇಲೆ ಬೇರೆ ಏನನ್ನು ಅಷ್ಟು ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಆದರೆ ನನ್ನ ರೂಮಿನಲ್ಲಿ ಮಾತ್ರ ಜಾಗ ಇಲ್ಲ. ಮಂಜು ಮತ್ತು ಗೋಪಾಲ್ ರೂಂ ಗೆ ಹೋಗು ಎಂದು ಹೇಳಿದ್ದ.

ನನಗೆ ಕೆಲಸ ಸಿಕ್ಕಿದೆ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿ ನನಗೆ ಮತ್ತೆ ಮಂಜುಗೆ ಫೋನ್ ಮಾಡಿ ಹೇಳಿ ಬೆಂಗಳೂರು ಬಸ್ ಹತ್ತಿದ್ದ ಸುಬ್ಬ.

ಬೆಂಗಳೂರು ಬಂದೊಡನೆಯೇ ಖುಷಿಯ ಭರದಲ್ಲಿ ಬಸವನಗುಡಿ ಬಸ್ ಹತ್ತುವ ಬದಲು ಬಾನಸ್ವಾಡಿ ಬಸ್ ಹತ್ತಿ, ಬಾನಸ್ವಾಡಿ ಬಸ್ ಸ್ಟಾಪ್ ನಿಂದ ನನಗೆ ಫೋನ್ ಮಾಡಿ ಎಲ್ಲಿ ಬರಬೇಕು? ಎಂದು ಕೇಳಿದ. ಪೂರ್ತಿ ವಿಷಯ ತಿಳಿದ ಮೇಲೆ ಉಗಿದು ಆಟೋ ಮಾಡಿ ಕೊಂಡು ಬಾ ಎಂದು ಹೇಳಿ, ಅಡ್ರೆಸ್ ಆಟೋ ಡ್ರೈವರ್ ಗೆ ಹೇಳಿದ್ದೆ.

ಹಾಗು ಹೀಗು ಮನೆ ತಲುಪಿದ ನಮ್ಮ ಸುಬ್ಬ. ಮತ್ತೆ ಏನೋ ವಿಷಯ ಮನೆಯವರ ಯೋಗಕ್ಷೇಮ ವಿಚಾರಿಸಿ, ಟೀ ಕುಡಿದು ಮುಂದಿನ ಸಮಾಚಾರವೇನು ಸುಬ್ಬ ಎಂದು ಕೇಳಿದೆವು. ಪಚ್ಚು ನೌಕರಿ ಕೊಡಿಸ್ತಾನಂತೆ ಕಣೋ ಎಂದ. ತಿಂಗಳಿಗೆ 15000 ಸಾವಿರ ಸಂಬಳ ಎಂದ. ಮಂಜು ಎಲ್ಲಿಯಪ್ಪ ನೌಕರಿ ಎಂದು ಕೇಳಿದ. ಅದು.. ಅದು ..ಎಂದು ಸ್ವಲ್ಪ ನೆನಪು ಮಾಡಿ ಕೊಂಡು "ಕಾರ್ ಸೆಂಟರ್" ಎಂದ. ಯಾವದೋ ಅದು ಕಾರ್ ಸೆಂಟರ್ ಗ್ಯಾರೆಜ ಏನೋ?. ಗೊತ್ತಿಲ್ಲಪ ನೀನೆ ಪಚ್ಚು ಗೆ ಫೋನ್ ಮಾಡು ಎಂದ.

ಪಚ್ಚುಗೆ ಫೋನ್ ಮಾಡಿದಮೇಲೆ ತಿಳಿಯಿತು ಅದು "ಕಾಲ್ ಸೆಂಟರ್" ಎಂದು. ಇವತ್ತೇ ಇಂಟರ್ವ್ಯೂ ನಾನು ಹೋಗಬೇಕು ಎಂದು ತಡಬಡಿಸಿ ಸ್ನಾನ ಮುಗಿಸಿ ಇಂಟರ್ವ್ಯೂ ಗೆ ಹೋದ.

ಮಂಜು ಯಾವತ್ತು ತಮಾಷೆಯ ಹುಡುಗ. ಅವನು ಎಲ್ಲರೊಂದಿಗೆ ತಮಾಷೆ ಮಾಡುತ್ತ ಇರುವದು ಅವನ ಚಟ. ಸಂಜೆ ಇಂಟರ್ವ್ಯೂ ಮುಗಿಸಿ ಬಂದ ಮೇಲೆ ಸುಬ್ಬನಿಗೆ ಮಂಜು ಏನಪ್ಪಾ ಏನಾಯಿತು ನಿನ್ನ ಗ್ಯಾರೆಜ ಇಂಟರ್ವ್ಯೂ? ಎಂದ. ನನಗೆ ನೌಕರಿ ಸಿಕ್ಕಿದೆ ಕಣ್ರೋ 15000 ನೆ ಸಂಬಳ ಎಂದ. ಅವನ ಖುಷಿಗೆ ಪಾರವೇ ಇರಲಿಲ್ಲ. ಮಂಜು ನಿನಗೆ ಕಾಲ್ ಸೆಂಟರ್ ಬಗ್ಗೆ ಪೂರ್ತಿ ಮಾಹಿತಿ ಕೊಡುತ್ತೇನೆ ಎಂದು ಸುಬ್ಬನಿಗೆ ಹೇಳಿದ. ನನಗೆ ಗೊತ್ತು ಈ ಮಂಜ ಏನೋ ಮಸಲತ್ತು ನಡಿಸಿದ್ದಾನೆ ಎಂದು. ಮಂಜ ಶುರು ಹಚ್ಚಿ ಕೊಂಡ "ಕಾಲ್ ಸೆಂಟರ್" ಎಂದರೆ ಕಾಲಗಳನ್ನೂ X-Ray ಮಾಡುವ ಸೆಂಟರ್ ಎಂದ. ನಾನು ಒಳಗೊಳಗೇ ನಗುತ್ತಿದೆ. ಅಂದರೆ X-Ray Technician ತರಹ ಎಂದ. ಆದರೆ ...ಆದರೆ ... ನನಗೆ ಎಲ್ಲಿ ಬರುತ್ತೆ X-Ray ಮಾಡಲು ನಾನು ಬೇರೆ PUC ಫೇಲ್ ಎಂದ ಸುಬ್ಬ. ಅದಕ್ಕೆ ನಿನ್ನ ದಡ್ಡ(ಗುಬಾಲ್) ಅನ್ನೋದು ಎಂದ ಮಂಜು. ಯಾರು ಕಾಲಿನ ಮತ್ತು ಬೆವರಿನ ಕೆಟ್ಟ ವಾಸನೆ ತಡೆದುಕೊಳ್ಳುತ್ತಾರೋ ಅಂತವರನ್ನೇ ಸೆಲೆಕ್ಟ್ ಮಾಡುತ್ತಾರೆ ಎಂದ. ಹೌದಾ ಅದಕ್ಕೆ ಇರಬೇಕೆ ನನ್ನ ಇಂಟರ್ವ್ಯೂ ಮಾಡುತಿದ್ದವ ತನ್ನ ಶೂ ತೆಗೆದಾಗ ಕೆಟ್ಟ ವಾಸನೆ ಬರುತಿತ್ತು. ಆದರು ತಡೆದು ಕೊಂಡೆ ಎಂದ. ಅದಕ್ಕೆ ಕಣೋ ನಿನ್ನನ್ನು ಸೆಲೆಕ್ಟ್ ಮಾಡಿದ್ದೂ ದಡ್ಡ. ಹುಡಿಗಿಯರ ಕಾಲ ಬಗ್ಗೆ ಹುಶಾರಪ್ಪ ಅವರು ಸ್ಯಾಂಡಲ್ ನಂಬರ್ ಕೆನ್ನೆ ಮೇಲೆ ಮುಡಿದರೆ ಕಷ್ಟ ಎಂಬ ವೇದಾಂತ ಬೇರೆ ಹೇಳಿಕೊಟ್ಟ.

ಮೊದಲನೇ ದಿನದ ಕೆಲಸ ಮುಗಿಸಿಕೊಂಡು ಬಂದಾಗ ಸುಬ್ಬ ತುಂಬಾ ಸಂತೋಷದಿಂದ ಇದ್ದ. ಮತ್ತೆ ನಮ್ಮಿಬ್ಬರಿಗೂ ಎಂಥ ಚೆನ್ನಾಗಿದೆ ಕಣೋ ಆಫೀಸು ಕಾಫಿ,ಟೀ ಎಲ್ಲದಕ್ಕೂ ಮೆಶಿನ್. ಅಮ್ಮನಿಗೆ ಎರಡು ಸರಿ ಕೇಳಿದರೆ ಕಾಫಿ ಕೊಡುವದಿಲ್ಲ. ಆದರೆ ಆಫೀಸಿನಲ್ಲಿ ಎಷ್ಟು ಸರಿ ಬೇಕಾದರು ಕುಡಿಯಬಹುದು ಎಂದ. ಮಂಜ ಸುಮ್ಮನಿರದೆ ಮತ್ತೆ ಊಟಕ್ಕು ಮೆಶಿನ್ ಇದೆನಾ?. ಇಲ್ಲ ಮಾಡಿಸೋದಕ್ಕು ಮೆಶಿನ್ ಇದೆ ಎಂದು ಹೇಳಿ ಸಿಟ್ಟಿನಿಂದ ಸುಬ್ಬ ಮಂಜನನ್ನು ನೋಡಿದ್ದ.

ಎರಡನೇ ದಿನ ಸುಬ್ಬ ಬಂದವನೇ ಎಲ್ಲಿ ಆ "ಕಳ್ಳ ಮಂಜ" ಎಂದು ಕೂಗಲಾರಂಬಿಸಿದ. ಏಕೆ? ಏನಾಯಿತೋ? ಎಂದು ನಾನು ಕೇಳಿದಾಗ ಆ ನನ್ನ ಮಗ ಮಾಡಿದ್ದ ಅವಾಂತರದಿಂದ ನನ್ನ ಮಾನ ಮರ್ಯಾದೆ ಎಲ್ಲ ಹೋಯಿತು ಎಂದು ಗೊಳಡಿದ ಅದು ಹುಡುಗಿಯರ ಮುಂದೆ ಕೂಡ ಎಂದ. ಅಷ್ಟರಲ್ಲೇ bathroom ನಿಂದ ಬಂದ ಮಂಜ ನೀನು ಮೊದಲೇ ಹೇಳಬಾರದೆ ಹುಡುಗಿಯರು ಇದ್ದಾರೆ ಅಂತ ಮತ್ತೆ ಬೇರೆಯಾವುದಾದರು ಐಡಿಯಾ ಕೊಡುತ್ತಿದ್ದೆ ಎಂದ. ಜಗಳ ಮಾಡಬೇಡಿ ಏನು ಆಯಿತು ಹೇಳೋ ಸುಬ್ಬ ಎನ್ದೆ. ಇವತ್ತು ಟ್ರೇನಿಂಗನಲ್ಲಿ ನಮ್ಮ ಪ್ರಾಜೆಕ್ಟ್ ಲೀಡರ್ ಕಾಲ್ ಸೆಂಟರ್ ಅಂದರೆ ಏನು? ಎಂದು ಕೇಳಿದ. ಅದಕ್ಕೆ ಈ ಕಳ್ಳ ಮಂಜ ಕೊಟ್ಟಿದ್ದ ಭಾಷಣ ಬಿಗಿದು ಉಗಿಸಿಕೊಂಡು ಬಂದೆ ಎಂದ. ಮತ್ತೆ ಮಂಜ ಕೈ ಸೆಂಟರ್ ಬಗ್ಗೆ ನು ಹೇಳಬೇಕಿತ್ತು ಅದನ್ನು ಹೇಳಿಲ್ಲ ಅದಕ್ಕೆ ಉಗಿದಿರಬೇಕು ಎಂದ.

ಹಾಗು ಹೀಗು ಇಬ್ಬರಿಗೂ ಒಪ್ಪಂದ ಮಾಡಿಸಿದೆ. ಈ ಮಂಜನನ್ನ ಹೀಗೆ ಮಾಡುವಾಗ ಯಾರಾದರು ತಡೆದರೆ ಅವರಿಗೂ ಏನಾದರು ತಂದು ಇಟ್ಟು ಬಿಡುತ್ತಾನೆ. ಹೀಗೆ ಒಂದು ದಿವಸ ನನ್ನ ಸ್ಕೂಲ್ ಬಾಗ್ನಲ್ಲಿ ಗಣೇಶ್ ಬಿಡಿ ಇಟ್ಟು ನನ್ನ ಮನೆಯಲ್ಲಿ ಬೈಯುವ ಹಾಗೆ ಮಾಡಿದ್ದ.

ಮತ್ತೆ ಒಂದು ದಿವಸ ಸುಬ್ಬ ತುಂಬಾ ಬೇಜಾರಾಗಿ ಮನೆಗೆ ಬಂದಿದ್ದ. ಏನಾಯಿತು ಎಂದು ಕೇಳಿದಾಗ ನಾನು ನೌಕರಿ ಬಿಡುತ್ತೇನೆ ಎಂದು ಹೇಳಿದ. ಏನಾಯಿತು ಪೂರ್ತಿ ವಿವರಿಸು ಎಂದಾಗ. ಈ ನೌಕರಿಯಲ್ಲಿ ಕಿಮ್ಮತ್ತೆ ಇಲ್ಲ ಕಣೋ ಫೋನ್ ಮಾಡಿದ ವ್ಯಕ್ತಿಗಳೆಲ್ಲರು ಹೊರ ದೇಶದವರು ನನ್ನ ಹೆಸರನ್ನು ಹೇಗೆ ಹೇಗೋ ಉಚ್ಚರಿಸುತ್ತಾರೆ. ಒಬ್ಬ ನನ್ನನ್ನ ಡಬ್ಬ, ಇನ್ನೊಬ್ಬ ಮಬ್ಬ, ಇವತ್ತು ಒಬ್ಬ ಫೋನ್ ಮಾಡಿ ನನ್ನ ಗಬ್ಬ ಎಂದು ಬಿಟ್ಟ ಎಂದು ಗೊಳೋ ಅಂತ ಅತ್ತು ಬಿಟ್ಟ. ಮತ್ತೆ ತಿಂದು ..ತಿಂದು.. ಗಬ್ಬ ಆದವರೇ ತರಹನೆ ಆನೆ ಮರಿ ಆಗಿ ಅದಕ್ಕೆ ಅಂದಿರಬೇಕು ಎಂದ ಮಂಜ. ಮಂಜ ಸುಮ್ಮನಿರದೆ ಚಂಬು ಅಂತ ಯಾರು ಅನ್ನಲಿಲ್ಲ ವೇನೋ ಎಂದು ಕೇಳಿದ. ಮತ್ತೆ ಶುರು ಆಯಿತು ಇವರಿಬ್ಬರ ಮಹಾಭಾರತ.

ಎಲ್ಲ ತಣ್ಣಗಾದ ಮೇಲೆ ಇದಕ್ಕೆ ಒಂದು ಪರಿಹಾರ ನಾನು ಕೊಡುತ್ತೇನೆ ಎಂದು ಮಂಜ ಹೇಳಿದ. ನೀನು ನಿನ್ನ ಹೆಸರನ್ನ ಶಾರ್ಟ್ ಆಗಿ ಬೇರೆ ಹೆಸರು ಇಟ್ಟುಕೋ ಎಂದು ಹೇಳಿದ. ಅದಕ್ಕೆ ನೀನೆ ಏನಾದರು ಹೇಳೋ ? ಎಂದ. ಮತ್ತೆ ತಮಾಷೆಗೆ ಪಬ್ ಸುಬ್ಬ ಅದನ್ನೇ ....ಮತ್ತೆ ಸುದಾರಿಸಿ ಸಾರೀ... ಸಾರೀ ...ಅಂತ ಹೇಳಿ ಸ್ಯಾಮ ಅಂತ ಇಟ್ಟುಕೋ ಎಂದು ಹೇಳಿದ. ರಾಮಕೃಷ್ಣನಿಗು ನಾನೆ ಹೆಸರು ಇಟ್ಟಿದ್ದು ರಾಕಿ ಅಂತ ನೋಡು ಎಷ್ಟು ಫೇಮಸ್ ಆಗಿದ್ದಾನೆ ಎಂದ. ಕಡೆಗೆ ಹಾಗು ಹೀಗು 5 ವರ್ಷ ಅದೇ ನೌಕರಿಯಲ್ಲಿ ಹೆಣಗಾಡಿ.

ಈಗ ಸಾಫ್ಟವೇರ್ ಫೀಲ್ಡ್ ಗೆ ಬಂದಿದ್ದಾನೆ. ಈಗಲೂ ಮಂಜನ ಪಾಠ ಪ್ರವಚನಗಳು ಮುಗಿದಿಲ್ಲ ......

ಮನಸೂರೆಗೊಳ್ಳುವ ಮೈಸೂರು....

ಆಗ ತಾನೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಬಿದ್ದಿತ್ತು. ಇನ್ನೇನು ಮುಂದೆ ಎಂಬ ಭಾವನೆ ಆಳವಾಗಿ ಮನಸ್ಸಿನಲ್ಲಿ ಬೇರುರಿತ್ತು. ಬೆಳೆಗ್ಗೆಯಿಂದ ಸಂಜೆಯವರೆಗೆ ಇಂಟರ್ನೆಟ್ನಲ್ಲಿ ನನ್ನ ನೌಕರಿ ಹುಡುಕುವುದೆ ನನ್ನ ಕೆಲಸವಾಗಿತ್ತು. ಅಷ್ಟರಲ್ಲೇ ಒಂದು ನೌಕರಿಗೆ ಆಹ್ವಾನ ಬಂದಿತ್ತು. ಆದರೆ ಕೆಲಸ ಮಾತ್ರ ಮೈಸೂರಿನಲ್ಲಿ. "ಪಾಲಿಗೆ ಬಂದದ್ದು ಪಂಚಾಮೃತ" ವೆಂದು ತಿಳಿದು ಮೈಸೂರು ಬಸ್ ಹತ್ತಿದೆ.

ಮೈಸೂರು ಬಂದರು ಇನ್ನು ಮಲಗಿಯೇ ಇದ್ದೆ. ಕಂಡಕ್ಟರ್ ಬಂದು ಎಬ್ಬಿಸಿ ಚಾಮರಾಜನಗರಕ್ಕೆ ಹೋಗಬೇಕೆ? ಎಂದು ಕೇಳಿದರು. ಇಲ್ಲ ಮೈಸೂರು ಎಂದೆ. ಇದೇ ಮೈಸೂರು ಇಳಿದುಕೊಳ್ಳಿ ಎಂದರು. ತಡಬಡಿಸಿ ಕೆಳಗೆ ಇಳಿದೆ.

ನಾನು ಯಾವದೇ ಊರಿಗೆ ಹೋಗುವ ಮೊದಲೇ ಅದರ ಒಂದು ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿರುತ್ತದೆ. ಅದು ಯಾವತ್ತು ನಿಜವಾಗಿಲ್ಲವಾದರೂ. ಆದರೆ ಹೀಗೆ ಇರಬಹುದೆಂದು ಉಹಿಸುವದು ಮಾತ್ರ ಬಿಟ್ಟಿಲ್ಲ. ಇಲ್ಲೂ ಆಗಿದ್ದು ಹಾಗೇನೆ. ನನ್ನ ಮನಸ್ಸಿನಲ್ಲಿದ್ದ ಮೈಸೂರು ಬೇರೆ ಯಾವುದೋ ಊರು ಆಗಿತ್ತು ...

ನನ್ನ Team Leader ಗೆ ಫೋನು ಹಾಯಿಸಿ ಹೇಗೆ ಬರಬೇಕು ಎಂದು ತಿಳಿದು. ನಜರಬಾದ ಕ್ಕೆ ಹೋಗಬೇಕು ಎಂದು ಆಟೋ ಏರಿದೆ. ನಜರಬಾದದ ನಜಾರ ತುಂಬಾನೇ ಚೆನ್ನಾಗಿತ್ತು. ಎದುರಿಗೆ ಕಾಣುವ ಮನೋಹರವಾದ ಚಾಮುಂಡಿ ಬೆಟ್ಟ. ಕಾಲುನಡಿಗೆಯಲ್ಲಿ ತಲುಪುವ ಮೈಸೂರು ಅರಮನೆ, ಕಾರಂಜಿ ಕೆರೆ, ಪ್ರಾಣಿಸಂಗ್ರಹಾಲಯ.....ಹೀಗೆ ಹಲವಾರು.

ನಮ್ಮದು ಹಾಲಿನ ಡೈರಿ ಪ್ರಾಜೆಕ್ಟ್. ಆಗ ತಾನೆ ಬಂದಿದ್ದರಿಂದ ಸ್ವಲ್ಪ ವಿಶ್ರಾಂತಿ ತೊಗೊಂಡು ಆಫೀಸಿಗೆ "ಬಾ" ಎಂದು, ನನ್ನ ಟೀಂ ಲೀಡರ್ ಪಾಂಡುರಂಗ ಆಫೀಸ್ ಹೊರಟರು. ನಾನು ಆಫೀಸ್ ವಿಳಾಸವನ್ನು ಹಿಡಿದು ಒಬ್ಬ ದಾರಿಹೋಕನನ್ನು ಕೇಳಿದೆ. "ಇದು ಎಲ್ಲಿ ಬರತದ" ಎಂದು. ಅವನಿಗೆ ಅರ್ಥವಾಗಲಿಲ್ಲ. ಮತ್ತೆ ಸುದಾರಿಸಿ ಧಾರವಾಡ ಭಾಷೆ ಬಿಟ್ಟು ಮೈಸೂರು ಭಾಷೆಯಲ್ಲಿ "ಇದು ಎಲ್ಲಿದೆ ಸರ್ " ಎಂದು ಕೇಳಿದಾಗ. ಸರಿಯಾದ ದಾರಿಯನ್ನು ತೋರಿಸಿದ್ದ.

ಹಾಲಿನ ಡೈರಿ ಒಳಗೆ ಕಾಲು ಇಡುತಿದ್ದಂತೆ ಒಂದು ಎಮ್ಮೆ ನನ್ನ ಕಡೆಗೆ ಅಟ್ಟಿಸಿಕೊಂಡು ಬಂತು. ಹೆದರಿ ಅದರ ದಾರಿಯಿಂದ ಸರಿದು "ಎ ನಿನಗೆ ನಿನ್ನ ಎಮ್ಮೆ ನೋಡ್ಕೊಲಿಕ್ಕೆ ಬರುದಿಲ್ಲ ಏನು" ಎಂದು ಎಮ್ಮೆಯ ಹಿಂದೆ ಬಂದ ಮನುಷ್ಯನನ್ನು ಉಗಿದು ಆಫೀಸ್ ಒಳಗಡೆ ಹೋದೆ.

ಪಾಂಡುರಂಗ ತುಂಬಾ ಬ್ಯುಸಿಯಾಗಿ ಇದ್ದರು. ಆದರು ನನ್ನನ್ನು ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿಸಲು ಕರೆದೊಯ್ದರು. ಎಲ್ಲಾ ಅಧಿಕಾರಿಗಳನ್ನು ಭೇಟಿಯಾದ ಮೇಲೆ ಮ್ಯಾನೇಜರ್ ಭೇಟಿಯಾಗಬೇಕಿತ್ತು. ತುಂಬಾ ಜನಗಳು ಅವರ ಕ್ಯಾಬಿನ್ ಬಳಿ ನಿಂತಿದ್ದರು. ಆದರು ಸೆಕ್ಯೂರಿಟಿ ಗಾರ್ಡ್ ಪಾಂಡುರಂಗ ಮತ್ತು ನನ್ನನ್ನು ಮೊದಲು ಒಳಗಡೆ ಕಳುಹಿಸಿದ. ಎದುರಿಗೆ ಒಂದು ಆಘಾತ ಕಾದಿತ್ತು. ಅದೇ ಎಮ್ಮೆ ಹಿಂದೆ ಇದ್ದ ಮನುಷ್ಯ ಎದುರುಗಡೆ ಮ್ಯಾನೇಜರ್ ಕುರ್ಚಿಯ ಮೇಲೆ ಕುಳಿತಿದ್ದರು. ನನಗೆ ಒಳಗೊಳಗೇ ಭಯ ಶುರುವಾಗಿತ್ತು. ಎಲ್ಲಿ ನನ್ನನ್ನು ನೋಡಿ ಉಗಿಯುತ್ತಾನೋ ಎಂದು. ಆದರೆ ಮನುಷ್ಯ ತುಂಬಾ ಒಳ್ಳೆಯವ ಆದರದಿಂದ ಮಾತನಾಡಿ ಚಹಾ ಕುಡಿಸಿ "ನಾನು ಎಮ್ಮೆ ಕಾಯುವವನಲ್ಲ Veternary ಡಾಕ್ಟರ" ಎಂದು ಹೇಳಿ ಈ ಗೋವುಗಳ ಪಾಲ (ಯಾನಿ ಗೋಪಾಲ)ನನ್ನು ಕಳುಹಿಸಿದ್ದ. ಹೀಗೆ ಭೇಟಿ ಮಾಡುತ್ತ Production Departmentಗೆ ಹೋದೆವು ಅಲ್ಲಿ ಎಲ್ಲರ ಪರಿಚಯವಾದ ಮೇಲೆ ತಿನ್ನಲು ಪೇಡ, ಮೈಸೂರು ಪಾಕ ತಂದು ಇಟ್ಟರು. ನಾನು ಬರಿ ಪೇಡ ತಿಂದೆ. ಆಗ ಪಾಂಡುರಂಗ ಇದು ಮೈಸೂರು Special ಮೈಸೂರು ಪಾಕ ತಿನ್ನಿ ಗೋಪಾಲ್ ಎಂದರು. ಧಾರವಾಡದಲ್ಲಿ ಸಿಗುವ ಮೈಸೂರು ಪಾಕ ಪಾಕದಂತೆ ಇರದೇ ರಾಕ್ ದಂತೆ ಗಟ್ಟಿ ಇರುತ್ತದೆ ಅದರಿಂದ ಅದನ್ನು ತಿಂದಿರಲಿಲ್ಲ. ಅದನ್ನು ತಿಂದ ಮೇಲೆ ಬಾಯಲ್ಲಿ ನೀರುರಿತ್ತು. ತುಂಬಾ ಚೆನ್ನಾಗಿತ್ತು ಮೈಸೂರು ಪಾಕ.
ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು. ಮುದ್ದೆ ನೋಡಿದ್ದೇ ಅವಾಗ. ಒಂದು ಮುದ್ದೆ ಹಾಕಿಸಿಕೊಂಡೆ. ಅದನ್ನು ಬಾಯಿಯಿಂದ ಜಗಿಯಲಾರoಬಿಸಿದಾಗ ಹಲ್ಲುಗಳಿಗೆ ಮುದ್ದೆ ಅಂಟಿಕೊಂಡಿತ್ತು. ಅದನ್ನು ಜಗಿಯದೆ ಹಾಗೆ ನುಂಗಬೇಕು ಎಂದು ಪಾಂಡುರಂಗ ಹೇಳಿದರು. ಅದರ ಸಹವಾಸ ಸಾಕೆಂದು ಅದನ್ನು ಬಳಿಗಿಟ್ಟು, ಅನ್ನ ಹಾಕಿಸಿಕೊಂಡು ತಿಂದು ಮುಗಿಸಿದ್ದೆ.ಹಾಗು ಹೀಗು ಸಂಜೆವರೆಗೆ ಕಾಲ ಕಳೆದು ಮನೆ ಹಾದಿ ಹಿಡಿದಿದ್ದೆ. ಬರಿ ಅನ್ನ ತಿಂದಿದ್ದರಿಂದ ಹೊಟ್ಟೆ ಚಿರಗುಡುತಿತ್ತು. ಬಿಸಿ ಬಿಸಿ ಯಾಗಿ ಬಜ್ಜಿ ಮಾಡುವದನ್ನು ನೋಡಿ, ಅಲ್ಲಿಗೆ ಹೋಗಿ ಮೈಸೂರು ಬಜ್ಜಿ ಕೊಡಿ ಎಂದೆ.ಏನು? ಎಂದ ಅಂಗಡಿಯವ. ಎಲ್ಲರು ನನ್ನನ್ನು ಮಂಗನಂತೆ ನೋಡಿದರು. ನಂತರ ಕೈ ಮಾಡಿ ತೋರಿಸಿ "ಮೈಸೂರು ಬಜ್ಜಿ" ಕೊಡಿ ಎಂದೆ. "ಓ" ಅದಾ "ಮಂಗಳೂರು ಬಜ್ಜಿ" ಎಂದು ಕೊಟ್ಟ.ಧಾರವಾಡದಲ್ಲಿ ಇದನ್ನ ಮೈಸೂರು ಬಜ್ಜಿ ಅಂತಾನೆ ಅನ್ನೋದು. ಇಲ್ಲಿ ನೋಡಿದರೆ ಇದನ್ನ ಮಂಗಳೂರು ಬಜ್ಜಿ ಅಂತಾರೆ. ಇನ್ನು ಮಂಗಳೂರುನಲ್ಲಿ ಏನೆಂದು ಕರೆಯುತ್ತಾರೋ ಆ ದೇವರೇ ಬಲ್ಲ.

ಮನೆಗೆ ಹೋಗುವದರಷ್ಟರಲ್ಲಿಯೇ ಮನೆಯಲ್ಲಿ ಮುಕುಂದ ಬಂದಿದ್ದ ಅವನು ಮಂಡ್ಯ ಪ್ರಾಜೆಕ್ಟ್ ನೋಡುತಿದ್ದ. ಹಾಗೇ ಪರಸ್ಪರ ಪರಿಚಯ ಮಾಡಿಕೊಂಡೆವು. ರಾತ್ರಿ 9 ಆದರು ಪಾಂಡುರಂಗನ ಸುದ್ದಿ ಇಲ್ಲ. ಹೊಟ್ಟೆ ಹಸಿದಿದ್ದರಿಂದ ಮುಕುಂದನಿಗೆ ನಾನು ಮತ್ತು ಶಿವಾಜಿ ಊಟ ಮಾಡೋಣವೆ ಎಂದು ಕೇಳಿದೆವು. ಸಿಟ್ಟಿನಿಂದ ನಮ್ಮಿಬ್ಬರನ್ನು ದುರುಗುಟ್ಟಿ, ನೀವು ಬೇಕಾದರೆ ಮಾಡಿ ಎಂದ. ನಾನು ಪಾಂಡುರಂಗ ಬರುವವರೆಗೆ ಕಾಯುವೆ ಎಂದು ಓದುತ್ತ ಕುಳಿತ .

ಹೊಟ್ಟೆ ಹಸಿದಿದ್ದರು ನಾವು ಹಾಗೇ ಸುಮ್ಮನೆ ಕುಳಿತೆವು. 10 ಘಂಟೆಗೆ ಪಾಂಡುರಂಗ ಬಂದರು. ಊಟ ಮುಗಿದಮೇಲೆ ಎಲ್ಲರಿಗೂ ನಮ್ಮ ಪ್ರಾಜೆಕ್ಟ್ ಬಗ್ಗೆ ಪ್ರವಚನ ಆಯಿತು. ಮರುದಿನ ರಜೆ ಇದ್ದದ್ದರಿಂದ ಎಲ್ಲರು ಹಾಗೇ ಹರಟಿ ಹಾಸಿಗೆ ಮೇಲೆ ಒರಗಿಕೊಂಡೆವು. ಮರುದಿನ ಪಾಂಡುರಂಗ ಬೆಳಿಗ್ಗೆ ಎದ್ದು ಕಟಿಂಗ ಮಾಡಿಸಲು ಹೋಗಿದ್ದರು. ಇರುವ ನಾಲ್ಕು ಕೂದಲಿಗೆ ೩೦ ರುಪಾಯಿ ದಂಡ ಎಂದು ನಾನು ಮುಕುಂದ ನಕ್ಕಿದ್ದೆವು.

ಊರಿಗೆ ಹೋಗಿದ್ದ ಹೃಷಿಕೇಶ ಅವತ್ತು ಬಂದಿದ್ದ ಎಲ್ಲರು ಮೈಲಾರಿ ಹೋಟೆಲ್ಗೆ ಹೋಗಿ ದೋಸೆ ತಿಂದೆವು. ಅದು ತುಂಬಾ ಫೇಮಸ್ ಹೋಟೆಲ್.

ನನಗೆ ಒಂತರಹ ಹೊಸ ಅನುಭವ ಹೊಸ ಹೊಸ ಗೆಳೆಯರು...ಹೊಸ ಭಾಷೆ ತುಂಬಾ ಎಂಜಾಯ್ ಮಾಡ್ತಾ ಇದ್ದೆ....
ಒಂದು ಸಂಜೆ ಮಂಡ್ಯ ದಿಂದ ಹೃಷಿಕೇಶ ಮತ್ತು ಮುಕುಂದ ಬೇಗನೆ ಬಂದಿದ್ದರು. ಹೃಷಿಕೇಶ ಮಲಗಿದ್ದ ಅವನು ಟೆನ್ಶನ್ ಆಗಿ Low BP ಆಗಿತ್ತು. ಮರುದಿನದಿಂದ ಮುಕುಂದನ ಜೊತೆ ಮಂಡ್ಯಕ್ಕೆ ಹೋಗುವ ಕೆಲಸ ನನಗೆ ಬಿದ್ದಿತ್ತು.ಮಂಡ್ಯಕ್ಕೆ ಹೋದೊಡನೆಯೆ ಮತ್ತೆ ಎಲ್ಲರ ಪರಿಚಯ, ಎಲ್ಲರು ಅರ್ಧ-ಅರ್ಧ ಘಂಟೆ ಮಾತನಾಡಿಸಿ ತಲೆ ತಿಂದಿದ್ದರು. ಮತ್ತೆ ಅಲ್ಲಿಯ MIS ಆಫೀಸರ್ ನಿಮ್ಮ software ನಲ್ಲಿ ತುಂಬಾ debugs ಇವೆ ಎನ್ನಬೇಕೆ ನಕ್ಕು ನಕ್ಕು ಸಾಕಾಗಿತ್ತು. ಮತ್ತೆ ಎಲ್ಲ ಮಾತಿನ ನಂತರ ಲೆಕ್ಕಾಚಾರ ಎನ್ನುವ ಪದ ಬೇರೆ. ಇನ್ನು Marketing ನಲ್ಲಿ ಇರುವ ಮ್ಯಾನೇಜರ್ ಎಲ್ಲದ್ದಕ್ಕೂ ಅಲ್ವೇನ್ರಿ ಎನ್ನುವ ಪದ....ತಲೆ ಕೆಟ್ಟು ಹೋಗಿತ್ತು ಆಗಲೇ ಗೊತ್ತಾಗಿದ್ದು ಹೃಷಿಕೇಶ ನಿಗೆ Low BP ಏಕೆ ಬಂದಿತ್ತೆಂದು. ನನಗೆ ಮಾತ್ರ BP ಪೂರ್ತಿ ಏರಿ High BP ಬಂದಿತ್ತು.
ಹೃಷಿಕೇಶನನ್ನು ಬಳ್ಳಾರಿ ಪ್ರಾಜೆಕ್ಟ್ಗೆ ಕಳುಹಿಸಲಾಯಿತು. ಹಾಗು ಹೀಗು ಹೆಣಗಾಡಿ ಒಂದೆರಡು ಡಿಪಾರ್ಟ್ಮೆಂಟ್ computerise ಮಾಡಿದೆವು. ಆರು ತಿಂಗಳುಗಳು ಹೇಗೆ ಕಳೆದವು ಎನ್ನುವದೇ ನನಗೆ ಯಕ್ಷ ಪ್ರಶ್ನೆ ಅಗತ್ತು. ತುಂಬಾ ಒಳ್ಳೆಯ ಗೆಳೆಯರು.

ಅಷ್ಟೊತ್ತಿಗಾಗಲೇ ಹೃಷಿಕೇಶ ಬಳ್ಳಾರಿ ಬಿಟ್ಟು ಬೆಂಗಳೂರು ಸೇರಿದ. ಬಳ್ಳಾರಿ ಪ್ರಾಜೆಕ್ಟ್ ಗೆ ನಾನು ಹೋಗ ಬೇಕೆಂದು ಪಾಂಡುರಂಗ ಆಜ್ಞೆ ಮಾಡಿದರು. ಅದು ನನಗೆ ನುಂಗಲಾರದ ತುತ್ತಾಗಿತ್ತು. ಒಲ್ಲದ ಮನಸ್ಸಿನಿಂದ ಹೋಗುವೆ ಎಂದು ಹೇಳಿದೆ.

ಬಳ್ಳಾರಿ - ಮೈಸೂರು ಬಸ್ಸಿನಲ್ಲಿ ಕುಳಿತರು ಮೈಸೂರು ನೆನಪು ಮಾತ್ರ ಕಾಡುತಿತ್ತು.. ಮತ್ತೆ ಒಬ್ಬನೇ ಇರುವದು ಹೇಗೆ? ಎನ್ನುವ ಯೋಚನೆ ಬೇರೆ. ಆಗಲೇ ರಾತ್ರಿ 2 ಆಗಿತ್ತು. ನಿದ್ದೆ ಕಣ್ಣಲ್ಲಿದ್ದರು ನಿದ್ದೆ ಮಾಡಿ ನನ್ನ ಸವಿ ನೆನಪುಗಳ ಬೈ ಹೇಳುವ ಮನಸಿರಲಿಲ್ಲ. ಹಾಗೇ ಮೆಲಕು ಹಾಕುತ್ತಿದ್ದಾಗ .. ಆಗಲೇ "ಫಟ" ಎಂಬ ಶಬ್ದ. ಎದುರಿಗೆ ಕುಳಿತ ಒಬ್ಬನಿಗೆ ಮುಂದೆ ಇರುವ ಆಂಟಿ ಕಪಾಳಕ್ಕೆ ಬಾರಿಸಿದ್ದಳು. ಅದು ಏನು ಮಾಡಿದ್ದನೋ ಆ ಮಹಾಶಯ ಬಸಿನ್ನಲ್ಲಿ ಗದ್ದಲದ ವಾತಾವರಣ ಸೃಷ್ಟಿ ಯಾಗಿತ್ತು. ಹೀಗು ಹಾಗು ಬಳ್ಳಾರಿ ತಲುಪಿದೆ ನಿದ್ದೆ ಮಾಡಲಾರದೆ ....

ಮೈಸೂರು ಮಾತ್ರ ನನಗೆ ಮನಸೂರೆಗೊಳ್ಳುವ ಮೆರೆಯಲಾರದ ಮರೀಚಿಕೆಯ ಹಾಗೆ ಸ್ವಲ್ಪು ದಿವಸ ಕಾಡಿತ್ತು...

ಭಾವ ಬಂಧನದ ಬೆಸುಗೆ ........

"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ. ನಿಜ, ಆದರೆ ಈಗ ಸ್ವಲ್ಪ ಸಂಶಯದ ಹುಳ ತಲೆಯಲ್ಲಿ ಕೊರಿತಿದೆ. "ಬದುಕು ಜಟಕಾ ಬಂಡಿ" ಮತ್ತು "ಇದು ಕಥೆಯಲ್ಲ ಜೀವನ" ದಂತಹ ಧಾರಾವಾಹಿಗಳನ್ನು ನೋಡಿದ ಮೇಲೆ ಈ ಸಂಶಯ ನನ್ನ ಮನಸಿನಲ್ಲಿ ಮನೆ ಮಾಡಿದೆ. ಗಂಡಸು ತನ್ನ ಇಚ್ಛೆಯಂತೆ 2-3 ಮದುವೆಯಾಗಿರುವದು ನೋಡಿ ತುಂಬಾ ಅಸಹ್ಯವೆನಿಸುತ್ತದೆ ಮತ್ತು ಅವನು ಕೊಡುವ ಕಿರುಕಳ ನೋಡಿ ಇವನ್ಯಾರೋ ಉತ್ತರ ಕುಮಾರನೇ ಇರಬೇಕು. ಗಂಡಸೊಂದಿಗೆ ಜಗಳವಾಡಲು ಬರಲಾರದೆಂಬ ವಿಷಯ ಅರಿತು ಹೆಂಡತಿಯೊಂದಿಗೆ ಯುಧ್ಧ ಸಾರುವ ಹುನ್ನಾರ. ಒಂದು ಮದುವೆ ಮೊದಲೇ ಆಗಿದ್ದರು ಎರಡು ಹೆಂಡತಿ ನನಗೆ ಬೇಕು ಎನ್ನುವ ಇಂತಹ ಗಂಡಸಿನ ಕ್ಷುಲ್ಲಕ ಬುದ್ಧಿಗೆ ಏನು ಹೇಳುವದು. ಈ ಜೀವನದಲ್ಲಿ ಸಿಗುವ ಎಲ್ಲ ಭೋಗಗಳು ಇವನ ಸೊತ್ತೋ ಗೊತ್ತಿಲ್ಲ?. ನಮ್ಮ ಜೀವನದ ನಿಜವಾದ ಸಾರ್ಥಕತೆ ಏನು? ನಾವು ಹುಟ್ಟಿರುವದು ಏತಕೆ? ಎಂಬುದನ್ನು ಯಾರು ವಿಚಾರ ಮಾಡಲು ಹೋಗುವದಿಲ್ಲ. ನನ್ನ ಅಹಂ ಮತ್ತು ನನ್ನ ಸುಖ ಎರಡೇ ಜೀವನದಲ್ಲಿ ಎಂಬ ಕತ್ತಲೆಯಲ್ಲಿ ಬದುಕುವ ಜನ ತುಂಬಾ ಇದ್ದಾರೆ.
ಹೋಗಲಿ ಬಿಡಿ ಇದೆಲ್ಲ ನಮಗ್ಯಾಕೆ ನಮ್ಮದೇನಿದ್ದರೂ ಬ್ಲಾಗ್ ಬಳಗವೆಂಬ ಪುಟ್ಟ ಪ್ರಂಪಚದಲ್ಲಿ ನಮ್ಮ ಸುಖ,ದುಖ ಎಲ್ಲವನ್ನು ನಾವು ಹಂಚಿಕೊಂಡು ಆನಂದದಿಂದ ಇರುವದು. ಅದೇ ನಮ್ಮ ಸೌಭಾಗ್ಯ.


ಭಾವ, ಬಂಧನ, ಬೆಸುಗೆ ಅಂತೆಲ್ಲ ಬರೆದು ತುಂಬಾ ತಲೆ ಕೊರಿತ ಇದ್ದಾನಲ್ಲಪ್ಪ ಅಂದ್ಕೋಬೇಡಿ. ನಿಜವಾಗಿಯೂ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ.ನನ್ನ ಗೆಳೆಯ Engineering 4 Semester ಇದ್ದಾಗಲೇ ಮನೆ ಎದುರಿಗೆ ಇರುವ ಹುಡುಗಿಯನ್ನು ಪ್ರೀತಿಸಿ ಹೆತ್ತವರನ್ನು ಕಡೆಗಣಿಸಿ ಮದುವೆಯಾಗಿದ್ದ. ಅವನ ಜೊತೆ ಅವನ ಹೆಂಡತಿಯನ್ನು ಸಾಕುವ ಕಷ್ಟ ಅವರ ಅಮ್ಮನಿಗೆ ಬಿದ್ದಿತ್ತು.


ಈ ಪ್ರಿತಿಯೇ೦ದರೆನೆ ಹೀಗೆ ಕಣ್ರೀ ಯಾರು? ಯಾರನ್ನ? ಯಾವಾಗ? ಪ್ರೀತಿಸುತ್ತಾರೆ ಅಂತ ಹೇಳೋಕಾಗೋದಿಲ್ಲ.ನಾನು ಪ್ರೀತಿಸಿದ್ದೆ ಆದರೆ ಅ೦ಜಪುಕಲ ಹೇಳಲಾಗದೆ, ಮನಸಿನಲ್ಲಿಯೇ ಅವಳನ್ನು ಆರಾಧಿಸಿದ್ದೆ. ಹೋಗಲಿ ಅದೆಲ್ಲ ಹಳೆಯ ಅಳಿದು ಉಳಿದ ಮಾತು. ಈಗೇನಿದ್ದರೂ ನನ್ನ ಹೆಂಡತಿನೇ ನನಗೆ ಸರ್ವಸ್ವ.


ಹೀಗೆ ನನ್ನ ಒಬ್ಬ ಗೆಳೆಯ ಶ್ರೀಧರ ಸವಿತಾಳಿಗೆ ಗಾಳ ಹಾಕಿದ್ದ. ಅವಳೋ ಮುಂಬಯಿಯಲ್ಲಿ ಬೆಳೆದವಳು ಇವನೋ ಧಾರವಾಡ - ಹುಬಳ್ಳಿ ಬಿಟ್ಟು ಬೇರೇನೂ ನೋಡದ ಹುಡುಗ. ಅದೇನೋ ಪ್ರತಾಪ ಮಾಡಿ ತೋರಿಸಿದ್ದನೋ ಗೊತ್ತಿಲ್ಲ. ಕನ್ನಡ ಬರದ ಸವಿತಾಳಿಗೆ ಕನಕಾಂಬರಿ ತೊಡಿಸಲು ಸಿದ್ದವಾಗಿದ್ದ. ಜೋಡಿನು ಪಸಂದಾಗೆ ಇತ್ತು. ಲೋರ್ರೆಲ್ ಹಾರ್ಡಿ ತರಹ(ಬಡಕಲು ಶ್ರೀಧರ, ಡುಮ್ಮಿ ಸವಿತಾ).


ಆಗ ತಾನೆ ನಮ್ಮ ಮದುವೆಯಾಗಿತ್ತು . ನನ್ನ ಹೆಂಡತಿಯನ್ನ ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೆಂದು ಅಕ್ಕ ಪಕ್ಕದವರು ಪೀಡಿಸುತ್ತಿದ್ದರು. ಅವಳಿಗೂ ಒಡುಪುಗಳ ಸಂಭ್ರಮ. ತನ್ನ ಎಲ್ಲ ಗೆಳತಿಯರು ಮತ್ತು ಸಂಭoದಿಕರಿಂದ ಕೇಳಿ ಒಡುಪುಗಳನ್ನು ಮನನ ಮಾಡಿ ಸುಂದರವಾಗಿ ಹೇಳುತ್ತಿದ್ದಳು.


* ಸರಸ್ವತಿಯ ವಾಹನ ನವಿಲು. _______ರಾಯರ ಹೆಸರು ಹೇಳುವೆನು ಇದೆ ಮೊದಲು.

* ಸಕಲ ಮಂಗಳ ಕಾರ್ಯಕ್ಕೂ ಗಜಾನನೇ ಪೂಜ್ಯ, ಭಕ್ತರು ಯುಕ್ತಿಯಿಂದ ಪೂಜೆ ಮಾಡಲು ಒಲಿದು ಕೊಡುವನು ಇಷ್ಟ ಸ್ವರಾಜ್ಯ.________ ರಾಯರ ಪಾದ ಸೇವೆಯ ಸೌಭಾಗ್ಯವೆ ನನಗೆ ಪರಮ ಪೂಜ್ಯ.

* ವಸಂತ ಮಾಸದಲ್ಲಿಚಿಗಿಯುವುದು ಮಾವಿನ ಮುಗುಳು. .________ ರಾಯರ ಹೆಸರು ಹೇಳುವೆನು ________ರವರ ಮಗಳು.

* ಈಶ್ವರನಿಗೆ ಏರಿಸುವದು ಮೂರುದಳದ ಪತ್ರಿ .________ ರಾಯರ ಹೆಸರು ಹೇಳುವೆನು .________ ಅವರ ಪುತ್ರಿ.

* ಪಾಂಡವರು ಅರಗಿನ ಮನೆಯಿಂದ ಪಾರಾಗಿದ್ದು ಯುಕ್ತಿಯಿಂದ .________ ರಾಯರ ಹೆಸರು ಹೇಳುವೆನು ಭಕ್ತಿಯಿಂದ.

* ರುಕ್ಮಿಣಿಯು ಶ್ರೀಕೃಷ್ಣನಿಗೆ ಓಲೆ ಬರೆಯುವಾಗ ಮುತ್ತು ಸುತ್ತು ಮಾಡಿದಳು ಮಸಿ. _________ರಾಯರ ಹೆಸರು ಹೇಳುವೆನು _______ಅವರ ಸೊಸಿ.

* ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಗುರು ವಿದ್ಯಾರಣ್ಯ. _________ರಾಯರು ಪತಿಯಾಗಿ ದೊರೆತದ್ದು ನನ್ನ ಪೂರ್ವ ಜನ್ಮದ ಪುಣ್ಯ.

* ಸಖಿ ಸಖಿಯರಲ್ಲಿ ಸಖಿಯಾದ _________ ಮಗಳಾದೆ _______ರಾಯರ ಕೈ ಹಿಡಿದು _______ಅವರ ಸೊಸೆಯಾದೇ.

* ಕೈಯಲ್ಲಿ ಕೈಕೊಟ್ಟು ಸಪ್ತಪದಿಯಲ್ಲಿ ನಿಂತೆ, ಹಿಂದೆ ಸಾಗುವೆ ನಿಮ್ಮ ನೆರಳಿನಂತೆ. _________ರಾಯರೆ ನನ್ನನ್ನು ಕೈ ಹಿಡಿದು ನಡಿಸಿರಿ ನಾಲ್ಕು ಜನ ನಮ್ಮನ್ನು ಹೊಗಳುವಂತೆ.

* ರಾಮ ಲಕ್ಷ್ಮಣರು ಶೃಂಗವೇರಪುರಕ್ಕೆ ಬಂದ ಮೇಲೆ ಆಯಿತು ಗುಹನ ಸ್ನೇಹ, ನನಗೆ ಸದಾ ಇರಲಿ _________ರಾಯರ ಸ್ನೇಹ.

* ಶ್ರೀಕೃಷ್ಣನು ಗೋವರ್ಧನ ಗಿರಿಯಲ್ಲಿ ಗೋಪಿಯರೊಡಗೂಡಿ ಸೂರೆ ಮಾಡಿದನು ಹಾಲು ಮೊಸರು, ಇವತ್ತು ಪ್ರೀತಿಯಿಂದ ಹೇಳುವೆನು ನಾನು _________ ರಾಯರ ಹೆಸರು.

* ಲಗ್ನಕ್ಕೆ ಮೊದಲು ಮಾಡುವರು ಯಾದಿ, _________ರಾಯರ ಹೆಸರು ಹೇಳುವೆನು ಬಿಡಿರಿ ಹಾದಿ.

* ತವರಿಂದ ದೂರಾದೆ ಹೊಸಮರಕೆ ಬೇರಾದೆ _________ರಾಯರ ಕೈ ಹಿಡಿದು ಧನ್ಯಳಾದೆ.

* ಒಂದೊಂದು ಉ೦ಗುರಕ್ಕೂ ಒಂದೊಂದು ಹರಳು ಅದರಿಂದ ಶೋಭಿಸುವದು ಕೈ ಬೆರಳು _______ರಾಯರೇ ನನ್ನ ಮಾoಗಲ್ಯದ ಹರಳು.

* ಸಿರಿತನವಿರಲಿ ಬಡತನವಿರಲಿ _________ರಾಯರ ಪಾದಸೇವೆ ಕೊನೆತನಕವಿರಲಿ.

* ನೋಡಲ್ಲಿ ವಿಶ್ವದಾ ಮರದಡೆಯಲ್ಲಿ ತೂಗುತಿದೆ ಉಯ್ಯಾಲೆ ಅದರಲ್ಲಿ ನಡೆಯುತಿದೆ ಮಾನವನ ಜೀವನದ ಜೋಕಾಲೆ ______ ರಾಯರ ಕೈ ಹಿಡಿದು ನಾನಾದೆ ಸುಮಂಗಲೆ

* ಹತ್ತಾವತಾರದಲಿ ಮೊದಲನೇ ಅವತಾರವೇ ಮತ್ಸ್ಯ. ______ರಾಯರ ಹೆಸರು ಹೇಳುವೆನು ಕನ್ನಡದಲ್ಲಿ ಸ್ವಚ್ಚ.

* ನದಿಗಳು ಎಷ್ಟೇ ಹರಿದರು ಕೊನೆಗೆ ಸೇರುವದು ಸಮುದ್ರವನ್ನ. ನನ್ನ ಮನವು ಸೇರುವದು _____ ರಾಯರ ಹೃದಯವನ್ನ.

* ಕಲ್ಲಾಗಿ ಬಿದ್ದಿದ್ದ ಅಹಲ್ಯಯನ್ನ ಉಧಾರ ಮಾಡಿದ ಶ್ರೀರಾಮ ತನ್ನ ಪಾದ ಸ್ಪರ್ಶದಿಂದ _______ರಾಯರ ಹೆಸರು ಹೇಳುವೆನು ಪ್ರೇಮ ಭಾವದಿಂದ.

* ಶ್ರೀ ಕೃಷ್ಣನು ಶೇಷಶಯನದ ಮೇಲೆ ಮಲಗಿರುವಾಗ ಬ್ರುಗು ಮುನಿಯು ತಾಡಣನ ಮಾಡಿದ್ದೂ ವೃಕ್ಷ ಸ್ಥಳ ________ ರಾಯರ ಚರಣ ಸೇವೆಯೇ ನನ್ನ ಮೋಕ್ಷ ಸ್ಥಳ.

* ಸಿರಿವಂತರ ಸೊಬಗು ಧನದಿಂದ ________ರಾಯರನ್ನು ಪೂಜಿಸುವೆನು ತನು ಮನದಿಂದ.

* ಸೂರ್ಯ ನಾರಾಯಣನಿಂದಲೇ ಲೋಕಕ್ಕೆ ಆರೋಗ್ಯ ______ ರಾಯರಿಂದಲೇ ಸಕಲ ಸೌಭಾಗ್ಯ.

* ಬ್ರಾಹ್ಮಣರಿಗೆ ಪವಿತ್ರ ಜನಿವಾರ ________ ರಾಯರೇ ನನ್ನ ಜೀವನದ ಆಧಾರ.

* ಆಕಾಶಕ್ಕೆ ಶೋಭಿಸುವದು ನಕ್ಷತ್ರವಲ್ಲಿ ಅಂಗಳಕ್ಕೆ ಶೋಭಿಸುವದು ರಂಗವಲ್ಲಿ ______ ರಾಯರ ಹೆಸರು ಹೇಳುವೆನು ಗುರು-ಹಿರಿಯರ ಸಮ್ಮುಖದಲ್ಲಿ.

* ಗಾಂಧೀಜಿಯವರು ಸತ್ಯಾಗ್ರಹ ಮಾಡಿದ್ದೂ ಲೋಕಕಲ್ಯಾಣಕ್ಕಾಗಿ _______ರಾಯರ ಹೆಸರು ಹೇಳುವೆನು ಕೇಳಿದ ಕಾರಣಕ್ಕಾಗಿ.

* ಕಣ್ಣಿಗೆ ಕಾಡಿಗೆ ಆಸೆ, ಹೆಣ್ಣಿಗೆ ಗಂಡಿನ ಆಸೆ ______ರಾಯರ ಹೆಸರು ಗೊತ್ತಿದ್ದರೂ ನಿಮಗೆಲ್ಲರಿಗೂ ಕೇಳುವ ಆಸೆ.
ಒಂದೊಂದು ಒಡಪುಗಳು ಮತ್ತೊಂದನ್ನು ಮೀರಿಸುವಂತವು. ಇನ್ನು ಊಟಮಾಡುವಾಗ, ನಮಸ್ಕರಿಸುವಾಗ ಬೇರೆ ಬೇರೆ ಒಡಪುಗಳು.
* ಉಡುಪಿಯಲ್ಲಿ ಇರುವದು ಕನಕನ ಕಿಂಡಿ _________ರಾಯರಿಗೆ ತಿನಿಸುವೇನು ಉಂಡಿ.
ಉಂಡಿ ಒಂದೇ ಇದ್ದರೆ ಪರವಾಗಿಲ್ಲ, ಎರಡೆರಡು ಉಂಡಿ ಇದ್ದರೆ ಬೇರೆ ಬೇರೆ ಒಡಪು ಹಾಕಿಯೇ ಹೇಳಬೇಕು. ಮತ್ತೆ ಕೇಳಿಯೇ ಬಿಟ್ಟರು
* ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ __________ರಾಯರಿಗೆ ತಿನಿಸುವೇನು ಉಂಡಿ.
ಹೀಗೆ ನಮಸ್ಕರಿಸುವಾಗ .....ಒಲವೆ ಜೀವನ ಸಾಕ್ಷಾತ್ಕಾರ ________ರಾಯರಿಗೆ ಮಾಡುವೆನು ನಮಸ್ಕಾರ.


ಇದು ಸವಿತಾನಿಗು ಬಿಡದ ಕರ್ಮ. ಅವಳು ಮದುವೆಯಾದ ಮೇಲೆ ಒಡಪು ಹೇಳಲೇಬೇಕು. ಅದಕ್ಕೆ ನನ್ನ ಹೆಂಡತಿಗೆ ಗಂಟು ಬಿದ್ದಳು ಹೇಳಿ ಕೊಡು ಎಂದು. ಅವುಗಳನ್ನು ಹಿಂದಿಯಲ್ಲಿ ಬರೆದು ಕೊಡುವ ಕೆಲಸ ನನ್ನದಾಗಿತ್ತು. ನನ್ನ ಹೆಂಡತಿ ಎಲ್ಲಿ _____ ಇದೆ ಅಲ್ಲಿ ಗಂಡ ಹೆಸರು ಹೇಳಬೇಕು ಎಂದು ತಾಕಿತ ಮಾಡಿದ್ದಳು. ಮತ್ತೆ ಎರಡು _____ ಇದ್ದರೆ ಅಪ್ಪನ ಹೆಸರೋ, ಅತ್ತೆ ಯವರ ಹೆಸರು ಇರುತ್ತದೆ ಎಂದು ಹೇಳಿದ್ದಳು. ಹಾಗು ಹೀಗು ಮನನ ಮಾಡಿದ್ದಳು ಸವಿತಾ.

ಮದುವೆಯಾದ ಮೇಲೆ ಒಂದೊಂದಾಗಿ ಒಡಪು ಹೇಳಲು ಶುರುಮಾಡಿದಳು. ಎಲ್ಲ ಹೆಂಗಸರು "ವಾಹ್ ವಾಹ್" ಎಂದು ಬೆನ್ನುತಟ್ಟಿದರು. ಈ ಹಿಂದಿ ಹುಡುಗಿ ಎಷ್ಟು ಚೆನ್ನಾಗಿ ಒಡಪು ಹೇಳುತ್ತಾಳೆ ಅಂತ. ಸವಿತಾಳಿಗೆ ಆನಂದದ ಪರಿವೆ ಇಲ್ಲದ ಹಾಗೆ ಆಕಾಶಕ್ಕೆ ಏಣಿ ಹಾಕ್ಕಿದ್ದಳು. ಆಮೇಲೆ ಖುಷಿಯಿಂದ ಶ್ರೀಧರರಾಯರ ಎನ್ನುವ ಬದಲು ಗೋಪಾಲರಾಯರ ಎಂದು ಬಿಡಬೇಕೇ. ನನ್ನ ಗೆಳೆಯ ಶ್ರೀಧರ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಕೊಲ್ಲುವ ಹಾಗೆ ದುರುಗುಟ್ಟಿದ್ದ. ಸಾರೀ.... ಸಾರೀ..... ಎಂದು ಮತ್ತೆ ತಿದ್ದಿ ಶುರು ಹಚ್ಚಿ ಕೊಂಡಳು.


ಇನ್ನೇನು ಆಗಲಿಕ್ಕಿಲ್ಲ ಎಂದುಕೊಂಡ ನಾನು ಮತ್ತು ನನ್ನ ಹೆಂಡತಿ ಅಂದುಕೊಂಡಾಗಲೇ ಶ್ರೀಧರರಾಯರ ಮಗಳು ಎಂದು ಬಿಟ್ಟಿದ್ದಳು. ನಾವು ಕಲಿಸಿದ ಗಿಳಿಪಾಠ ಕೈ ಕೊಟ್ಟಿತ್ತು. ಇನ್ನು ಮುಗಿದಿರಲಿಲ್ಲ ನನ್ನ ಗೆಳೆಯನ ಮಡದಿಯ ಪ್ರತಾಪ. ಊಟಕ್ಕೆ ಕುಳಿತಾಗ "ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ ಶ್ರೀಧರರಾಯರಿಗೆ ತಿನಿಸುವೇನು ಹಿಂಡಿ". ಹಿಂಡಿ ತಿನ್ನಿಸಿದಳೋ ಅಥವಾ ಉಂಡಿ ತಿನ್ನಿಸಿದಳೋ ಗೊತ್ತಿಲ್ಲ. ಕಿವಿ ಹಿಂಡಿ ನನ್ನ ಗೆಳೆಯನನ್ನು ಮನೆ ಅಳಿಯನನ್ನಾಗಿ ಮಾಡಿಕೊಂಡು. ಒಡಪು ಹೇಳಿ ಓಡಿಸಿಕೊಂಡು ಹೋಗಿದ್ದಾಳೆ. ಏನೇ ಇರಲಿ ಮದುವೆ ಮಾತ್ರ ಜನುಮ ಜನುಮದ ಅನುಭಂದ ಅನ್ನುವದು ಮಾತ್ರ ನಿಜ.
ನನಗೆ ರವಿಚಂದ್ರನ/ಹಂಸಲೇಖ ಜೋಡಿ ಚಿತ್ರದ ಈ ಹಾಡು ನೆನಪಿಸುತ್ತದೆ.


"ಯಾರ ಯಾರ ಚೆಲುವೆ ಎಲ್ಲಿಹಳೋ

ಯಾರ ಯಾರ ಒಲವು ಎಲ್ಲಿಹದೋ

ಒಂದೊಂದು ಕಾಳಿನ ಅನ್ನದಲು ತಿನ್ನೋರ ಹೆಸರು ಕೆತ್ತಿಹದೋ "


ತನ್ನ ಒಡಪುಗಳಿಂದ ನನ್ನ ಮನ ಸೆರೆ ಹಿಡಿದ ನನ್ನ ಮಡದಿ ನನ್ನ ಪ್ರೀತಿಯ ಮನೆ ಒಡತಿ.

ಯಾವ ಹೂವು... ಯಾರ ಮುಡಿಗೋ..? ಯಾರ ಒಲವು.. ಯಾರ ಕಡೆಗೋ? ಎಂಬುದಂತೂ ನಿಜ.............

ಅಡ್ಡ ಹೆಸರು ಪ್ಲೀಸ್ ...............

ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್ ಮನೆಗಳನ್ನು ನೋಡಿ ಹಾಗೆ ಅoದಿರಬಹುದು. ಮನಸ್ಸು ಆಗಲೇ ಧಾರವಾಡಕ್ಕೆ ಹೋಗಿತ್ತು. ಧಾರವಾಡದಲ್ಲಿ ಅಡ್ಡ ಹೆಸರುಗಳು ಅಂದರೆ Surnameಗಳು ತುಂಬ ವಿಚಿತ್ರವಾಗಿ ಇರುತ್ತವೆ. ಹಂಚಿನಮನಿ,ಮೇಲಿನಮನಿ, ಕಡೆಮನಿ, ಹಿತ್ತಲಮನಿ ಹೀಗೆ etc etc ...


ಒಮ್ಮೆ ಸುಂದರರಾವ್ ಎನ್ನುವ ಪೋಸ್ಟ್ ಮ್ಯಾನ್ ಬೆಂಗಳೂರಿನಿಂದ ಧಾರವಾಡಕ್ಕೆ Transfer ಆಗಿ ಬಂದಿದ್ದರು. ಅವರಿಗೆ ಮೊದಲು ಅಂಗಡಿ ಶರಣಪ್ಪ ಎನ್ನುವವರಿಗೆ ಪತ್ರ ಕೊಡಬೇಕಿತ್ತು. ಅದನ್ನು ತೆಗೆದು ಕೊಂಡು ಹೋಗಿ ಒಬ್ಬ ದಾರಿಹೋಕನನ್ನು ಕೇಳಿದರು. ಅವನು ಸಿಡುಕ ಮೂತಿ ಸಿಂಗಾರಪ್ಪನೆ ಇದ್ದಿರಬೇಕು. ಹೆಂಡತಿಯಿಂದ ಬೈಸಿಕೊಂಡಿದ್ದನೋ ಗೊತ್ತಿಲ್ಲ. ಸುಂದರರಾಯರು ಕೇಳಿದರು ಸರ್ ಅಂಗಡಿ ಎಲ್ಲಿ ಎಂದು. ಆಗ ಆ ಮನುಷ್ಯ "ಇಲ್ಲಿ ಎಲ್ಲಿತ್ತ ಅಂಗಡಿ ಮುಂದ ಹೋಗ" ಇಲ್ಲಿ ಇದ್ದದ್ದು ಈ ಹಾಳ ಮನಿ ಮಾತ್ರ ಎಂದು ತನ್ನ ಮನೆಯನ್ನು ತೋರಿಸಿದನು. ಅನಂತರ ರಾಯರು ಪೂರ್ತಿ ಹೆಸರನ್ನೇ ಹೇಳಿ ಮನೆಯ ವಿಳಾಸವನ್ನು ಪಡೆದು ಪತ್ರ ತಲುಪಿಸಿದ್ದರು.


ಹೀಗೆ ಸುಂದರ ರಾವ್ ಅವರ ಮಡದಿ ದಿನಸಿ ಅಂಗಡಿಗೆ ಹೋಗಿ ಒಂದು ದಿವಸ ಅಕ್ಕಿ ಇಲ್ವಾ ಎಂದು ಕೇಳಿದಳು. ಆಗ ಅಂಗಡಿಯವ "ಈಗ ಹೋದನಲ್ಲ" ಎನ್ನಬೇಕೆ. ಆ ಅಂಗಡಿಯವನಿಗೆ ಅಕ್ಕಿ ಎಂಬ ಗೆಳೆಯನಿದ್ದ ಅವನು ಆಗಲೇ ಅವನ ಜೊತೆ ಮಾತನಾಡಿ ಮನೆಯ ಕಡೆಗೆ ಹೊರಟಿದ್ದ. ಆಗ ತಿನ್ನುವ ಅಕ್ಕಿ ಬೇಕು ಎಂದು ಕೇಳಿ ಕೊಂಡು ಬಂದಳು.


ಹೀಗೆ ಒಂದು ದಿವಸ ಕಡ್ಲೆ ಕಾಯಿ ಅಂದಾಗ ಅಂಗಡಿಯವ ಕಡ್ಲೆ ಕೊಟ್ಟಿದ್ದ. ಮತ್ತೆ ಎಲ್ಲಿ ವಾಪಾಸ್ ಕೇಳುವದು ಅಂತ ಸುಮ್ಮನಾಗಿದ್ದರು. ಹೀಗೆ ಸುಂದರ್ ರಾಯರು ಮತ್ತು ಅವನ ಹೆಂಡತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. (ಕೊತಂಬರಿ ಬೀಜ, ಕಡ್ಲೆ ಪುರಿ etc etc....).


ಮತ್ತೊಂದು ದಿವಸ ತುಂಬ ರುಚಿಯಾಗಿದೆ ಎಂದು ಮಿರ್ಚಿ ಮತ್ತು ಗಿರಮಿಟ್ಟ ತುಂಬ ತಿಂದಿದ್ದರು. ಆನಂತರ ನೋಡಬೇಕು ಅವರ ಅವಸ್ಥೆ.


ಇನ್ನು ಒಂದು ದಿವಸ ಸುಂದರರಾಯರು ನನಗೆ ಪತ್ರದ ವಿಳಾಸವನ್ನು ಕೇಳಿದರು. ಪತ್ರದ ವಿಳಾಸ ನೋಡಿ ತುಂಬಾ ನಕ್ಕಿದ್ದೆ. ಪತ್ರದ ಮೇಲೆ ನಾರಾಯಣ ಶ್ವಾನಭೋಗ ಎಂದು ಬರೆದಿರಬೇಕೆ. ಪಕ್ಕಾ ಬ್ರಾಹ್ಮಣ ನಮ್ಮ ಕಾಕಾ ನಾರಾಯಣ ಶಾನಭೋಗರು ಯಾವಾಗ ನಾಯಿಗಳನ್ನು(ಶ್ವಾನಗಳನ್ನ) ಭೋಗಿಸಲು (ತಿನ್ನಲು) ಕಲಿತಿದ್ದಾರೆ ಎಂದು ಯೋಚಿಸಿದೆ.


ನಮ್ಮ ಊರಲ್ಲಿ ತುಂಬಾ ಶ್ರೀಮಂತವಾದ ಪಾಟೀಲ ಕುಟುಂಬ ಇದೆ. ಆದರೆ ಮನೆ ಮುಂದೆ, ಹಿಂದೆ ಮಾತ್ರ ಸಗಣಿ ಇರುತಿತ್ತು. ಅದಕ್ಕೆ ಅವರಿಗೆ ಸಗಣಿಯವರ ಮನೆಯೆಂದು ಅಡ್ಡ ಹೆಸರು ಬಿತ್ತು. ಆಗ ಅವರ ಮನೆಯವರು ತಮನ್ನು ಸಗಣಿಯವರ ಮನೆಯೆಂದು ಅಡ್ಡ ಹೆಸರಿನಿಂದ ಕರೆಯಬಾರದೆಂದು ಊರಿಗೆಲ್ಲ ಹೋಳಿಗೆ ಮಾಡಿಸಿ ಊಟಕ್ಕೆ ಹಾಕಿದ್ದರು. ಆಗ ನಾನು ಮತ್ತು ರಂಗಣ್ಣ ಊಟ ಮಾಡಿ ಬರುತ್ತಿದ್ದಾಗ ದಾರಿಯಲ್ಲಿ ಬಸಪ್ಪ ಭೇಟಿಯಾದ. ಎಲ್ಲಿ ಹೋಗಿದ್ದಿರಿ ಎಂದು ನಮನ್ನು ಕೇಳಿದ. ನಾನು ಹೇಳುವದಕ್ಕೆ ಮುಂಚೆನೇ ರಂಗಣ್ಣ ತಟ್ಟನೆ ನಾವು "ಸಗಣಿಯವರ ಮನೆಗೆ ಊಟಕ್ಕೆ ಹೋಗಿದ್ದೆವು" ಎಂದು ಬಿಡಬೇಕೇ. ಇನ್ನು ಬಾಯಿಯಲ್ಲಿಯ ಬೀಡ ಮುಗಿದಿರಲಿಲ್ಲ.

ನನಗೆ ಒಬ್ಬ ಗೆಳಯನಿದ್ದಾನೆ ಅವನ ಹೆಸರು ರವಿ ಧರ್ಮಣ್ಣವರ ಅಂತ. ಅವನು ನನ್ನ ಜೊತೆನೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು Design Engineer, ಅಂದರೆ Machine ಗಳನ್ನು ಕಂಪ್ಯೂಟರ್ ನಲ್ಲಿ ಚಿತ್ರಿಸುವುದೇ ಅವನ ಕೆಲಸ. ನನ್ನದು ಅವನದು ತುಂಬ ಸಲಿಗೆ. ಹೀಗೆ ಸಲಿಗೆಯಿಂದ ಒಂದು ದಿವಸ ನಾನು "ರವಿ ಧರ್ಮಣ್ಣ ಕುಂಚದ ಕಲೆ ಬಲೆ ಸಾಕಾಗಿತೋ.." ಅಂತ ಚೇಷ್ಟೆಯಿಂದ ಹಾಡುತ್ತ ಅವನನ್ನು ಊಟಕ್ಕೆ ಕರೆಯಲು ಹೋದೆ. ಅವನಿಗೆ ಕೆಟ್ಟ ಕೋಪ ಬಂದಿತ್ತು. ಏಕೆಂದರೆ ಅವನು ಡಿಸೈನ್ ಮಾಡಿದ ಡ್ರಾಯಿಂಗ್ನಲ್ಲಿ ಏನೋ ತಪ್ಪು ಇತ್ತು ಅಂತ ಅವನ ಬಾಸ್ ಅವನಿಗೆ ಮಂಗಳಾರತಿ ಮಾಡಿದ್ದರು.

ಹೀಗೆ ನಮ್ಮೂರ ಭಾಷೆ ತುಂಬ ಅಪರೂಪದ ಹಾಸ್ಯ ಭಾಷೆ. ನಮ್ಮಲ್ಲಿಯ ಅಡ್ಡಹೆಸರುಗಳು ತುಂಬ ಹಾಸ್ಯಕರವಾಗಿ ಇರುತ್ತವೆ. ಉಳ್ಳಗಡ್ಡಿ , ಬೆಳ್ಳುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಕೊತಂಬರಿ, ಅಕ್ಕಿ, ಕಡ್ಲಿ etc etc.
ಇನ್ನು ಕೆಲವು ಇರುತ್ತವೆ ಕರಡಿ,ತಿಪ್ಪೆಗುಂಡಿ ಅಂತ. ಲಕ್ಕುಂಡಿ, ಮುಕ್ಕುಂಡಿ ....

ಹೀಗೆ ನನ್ನ ಒಬ್ಬ ಗೆಳೆಯನ ಅಡ್ಡ ಹೆಸರು ಪ್ರದೀಪ್ ಯತ್ತಿನಗುಡ್ಡ ಅಂತ. ಅದು ಅಪಾರ್ಥವಾಗಬಾರದೆಂದು ಪ್ರದೀಪ್. ವಾಯ ಅಂತ ಬರೆದರೆ ಏನೋ ಹೇಳುವದೋ ನೀವೇ ಹೇಳಿ.


ನಾವು ಮಾತುನಾಡುವಾಗ ಎಲ್ಲರಿಗೂ "ಯಾ" ಹಚ್ಚಿಯೇ ಮಾತನಾಡುವದು ಪ್ರದೀಪನಿಗೆ ....ಪದ್ಯ, ರಮೇಶ್ ನಿಗೆ ..ರಮ್ಯ ಹೀಗೇನೆ... ರಮ್ಯ ಎಂದರೆ ಹುಡುಗಿ ಎಂದು ತಿಳಿದುಕೊಂಡರೆ ಕಷ್ಟ.


ನನ್ನ ಪ್ರಯಾಣ ಮುಗಿದಿತ್ತು ನನ್ನ ಧಾರವಾಡದ ನೆನಪುಗಳೊಂದಿಗೆ. ಏನೇ ಇರಲಿ ನಮ್ಮ ಭಾಷೆ ನಮಗೆ ನಿಜವಾಗಿಯೂ ಅಂದದ.. ಚಂದದ.. ಸುಂದರ.. ಆಡು ಭಾಷೆ.

ಬಾಲ್ಯದ ಆಟ ಆ ಹುಡುಗಾಟ .....

ಮೊನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರವಾಗುತಿತ್ತು. ಮುಗ್ಧ ಮನಸ್ಸಿನ ಮಕ್ಕಳ ಸುಮಧುರವಾದ ಸಂಗೀತವನ್ನು ಕೇಳಿ ಮನಸ್ಸಿಗೆ ಮಹದಾನಂದ ಆಗಿತ್ತು. ಮಕ್ಕಳ ವಯಸ್ಸು ಸುಮಾರು ೮ ರಿಂದ ೧೨ ರವರೆಗೆ ಇತ್ತು. ನನಗೀಗ ವಯಸ್ಸು ೩೩. ಆದರು ಹೇಳಿಕೊಳ್ಳುವಂತಹ ಸಾಹಸವೇನು ಮಾಡಲಿಲ್ಲವೆಂಬ ಭಾವನೆ ಮನಸ್ಸಿನ ಮೂಲೆಯಲ್ಲಿ ಮನೆ ಮಾಡಿದೆ. ನಿಜವಾಗಿಯೂ ಹೇಳಬೇಕೆಂದರೆ ನನಗೆ ಓದಲು, ಬರೆಯಲು ಬಂದಿದ್ದೆ ೯ ನೇ ವಯಸಿನಲ್ಲಿ ಅದು ಕರಜಗಿ ಮಾಸ್ತರರು ಬಾಸುಂಡೆ ಬರುವ ಹಾಗೆ ಬಾರಿಸಿದಾಗ ಅಮ್ಮನಿಂದ ಓದಲು, ಬರೆಯಲು ಕಲಿತುಕೊಂಡಿದ್ದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರಬುದ್ಧತೆ ಇದೆ ಎಂಬ ಸೂಕ್ಷ್ಮತೆ ಅರಿತಾಗ ಮನಸ್ಸಿಗೆ ಕಸಿವಿಸಿಯಾಗಿತ್ತು. ಆಗಲೇ ಮನಸ್ಸು ನಾನು ಆಡಿರುವ ಬಾಲ್ಯದ ಆಟಗಳಿಗೆ ಒಂದು ಇಣುಕು ನೋಟ ಬೀರಿತ್ತು.

ನನ್ನ ಕ್ಲಾಸಿನಲ್ಲಿ ಹೆಗ್ಗಡೆ ಎಂಬ ನನ್ನ ಸಹಪಾಠಿ ಇದ್ದ. ಅವನಿಗೆ ನಾನು ಮತ್ತು ನನ್ನ ಗೆಳೆಯ ಮಂಜು "ಹೆಗ್ಗಣ" ಎಂದು ಸಂಭೋದಿಸುತ್ತಿದ್ದೆವು. ಅವನಿಗೆ ಒಂದು ದಿವಸ ಕೋಪ ಬಂದು ಅವರ ತಂದೆಗೆ ಹೇಳಿ ನಮಗೆ ತಕ್ಕ ಶಾಸ್ತಿ ಮಾಡಿದ್ದ.
ಇನ್ನು ಒಂದು ದಿವಸ ಪಾರ್ವತಮ್ಮ ತನ್ನ ಮಾವನವರ ಶ್ರಾದ್ಧದ ಪಿಂಡ ಇಡುತ್ತಿದ್ದರು. ನಾನು ಅಲ್ಲೇ ಅಂಗಡಿಯಲ್ಲಿ ಪಾಪಡಿ ಕೊಂಡು ತಿನ್ನುತ್ತಾ ನಿಂತಿದ್ದೆ. ಕಾಗೆ ಪಿಂಡವನ್ನು ತಿನ್ನಲ್ಲು ಬಂದಾಗ ಅದು ನನ್ನ ಪಾಪಡಿಗೆ ಕಣ್ಣು ಹಾಕುತ್ತಿದೆ ಎಂದು ಯೋಚಿಸಿ ಅದನ್ನು ಕಲ್ಲಿನಿಂದ ಹೊಡೆದು ಓಡಿಸಿದ್ದೆ. ಪಾರ್ವತಮ್ಮನ ಪಿಂಡಕ್ಕೆ ಮಣ್ಣು ಬಿದ್ದಿತ್ತು. ಪಾರ್ವತಮ್ಮ ದೊಡ್ಡದಾದ ರಗಳೇನೆ ಮಾಡಿದ್ದಳು.ಅಷ್ಟರಲ್ಲಿ ನಾಯಿ ಬಂದು ಪಿಂಡವನ್ನು ಅಸ್ವಾದಿಸಿತ್ತು. ಕಾಗೆ ಪಿಂಡದ ಬದಲು ನಾಯಿ ಪಿಂಡವಾಗಿತ್ತು. ಪಾಪಡಿ ಕಾಗೆ ಪಿಂಡ ಆಗಿತ್ತು.

ಇನ್ನು ಒಂದು ದಿವಸ ಸ್ಕೂಲಿಗೆ ಬೆಲ್ಲ ಕಿಸೆಯಲ್ಲಿ ಇಟ್ಟು ಕೊಂಡು ಹೋಗಿದ್ದೆ. ನನ್ನ ಪಕ್ಕದ ಹುಡುಗ ಮಿಸ್ ಹೇಳುವ ಪಾಠವನ್ನು ಬಿಟ್ಟು ನನ್ನ ಕಿಸೆ ನೋಡುತ್ತಾ ಕುಳಿತಿದ್ದ. ಕಿಸೆಯಲ್ಲಿರುವ ಬೆಲ್ಲ ನೋಡಿ ಮಿಸ್ ಕೋಪದಿಂದ ಕ್ಲಾಸ್ ಹೊರಗಡೆ ನಿಲ್ಲಿಸಿದ್ದರು.
ಅಪ್ಪ ಮನೆಯಲ್ಲಿ ಒಂದು ದಿವಸ ಮಾವಿನ ಹಣ್ಣನ್ನು ತಂದು ಇಟ್ಟಿದ್ದಾಗ. ಅಪ್ಪ, ಅಮ್ಮ ಇಲ್ಲದ ಸಮಯದಲ್ಲಿ 1/2 ಡಜನ್ ಮಾವಿನ ಹಣ್ಣನ್ನು ಮುಗಿಸಿದ್ದೆ. ಮತ್ತೊಂದು ದಿವಸ 1/4 Kg ತುಪ್ಪ.

ಅಪ್ಪ ಒಂದು ದಿವಸ ಹೊಸ ಟೇಪ್ ರೆಕಾರ್ಡರ್ ತಂದಿದ್ದರು. "ದಾಸರ ಪದಗಳು","ಸುಪ್ರಭಾತ" ಎಲ್ಲವು ಚೆನ್ನಾಗಿ ಬರುತಿತ್ತು. ನಾನು ಕಿಶೋರ್ ಕುಮಾರ ಹಾಡುಗಳ ಕ್ಯಾಸೆಟ್ ಮನೆಗೆ ಕೊಂಡು ಬಂದಿದ್ದೆ. ಒಂದು ದಿವಸ ಕಿಶೋರ್ ಕುಮಾರ ಅಳಲಾರಂಬಿಸಿದ್ದ(ಕ್ಯಾಸೆಟ್ ಸಿಕ್ಕಿಕೊಂಡಿತ್ತು). ನನಗೆ ಕ್ಯಾಸೆಟ್ ತಿರುಗಿಸುವ ಗಾಲಿಗಳ ವೇಗ ಸ್ವಲ್ಪ ಕಡಿಮೆಯಾಗಿದೆ ಎಂದು ಅನಿಸಿತ್ತು. ನಾನು ಅದರ ವೇಗ ಜ್ಯಾಸ್ತಿ ಮಾಡಲು ಸ್ಕ್ರೂ ಡ್ರೈವರ್(Screw Driver)ನಿಂದ ತಿರುಗಿಸಿದ್ದೆ ಆದರು ಉಪಯೋಗವಾಗಲಿಲ್ಲ. ಆಗಲೇ ನನಗೆ ನೆನಪು ಬಂದಿದ್ದು ನನ್ನ ಗೆಳೆಯ ಹೇಳಿದ ಒಂದು ಮಾತು "ನಮ್ಮಪ್ಪ ಎಣ್ಣೆ ಹಾಕಿದಾಗ ತುಂಬ ವೇಗವಾಗಿ ಮಿಲಿಟರಿ ಸೈನಿಕನ ಹಾಗೆ ಪರೇಡ ಮಾಡಿ ಬರುತ್ತಾರೆ" ಎಂದು. ನಾನು ಒಂದು ದಿವಸ ಅವರ ನಡಿಗೆಯನ್ನು ನೋಡಿದ್ದೇ. ಆಗ ನನಗೆ ಎಣ್ಣೆ ಎಂದರೆ ಗೊತ್ತಿದದ್ದು ಕೊಬ್ಬರಿ ಎಣ್ಣೆ, ಚುಮಣಿ ಎಣ್ಣೆ ಇನ್ನೊಂದು ಅಡುಗೆ ಎಣ್ಣೆ. ಅಡುಗೆ ಎಣ್ಣೆ ಏನಾದರು ಹಿಡಿದರೆ ಅಮ್ಮನಿಗೆ ಗೊತ್ತಾದರೆ ನನಗೆ ಕಾಡಿಗೆ ಅಟ್ಟುತ್ತಾಳೆ ಎಂದು ಅದರ ಸಹವಾಸಕ್ಕೆ ಹೋಗಲಿಲ್ಲ. ಇನ್ನು ಚುಮಣಿ ಎಣ್ಣೆಯ ಅನುಭವವಿತ್ತು. ಒಂದು ದಿವಸ ನನ್ನ ತಂಗಿ ಚುಮಣಿ ಎಣ್ಣೆಯನ್ನು ಕುಡಿದು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದಳು. ಅದಕ್ಕೆ ಚುಮಣಿ ಎಣ್ಣೆ ಏನಾದರು ಹಾಕಿದರೆ ಇದಕ್ಕೂ ಹಾಸ್ಪಿಟಲ್ ಗ್ಯಾರಂಟೀ. ಇನ್ನು ಉಳಿದಿದ್ದು ಕೊಬ್ಬರಿ ಎಣ್ಣೆ ಮಾತ್ರ. ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಯನ್ನು ಟೇಪ್ ರೆಕಾರ್ಡರ್ ವ್ಹೀಲ್ ಗೆ ಸುರಿದಾಗ ಬೆಸುರವಾಗಿದ್ದ ಕಿಶೋರ್ ಕುಮಾರ್ ಸುರದಿಂದ ಹಾಡಿದ್ದ. ಹೀಗೆ ನಡಿಯಿತು ನನ್ನ ಎಣ್ಣೆ ಪ್ರಯೋಗ. ನನಗೆ ಏನೋ ಒಂದು ಹೊಸದಾದ ವಿಷಯವನ್ನು ಕಂಡು ಹಿಡಿದಷ್ಟು ಸಂತೋಷ. ಅಪ್ಪನಿಗೆ ಆಶ್ಚರ್ಯ ೧ ವಾರದಲ್ಲಿ 200 ML ಕೊಬ್ಬರಿ ಎಣ್ಣೆ ಖಾಲಿ. ಮತ್ತೆ ಒಂದು ದಿವಸ ಎಣ್ಣೆ ಸುರಿದಾಗ ಟೇಪ್ ರೆಕಾರ್ಡರ್ "ಪಟ್ಟ" ಎಂದು ವೈರ್ ಹರಿದು ಬಿದಿತ್ತು. ಮನೆಯಲ್ಲಿನ ಕರೆಂಟ್ ಢಮಾರ್ .... ಅನಂತರ ಗೊತ್ತಾಗಿದ್ದು ಮೇನ್ ಟ್ರನ್ಸ್ಫೊರ್ಮೆರ (Transformer)ನೆ ಢಮಾರ್ ಆಗಿದೆ ಎಂದು. ನಮ್ಮ ಅಪ್ಪ ಟೇಪ್ ರೆಕಾರ್ಡರ್ ಸರ್ವಿಸ್ಗೆ ಅಂತ ತೆಗೆದುಕೊಂಡು ಹೋದಾಗ. ಅಂಗಡಿಯವ ನಿಮ್ಮದು ಎಣ್ಣೆ ಗಿರಿಣಿ ಇದೆಯಾ ಎಂದು ಕೇಳಿದ್ದ ಅಪ್ಪನಿಗೆ. ಅಪ್ಪನಿಗೆ ಕೆಟ್ಟ ಕೋಪ ಬಂದು 200 ML ಎಣ್ಣೆ ಹಚ್ಚುವ ಹಾಗೆ ಬಾಸುಂಡೆ ಕೊಟ್ಟಿದ್ದರು.

ಅನಂತರ ಯಾವದೇ ಇಲೆಕ್ಟ್ರಾನಿಕ್ ಸಾಮಾನುಗಳಿಂದ ಸ್ವಲ್ಪ ದೂರವಿದ್ದೆ. ನನ್ನ ಗೆಳೆಯನು ತನ್ನನ್ನು ತಾನೆ ಆಲ್ಬರ್ಟ್ ಐನ್ಸ್ಟೈನ್, ತೋಮಸ್ ಅಲ್ವ ಎಡಿಸನ್ ಅಂದು ಕೊಂಡಿದ್ದನೋ ಗೊತ್ತಿಲ್ಲ. ಹೀಗೆ ಒಂದು ದಿವಸ ಗುಜರಿ ಅಂಗಡಿಯಿಂದ ತಂದ Circuit ನ್ನು ಹಚ್ಚಿ ಮನೆಯಲ್ಲಿಯ ಕರೆಂಟ್ ಢಮಾರ್.

ಒಂದು ದಿವಸ "ಸ್ಪೈಡರ್ ಮ್ಯಾನ್" ಧಾರವಾಹಿ ನೋಡಿ ಸ್ಪೈಡರ್ ಮ್ಯಾನ್ ತರಹನೆ ಮನೆಯ ಮುಂದೆ ಕಟ್ಟಿರುವ ತೋರಣದ ಧಾರಕ್ಕೆ ಜೋತು ಬಿದ್ದು ಕೆಳಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕ್ಕೊಂಡಿದ್ದೆ.

ಚಿಣ್ಣಿ -ದಾಂಡು ಎಂದರೆ ನನಗೆ ತುಂಬ ಇಷ್ಟ. ಒಂದು ದಿವಸ ಅಪ್ಪ ಆಫೀಸ್ ನಿಂದ ಮನೆಗೆ ಬಂದಿರಲಿಲ್ಲ ಅವರನ್ನು ಕರೆದುಕೊಂಡು ಬರಬೇಕೆಂದು ನಾನೆ ಖುದ್ದಾಗಿ ಅವರ ಆಫೀಸ್ ದಾರಿ ಹಿಡಿದಿದ್ದೆ. ಅದು ಸ್ಮಶಾನದ ದಾರಿಯಿಂದನೆ ಹೋಗಬೇಕು. ಆಗ ನನಗೆ ಒಂದು ಚೆನ್ನಾಗಿರೋ ಚಿಣ್ಣಿ ಸಿಕ್ಕಿತು ಅದನ್ನು ಹಿಡಿದುಕೊಂಡು ಹೊರಟಿದ್ದೆ. ಅಷ್ಟರಲ್ಲೇ ಅಪ್ಪ ಸೈಕಲ್ ಏರಿ ಬರುವದನ್ನು ಕಂಡು "ಅಪ್ಪ" ಎಂದು ಕೂಗಿದಾಗ. ಅಪ್ಪ ಏನೋ ಎಲ್ಲಿ ಹೊರಟಿದ್ದಿಯ ಎಂದು ಕೇಳಿದಾಗ ನಿನ್ನನ್ನೇ ಕರೆದುಕೊಂಡು ಬರಬೇಕೆಂದು ಹೊರಟಿದ್ದೆ ಎಂದೆ. ಏನೋ ಇದು ಕೈನಲ್ಲಿ ಎಂದಾಗ ಚಿಣ್ಣಿ ಎಂದೆ. ನಿನ್ನ ಚಿಣ್ಣಿ ಮನೆ ಹಾಳಾಗ ಎಂದು ಎಲಬು(ಎಲವು) ಕಣೋ ಎಂದು ಅದನ್ನು ಕಿತ್ತು ಎಸೆದಿದ್ದರು.

ಮತ್ತೆ ಒಂದು ದಿವಸ ನನಗೆ ವಿಪರಿತ ಹೊಟ್ಟೆ ನೋವು ಕಾಣಿಸಿದ ಹಾಗೆ ಆಯಿತು. ಅಪ್ಪನನ್ನು ಎಬ್ಬಿಸಿ ರಾತ್ರಿ ೩.೦೦ ಘಂಟೆಗೆ ಹಾಸ್ಪಿಟಲ್ ಗೆ ಹೊರಟಿದ್ದೆವು. ಅದೇನೋ ಗೊತ್ತಿಲ್ಲ ಲಕ್ಷ್ಮಿ ನಾರಾಯಣ ಗುಡಿಯ ಸಮೀಪಿಸುತ್ತಿದ್ದಂತೆ ಹೊಟ್ಟೆ ನೋವು ಮಾಯಾವಾಗಿತ್ತು. ಮತ್ತೆ ಮನೆಗೆ ವಾಪಾಸ್ ಆದೆವು.

ನಮ್ಮ ಮನೆಯಲಿ ಇದ್ದದ್ದು ನಮ್ಮ ಅಜ್ಜಿ ಕೊಡಿಸಿದ ರೇಡಿಯೋ. ಅದರಲ್ಲಿ ಬುಧವಾರ ರಾತ್ರಿ ವಾರದ ನಾಟಕ ಪ್ರಸಾರವಾಗುತಿತ್ತು. ಅದನ್ನು ಕೇಳುವದೆಂದರೆ ನಮ್ಮ ಮನೆಯವರಿಗೆಲ್ಲ ಖುಷಿ. ಹಾಗೆ ಒಂದು ದಿವಸ ಒಂದು ನಾಟಕದಲ್ಲಿ ಒಂದು ಡೈಲಾಗ್ ಇತ್ತು ಅದೇನೆಂದರೆ "ಒಂಟಿ ಕಾಲಿನ ವೈದ್ಯ ಸಕ್ಕರಿ ತುಪ್ಪ ನೈವೇದ್ಯ" ಎಂದು. ಅದನ್ನು ಕೇಳಿ ಮರು ದಿನ ಅದೇ ನನ್ನ ಡೈಲಾಗ್ ಆಗಿತ್ತು. ಹೀಗೆ ಒಂಟಿ ಕಾಲಿನಲ್ಲಿ ನಡೆಯುವದು ನಾನು ಮತ್ತು ನನ್ನ ಗೆಳೆಯ ಮಂಜು ಮಾಡುತ್ತಿದ್ದಾಗ ಒಂದು ಮುದುಕಿ ಎದುರಿಗೆ ಬಂದಳು ಬ್ಯಾಲೆನ್ಸ್ ತಪ್ಪಿ ಅವಳ ಮೇಲೆ ಬಿದ್ದಾಗ. ಅವಳು ವೈದ್ಯರ ಬಳಿ ಹೋಗುವ ಹಾಗಾಯಿತು. ಸಕ್ಕರಿ ತುಪ್ಪ ನೈವೇದ್ಯ ಅಪ್ಪ ಮಾಡಿದ್ದರು. ಮತ್ತೆ ಒಂದು ದಿವಸ Cylon ಸ್ಟೇಷನ್ ಹಚ್ಚುವ ಭರದಲ್ಲಿ ರೇಡಿಯೋ ಟ್ಯೂನ್ ಮಾಡಿ ಮಾಡಿ ಅದನ್ನು ಮೂಲೆಗುoಪಾಗಿಸಿದ್ದೆ.

ನಾನೇನಿದ್ದರು ಯಾವತ್ತು "ಘಜನಿ" ನೆ. ಎಂದರೆ ಓದಿದ್ದನ್ನು ಆಗಲೇ ಮರೆಯುವ ಅಭ್ಯಾಸ. ಇನ್ನು ನನ್ನ ಗೆಳೆಯರು ಇದೆ ಜಾತಿಯವರು. ಅವರೆಲ್ಲರೂ ಘಜನಿಯ ಹಾಗೆ ಮೈತುಂಬ ಬರೆದು ಕೊಂಡು ಪರೀಕ್ಷೆಗೆ ಬರುತ್ತಿದ್ದರು. ಒಂದು ದಿವಸ ಪಕ್ಯ ನು ಹೀಗೆ ಬರೆದು ಕೊಂಡು ಬಂದಿದ್ದ. ಅವನು ಬಾರಿ ಬಾರಿ ತನ್ನ ಅಂಗಿ ಎತ್ತುವದನ್ನು ನೋಡಿ ನಮ್ಮ ಮೇಸ್ಟ್ರು ಅವನನ್ನು ಬುದ್ಧನ ಹಾಗೆ ಮಾಡಿ ನೀರಿನ ಅಭಿಷೇಕ ಮಾಡಿದ್ದರು.

ಗಾಳಕ್ಕೆ ಸಿಕ್ಕಿದ ನೆನಪುಗಳು ಮಾತ್ರ ಬರಿ ಇಷ್ಟು.ಬಾಲ್ಯದಲ್ಲಿ ಆಡಿರುವ ಆಟಗಳು ಮಾತ್ರ ನೂರಾರು....

(ಈ ಬರಹದಿಂದ ಯಾರಿಗಾದರೂ ತಮ್ಮ ಬಾಲ್ಯದ ನೆನಪು ತರಿಸಿದಲ್ಲಿ ಈ ಬರಹ ಸಾರ್ಥಕ.)

ಜವಾನಿ ಜಾನೆ ಮನ ಮೇರಾ ಜೀನ್ಸ್ ....

ರೀ... ನಿಮಗೆ ಫ್ಯಾಷನ್ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತೀರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು ಹೇಳಿದೆ.


ಒಂದು ದಿವಸ ಅರಿವೆ ಅಂಗಡಿಗೆ ಹೋದಾಗ ಜೀನ್ಸ್ ತೊಗೊ ಬೇಕು ಎಂದು ಹಠ ಹಿಡಿದಳು. ಮಗನು ಜೀನ್ಸ್ ಎಂಬ ಉದ್ಗಾರವೆತ್ತಿದಾಗ, ಆಯಿತು ಎಂದು ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳುವ ಅಂತ ನಿರ್ಧರಿಸಿದೆ. ನಾನು ಯಾವತ್ತು ಜೀನ್ಸ್ ಪ್ಯಾಂಟ್ ಧರಿಸಿದವನಲ್ಲ. ನಾನು ಏನಿದ್ದರು ಧರಿಸುವದು ಟೈಲರ್ ಬಳಿ ಹೋಗಿ ಅಳತೆ ಕೊಟ್ಟು ಆನಂತರನೆ ಪ್ಯಾಂಟ್ ಹೋಲಿಸೋದು. ಅಂಗಡಿಯವನಿಗೆ ಜೀನ್ಸ್ ತೋರಿಸು ಎಂದು ಹೇಳಿದೆವು. ಮತ್ತೆ ಪ್ಯಾಂಟ್ ಯಾವ ಸೈಜ್ ಬೇಕೆಂದು ಕೇಳಿದ ಆಗ ನಾನು ನನ್ನ ಟೈಲರ್ ಕೇಳಿ ಬರುತ್ತೇನೆ ಎಂದು ಅಂಗಡಿಯಿಂದ ಹೊರಗೆ ಹೊರಟೆ. ಅಂಗಡಿಯವ ತಡೆದು, ಅವನ ಟೈಲರ್ ಗೆ ಅಳತೆ ತೆಗೆದುಕೊ ಎಂದು ಹೇಳಿದ. ಅವನ ಟೈಲರ್ ಒಂದು ಹುಡುಗಿಯ ಅಳತೆ ತೆಗೆದು ಕೊಳ್ಳುತ್ತಿದ್ದ. ಒಮ್ಮೆಲೇ ನನ್ನ ಅಳತೆ ತೆಗೆದುಕೊ ಅಂದಾಗ ಅವನಿಗೆ ನುಂಗಲಾರದ ತುತ್ತಾಗಿತ್ತು. ರಂಭೆಯಂತಿರುವ ಹುಡುಗಿಯ ಅಳತೆ ಬಿಟ್ಟು ಈ ಕೋತಿಯ ಅಳತೆ ತೋಗೊ ಬೇಕಲ್ಲ ಅಂದು ಕೊಂಡು ನನ್ನ ಕಡೆ ಧಾವಿಸಿ ಹಾಗೆ ಹೀಗೆ ನಿನ್ನ ನಡ ಹೊಳ್ಳಿಸಿ, ಒಂದು ಟೇಪ್ ತಂದು ನನ್ನ ನಡುವಿನ ಸುತ್ತಳತೆ ತೆಗೆದು ೩೨ ಎಂದು ಹೇಳಿದ. ಆಗ ಅಂಗಡಿಯವ ಯಾವ ಬ್ರಾಂಡ್ ಬೇಕು ಎಂದು ಕೇಳಿದ. ನನಗೆ ಬ್ರಾಂಡ್ ಗಳ ಬಗ್ಗೆ ಪರಿಚಯವಿಲ್ಲದ್ದರಿಂದ ಯಾವದಾದರು ಬ್ರಾಂಡ್ ತೋರಿಸಿ ಎಂದೆ. ಅವನು ಒಂದು Reputed ಬ್ರಾಂಡ್ ಅಂತ ಹೇಳಿ ಪ್ಯಾಂಟ್ ಗಳನ್ನು ತೋರಿಸಲಾರoಬಿಸಿದ. ಪ್ಯಾಂಟ್ ಗಳ ಕಲರ್ ನೋಡಿ ಏನೇ ಇದು ಪಂಚರಂಗಿ ಕಲರ್ ಹಾಕಿದ್ದಾರೆ ಎಂದೆ ತಮಾಷೆಯಾಗಿ. ಆ ಪ್ಯಾಂಟ್ ಗಳ ರೇಟ್ ನೋಡಿ ತಲೆ ಸುತ್ತು ಬಂದಿತ್ತು. ಒಂದೊಂದು ಪ್ಯಾಂಟ್ ಬೆಲೆ ೧೦೦೦/- ದಿಂದ ೩೦೦೦/- ರೂಪಾಯಿಗಳ ಹತ್ತಹತ್ತಿರ ಇತ್ತು. ನಾನು ತಂದಿದ್ದು ೮೦೦/- ರುಪಾಯಿಗಳು ಮಾತ್ರ ಎಲ್ಲವನ್ನು ಇಲ್ಲೇ ಕೊಟ್ಟರೆ. ನನ್ನ ಗಾಡಿಯನ್ನ ತಳ್ಳಿ ಕೊಂಡು ಹೋಗಬೇಕಾಗುತ್ತದೆ ಎಂದು ಬೇಡವೆಂದೆ(ಪೆಟ್ರೋಲ್ ವಿಲ್ಲದ್ದರಿಂದ). ಪೆಟ್ರೋಲ್ ಇಲ್ಲದ ಗಾಡಿ ಯಾರಾದರು ಕಂಡು ಹಿಡಿದಿದ್ದರೆ ಎಷ್ಟು ಚೆನ್ನ ಎಂದು ಮನಸ್ಸಿನಲ್ಲೇ ಅಂದು ಕೊಂಡಿದ್ದೆ. ಆ ಅಂಗಡಿಯವನಿಗೆ ನನ್ನ ಮುಖ ನೋಡಿ ಏನು ತಿಳಿಯಿತೋ ಇನ್ನು ಕಡಿಮೆ ಬೆಲೆ ಇರುವದು ಇದೆ ತೋರಿಸುತ್ತೇನೆ ಎಂದು ೫೦೦/- ರೂಪಾಯಿಯ ಪ್ಯಾಂಟ್ ಗಳ್ಳನ್ನು ತೋರಿಸಲಾರoಬಿಸಿದ. ಅವನಿಗೂ ಅನ್ನಿಸಿರಬೇಕು ಈ ನನ್ನ ಮಗ ಜೀವನದಲ್ಲಿ ಜೀನ್ಸ್ ನೋಡಿದವನಲ್ಲ ಅಂತ. ಕಡೆಗೆ ಒಂದು ೪೫೦ ರೂಪಾಯಿಗಳ ಪ್ಯಾಂಟ್ ತೆಗೆದುಕೊoಡು ಬಂದೆವು.


ಮರುದಿನ ನಾನು ಜೀನ್ಸ್ ಪ್ಯಾಂಟ್ ಧರಿಸಿ ಆಫೀಸ್ ಗೆ ಹೋದೆ. ಜೀನ್ಸ್ ಮೇಲೆ ಟೀ ಶರ್ಟ್ ಹಾಕಿಕೊಂಡಿದ್ದೆ. ಟೀ ಶರ್ಟ್ ಗೆ ಕಿಸೆ ಇರಲಿಲ್ಲ ಹೀಗಾಗಿ ನನ್ನ Mobile ಮತ್ತು Purseನ್ನು ಬ್ಯಾಗಿನಲ್ಲಿ ಇಟ್ಟು ಕೊಂಡು ಹೋಗಿದ್ದೆ . ಹಾಗೇ mobile ತೆಗೆದುಕೊಳ್ಳುವದನ್ನು ಮರೆತಿದ್ದೆ . ನನ್ನ ಹೆಂಡತಿ ಅನಾಮತ್ತಾಗಿ 12 missed call ಕೊಟ್ಟಿದ್ದಳು . ಆಮೇಲೆ ಫೋನ್ ಮಾಡಿದಾಗ ಸಹಸ್ರನಾಮಾವಳಿ ಶುರು ಮಾಡಿದ್ದಳು. ಆಗ ಅನ್ನಿಸಿತ್ತು ಶರ್ಟ್ ,ಪ್ಯಾಂಟ್ ಧರಿಸಿದ್ದರೆ ಈ ಗತಿ ಬರುತ್ತಿರಲಿಲ್ಲವೆಂದು . ನಾನು ಗಾಡಿ ಹೊಡೆಯುವಾಗ ಸ್ವಲ್ಪ ತೊಂದರೆ ಅನ್ನಿಸಿತು. ಅನಂತರ ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾಲು ಕೆರೆತ ಶುರು ಆಯಿತು. ಸ್ವಲ್ಪ ಕೆರೆದೆ, ಆದರೆ ಕೆರೆತ ಮಾತ್ರ ಕಡಿಮೆಯಾಗಲಿಲ್ಲ. ನನ್ನ ಉಗುರುಗಳು ಜೀನ್ಸ್ ಒಳಗಡೆ ಹೋಗುವದು ಸ್ವಲ್ಪ ಕಷ್ಟವೇ ಆಗಿತ್ತು. ಜೀನ್ಸ್ ಮೇಲೆ ಎತ್ತಿ ಪಬ್ಲಿಕ್ ನಲ್ಲಿ ಕೆರೆಯಲು ಸಾಧ್ಯವಿರಲಿಲ್ಲ. ಹೀಗೆ ತುಂಬ ಕೆರೆತ ಮುoದುವರೆದಾಗ ಗಾಡಿ ನಿಲ್ಲಿಸದೆ ಬೇರೆ ದಾರಿಯೇ ಇರಲಿಲ್ಲ. ಗಾಡಿ ನಿಲ್ಲಿಸಿ ಕೈ ಇಂದ ಜೋರಾಗಿ ಕೆರೆದೆ ಆದರು ಸಮಾಧಾನವಾಗಲಿಲ್ಲ. ಕಡೆಗೆ ಟೂಲ್ ಕಿಟ್(Tool Kit) ನಲ್ಲಿರುವ ಸ್ಕ್ರೂ ಡ್ರೈವರ್(Screw Driver) ತೆಗೆದು ಕೆರೆದಾಗ ಮನಸಿಗೆ ಹಿತವಾಗಿತ್ತು.


ಆಫೀಸ್ ಪ್ರವೇಶಿಸಿದೆ ಎಲ್ಲರು ನನ್ನನ್ನು ನೋಡಿ ಏನಪ್ಪಾ ಏನು ವಿಶೇಷ ಎಂದು ಕೇಳಿದರು. ಜೀನ್ಸ್ ಧರಿಸಿದ್ದಕ್ಕೆ ಪಾರ್ಟಿ ಬೇರೆ ಕೇಳಿದರು ಕೆಲವು ಗೆಳೆಯರು. ಅವರಿಗೇನು ಗೊತ್ತು ಹಾಸಿ ಮಲಗುವ ತಟ್ಟ (ಗೋಣಿ ಚೀಲ) ನೆ ಪ್ಯಾಂಟ್ ಮಾಡಿ ಹಾಕಿ ಕೊಂಡು ಬಂದ ಹಾಗೆ ಆಗಿತ್ತು. ನಿಲ್ಲುವದು, ಕುಳಿತುಕೊಳ್ಳುವದು, ಕೆರೆತ ಎಲ್ಲವೂ ಹರೋ ಹರ. ಇನ್ನು ಟಾಯ್ಲೆಟ್ ಗೆ ಏನಾದರು ಹೋದರೆ ಅಧೋ ಗತಿ.......


ಮತ್ತೆ ಒಬ್ಬ ಗೆಳೆಯ ನನಗೆ ಜೀನ್ಸ್ ಪ್ಯಾಂಟ್ ನ್ನು ಗಣಿಗಾರಿಕೆಯಲ್ಲಿ ಕೆಲಸಮಾಡುವವರು ಧರಿಸುತ್ತಿದ್ದರು ಎಂದು ಹೇಳಿದ ಹಾಗಿತ್ತು. ಈಗ ಅದನ್ನು ಧರಿಸುವವರೇ ಧನ್ಯ ಎಂದು ತಿಳಿದುಕೊಳ್ಳುತ್ತಾರೆ. ಈಗ ಅದೇ ಫ್ಯಾಷನ್.


ಇದನ್ನು ಬೆಸಿಗೆ ಕಾಲದಲ್ಲಿ ಧರಿಸಲು ಹೇಳಿದರೆ ಇದಕ್ಕೆ ಒಂದು A/c ಫಿಟ್ ಮಾಡಿ ಕೊಟ್ಟರೆ ಮಾತ್ರ ಅದನ್ನು ಧರಿಸುವೆ ಎಂದು ಖಡಾ ಖಂಡಿತವಾಗಿ ಹೇಳುತ್ತೇನೆ.


ಈಗ ನನ್ನ ಗೆಳೆಯರೆಲ್ಲರೂ ಜೀನ್ಸ್ ಧರಿಸುವವರೇ. ಎಂದೂ ಜೀನ್ಸ್ ಧರಿಸದ ನನ್ನ ಒಬ್ಬ ಗೆಳೆಯ ಕೂಡ ಜೀನ್ಸ್ ಧರಿಸಿ ಮೇಲೆ ಜುಬ್ಬಾ ಹಾಕಿಕೊಂಡು ಬಂದಿದ್ದ . ಆ ಜುಬ್ಬಾ ಹುಡುಗಿಯರ ಚೂಡಿ ಟಾಪ್ ಹಾಗೇ ಕಾಣಿಸುತ್ತಿತ್ತು .


ಹೀಗೆ ಏನೋ ದಿನ ಕಳೆದು ಮನೆ ತಲುಪಿದೆ. ಆಗಲೇ ನನ್ನ ಗೆಳೆಯ ಫೋನ್ ಮಾಡಿ ಮನೆಗೆ ತನ್ನ ಮಗನ ಹುಟ್ಟಿದ ಹಬ್ಬಕ್ಕೆ ಕರೆದ. ಇರಲಿ ಇಷ್ಟೊತ್ತು ಕಳೆದೆ ಇನ್ನು ಒಂದೆರಡು ಘಂಟೆ ತಾನೆ ಎಂದು. ಅದನ್ನೇ ಸಿಕ್ಕಿಸಿಕೊಂಡು ಹೋದೆ. ಏನೋ Buffet ಡಿನ್ನರ್ ಇರಬಹುದೆಂದರೆ ಅವರು ಊಟಕ್ಕೆ ಬಾಳೆ ಎಲೆ ಹಾಕಿ ಕೆಳಗೆ ಕೂಡಿಸುವ ವ್ಯವಸ್ಥೆ ಮಾಡಿದ್ದರು. ಏನೋ ಕಷ್ಟ ಪಟ್ಟು ಕೆಳಗೆ ಕೂತು ಊಟ ಮುಗಿಸುವಷ್ಟಕ್ಕೆ ಸಾಕು ಸಾಕಾಗಿ ಹೋಗಿತ್ತು. ಊಟಕಿಂತ ನನ್ನ ಜೀನ್ಸ್ ಮೇಲೆ ನನ್ನ ಕಣ್ಣು.


ಆಗ ಅನ್ನಿಸಿತು ಕಾಟನ್ ಜಿನ್ ನಲ್ಲಿ ಉಳಿದಿರೋ ಕಾಟನ್ ತೊಗೊಂಡು ಈ ಜೀನ್ಸ್ ಮಾಡಿರಬೇಕೆಂದು. ಜೀನ್ಸ್ ಕಂಡು ಹಿಡಿದ ಆ ಮಹಾಶಯನಿಗೆ ದೊಡ್ಡದೊಂದು ನಮಸ್ಕಾರ ಹೊಡೆದು. ಮನೆಗೆ ಹೋಗಿ ಲುಂಗಿ ಧರಿಸಿ ಆನಂದದಿಂದ ನಿದ್ದೆಗೆ ಹೋದೆನು..ಮತ್ತೆ ನಾಳೆ ಜೀನ್ಸ್ ಇಲ್ಲ ಏಕೆಂದರೆ ನನ್ನ ಬಳಿ ಇರುವದು ಒಂದೇ ಜೀನ್ಸ್.


ಕೈ ಕೆಸರಾದರೆ ಬಾಯಿ ಮೊಸರು. ಕಾಲು ಕೆರತವಾದರೆ ಅದೇ ಫ್ಯಾಷನ್. ಆದರು ಜೀನ್ಸ್ ಚೆನ್ನಾಗೆ ಕಾಣುತಿತ್ತು.

ಅಜ್ಜಿಯ ಆವಾಂತರ ....

ನಮ್ಮ ಪಕ್ಕದ ಮನೆಯ ಪಾರ್ವತಮ್ಮನ ಮಗಳಿಗೆ ಒಂದು ವರ ಬಂದಿತ್ತು. ವರ ನೋಡಿ ಹೋದ ಮೇಲೆ. ವರನ ಬಗ್ಗೆ ನಮ್ಮ ಅಮ್ಮ ವಿಚಾರಿಸಿದಾಗ. ಹುಡುಗಿಯ ಅಮ್ಮ ತುಂಬ "ದೊಡ್ಡ ಮನುಷ್ಯರು" ಅವರು ಎಂದರು. ಯಾವ ಅರ್ಥದಲ್ಲಿ ಹೇಳಿದರು ತಿಳಿಯಲಿಲ್ಲ ಎಲ್ಲರು ಬಡಕಲಾಗೆ ಇದ್ದರು. ಅನಂತರ ಗೊತ್ತಾಗಿದ್ದು ದೊಡ್ಡ ಮನುಷ್ಯರು ಎಂದರೆ ದುಡ್ಡಿರುವವರು ಅಂತ. ದೇಹದಿಂದ ದೊಡ್ಡದಾಗಿ ಇದ್ದು, ದುಡ್ಡಿಲ್ಲದವರಿಗೆ ಏನು ಅನ್ನ ಬೇಕು ತಿಳಿಯಲಿಲ್ಲ. ಮತ್ತೆ ತಮ್ಮ ಮಾತಿನ ವರಸೆ ಪ್ರಾರಂಬಿಸಿದರು ಪಾರ್ವತಮ್ಮ "ಅವರ ಮನೆ ದೆವ್ವನಂತ ಮನೆ" ಎಂದರು. ಅಂದರೆ ದೆವ್ವ ವಿರುವ ಮನೆಯೋ ಅಥವಾ ದೆವ್ವಗಳು ಇರುವ ಮನೆಯ(ಅಂದರೆ ತುಂಬ ಅದ್ಭುತವಾದ ಮನೆ ಅಂತ ಅರ್ಥ). ಅವರ ಅತ್ತೆ, ಮಾವ ಬಂಗಾರದಂತವರು.(ನಿಜ ಕಂತೆ ಕಂತೆ ಬಂಗಾರವನ್ನು ಬಾಚಿಕೊಂಡ ಮೇಲೆ ಬಂಗಾರದಂತವರೆ ಆಗುತ್ತಾರೆ ಮನಸಿನಲ್ಲೇ ಅಮ್ಮ ಅಂದಿದ್ದರು ). ಇನ್ನು ವರನ ಬಗ್ಗೆ ಹೇಳುವದಾದರೆ ದೇವರಂತ ಮನುಷ್ಯ ಎಂದರು. ನಿಜ ಸಾಕ್ಷಾತ ಕೃಷ್ಣ ಪರಮಾತ್ಮನ ಪರಾವತಾರ. ನನ್ನ ಮಗಳ ತಿಂಡಿಯನ್ನು ತುಂಬಾ ಮೆಚ್ಚಿದರು ಎಂದರು. ಸರಿ ಕೆರೆತ ಬಂದರೆ ಒಳ್ಳೆಯದು ಎಂದು ಮನಸ್ಸಿನಲ್ಲೇ ಅಮ್ಮ ಗುನಗುಟ್ಟಿದ್ದರು. ಏಕೆಂದರೆ ಇವಳನ್ನು ನನ್ನ ಅಣ್ಣ ಸಂಜೀವನಿಗೆ ಕೊಡಬೇಕೆಂದು ನಾವು ಕೇಳಿದಾಗ ಅವರು ನಕಾರವೆತ್ತಿದ್ದರು. ನಮ್ಮ ಅಜ್ಜಿ ಊರಿನಿಂದ ನಮ್ಮ ಮನೆಗೆ ಬಂದಿದ್ದರು. ಅಜ್ಜಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುವದಿಲ್ಲವಾದ್ದರಿಂದ ಅವರನ್ನು ಹೊರಗೆ ನಾವು ಬಿಡುವದಿಲ್ಲ. ಅಜ್ಜಿ ತುಂಬ ನೇರವಾಗಿ ಮಾತನಾಡುವರು. ಹೀಗೆ ಒಂದು ದಿವಸ ಅಜ್ಜಿ ಮದುವೆಗೆ ಅಂತ ಹೋದವರು ಯಾರದೋ ತಿಥಿ ಮನೆಗೆ ಹೋಗಿ ಊಟ ಮಾಡಿ ಬರುವಾಗ ೧೦೦ ರೂಪಾಯಿಗಳನ್ನು ಅವರಿಗೆ ಕೊಟ್ಟು ಬಂದಿದ್ದರು. ಅದಾದ ಮೇಲೆ ನಮ್ಮ ಅಜ್ಜಿಯನ್ನು ನಾವು ಒಬ್ಬರೇ ಹೊರಗೆ ಹೋಗಲು ಬಿಡುವದಿಲ್ಲ. ಆದರು ನಮ್ಮ ಅಜ್ಜಿ ಹೊರಗೆ ಹೋಗುವದನ್ನು ಮಾತ್ರ ಬಿಟ್ಟಿಲ್ಲ.
ಕಣ್ಣು ಕಾಣದೆ ಇದ್ದರು, ನಮ್ಮ ಅಜ್ಜಿ ತುಂಬ ಗಡಿಬಿಡಿಯಿಂದ ತುಂಬ ಕೆಲಸಗಳನ್ನು ಮಾಡುತ್ತಾರೆ ಮತ್ತು ಎಲ್ಲರನ್ನು ತುಂಬ ಪ್ರೀತಿಯಿಂದ ಹಚ್ಚಿ ಕೊಳ್ಳುತ್ತಾರೆ. ಹೀಗೆ ಅಜ್ಜಿ ಪಕ್ಕದ ಮನೆ ಹುಡುಗಿ ಪ್ರೀತಿಯನ್ನು ತುಂಬ ಹಚ್ಚಿ ಕೊಂಡಿದ್ದರು. ಅನಂತರ ಕೆಲವು ದಿನಗಳಾದ ಮೇಲೆ ಪ್ರೀತಿಯ Engagement ಗೆ ನಮ್ಮ ಅಜ್ಜಿ ಯನ್ನು ಆಹ್ವಾನಿಸಿದ್ದರು. ಅದರೆ ಅಜ್ಜಿಯನ್ನು ನಾವು ಕಳುಹಿಸಲಿಲ್ಲ. Engagement ಆದ ಮೇಲೆ Engagement ಫೋಟೋ ಗಳನ್ನೂ ಪ್ರೀತಿ ನಮ್ಮ ಮನೆಗೆ ಕೊಟ್ಟು ಹೋದಳು. ಅಜ್ಜಿ ಫೋಟೋ ನೋಡಿ "ಏನೇ Engagement ದಿವಸ ಕರಡಿ ಜೊತೆ ಪೂಜೆ ಮಾಡಿಸ್ತಾರೆ ಏನು ಇಲ್ಲಿ ಕಡೆ ಜನ" ಎಂದು ಅಜ್ಜಿ ಅಮ್ಮನಿಗೆ ಕೇಳಿದಳು. ಆಗ ಅಮ್ಮ ಇದು ಕರಡಿ ಅಲ್ಲ ಪ್ರೀತಿಯ ಗಂಡ ಆಗುವವನು ಎಂದು ಹೇಳಿದಾಗ ಅಜ್ಜಿ ಹಾಗಾದರೆ ನಮ್ಮ ಸಂಜೀವನಿಗೆ ಏನು ಕಮ್ಮಿ ಎಂದು ಕೇಳಿದ್ದಳು. ಸಧ್ಯ ಪ್ರೀತಿ ಫೋಟೋ ತೋರಿಸಲು ಖುದ್ದಾಗಿ ಬಂದಿದ್ದರೆ ಗತಿ ಏನು ಎಂದು ಯೋಚಿಸಿದ್ದೆವು.
ಹೀಗೆ ಒಂದು ದಿವಸ ಬೆಂಗಳೂರಿನಲ್ಲಿ ನಮ್ಮ ಅಜ್ಜಿ ದಿನಸಿ ಸಾಮಾನು ತರಲು ಅಂಗಡಿಗೆ ಹೋದಾಗ. ಆ ಅಂಗಡಿಯವನಿಗೆ ತಿಳಿಯಲಿಲ್ಲ. ಹವಿಜ(ಕೊತಂಬರಿ ಬೀಜ) ಎಂದು ಎಷ್ಟು ಸರಿ ಹೇಳುವದು ಅಂತ ಅಂಗಡಿಯವನನ್ನು ಗದರಿಸುತ್ತಿದ್ದರು. ಮೊದಲೇ ಆ ಅಂಗಡಿ ಮಾಲೀಕ ಉಡುಪಿಯಾವ "ಮಂಡೆ ಬಿಸಿ ಮಹರಾಯ" ಈ ಅಜ್ಜಿಗೆ ಎಷ್ಟು ಹೇಳುವದು ಎಂದಾಗ. ಅಜ್ಜಿಯ ಪಿತ್ತ ನೆತ್ತಿಗೇರಿತ್ತು. ಅಜ್ಜಿಯನ್ನು ಹೇಗೋ ಸಂಧಾನ ಮಾಡಿ ನಾನು ಮನೆಗೆ ಕರೆತಂದಿದ್ದೆ.
ಪ್ರೀತಿಯ ಮದುವೆಯ ಕಾರ್ಯ ಮುಗಿದಿತ್ತು. ಅಜ್ಜಿಗೆ ಮದುವೆಗೆ ಹೋಗುವ ಮನಸ್ಸಿದ್ದರೂ ಅವಳನ್ನು ಕಳುಹಿಸಿರಲಿಲ್ಲ. ಒಂದು ದಿವಸ ಅತ್ತೆ ಮನೆಗೆ ಅಂತ ಬಂದಿದ್ದ ಪ್ರೀತಿಯ ಗಂಡ. ರಾತ್ರಿ ಕರೆಂಟ್ ಹೋಗಿತ್ತು. ಮೊದಲೇ ಕೃಷ್ಣವರ್ಣದ ಪ್ರೀತಿಯ ಗಂಡನನ್ನು ನೋಡದೆ ಹಿಂದಿನಿಂದ ಅಜ್ಜಿ ಡಿಕ್ಕಿ ಹೊಡೆದು ಬಿಟ್ಟರು. ಸಧ್ಯ ಅಜ್ಜಿಗೆ ಏನು ಆಗಿರಲಿಲ್ಲ. ನರಪೇತಲ ನಾರಾಯಣ ಪ್ರೀತಿಯ ಗಂಡ ಕೆಳಕ್ಕೆ ಬಿದಿದ್ದ.
ಅದಕ್ಕೆ ಅಜ್ಜಿ ಈಗ ಬೆಂಗಳೂರು ಸಹವಾಸನೆ ಬೇಡ ಅಂತ ಮತ್ತೆ ಧಾರವಾಡಕ್ಕೆ ಹೋಗಿದ್ದಾರೆ....ಪ್ರೀತಿಗಿಂತಲೂ ಚೆನ್ನಾಗಿರೋ ಹುಡುಗಿನ್ನೇ ತಂದು ನಿನಗೆ ಕಟ್ಟುತ್ತೇನೆ ಅಂದಿದ್ದಾರೆ ನಮ್ಮ ಸಂಜೀವನಿಗೆ. ಸಧ್ಯ ಕನ್ಯಾ ನೋಡಲು ಅಜ್ಜಿ ಸಂಜೆ ಹೋಗದಿರಲೆಂದು ದೇವರನ್ನು ಬೇಡುತ್ತೇನೆ.

ಕಾಫಿಯ ಕಂಪು ...sssss

"ಕಾಫಿ ಗೆ ಬರ್ತಿರಾ ಸರ್" ಅಂತ ಕೇಳಿದ್ದರು ನಟರಾಜ . ಎಲ್ಲಿಗೆ ಹೋಗ್ತೀರಾ ಅಂದಾಗ . " Coffee Day" ಅಂದ ಹಾಗೆ ಅನ್ನಿಸಿತು (ಕರೆದದ್ದು ಕಾಫಿ ಬೋರ್ಡ್ ಗೆ). ನನಗೆ ಸ್ವಲ್ಪ ಕರ್ಣ ದೋಷವಿದೆ . ಜೋರಾಗಿ ಹೇಳಿದರೆ ಮಾತ್ರ ಈ ಕಿವಿಗಳಿಗೆ ಕೇಳಿಸುವದು . "Coffee Day" ಯ ಅನುಭವವಿದ್ದರಿಂದ ಬೇಡ ಎನ್ದೆ. ಒಂದು ದಿವಸ ನನ್ನ ಗೆಳೆಯ ಮಾಧವ coffee day ಗೆ ಹೋಗೋಣ ಎಂದಿದ್ದ . ಈಗ ರಾತ್ರಿಯಾಗಿದೆ ಇಲ್ಲೇ ಎಲ್ಲಾದರೂ ನೈಟ್ ಕಾಫಿ ಕುಡಿಯುವ ಎನ್ದೆ ತಮಾಷೆಗಾಗಿ. ಅನಂತರ coffee day ಗೆ ಹೋದೆವು . ಅಲ್ಲಿ ನೋಡಿದಾಗ ಆಶ್ಚರ್ಯ ಹುಡುಗ ಹುಡುಗಿ ಜೊತೆ ಜೊತೆ ಯಾಗಿಯೇ ಬಂದಿದ್ದರು. ನಮನ್ನು ಬಿಟ್ಟು. Menu ನೋಡಿ ಗಾಬರಿಯಾಗಿತ್ತು . ಒಂದು ಕಾಫಿಯ ಬೆಲೆ ಕಾಲು Kg ಇಂದ ಹಿಡಿದು ಒಂದು Kg ಕಾಫಿ ಪೌಡರ್ ಬೆಲೆಯಷ್ಟು ಇತ್ತು. ಕಾಫಿ Serve ಮಾಡುವವರೆಲ್ಲಾ ಮಾನಿನಿಯರೇ . ಕಾಫಿ ಆರ್ಡರ್ ಮಾಡಿದೆವು . ಕಾಫಿ ೨೦ ನಿಮಿಷದ ನಂತರ ಬಂದಿತು . ತುಂಬಾ ದಿನಗಳಾದ ಮೇಲೆ ನನ್ನ ಗೆಳೆಯ ಸಿಕ್ಕಿದ್ದರಿಂದ ಹಾಗೆ ಹರಟುತ್ತ ಕುಳಿತಿದ್ದೆವು . ಕಾಫಿ ಮೇಲೆ ಅಷ್ಟೊಂದು ನೊರೆ ಮೊದಲ ಬಾರಿ ನಾನು ನೋಡಿದ್ದು . ಇದಕ್ಕೆ ಯಾವ ಸೋಪ್ ಉಪಿಯೋಗಿಸ್ತಾರೆ ಅಂತೆ ಅಂದಿದ್ದೆ ತಮಾಷೆಗಾಗಿ . ನನಗೆ ಸಕ್ಕರೆ ಕಾಯಿಲೆ ಇರಲಿಲ್ಲವಾದ್ದರಿಂದ ಸಕ್ಕರೆಯನ್ನು ಕೇಳಿ ಪಡೆದು ಕುಡಿದು ಮುಗಿಸಿದೆ . ೧೫೦ ರೂಪಾಯಿಗಳ ಬಿಲ್ಲುಬಂದಿತ್ತು . ಇದನ್ನೆನಾದರು ಹೆಂಡತಿಗೆ ಹೇಳಿದರೆ ಅವಳ ಬಿಪಿ ಏರುವದು ಗ್ಯಾರಂಟೀ ಅಂತ ಹೇಳದೆ ಸುಮ್ಮನಾಗಿದ್ದೆ.

ನಟರಾಜ ಅವರು ಮತ್ತೆ ಒಂದು ದಿವಸ ಮತ್ತೆ ಕಾಫಿಗೆ ಅವಹಾನಿಸಿದರು . ಇವರ ಪ್ರೀತಿಯ ಕರೆಯನ್ನು ತಿರಸ್ಕರಿಸುವ ಮನಸಿಲ್ಲವಾದ್ದರಿಂದ ಬರುತ್ತೇನೆ ಎನ್ದೆ . ಆದರೆ ನಾನು ಕುಡಿಯುವದು ಚಹಾ ಮಾತ್ರ ಅಂತ ಹೇಳಿ ಅವರ ಕರೆಗೆ "ಓ" ಕೊಟ್ಟಿದ್ದೆ. ನಮ್ಮ ಗೆಳೆಯರ ಗುಂಪು ಕಾಫಿಗೆ ಪ್ರಯಾಣ ನಡಿಸಿತ್ತು . ಮತ್ತೆ ಕೇಳಿದೆ "Coffee Day" ಗ ಅಂತ . ಇಲ್ಲ ಸರ್ ಕಾಫಿ ಬೋರ್ಡ್ ಅಂತ ಉತ್ತರ ಬಂತು . ಆಗ ನನ್ನ ಮನಸಿಗೆ ಬಂದದ್ದು ನನ್ನ ಮಿಸ್ ಕೊಡುವ ಬ್ಲಾಕ್ ಬೋರ್ಡ್ ನಲ್ಲಿರುವ ಹೋಂ ವರ್ಕ್ . ಇದು ಹಾಗೇನೇ ಇರಬೇಕು ಶಿಕ್ಷೆ ಗ್ಯಾರಂಟೀ ....

ನಮ್ಮ ಗೆಳೆಯರ ಜೊತೆ ಹೋಟೆಲಿನೊಳಗೆ ಕಾಲಿಟ್ಟೆವು . ಆಗಲೇ ಮಾಣಿ ಏನು ಬೇಕು ನಿಮಗೆ ಎಂದ . ನಾನು ಟೀ ಎಂದೊಡನೆ .ಮಾಣಿ ನನ್ನನ್ನು ದುರಗುಟ್ಟಿದ. ಮತ್ತೆ ಇಲ್ಲಿ ಸಿಗುವದು ಕಾಫಿ ಮಾತ್ರ ಎಂಬ ಉತ್ತರ . ಮತ್ತೆ ಎಲ್ಲರಿಗೂ ಕಾಫಿ ಆರ್ಡರ್ ಮಾಡಲಾಯಿತು . ನನಗೆ ಟೀ ,ಕಾಫಿ ಕುಡಿಯುವ ಮೊದಲು ಸ್ವಲ್ಪ ನೀರು ಕುಡಿಯುವ ಅಭ್ಯಾಸ . ನೀರು ಬೇಕೆಂದು ಮಾಣಿಗೆ ಹೇಳಿದೆ . ಕಾಫಿ ಬಂತು ಆದರೆ ನೀರು ಮಾತ್ರ ಬರಿಲಿಲ್ಲ . ಮತ್ತೆ ಸ್ವಲ್ಪ ಸಮಯದ ನoತರ ಸನ್ನೆ ಮಾಡಿ ನೀರು ಬೇಕೆಂದು ಹೇಳಿದಾಗ ನೀರು ತಂದು ಟೇಬಲ್ ಮೇಲೆ ಇಟ್ಟ . ಆಗಲೇ ಕಾಫಿ ಗೆ ತ೦ಪು ಗಾಳಿ ಬಿಸಿತ್ತು . ನನಗೆ ಯಾವಾಗಲು ಬಿಸಿ ಬಿಸಿಯಾದ ಚಹಾ /ಕಾಫಿ ಕುಡಿದೆ ಅಭ್ಯಾಸ . ನನ್ನ ಅಮ್ಮ ಏಷ್ಟು ಬಿಸಿ ಮಾಡಿದರು ತಣ್ಣಗೆ ಇದೆ ಎಂಬ ಆಲಾಪ. ಅದಕ್ಕೆ ನನ್ನ ತಾಯಿ ಇದನ್ನು ತಣ್ಣಗೆ ಕುಡಿದು ಬೇಕಾದರೆ ಗ್ಯಾಸ್ ಮೇಲೆ ಹೋಗಿ ಕೂಡು ಎಂದು ಗದರಿಸುತ್ತಿದ್ದರು .

ನನ್ನ ಎಲ್ಲ ಸಹವರ್ತಿಗಳು ತಮಿಳುನಾಡಿನವರೇ . ಕನ್ನಡವೇ ಸರಿಯಾಗಿ ಕೇಳಿಸದ ಈ ಕೆಪ್ಪ ಕವಿಗೆ ಇಂತಹ ದೊಡ್ಡದಾದ ಶಿಕ್ಷೆ . ಕಾಫಿ ಬೋರ್ಡ್ ನಲ್ಲಿ ಮಾತ್ರ ಕನ್ನಡದ ಕಂಪು ಎಲ್ಲಡೆ ಆವರಿಸಿತ್ತು .ಕಾಫಿ ಗೆಳೆಯರು ಎಲ್ಲರು ಕನ್ನಡಿಗರೇ . ಮೊದಲ ಬಾರಿ ಇಂತಹ ಮಹಾನ ಸನ್ನಿವೇಶವನ್ನು ಕಂಡಿದ್ದು . ಪ್ರತಿಬಾರಿಯೂ ಈ ಕೆಪ್ಪನಿಗೆ ಬೇರೆ ಭಾಷೆ ಗಳೇ ಕೇಳಸಿಗುತ್ತವೆ .

ಕಾಫಿ ಬೋರ್ಡ್ ನಿಂದ ಹೊರಬರುತ್ತಿದಂತೆ ಒಂದು ದೊಡ್ಡ hump ಒಂದು ಹುಡುಗಿಯನ್ನು jump ಮಾಡಿಸಿತ್ತು .ಸಂಪಾದ ತಂಪು ಕಾಫಿಯ ನಶೆ ಇಳಿದಿರಲಿಲ್ಲವಾದ್ದರಿಂದ ಮೇಲೆ ಎಬ್ಬಿಸಲು ಸಾಧ್ಯವಾಗಲಿಲ್ಲ .

ಕಾಫಿ ನಿಜವಾಗಿಯೂ ಮನಸಿಗೆ ಅಹ್ಲಾದಿಸಿತ್ತು. ಈ ಕವಿಯ ಕಪಿ ಚೆಸ್ಟೆಯೊಂದು ಬಿಟ್ಟು. ... ಹೀಗೆ ಕನ್ನಡದ ಕಂಪು ಹರಡಲಿ .. ಕಾಫಿ ಗೆ ಈ ಕೆಪ್ಪ ಕವಿಯನ್ನು ಕರಿಯಲಿ (ಸ್ವಲ್ಪ ಜೋರಾಗಿ ) ಎಂದು ಆಶಿಸೋಣ .

ನಾಕು ತಂತಿ .....ಮನ ಮೀಟಿದಾಗ .......

ಸುಬ್ಬ ರಾಮಸಂದ್ರದ ಮುಗ್ದ ಮನಿಸಿನ ಹುಡುಗ. ಆದರೆ ಹುಡುಗಿಯರೆಂದರೆ ಸಾಕು ಮೈನಿವಿರೆಳುತ್ತಿದ್ದವು. ಇವನ ಹೃದಯ ಸಾಮ್ರಾಜ್ಯದಲ್ಲಿ ಮೀಟಿದ ನಾಲ್ಕು ತಂತಿಯ ಬಗ್ಗೆ ಹೇಳುವೆ.


ಮೊದಲ ತಂತಿ ....

-----------------

ಅವರಪ್ಪ ಅವನನ್ನು ದೊಡ್ಡ ತಬಲಾ ಆರ್ಟಿಸ್ಟ್ ಮಾಡಬೇಕು೦ಬುವ ಹೆಬ್ಬಯಕೆ. ಆದರೆ ಇವನಿಗೆ ಅದು ಸುತರಾಂ ಇಷ್ಟವಿರಲಿಲ್ಲ. ಇವನ ತಬಲಾ ಕ್ಲಾಸ್ ಸಂಜೆ ೫ ಘಂಟೆಗೆ ಇವನು ಕ್ರಿಕೆಟಿನಲ್ಲಿ Expert Allrounder. ಇವನು ಬ್ಯಾಟ್ ಹಿಡಿದರೆ ಇವನ ಸಹ ಆಟಗಾರರಿಗೆ ನಡುಕ. ಇವನ ಆಟದ ಸಮಯದಲ್ಲೇ ಈ ಹಾಳು ತಬಲಾ ಕ್ಲಾಸ್. ಇವನು ಬ್ಯಾಟ್ ಹಿಡಿಯುತ್ತಿದ್ದಂತೆ ಇವನಮ್ಮ ಬಾರೋ ಕ್ಲಾಸ್ ಗೆ ಹೋಗಬೇಕು ಎಂದು ಕೂಗುವಳು. ಆಗ ಅರ್ಧ ಬ್ಯಾಟಿಂಗ್ ಮುಗಿಸಿ ಕ್ಲಾಸ್ಗೆ ಹೋಗಬೇಕು. ಕ್ಲಾಸಿನಲ್ಲೋ ಮೇಸ್ಟ್ರು ಹೇಳಿದ್ದನ್ನೇ ಹೇಳುವರು. ಇವನಿಗೆ ಯಾವತ್ತು ಹೊಸದರಲ್ಲೇ ಆಸಕ್ತಿ. ಇವನಿಗೆ ಹಳಸಿದ ಚಿತ್ರಾನ್ನದ ಹಾಗೆ ಅದೇ "ನಾಧಿನ ಧಿನ್ ... ನಾಧಿನ ಧಿನ್ ... " ಬೇಸತ್ತು ಹೋಗಿದ್ದ. ಅದೇ ಹಳಸಿದ ತಾಳದಿಂದ ಇವನ ಆಲಾಪಕ್ಕೆ ಅಪಶ್ರುತಿ ಹಿಡಿದಿತ್ತು. ಆದರು ತಬಲಾ ಕ್ಲಾಸ್ ಬಿಟ್ಟಿರಲಿಲ್ಲ.(ಅಪ್ಪನ ಹೇದರಿಕೆ ಇಂದ). ಒಂದು ದಿವಸ ಸುಬ್ಬನ ಹೃದಯ ವೀಣೆಯ ತಂತಿ ಮಿಡಿದಿತ್ತು. ಹೊಸದಾಗಿ ಸಂಗೀತಕ್ಕೆ ಸೇರಿಕೊಂಡ ಹುಡುಗಿ ರೂಪಳ ಮೈಮಾಟ ಅವನ ಹೃದಯಕ್ಕೆ ಹೊಸತಾಳ ಹಾಕಿತ್ತು. ಆ ತಾಳ ದಿಂದ ಬೇತಾಳವಾಗಿದ್ದ ಸುಬ್ಬ, ತಬಲಾ ಕ್ಲಾಸ್ ೫ ನಿಮಿಷ ಮೊದಲೇ ಹಾಜರ ಮತ್ತು ಮನೆಯಲ್ಲೂ practise ಅದು ಬೆಳ ಬೆಳಿಗ್ಗೆ ೪ ಘಂಟೆಗೆ. ಅಕ್ಕ ಪಕ್ಕದ ಮನೆಯವರು ಉಗಿಯುವದೊಂದೇ ಬಾಕಿ. ಹೀಗೆ ಅವಳ ನೆನಪಿನಲ್ಲೇ ಮಾಡಿದ್ದೂ ಒಂದು ಮನೆಯೊಳಗಿನ ತಬಲಾ ಮತ್ತು ೨ ಕ್ಲಾಸ್ನಲ್ಲಿರುವ ತಬಲಾಗಳನ್ನು ಚರ್ಮ ಕಿತ್ತುವ ಹಾಗೆ ಬಾರಿಸಿ ಮೂಲೆ ಗುಂಪಾಗಿಸಿದ್ದು ಮಾತ್ರ... ಆ ಹುಡುಗಿಯ ವಿಷಯವೇನು ಕೇಳಬೇಡಿ. ಅವಳನ್ನು ಹೃದಯ ಮಂದಿರದಲ್ಲಿಟ್ಟು ಪೂಜಿಸಿದಷ್ಟೇ ಆಯಿತು. ಮತ್ತೇನೂ ಮಾಡಲಿಲ್ಲ. ಎಲ್ಲಿ ಹೋದಳು ಏನಾದಳು ಏನು ಗೊತ್ತಿಲ್ಲ ..........


ಎರಡನೇ ತಂತಿ ....

------------------

ಶಿಲ್ಪಾ ನಿಜವಾಗಿಯೂ ದಂತದ ಗೊಂಬೆಯ ಹಾಗೆ ಇದ್ದಳು. ಈ ಶಿಲ್ಪವನ್ನು ಆ ಜಕಣಾಚಾರಿಯೀ ಕೆತ್ತಿರಬೇಕು ಹಾಗೆ ಇದ್ದಳು. ಬೇಲೂರು ಶಿಲಾ ಬಾಲಿಕೆಯ ಹಾಗೆ ಮೈಮಾಟ. ಇವಳನ್ನು ಮೊದಲು ಕಂಡಿದು ಸುಬ್ಬ ತನ್ನ ಗೆಳೆಯನ ಪಕ್ಕದಲ್ಲಿರುವ ಶ್ಯಾಮನ ಮನೆಯಲ್ಲಿ. ಶ್ಯಾಮನ ಅತ್ತೆ ಮಗಳು. ಇವಳನ್ನು ನೋಡುವ ಸಲುವಾಗಿ ನಾಯಿಯನ್ನು ಯೋಚಿಸದೆ ಅವರ ಮನೆಯನ್ನು ನುಗ್ಗುತ್ತಿದ್ದ ಈ ಸುಬ್ಬ. ಇವಳ ಜೊತೆ Eye Spice ಆಡಿದ್ದು ಆಯಿತು. ಇವಳ spicy ಮೈಮಾಟಕ್ಕೆ ಸುಬ್ಬ ice ನಂತೆ ಕರಗಿ ಹೋಗಿದ್ದ. ಸ್ವಲ್ಪ ದಿನಗಳ ನಂತರ ಶ್ಯಾಮನ ತಂದೆಗೆ Transfer ಆಯಿತು. ಎಲ್ಲಿ ಹೋದರೆಂದು ತಿಳಿಯಲಿಲ್ಲ. "ಎರಡನೇ ತಂತಿ ಹರಿದಿತ್ತು" ಆದರೆ ಮನಸಿನಲ್ಲಿ ಮಾತ್ರ " ಶಿಲ್ಪಾ ಓ ಮೈ ಶಿಲ್ಪಾ ನೀನು ನನ್ನವಳು ನಾನು ನಿನ್ನವನು ಓ ಮೈ ಡಿಯರ್ ....."


ಮೂರನೆ ತಂತಿ ....

------------------

ಒಂದು ದಿವಸ ತಬಲಾ ಕ್ಲಾಸ್ ನಿಂದ ಬರುತ್ತಿದ್ದ ಸುಬ್ಬ ಸ್ಕೂಲ್ ಡ್ರೆಸ್ ನಲ್ಲಿರುವ ಹುಡುಗಿನ ನೋಡಿದ್ದ. ಅವಳ ಸೌಂದರ್ಯ ಅವನ ಹೃದಯಕ್ಕೆ ವಾಸಿ ಮಾಡಲಾರದಷ್ಟು ಘಾಯ ಮಾಡಿತ್ತು. ಅವನ ಹೃದಯ ಬಡಿತ ದ್ವಿಗುಣವಾಗಿತ್ತು. ಇವಳ ಮುಂದೆ ರೂಪ, ಶಿಲ್ಪಾ ಎಲ್ಲರು ಅಷ್ಟೇ.... ಈಗ ಇವನು ಅವಳ ಹಿಂದೆಯ ಹೋಗಿ ಅವಳ ಮನೆಯನ್ನು ಪತ್ತೆಮಾಡಿದ್ದ. Daily ಎರಡು ಸಾರಿ ಅದೇ ರೂಟ್ನಲ್ಲಿ ಸಂಚಾರ. ಅವಳ ಮುಖ ಎಷ್ಟು ನೋಡಿದರು. ನೋಡಬೇಕು ಎಂದೇ ಅನಿಸಿರಲು ಸಾಕು. ಅವಳ ಶಾಲೆಗೂ ಭೇಟಿ ಕೊಟ್ಟಿದ್ದಾಯಿತು. ಅವಳ ಹೆಸರ ಮೊದಲ ಅಕ್ಷರವನ್ನ ಕೈ ಮೇಲೆ ಹಚ್ಚೆ ಹಾಕಿಸಿದ್ದು ಆಯಿತು. ನಂತರ ಕಾಲೇಜು ಸೇರಿದಳು. ಕಾಲೇಜು ನೋಟೀಸ್ ಬೋರ್ಡ್ ಜಾಲಾಡಿ ಅವಳ ಹೆಸರು ಹುಡುಕಲು ತಡಬಡಾಯಿಸಿದ್ದಾಯಿತು. ಆದರೆ ಅವಳ ಮುಂದೆ ಹೋಗಿ ಪ್ರೀತಿಯನ್ನು ಅರುಹಲು ಮಾತ್ರವಾಗಲಿಲ್ಲ ಈ ಸುಬ್ಬನಿಗೆ. ಅವಳ ಮನೆ ಹಿಂದೆಯೇ ಸುತ್ತುತ್ತಿದ್ದಾಗ ಕಣ್ಣು ಬಿದ್ದಿದ್ದು ಸುವರ್ಣ ... ಇವಳಿಗೆ ಬೈ ಬೈ...


ನಾಲ್ಕನೆ ತಂತಿ....

------------------

ಇವಳ ಹೆಸರು ಸುವರ್ಣ ಪಕ್ಕ ಬ್ರಾಹ್ಮಣರ ಹುಡುಗಿ. ನಮ್ಮನೆಗೆ ನೂರಕ್ಕೆ ನೂರು ಹೊಂದಿಕೊಳ್ಳುತ್ತಾಳೆ ಅಂದಿದ್ದ ನಮ್ಮ ಸುಬ್ಬ. ಸುಬ್ಬ ಇವಳನ್ನು ಮೊದಲು ನೋಡಿದ್ದು ಇವಳು ರಂಗೋಲಿ ಹಾಕುತ್ತ ಇದ್ದಾಗ. ಇವಳು ಹೇಳುವಷ್ಟು ಸೌಂದರ್ಯವತಿ ಏನು ಅಲ್ಲದಿದ್ದರೂ ಇವಳ ನಗು ಇವನ ಹೃದಯಕ್ಕೆ ಪ್ರೀತಿಯನ್ನು ಉಣ್ಣಿಸಿತ್ತು. ಅದೇನೋ ಹೇಳುತ್ತಾರಲ್ಲ ವಕ್ರತೆಯೇ ಸುಂದರತೆಯ ಮೂಲ ಅಂತ. ಅದಕ್ಕೆ ಇರಬೇಕು ಪ್ರತಿಯೊಬ್ಬನ ಟೇಸ್ಟ್ ಬೇರೆ ಬೇರೆನೆ ಆಗಿರುತ್ತೆ. ಒಬ್ಬನಿಗೆ ಐಶ್ವರ್ಯ ಹಿಡಿಸಿದರೆ ಮತ್ತೊರ್ವನಿಗೆ ರಾಣಿ ಮುಖರ್ಜೀ ಹಾಗೆ. ಇಬ್ಬರ ತಾಳವು ಪಕ್ಕ ಹೊಂದಾಣಿಕೆಯಾಗಿತ್ತು. ನೋಡಿ ನಗುವದು ಕಣ್ಣ ಸನ್ನೆ ಎಲ್ಲೆವು ಪಕ್ಕ ಮ್ಯಾಚ್ ಆಗಿತ್ತು. ಒಮ್ಮೆ ಅವಳನ್ನು ಮಾತನಾಡಿಸಿಯು ಆಗಿತ್ತು. ಯಾರ ಕೆಟ್ಟ ದೃಷ್ಟಿ ಬಿತ್ತೋ ಇವರ ಪ್ರೀತಿಗೆ. ಇವರಪ್ಪ ಸುಬ್ಬನನ್ನು ಕರೆದು ಯಾರ ಮಗನಪ್ಪ ನೀನು? ಎಂದು ಕೇಳಿದ್ದ. ಅಷ್ಟೇ ಸುಬ್ಬ ಹೆದರಿ ಅವರ ಮನೆ ಸಮೀಪ ಹೋಗುವದನ್ನು ನಿಲ್ಲಿಸಿಬಿಟ್ಟಿದ್ದ. ಅನಂತರ ೬ ತಿಂಗಳ ನಂತರ ಅವಳನ್ನು ಮಾತನಾಡಿಸಲು ಹೋದಾಗ ಅವಳ ಮೌನವೆ ಮಾತಾಗಿತ್ತು. ನಾಲ್ಕನೆ ತಂತಿಯು ಹರಿದಿತ್ತು .....


ಸುಬ್ಬ ನ ಜೀವನವು "Mera Naam Joker" ನ ರಾಜಕಪೂರ್ ಹಾಗೆ ಆಗಿತ್ತು. ಅದಕ್ಕೆ "Mera Naam Joker" ಸಿನಿಮ ೧೦ ಸಾರಿ ನೋಡಿದ್ದ. ಅವನಿಗೆ ಇಷ್ಟವಾದ ಮತ್ತೊಂದು ಸಿನಿಮ ಅಂದರೆ "My Autograph Please" ಸುದೀಪ ಅಭಿನಯದ.

ಈಗ ಸುಬ್ಬನ ಮನಸ್ಸು ಸ್ವಲ್ಪ ಪರಿಪಕ್ವತೆ ಬಂದಿದೆ. ಇವನ ಹೃದಯ ವೀಣೆಯನ್ನು ಯಾರಾದರು ಮೀಟುವರ ಎಂದು ಕಾದು ನೋಡಿ..............

ಮೂರೂ + ಖಾನ್ ( ಮೂರ್ಖನ ) ಗೆಳೆಯರು

ಇದೇನಪ್ಪ "ಮೂರ್ಖ" ಯಾರು ಅಂತ ಕೇಳ್ತಾ ಇದ್ದೀರಾ . ನಾನೆ ಸ್ವಾಮಿ . ನಿಜವಾಗಿಯೂ ನಾನೆ . ನನಗೆ ಸಿಗುವ ಗೆಳೆಯರೆಲ್ಲರೂ "ಖಾನ್ " ವರ್ಗ ಕ್ಕೆ ಸೇರಿದವರೇ ಜ್ಯಾಸ್ತಿ . (ಸ್ವಲ್ಪ ಗೆಳೆಯರನ್ನು ಬಿಟ್ಟು ). ಅವರ ಪರಿಚಯ ಮಾಡಬೇಕೆಂದಿದ್ದೇನೆ.

೧ . ಶೇರ್ ಖಾನ್ (ಶೆರೆ ಖಾನನ ಅಳಿಯ ) - ಸಿಹಿ ತುತ್ತು ಬಯಸುವವರು.
೨ . ಶೆರೆ ಖಾನ್ (ಸೀರೆ ಖಾನನ ಅಳಿಯ ಮತ್ತು ಶೇರ್ ಖಾನನ ಮಾವ ) - ಸಿಹಿ ಮತ್ತು ಬಯಸುವವರು.
೩ . ಸೀರೆ ಖಾನ್ (ಶೆರೆ ಖಾನನ ಮಾವ ) - ಸಿಹಿ ಮುತ್ತು ಬಯಸುವವರು.

ಶೇರ್ ಖಾನರ ತಲೆಯಲ್ಲಿ ಯಾವತ್ತು ಶೇರಗಳ ಏರಿಳಿತ ಮತ್ತು ಯಾವ , ಯಾವ ಶೇರ್ ಗಳಲ್ಲಿ ಇನ್ವೆಸ್ಟ್ ಮಾಡಬೇಕು ಎಲ್ಲವು ರೆಡಿ . ಅದಕ್ಕೆ ಇರ್ಬೇಕು ನನ್ನ ಗೆಳೆತನವನ್ನು ಸಹ ಇನ್ವೆಸ್ಟ್ಮೆಂಟ್ ತರಹ ಸ್ವಲ್ಪ ಸ್ವಲ್ಪವೆ ಮಾಡುತ್ತಾರೆ. ಇವರಲ್ಲೊಬ್ಬ ಬಬ್ಬರ್ ಶೇರ್ ನನ್ನ ಪ್ರೀತಿಯ ಆತ್ಮೀಯ ಗೆಳೆಯ ಇವನ ಮನಸ್ಸು ಹಂಸದಂತೆ. ತುಂಬಾ ಒಳ್ಳೆಯ ಹುಡುಗ ಇವನಿಗೆ ಎಲ್ಲ ಶೇರ್ ಗಳು ನಮಸ್ತೆ ಮಾಡುತ್ತವೆ .

ಶೆರೆ ಖಾನ್ ನಂತವರು ತುಂಬಾ ಜನ ಸಿಗುತ್ತಾರೆ . ಇವರಲೊಬ್ಬ ತುಂಬಾ ಪಂಟರ್ ಎಲ್ಲ Brandಗಳನ್ನು ಮುಸಿ ಬಿಟ್ಟಿದ್ದಾನೆ. ಅವನು ಮುಸುವದಕ್ಕೆ ಸಹಾಯವಾಗಲೆಂದು ಅವನ ಮೀಸೆ ತೆಗೆಯೆಂದು ಪುಸಲಾಯಿಸಿದ್ದೆ ನಾನು.

ಸೀರೆ ಖಾನ್ ಗಳು ತುಂಬಾ ಇದ್ದಾರೆ . ಬಬ್ಬರ್ ಶೇರ್ ಕೂಡ ಸೀರೆ ಖಾನ್ ಆಗಿದ್ದ. (ಸೀರೆ ಖಾನ್ ಅಂದರೆ ಸೀರೆ ಯಲ್ಲಿರುವ ನೀರೆಯರನ್ನು ಬಯಸುವವರು . ಅಂದರೆ ಪಕ್ಕಾ Bachelors.) ಈ ಶೇರ್ ಖಾನ್ ಒಮ್ಮೆ family restaurant ಗೆ ಹೋಗಿ ಒಬ್ಬ ಹುಡುಗಿ ಯನ್ನು ಕರೆದೊಯಿದಿದ್ದ . ಅನಂತರ ಅವಳನ್ನು ಮದುವೆಯ ಪ್ರಸ್ತಾಪ ಕೂಡ ಮಾಡಿದ್ದ . ಅವಳು ಬಬ್ಬರ್ ಶೇರ್ ನನ್ನು ಬಿಟ್ಟು ಯಾವದೋ ಬಿಲ್ಲಿಯ ಹಿಂದೆ ಹೋಗಿದ್ದಾಳೆ. ಈಗ ಅನಿಸಿರಬೇಕು ತುಂಬಾ ಒಳ್ಳೆಯ ಬಂಗಾರವನ್ನು ಬಿಟ್ಟು ಕಾಗೆ ಬಂಗಾರವನ್ನು ಕಟ್ಟಿಕೊಂಡೆ ಎಂದು . ಇನ್ನು ಒಬ್ಬ ನನ್ನ ಗೆಳೆಯ ಸೀರೆ ಖಾನ್ ಇದ್ದಾನೆ ಒಂದು ಹುಡುಗಿಯ ಮೇಲೆ ಮನಸು ಮಾಡಿದ್ದ. ಅವಳು ಕಳಹಿಸುವ ಮೇಲ್ ಗಳನ್ನೂ ಪೂಜೆ ಮಾಡಿ ಅಪಾರ್ಥ ಮಾಡಿಕೊಂಡು ಮನಸಿನಲ್ಲೇ ಮಂಡಿಗೆ ತಿಂದಿದ್ದ . ಅವನಿಗೆ ಸಿಕ್ಕಿದ್ದು ಬರಿ Mail(Male) ಗಳು ಮಾತ್ರ Female ಮಾತ್ರ ಫ್ಯಾಮಿಲಿಯಾಗಲಿಲ್ಲ. ಶೆರೆ ಖಾನ್ ಮತ್ತು ಶೇರ್ ಖಾನ್ ಏನಾದರು ಸಿಕ್ಕರೆ ಶೆರೆ ಕುಡಿಯುತ್ತ ಮಾತನಾಡುವದು ಸೀರೆಯರ ಬಗ್ಗೆನೇ (ಮದುವೆ ಬಗ್ಗೆನೇ). ಶೆರೆ ಖಾನ್ ನು ಒಬ್ಬ ಹುಡುಗಿಯನ್ನು ಮೆಚ್ಚಿದ್ದ ಆದರೆ ಅವಳನ್ನು ಒಲಿಸುವ ಬದಲು ಅವಳನ್ನು ಓಡಿಸಿದ್ದ (ಹೆದರಿಸಿದ್ದ).

ಏನೇ ಇರಲಿ ಈ ಎಲ್ಲ ಗೆಳೆಯರು ನನ್ನ ಪ್ರೀತಿಯ ಗೆಳೆಯರೇ............... ನನ್ನೊಬ್ಬನನ್ನು ಬಿಟ್ಟು ಏಕೆಂದರೆ ಈ ಮೂರ್ಖ ತುಂಬಾ ಗೆಳಯರನ್ನು ಕಳೆದುಕೊಂಡಿದ್ದಾನೆ(ತನ್ನ ಮು೦ಗೋಪ ಮತ್ತು ಕಪಿ ಚೆಸ್ಟೆ ಇಂದ) . ಎಲ್ಲರೂ ಮನಸಿನಿಂದ ಮಾತ್ರ "ಆಮೀರ್" ಗಳೇ . ಇವರೆಲ್ಲರಿಗೂ ಬೇಗನೆ ಮದುವೆಯಾಗಲೆನ್ದು ಹಾರೈಸುತ್ತೇನೆ . ಈ ಮೂರ್ಖನಿಗೆ ಮದುವೆ Invitation ಬೇಗನೆ ಸಿಗಲಿ. ಶೆರೆ ಮತ್ತು ಶೇರ್ ಖಾನ್ ಗಳಿಗೆ ಸೀರೆ ಸಹಾರಾ ಸಿಗಲಿ. ಶೇರ್ ಮತ್ತು ಶೆರೆ ಜೊತೆ ನನಗೂ ದೊಡ್ಡದೊಂದು ನಮಸ್ಕಾರ ಹೊಡಿಯಲಿ(ಆಶಿರ್ವಾದಪಡೆಯಲಿ).

ಇಂತಿ ನಿಮ್ಮ ಪ್ರೀತಿಯ ಗೆಳೆಯ
ಮೂರ್ಖ

ನಿಂಬಿಯ ಬನದ ಮ್ಯಾಗ ಚಂದ್ರಮ ಚಂಡಾಡಿದ.......... .

ಈಗ ನನ್ನ ಚಂದ್ರಮನಿಗೆ ರಾಮಾಯಣದ ಹುಚ್ಚು ಹಿಡಿದಿದೆ . ಹೊಸದಾಗಿ ತಂದ ನಮ್ಮ DVD ಯಲ್ಲಿ ರಾಮಾಯಣವನ್ನು ವಿಕ್ಷಿಸಿ . ಶ್ರೀ ರಾಮನ ಪಾತ್ರಾಭಿನಯ ಶುರು ಮಾಡಿದ್ದಾನೆ. ಒಂದು ದಿವಸ ಆಫೀಸ್ ನಿಂದ ಮನೆಗೆ ಹೋದ ತಕ್ಷಣ ನನ್ನ ಮಗ ನನ್ನ ನೋಡಿ "ರಾವಣ" ಎಂದು ತನ್ನ ಬಿಲ್ಲು ಬಣಗಳನ್ನು ಹೂಡಿ ನನ್ನ ಮೇಲೆ ಪ್ರಹಾರ ನಡಿಸಿದ್ದಾನೆ . ಅವನಿಗೆ ನಿಜವಾಗಿಯೂ ನಾನು ರಾವಣನೆ ಆಗಿರಬೇಕು ರಾತ್ರಿ ಲೇಟಾಗಿ ಆಫೀಸ್ ನಿಂದ ಮನೆಗೆ ಹೋಗುವದು , ಬೆಳಿಗ್ಗೆ ಎದ್ದ ತಕ್ಷಣ ಆಫೀಸ್ ಗೆ ಹೋಗುವದರಿಂದ ಅವನ ಜೊತೆ ಕಳೆಯುವ ಸಮಯ ಸ್ವಲ್ಪ ಕಡಿಮೇನೆ ಆದ್ದರಿಂದಲೇ ನನ್ನ ಮೇಲೆ ಸಿಟ್ಟಿಗೆದ್ದಿದ್ದರಬೇಕು. ಈಗ ಅನ್ನಿಸಿತು ರಾಮಾಯಣ CD ತಂದು ನಿಜವಾಗಿಯೂ ಒಳ್ಳೆಯದನ್ನೇ ಮಾಡಿದೆ. ಅಪ್ಪಿ ತಪ್ಪಿ ಮಹಾಭಾರತ ಅಥವಾ ಶ್ರೀಕೃಷ್ಣ ಏನಾದರು ತಂದಿದ್ದರೆ ಶ್ರೀ ಕೃಷ್ಣನಂತೆ ನೂರಾರು ಗೊವುಗಳನ್ನ ತಂದು ಮನೆಯಲ್ಲಿ ಇಡಿಸುತ್ತಿದ್ದನೋ ಗೊತ್ತಿಲ್ಲ . ಗೋವುಗಳದರೆ ಪರವಾಗಿಲ್ಲ ಗೋಪಿಕ ಸ್ತ್ರಿಯರಾದರೆ ತುಂಬಾ ಕಷ್ಟ (2 bhk ಯಲ್ಲಿ ಹಿಡಿಸುವದಿಲ್ಲ).

ಹೀಗೆ ದಿನದಿನವೂ ಒಂದೊಂದು ಅವನ ಅವತಾರಗಳು ಮೊನ್ನೆ play home ಗೆ ಹೋದಾಗ ನನಗೆ ಅಮ್ಮ ಕಟ್ಟಿಕೊಟ್ಟ biscuit ಬೇಡ ನನಗೆ ದೋಸೇ ಬೇಕು ಅಂತ ಹಠ ಹಿಡಿದಿದ್ದ . ಅವರ ಮಿಸ್ ತುಂಬಾ ಒಳ್ಳೆಯವರು ದೊಸೇನೆ ಮಾಡಿ ತಿನ್ನಿಸಿದ್ದಾರೆ. ಮತ್ತೆ ನಿನ್ನೆ ಸಲ್ಮಾನ್ ಖಾನ್ ಆಗಿದ್ದ ಅಂದರೆ ನನಗೆ ಸೆಕೆ ಆಗ್ತಾ ಇದೆ ಅಂತ ಹೇಳಿ ಅಂಗಿ ತೆಗೆಸಿ ಬನಿಯನ ಮೇಲೆ ಆಟ ಆಡುತ್ತಾ ಇದ್ದ.
ಮತ್ತೆ ಮನೆಯಲ್ಲಿ ನಾವೇನಾದರೂ ಮಿಸ್ ಹೇಗೆ ಮಾಡ್ತಾರೆ ಅಂತ ಕೇಳಿದಾಗ ವಿಚಿತ್ರವಾದ ಮುಖ ಮಾಡಿ ತೋರಿಸುತ್ತಾನೆ ನಮ್ಮ ಹೀರೋ. ..

ನನ್ನ ಹೆಂಡತಿಗೆ ಸೀರಿಯಲ್ ಗಳ ಹುಚ್ಚು . ಅವಳು ನೋಡುತ್ತಿರುವ ಸೀರಿಯಲ್ ನಲ್ಲಿ ಮಗ್ನವಾಗಿರುವಾಗ TV ಬಂದ ಮಾಡಿ "ಬಂದ ಆಯಿತು " ಎಂಬ ಉದ್ಗಾರ . ಅಪ್ಪಿ ತಪ್ಪಿ ಅವನು ನೋಡುತ್ತಿರುವ cartoon ಅಥವಾ rhymes ಬಂದ ಮಾಡಿದರೆ ಬಿಡಿ ರಂಪನೆ ಗ್ಯಾರಂಟೀ ...

ಇವನಿಗಿನ್ನು ಅಕ್ಷರಾಭ್ಯಾಸವಾಗಿಲ್ಲ ಇಲ್ಲದಿದ್ದರೆ interior decoration ಜವಾಬ್ದಾರಿನು ಹೊರ್ತಿದ್ದನೋ ಗೊತ್ತಿಲ್ಲ . ನನ್ನ ಹೆಂಡತಿಯ ಹೊಸ ರುಚಿಯ ಟೆಸ್ಟಿಂಗ್ ನು ಇವನೇ ಮಾಡುತ್ತಾನೆ . ತಲೆಯಿಂದ ತಿನ್ನಲು ಪ್ರಯತ್ನಿಸಿ ಅವನಮ್ಮ ಗದರಿಸಿದಾಗ ನೀರಿನಲ್ಲಿ ಅದ್ದಿ ಆನ೦ತರ ತಿನ್ನುತ್ತಾನೆ . (ಏನು ಅಷ್ಟು ಗಟ್ಟಿಯಗಿರುತ್ತೋ ಗೊತ್ತಿಲ್ಲ ).
ಈಗಲೆ ಸ್ವಿಮ್ಮಿಂಗ್ ಕೂಡ ಕಲೆಯುತ್ತಿದ್ದಾನೆ . ನೀರೆಂದರೆ ಪಂಚಪ್ರಾಣ .

ಅವನು ಚಿಕ್ಕವನಿದ್ದಾಗ ನನ್ನ ಗೆಳೆಯ ತನ್ನ ಮಗನನ್ನು ಕರೆದುಕೊಂಡು ಬಂದಿದ್ದ . ಸುಮಾರು ೩ ವರ್ಷದವನಿದ್ದ ಅವನ ಮಗ. ಅವನನ್ನು ಕಂಡು ತುಂಬಾ ಖುಷಿಯಾಗಿ ಚಿರಲು ಪ್ರಾರ೦ಬಿಸಿದಾಗ ಅವನ ಮಗ ಹೆದರಿ ಚಡ್ಡಿ ಯಲ್ಲೇ ಸೂಸು ಮಾಡಿದ್ದ .

ನನ್ನ ಮಗನಿಗೆ "ಹಳೆ ಪಾತ್ರೆ .. ಹಳೆ ಪೇಪರ್ " ಹಾಡು ಇಷ್ಟ ಅದಕ್ಕೆ ನ್ಯೂಸ್ ಪೇಪರ್ ಮತ್ತು ನನ್ನ Books ಗಳನ್ನ ಹಳೆಯದಾಗಿ ಮಾಡಿದ್ದಾನೆ . ಇವರಪ್ಪನನ್ನ ಕುಬೇರ ಅಂತ ತಿಳಿದುಕೊಂಡಿದ್ದಾನೋ ಗೊತ್ತಿಲ್ಲಾ ಅವನ ಆಟಿಗೆ ಸಾಮಾನು, ನನ್ನ ಮೊಬೈಲ್ ಮತ್ತು ಮನೆ ಸಾಮಾನು ಎಲ್ಲವನ್ನು ರೆಪೈರಿ ಮಾಡಿ ಮುಗಿಸಿದ್ದಾನೆ . ಒಂದೊಂದು ಬಾರಿ ಅವುಗಳನ್ನು ಅಕ್ಕ ಪಕ್ಕ ದಲ್ಲಿರುವ ಮನೆಗಳಿಗೆ ಕಿಟಕಿ ಇನ್ದ ರವಾನಿಸಿರುತ್ತಾನೆ .

ಇವನಿಗೆ ಇದ್ದಷ್ಟು ಪರಿಚಯ ನನಗೆ ಇಲ್ಲ ನಮ್ಮ ಕಾಲೋನಿಯಲ್ಲಿ. ಇವನಿಗೆ ಎಲ್ಲರು ಆಂಟಿ ,ಅಂಕಲ್ ಮತ್ತು ಅಜ್ಜ , ಅಜ್ಜಿ ಗಳೇ ...
ಏನೇ ಅಗಲಿ ನನ್ನ ಮಗ ಚೌತಿ ಚಂದ್ರಮನೆ . ಅವನಾಡುವ ಆಟಗಳು ನನ್ನ ಬಾಲ್ಯವನ್ನು ನೆನಪಿಸುತ್ತವೆ .

ಮುಗ್ದ ಮನಸಿನ ಮಗುಗಳ ನಗು ಆಟ ನನಗೆ ಹಂಸಲೇಖರ "ಆಗಿ ಬಿಡು ಮಗುವಾಗಿ ಬಿಡು ನಿ ಚಿಂತೆ ಬೆಳೆದಂತೆ .." ಮತ್ತು ಜೋಗುಳ ಸೀರಿಯಲ್ ನ ಶೀರ್ಷಿಕೆ ಹಾಡು ನೆನಪಿಸುತ್ತವೆ ...................

ನೀನಿದ್ದರೆ ನನ್ನ ಜೊತಿ ...

ನೀನಿದ್ದರೆ ನನ್ನ ಜೊತಿ ...

ಮರೆಯುವದು ನನ್ನ ಭೀತಿ ...


ಏನೇ ಇರಲಿ ಇವಳ ಜಾತಿ ...

ಇರಲಿ ಇವಳೇ ನನ್ನ ಸಾಥಿ...


ಮುಖ ಮಾತ್ರ ಮರ ಕೋತಿ ...

ನಡೆದರೆ ಮಾತ್ರ ತೇಟ ಹಾಥೀ ...


ಹೆಸರು ಮಾತ್ರ ಜ್ಯೋತಿ ...

ಅದಕ್ಕೆ ಇಲ್ಲ ನನಗೀಗ ಭೀತಿ...

ನಿನ್ನ ನಾನರಿಯೆ ...

ನಿನ್ನ ನಾನರಿಯೆ ...ನಿನ್ನ ನಾನರಿಯೆ

ನಿನ್ನರಿಯುವ ಹಂಬಲ ನಾರಿಯೇ ...


ಕರೆದಾಗ ಬರದಿರುವದು ನಿ ಸರಿಯೇ ...

ಪ್ರತಿ ಬಾರಿ ಹೇಳುವದು ನಿ ಸಾರಿಯೇ ...


ಹಿಂದೆ ಬಿದ್ದಿರುವದು ನಾ ಜಾರಿಯೇ ...

ಈಗಲಾದರು ಮುಗಿಸು ನಾರಿಯೇ...

ನಿನ್ನ ನಿತ್ಯ ಕರ್ಮಗಳನ್ನು ನನ್ನ ನಾಯಿ ಮರಿಯೇ .......

ಆಶಾ. ಡಿ (ಆಷಾಢ) ಮಾಡಿದ ಮೋಡಿ .....

ಯಾರು ರೀ.. ಆಶಾದೇವಿ ನಿಮಗೇನಾದರೂ ಗೊತ್ತ?. ಹೆದರಬೇಡಿ, ಇವಳು ನನ್ನ ಹೆ೦ಡತಿನು .. ಅಲ್ಲ ಗರ್ಲ್ ಫ್ರೆಂಡ್ ನು.. ಅಲ್ಲ . ಇವಳು ಋತುರಾಜನ ಗರ್ಲ್ ಫ್ರೆಂಡ್ ಮತ್ತು ಪ್ರೇಯಸಿ ಕೂಡ . ಋತು ರಾಜ ಎಲ್ಲ ೧೧ ಮಾಸಗಳನ್ನು ಪಟಾಯಿಸಿ ಮದುವೆಯಾಗಿದ್ದಾನೆ ಅಂತ ಅನ್ನಿಸುತ್ತೆ , ಆದರೆ ಈ ಆಶಾ ದೇವಿ ಮಾತ್ರ ಅವನಿಗೆ ಕೈ ಕೊಟ್ಟಿರಬೇಕು. ಅದಕ್ಕೆ ಇರಬೇಕು ಗಂಡ ಹೆ೦ಡತಿರು ಒಂದಾಗಿ ಇರಬಾರದೆಂದು, ಈ ಆಷಾಢ ಮಾಸದಲ್ಲಿ ಅತ್ತೆ ಸೊಸೆಯ ನೆಪ ಹೇಳಿ ಅವರನ್ನು ವಿರಹ ವೇದನೆ ಇಂದ ಸತಾಯಿಸುತ್ತಿರಬೇಕು .


ಆಶಾ. ಡಿ (ಆಷಾಢ) ಮಾಸದಲ್ಲಿಯ ಚಳಿ ಗಾಳಿ ತುಂಬಾ ಚೆನ್ನಾಗಿ ಬಿಸುತ್ತೆ . ಚಳಿಯಲ್ಲಿ ಏನು ಕೆಲಸ ಮಾಡಲು ಮನಸ್ಸು ಬರುವದಿಲ್ಲ ಹಾಗೆ ಬೆಚ್ಚನೆ ಹಾಸಿಗೆ ಹಾಸಿ ಮಲಗಿ ಬಿಡಬೇಕೆಂದು ಅನಿಸುವದು .


ಇವತ್ತಿನಿಂದ ಆಶಾದೇವಿ ಮನೆಗೆ ಬಂದಿದ್ದಾಳೆ. ಹೆಂಡತಿಗೆ ರಜೆ ಇವಳ ಜೊತೆನೆ ಪ್ರಣಯ ಸಲ್ಲಾಪವೆಲ್ಲ. ನಮ್ಮೂರಲ್ಲಿ ಅಂದರೆ ಮಲೆನಾಡಿ ನಲ್ಲಿ ಈ ಆಶಾ ದೇವಿಯ ಪ್ರತಾಪ ನೋಡಬೇಕು . ಇವಳು ತನ್ನ ಅಮೃತ ಸ್ಪರ್ಶದಿಂದ ಎಲ್ಲ ಹದಿ ಹರೆಯದ ಹುಡುಗ ಹುಡುಗಿಯರನ್ನು ಸತಾಯಿಸಿರುತ್ತಾಳೆ . ಅವಳು ಎಲ್ಲ ಹುಡುಗ , ಹುಡುಗಿಯರಿಗೂ ತನ್ನ ಸಿಹಿ ಮುತ್ತು ಗ್ಯಾರಂಟೀ ನೀಡಿರುತ್ತಾಳೆ (ಅಂದರೆ ತುಟಿಗಳು ತಂಪು ಗಾಳಿಯಿಂದ ಬಿರುಕು ಬಿಟ್ಟಿರುತ್ತವೆ). ಹುಡುಗಿಯರಿಗೆ ಆದರೆ ಪರವಾಗಿಲ್ಲ ಹುಡುಗರಿಗೂ lipstick ಹಾಕಿರುತ್ತಾಳೆ . ಹೀಗೆ ಗೋವಿಂದ ಆಚಾರ್ಯರ ಮಗ ರಮೇಶನಿಗೆ lipstick ಇಟ್ಟಿದ್ದಳು . ಅವಳ lipstick ಮಹಾತ್ಮೆಯಿಂದ ತೇಟ ಹುಡುಗಿಯಂತೆ ಕಾಣುತ್ತಿದ್ದ ರಮೇಶ . ರಮೇಶ ಯಾವತ್ತು ಪ್ಯಾಂಟ್ ಶರ್ಟ್ ದರಿಸಿದವನಲ್ಲ. ಅವನೆನಿದ್ದರು ಹಾಕುವದು ಜುಬ್ಬಾ ಪೈಜಾಮ. ಅವನು ಹೊಸದಾಗಿ ಹೊಲಸಿದ ಜುಬ್ಬಾ ಪೈಜಾಮ ತೇಟ ಹುಡುಗಿಯರ ಚುಡಿದಾರದಂತೆ ಹೊಲೆದಿದ್ದ ಅವನ ಟೈಲರ್. ಅವನ ರೂಪವೋ ಯಾ ಹುಡುಗಿಯರು ನಾಚುವ ಸೌಂದರ್ಯ . ಹೊಸದಾಗಿ transfer ಆಗಿ ಬಂದ ಕಲ್ಲೇಶಪ್ಪನ ಮಗ ಪಕ್ಯ ಈ ರಮೆಶನನ್ನ ಹುಡುಗಿ ಎಂದು ತಿಳಿದು ಅವನ ಹಿಂದೆ ಬಿದ್ದು ಲವ್ ಲೆಟರ್ ಬೇರೆ ಕೊಡಲು ಹೋಗಿದ್ದಾಗ ಅವರಪ್ಪ ಗೋವಿಂದ್ ಆಚರ್ಯರಿಂದ ಕಪಾಳ ಮೋಕ್ಷ ಹೊಂದಿದ್ದ . ಅನಂತರ ಜುಬ್ಬಾ ಪೈಜಮಕ್ಕೆ ದೊಡ್ಡದೊಂದು ನಮಸ್ಕಾರ ಹೇಳಿ ಪ್ಯಾಂಟ್ ಶರ್ಟ್ ಧರಿಸಲು ಶುರು ಮಾಡಿದ್ದ ಪಾಪ.. ನಮ್ಮ ಈ ರಮೇಶ.


ಹೀಗೆ ಗೋವಿಂದ ಆಚಾರ್ಯರ ಇನ್ಸಿಡೆಂಟ್ ನ ಹಾಗೆ ಅತ್ತೆ ಗಂಡನ ಹಾಗೆ ಸೊಸೆಗೆ ಕಾಣುತ್ತಾಳೋ... ಗೊತ್ತಿಲ್ಲ ಅಥವಾ ಋತುರಾಜನ ಶಾಪ ದಿಂದಲೋ? ಒಟ್ಟಿನಲ್ಲಿ ಅವರನ್ನು ದೂರ ದೂರ ಇಡುತ್ತಾರೆ.


ಈ ಆಶಾ ದೇವಿಯ ಮುತ್ತಿನಿಂದ ಬಚಾವ ಆಗಲು ಕೆಲ ನನ್ನ ಸ್ನೇಹಿತರು ಬಿಡಿ ಅಥವಾ ಸಿಗರೇಟ್ ಗೆ ಮೊರೆ ಹೋಗಿರುತ್ತಾರೆ .
ಇದು ಇಲ್ಲಿಯ ಕತೆ ಅಷ್ಟೆ ಅಲ್ಲ ತಮಿಳ್ ನಾಡಿನಲ್ಲೂ ಗಂಡ ಹೆಂಡತಿಯರನ್ನು ಒಂದಾಗಿ ಇರಲು ಬಿಡುವದಿಲ್ಲ . ಆದರೆ ಹೆಸರು ಮಾತ್ರ "ಆಡಿ". ಆದರೆ ನೋಡಲು ಬಿಡಲಾರದೆ ಇಬ್ಬರನ್ನು ದೂರ ದೂರ ಓಡಿಸಿರುತ್ತಾರೆ .


ಅದಕ್ಕೆ ಇರಬೇಕು ನನ್ನ ಗಾಡಿಗೂ ಆಶಾಳ ಗಾಳಿ ಸೊಂಕಿದೆ . ರಾಡಿ(ಕೆಸರು)ಯನ್ನು ಕಂಡು ದೂರ ದೂರ ಓಡುತ್ತಿದ್ದ ಹಾಗೆ ನಾನು ಖುಷಿಪಟ್ಟಿದ್ದು ಅಷ್ಟಿಷ್ಟಲ್ಲ, ಆದರೆ ಹುಡುಗಿಯರ ಗಾಡಿ ಕಡೆಗೆ ವಾಲುತ್ತಿದ್ದಾಗ ಕೆಟ್ಟ ಕೋಪ ಬಂದಿತ್ತು .


ಈ ಆಶಾ ದೇವಿಯ ಪ್ರತಾಪ ನನ್ನ ಗೆಳೆಯನ ಮನೆಯಲ್ಲೂ ನಡೆದಿತ್ತು .ಅವರದು joint family ಎಲ್ಲರು ಒಟ್ಟಿಗೆ ಇರುವದು ತವರು ಮನೆ ಅತ್ತೆ ಮನೆ ಎರಡು ಒಂದೇ . ಹೀಗಾಗಿ ನನ್ನ ಗೆಳಯ ತನ್ನ ಹೆಂಡತಿಯನ್ನು ಅಕ್ಕ ಪಕ್ಕ ದಲ್ಲಿ ಯಾವುದಾದರು ಒಂದು ರೂಂ ಭಾಡಿಗೆ ಹಿಡಿದು ಅಲ್ಲಿ ಇಡಿಸುತ್ತಿದ್ದ . ವರ್ಷದಲ್ಲಿ ೨೦೦೦ ರುಪೈಯಗಳ extra ಖರ್ಚು .ಮಕ್ಕಳಿಗೆ ಹಬ್ಬವೋ ಹಬ್ಬ . ಎರಡೆರಡು ತರಹದ ತಿಂಡಿ ,ಊಟ etc...


ಬೇಗನೆ ಈ ಆಶಾ ದೇವಿ ಹೋಗಿ ವಿರಹ ವೇದನೆ ಮುಗಿಯಲಿ ಎಂದು ಆಶಿಸೋಣ . Dr ರಾಜ ರವರ "ಶ್ರಾವಣ ಮಾಸ ಬಂದಾಗ ಆನಂದ ತಂದಾಗ ..ವಿರಹ ಗೀತೆ ಇನ್ನಿಲ್ಲ ..." ಹಾಡಿನ ಹಾಗೆ ನಮ್ಮೆಲ್ಲರಿಗೂ ಮಡದಿಯ ಪ್ರೀತಿಯನ್ನು ಸವಿಯೋಣ . ವಿರಹ ಗೀತೆಯನ್ನು ಮರೆಯೋಣ .........


(Note:ಆಷಾಢದ ಮೇಲೆ ಕವನ ಬರೆದು ಈ article ಬರೆಯುವದಕ್ಕೆ ಪ್ರೋತ್ಸಾಹಿಸಿದ ಶ್ರೀ ಉಮೇಶ್ ದೇಸಾಯಿ ಯವರಿಗೆ ಅನಂತಾನಂತ ಧನ್ಯವಾದಗಳು).

ಯೋಗ್ಯ ರಾಗಿ ಭೋಗ್ಯ ಮ್ಯಾಗಿ!

"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ!....

ಮ್ಯಾಗಿ ಈಗ ನಮ್ಮನೆಯ ಮಹಾಪ್ರಸಾದವಾಗಿ ಪರಿಣಮಿಸಿದೆ . ಮೊದ ಮೊದಲು ಈ ಮ್ಯಾಗಿಯನ್ನು ನಾನು ಕಂಡಿದ್ದು 8 ವರ್ಷಗಳ ಹಿಂದೆ ನನ್ನ ಗೆಳಯ ಶ್ರೀಧರ ಬೆಂಗಳೊರಿನಲ್ಲಿ ಒಂದು ಹೋಟೆಲ್ಲಿಗೆ ಕರೆದುಕೊಂಡು ಹೋಗಿದ್ದಾಗ. ಒಳಗೆ ಹೋಗುವ ಮೊದಲೇ ಇದು ಸಸ್ಯಾಹಾರಿ ಹೋಟೆಲ್ ಹೌದೋ ಅಲ್ಲವೋ ಎಂದು ದೃಡಪಡಿಸಿಕೊಂಡ ಮೇಲೆ ಒಳಗೆ ಹೋಗಿದ್ದು. ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ ಆಗಿದ್ದರು ಅನಂತರ Engineering ಕಲೆತು ಮುಗಿಸುವಸ್ಟರಲ್ಲೇ ಎಲ್ಲ ಜಾನುವಾರಗಳನ್ನು ಜಗಿದಿದ್ದ.

ಆನಂತರ ಅವನು ನನಗೆ ಕೇಳಿದ ಏನ್ಬೇಕು ಆರ್ಡರ್ ಮಾಡು ಎಂದು. ನಾನು ಮಸಾಲೆ ದೋಸೆ ಎಂದೆ. ಅದಕ್ಕೆ ಅವನು "ಎ ಡಾಲ್ಡಾ " (ಜಿಡ್ಡು ನನ್ನ ಮಗನೆ) ಏನಾದರು ಸ್ಪೆಷಲ್ ಆರ್ಡರ್ ಮಾಡು ಎಂದ. ಈ ಸ್ಪೇಷಲಗಳ ಅನುಭವವಿರುವುದರಿಂದ ನನಗೆ ಅದೇ ಸಾಕು ಎಂದೆ. (ಒಂದು ದಿವಸ ಹೋಟೆಲ್ಗೆ ಹೋದಾಗ ಪಾಯಸವನ್ನು ಅಂದರೆ "ನವರತ್ನ ಕುರ್ಮಾ" ವನ್ನು ನೆಂಚಿಕೊಂಡು ರೋಟಿ ತಿಂದಿದ್ದು). ಇರಲಿ ಬಿಡು ಮಗ ನನಗೆ ಮಸಾಲೆ ಅಥವಾ ತುಪ್ಪದ ದೋಸೆನೆ ಸಾಕು, ನಿನಗೇನು ಬೇಕೋ ನೀನು ಆರ್ಡರ್ ಮಾಡಿಕೋ ಎಂದೆ. ಅವನು ನನಗೆ ಒಂದು ತುಪ್ಪದ ದೋಸೆ ಮತ್ತು ತನಗೆ ಮಂಚೂರಿ ಮತ್ತು ನೋಡಲ್ಸ ಆರ್ಡರ್ ಮಾಡಿದ.

ಮಾಣಿ ಸ್ವಲ್ಪ ಸಮಯದ ನಂತರ ಇಬ್ಬರ ತಿಂಡಿಯನ್ನು ತಂದಿಟ್ಟ. ನನ್ನಗೆ ಹೇಗಿದ್ದರೂ ಗೊತ್ತಿತಲ್ಲ ಅದಕ್ಕೆ ನಾನು ನನ್ನ ಪ್ಲೇಟ್ ಮಾತ್ರ ತಿನ್ನುತ್ತಿದ್ದೆ . ಅವನಿಗೆ ಎಲ್ಲ ಪ್ಲೇಟ್ ಗಳ ರುಚಿ ನೋಡುವ ಅಭ್ಯಾಸ. ನನ್ನ ಪ್ಲೆಟಿಗೂ ಕೈ ಹಾಕಿದ "ಏ ಮಚ್ಚ ಬೇಡ" ಎಂದೆ ಕೋಪದಿಂದ . ಏಕೆ? ಎಂದಾಗ ಇದೇನೋ ಚಿಕೆನ್ನು ಮತ್ತು ಅದರ ಕರಳುಗಳನ್ನ ತಿಂತ ಇದ್ದೀಯ ನನ್ನ ತಿಂಡಿ ಮುಟಬೇಡ please ...ಎಂದೆ. ಅದಕ್ಕೆ ಅವನು ನಗುತ್ತ ಇದು ಗೋಬಿ ಮಂಚೂರಿ ಅಂತ ಇದನ್ನ ಎಲೆ ಕೊಸಿನಿಂದ ಮಾಡುತ್ತಾರೆ ಇದು ಪೂರ್ತಿ ಸಸ್ಯಾಹಾರಿ ಅಂದ.

ಮತ್ತೇ ಅದು ... ಎಂದು ನಾನು ರಾಗವೆತ್ತಿದಾಗ ಅದು ನಮ್ಮ ಶಾವಿಗೆ ತರಹನೆ ಕಣೋ ಆದರೆ ಸ್ವಲ್ಪ ದಪ್ಪಗಾಗಿರುತ್ತೆ ಎಂದ. ಇದು ಕೂಡ ಸಸ್ಯಹಾರಿನೆ, "Chinese Special" ಆಹಾರ ಎಂದು ಸಣ್ಣ ಭಾಷಣ ಬಿಗಿದ. ಅವನಿಗೆ ನನ್ನ ತಿಂಡಿಯಲ್ಲಿಯ ಸ್ವಲ್ಪ ಭಾಗ ನಾನೇ ಕೊಟ್ಟು , ಇನ್ನು ನನ್ನ ಪ್ಲೇಟ್ ಕಡೆ ತಲೆ ಹಾಕಬೇಡಪ್ಪ ಅಂತ ಹೇಳಿ, ನನ್ನ ತಿಂಡಿಯನ್ನ ತಿಂದು ಮುಗಿಸಿದೆ. ಅವನು ತಿನ್ನುವ ಅವಸ್ಥೆ ನೋಡಿ ದಂಗಾದೆ. ಎರಡು ಕಡ್ಡಿಗಳಿಂದ ಹಿಡಿದು ತಿನ್ನುತಿದ್ದ. ಲೇ ಕೈಗಲಿಂದಲೇ ತಿನ್ನಪ್ಪ ಎಷ್ಟು ಹೊತ್ತು ಮಾಡ್ತಿಯ ನನ್ನ ಬಸ್ ಇರೋದು 7 ಘಂಟೆ ಗೊತ್ತು ತಾನೆ ಎಂದೆ. ಅದು ಟೇಬಲ್ ಮ್ಯಾನರ್ಸ್, ಹಾಗೆಯೆ ತಿನ್ನ ಬೇಕು ಅಂತ ಹೇಳಿ ಹಾಗೆಯೆ ತಿಂದು ಮುಗಿಸಿದ್ದ .ಬೆಂಕಿ ಪೊಟ್ಟಣದ ಕಡ್ಡಿಗಳೆಲ್ಲ ಆ ಗೋಬಿ ಮಂಚುರಿಯ ಮೇಲೆ ನೋಡಿ ನಕ್ಕು ಸುಮ್ಮನಾದೆ.

ಹೋಟೆಲಿನಿಂದ ಹೊರಗೆ ಬಂದ ಮೇಲೆ ಹೇಳಿದೆ ಚೈನೀಸ್ ತಿನ್ದಿದಕ್ಕೆ ಕಣೋ ನಿನ್ನ ಕಣ್ಣುಗಳು ಸ್ವಲ್ಪ ಚಿಕ್ಕದಾಗಿವೆ ಅಂದೆ ತಮಾಷೆಗಾಗಿ . ಹೀಗೆ ಚೈನೀಸ್ ತಿಂತ ಇದ್ರೆ ನಿನಗ್ಯಾರು ಬ್ರಾಹ್ಮಣ ಕನ್ಯಾ ಕೊಡಲ್ಲ ಎಂದು ಸತಾಯಿಸಿದೆ.

ಈಗ ನಮ್ಮನೆಯಲ್ಲಿ ಮಾಗಿಯ ಚಳಿಯೇ ಇರಲಿ... ಇಲ್ಲ ಉರಿಬಿಸಿಲೆ ಇರಲಿ... ಮನೆಯಲ್ಲಿ ಮಾತ್ರ ಮ್ಯಾಗಿಯ ಮಂತ್ರ. ನನ್ನ ಮಡದಿ ಮತ್ತು ಮಗನಿಗೆ ಮ್ಯಾಗಿ ಇದ್ದರೆ ಸಾಕು ಅದೇ ಪಂಚ ಪಕವಾನವಿದ್ದಹಾಗೆ. ಅಷ್ಟೇ ಏಕೆ ಒಂದು ದಿವಸ ತಿಂದು ಉಳಿದ ಮ್ಯಾಗಿಯನ್ನು ನಮ್ಮನೆಯ ಗೋಡೆ ಮೇಲೆ ಹಾಕಿದ್ದೆ ಅದನ್ನು ತಿಂದ ಒಂದು ಕಾಗೆ ಮರುದಿನವೂ ಹಾಜರ ಆಗಿ ... ಕಾ .. ಕಾ .. ಎನ್ನುವ ಬದಲು ಮ್ಯಾಗಿ .. ಮ್ಯಾಗಿ .. ಅಂತ ಜಪ ಮಾಡುತ್ತಿತ್ತು!.

ಹೀಗೆ ಒಂದು ದಿವಸ ಬ್ರಿಗೇಡ್ ರೋಡ್ನಲ್ಲಿ ನನ್ನ ಮಡದಿ ,ಮಗನೊಂದಿಗೆ ಹೋಗುತ್ತಿದ್ದಾಗ ಒಂದು ನಿಗ್ರೋ ಹುಡುಗಿಯ ತಲೆಯನ್ನು ನೋಡಿ "ಮ್ಯಾಗಿ .. ಮ್ಯಾಗಿ .." ಅಂತ ಅಳಹತ್ತಿದ. ಮತ್ತೇ Chinees ಹೋಟೆಲ್ಲಿಗೆ ಹೋಗಿ ಮ್ಯಾಗಿ ತಿನ್ನಿಸಿ ಕರೆದುಕೊಂಡು ಬಂದಾಗ ಸಮಾಧಾನವಾಗಿತ್ತು . ಇಗ ಮಗನ ಜೊತೆ ಈ ಜೋಗಿಗು ಅಭ್ಯಾಸವಾಗಿ ಬಿಟ್ಟಿದೆ .

ನಿಮಗೆ ಯಾವತ್ತಾದರೂ ಶ್ರೀನಿವಾಸನಗರದ ಕಡೆಯಿಂದ ಹೋಗುತ್ತಿದ್ದಿರ ದಯವಿಟ್ಟು ನಿಲ್ಲದೆ ಹಾಗೆ ಹೋಗಿ , ಇಲ್ಲದ್ದಿದರೆ ನಿಮಗೂ ಸಿಗುವುದು ಮ್ಯಾಗಿ ... ಮ್ಯಾಗಿ!!!.

ರಾಗಿ ತಿನ್ನುವದು ನಿರೋಗಿಯಾಗಿರಲು . ಮ್ಯಾಗಿ ತಿನ್ನುವದು ನನ್ನ ಮಗನಿಗಾಗಿ ....

ಖಾರದ(Credit) ಕಾರ್ಡ್ ....(ಸುಬ್ಬನ ಮಹಾಭಾರತ)

ಸುಬ್ಬುಗೆ ಆದ ಇನ್ನೊoದು ಮಹಾಭಾರತವನ್ನ (ಅನುಭವವನ್ನು ) ಹೇಳಬೇಕಿನ್ದಿದ್ದೇನೆ (ರಾಮಾಯಣ ಹೇಗಿದ್ರು ನಿಮಗೆ ಗೊತ್ತು ತಾನೆ ಗೊತ್ತಿಲ್ಲದಿದ್ದರೆ ನನ್ನ ಪಬ್ ಸುಬ್ಬನ ರಾಮಾಯಣ ... ಓದಿ). ಸುಬ್ಬುಗೆ ಹೊಸದಾಗಿ ಬೆಂಗಳೊರಿಗೆ ಬಂದಿದ್ದ. ಅವನು ರಾಮಸಂದ್ರದಲ್ಲಿ ಯಾವ ಹುಡುಗಿನು ಮಾತನಾಡಿಸಿದ ಅನುಭವವಿರಲಿಲ್ಲ. ಅವನಿಗೂ ತುಂಬಾ ಆಸೆ ಹುಡಿಗಿಯರೊಡನೆ ಒಡನಾಟವಿಡಬೇಕೆಂದು. ತಂಗಿ ತುಂಬಾ ಚಿಕ್ಕವಳಾಗಿದ್ದರಿಂದ ಅವಳೊಡನೆ ತನ್ನ ಅಸೆ ,ಅಭಿಲಾಷೆ ಮನದಾಳವನ್ನು ಹೇಳಲು ಹಿಂಜರಿತವದ್ದರಿಂದ ಏನು ಹೇಳುವ ಹಾಗಿಲ್ಲ. ತಂಗಿಯ ಗೆಳತಿ ಶೋಭಾನ್ನ ಕಂಡ್ರೆ ತುಂಬಾ ಇಷ್ಟ ಮನದಲ್ಲೇ ಅವಳನ್ನು ಮದುವೆಯಾಗಿ ಬಿಟ್ಟಿದ್ದ, ಇನ್ನು ಮಧುಚಂದ್ರಕ್ಕೆ ಹೋಗುವುದೊಂದೇ ಬಾಕಿ. ಕೈಯಲ್ಲಿ ಒಂದು ಲವ್ ಮಾರ್ಕ್ ನಡುವೆ "S" ಬೇರೆ .ಏನೋ ಇದು ಕೈ ಮೇಲೆ ಹಚ್ಚೆ "S" ಹಾಕಿಸ್ಕೊಂಡಿದ್ದಿಯ. ಅದು.. ಅದು ...ಅಂತ ತಡಬಡಿಸಿ ಏನಿಲ್ಲ ಅಪ್ಪ "S" ಅಂದ್ರೆ ನಮ್ಮ ಫ್ಯಾಮಿಲಿ ಹೆಸರಲ್ಲವಾ ನಿನ್ನ ಹೆಸರು ಶ್ರೀಧರ, ಅಮ್ಮನ ಹೆಸರು ಶಾಲಿನಿ , ನನ್ನ ಹೆಸರು ಸುಬ್ಬರಾಮ , ತಂಗಿ ಹೆಸರು ಶಾಂತಿ ಅದಕ್ಕೆ. ಅದೆಲ್ಲ ಸರಿ ..ಜ್ವರ ಬೇರೆ ಬಂದಿದೆ ಏನಪ್ಪಾ ನಿಂದ ರಾಮಾಯಣ ಎಂದು ತಣ್ಣಗಾದರು. ಶೋಭಾಳ ಮದುವೆ ಫಿಕ್ಸ್ ಅದಾಗ ಹುಚ್ಚನಂತೆ ಆಡ್ತಾ ಇದ್ದ . ಊಟ .. ನಿದ್ರೆ ...ಎಲ್ಲಕ್ಕೂ ಎಳ್ಳು ನೀರು. ಅಪ್ಪ, ಅಮ್ಮ ಬೈದು ಏನಾದುರು ತಿನ್ನಲು ಹೇಳಬೇಕು. ಅವಳ ಮದುವೆ ದಿನ ಊಟ , ನಿದ್ರೆ ಇಲ್ದೆ ರಾಯರ ಮಠದ ಹಿಂದೆ ಇರೋ ಗೋ -ಶಾಲೆ ಯಲ್ಲಿ ತಟ್ಟ (ಗೋಣಿ ಚೀಲ) ಹೊತ್ಕೊಂಡು ಮಲಗಿ ಬಿಟ್ಟಿದ್ದ .

ಮನೆಯೊಳಗೆ ಸಂದಿಗ್ದವಾದ ವಾತಾವರಣ ಹಬ್ಬಿತ್ತು ಎಲ್ಲಿ ಹೋದ....?. ಈ ಸುಬ್ಬ ಅಂತ. ಅವರಪ್ಪ ಗಲಿಬಿಲಿಗೊಂಡು ಎಲ್ಲ ಗೆಳೆಯರ ಮನೆ , ಭಾವಿ , ಕೆರೆ ಎಲ್ಲಡೆ ಹುಡುಕಿಸಿದ್ದರು. ಕೊನೆ ಪ್ರಯತ್ನವಾಗಿ ಪೋಲಿಸ್ ದೂರು ಕೊಟ್ಟು ಬಂದು ಅಳುತ್ತ ಬಂದರು ಮನಗೆ. ಆವತ್ತು ಎಲ್ಲರಿಗು ಏಕಾದಶಿ.. ಅದು ದ್ವಾದಶಿಯ ದಿವಸ. ಕೊನೆಗೆ ಗೋವಿಂದಾಚಾರ್ಯರು ನೋಡಿ ಅವನನ್ನು ಬೈದು ಮನೆಗೆ ಕಳುಹಿಸಿದ್ದರು . ನಾನು ಮತ್ತು ರಾಮಯ್ಯ ಮೇಸ್ಟ್ರು ಕೂಡಿ ಅವನಿಗೆ ಚೆನ್ನಾಗಿ ಉಗಿದು ಬುಧ್ದೀ ಹೇಳಿ ಸರಿ ದಾರಿಗೆ ತರುವದರೊಳಗೆ ರಗಡ(ಬೇಜಾನ್) ರಾಮಾಯಣನೆ ಅಗಿತ್ತನ್ನಿ .

ಮತ್ತೆ ವಿಷಯಕ್ಕೆ ಬರೋಣ, ಬೆಂಗಳೂರಿಗೆ ಹೊಸದಾಗಿ ಬಂದ ಸುಬ್ಬನಿಗೆ ಆಫೀಸ್ ನಿಂದ ಕ್ರೆಡಿಟ್ ಕಾರ್ಡ್ ಕೊಡಿಸಿದ್ದಾರೆ. ಕ್ರೆಡಿಟ್ ಕಾರ್ಡ್ ಅಂದ್ರೆ ಒಂದು ಹೆಮ್ಮೆಯ ವಿಷಯ ಅನ್ನೋ ಹಾಗೆ ರಾಮಸಂದ್ರ ದಲ್ಲಿ ಟಾಂ..ಟಾಂ ಹೊಡೆದಿದ್ದ. ಒಂದು ದಿವಸ ಒಬ್ಬ ಹುಡುಗಿ ಕಾಲ್ ಮಾಡಿದ್ದಾಗ ಗಲಿಬಿಲಿ ಗೊಂಡ ಸುಬ್ಬ ಏನೇನೋ ಅವಳ ಜೊತೆ ತನ್ನ ಹರುಕು.. ಮುರುಕು.. ಹಿಂದಿ ಇಂದ ಮಾತನಾಡಿದ್ದ. ಅವನ ಹಿಂದಿ ಹೇಗಿತ್ತೆಂದರೆ male/female ಎನ್ನುವದೇ ಗೊತ್ತಾಗದೆ ಏನೇನೋ ಮಾತನಾಡುತ್ತಿದ್ದ. ಒಮ್ಮೆ ನನ್ನ ಇನ್ನೊಬ್ಬ ಗೆಳೆಯ ಮಾಧವ್ ಬಂದಾಗ "ಗೋಪಿ ಖಾನಾ ಪಕಾ ರಹಿ ಹೈ " ಎಂದಿದ್ದ. ಏನೋ ನೀನೇನು ಸುಬ್ಬುನ ಮಡದಿ ಏನೋ? ಎಂದು ನನ್ನ ಗೆಳೆಯ ನನ್ನನ್ನು ಚೆಡಿಸಿದ್ದ. ಹಿಗೆ ಒಬ್ಬ ತಮಿಳ್ ಹುಡ್ಗಿಗೆ ಏನೋ ಹೇಳಿದ್ದಾನೆ. ಅವಳು "ಪೋಡಾಡೆ"(ಹೋಗಲೇ) ಎಂದಿದ್ದಾಳೆ, ಅವಳು ನನಗೆ ಏನು ಹೇಳಿದಳು ಅಂತ ಕೇಳಿದಾಗ ನಾನು ಅದಕ್ಕೆ ಮಸಾಲೆ ಬೆರಸಿ ಹಂಗಂದ್ರೆ "ಪೋಗದಿರೆಲೋ ರಂಗ" ಅಂತ ಎಂದಾಗ ಅವನ ಕಣ್ಣು ಮತ್ತು ಮುಖದಲ್ಲಿಯ ತೇಜಸ್ಸು ನೋಡಬೇಕ್ಕಿತ್ತು . ರಾತ್ರಿ ಪೂರ್ತಿ ಅವಳದೇ ಧ್ಯಾನ .. ಅವತ್ತು ಅವನಿಗೆ ಶಿವರಾತ್ರಿ ...

ಮತ್ತೆ ಒಂದು ದಿವಸ ಕ್ರೆಡಿಟ್ ಕಾರ್ಡ್ ಬಿಲ್ ಬಂತು ನೋಡಿ , ಸುಬ್ಬು ಗುಬ್ಬಿಹಾಗೇ ಚೆವ.. ಚೆವ ... ಅಂತ ಚೆವಗುಟ್ಟಿದ್ದ. ಏನೋ ಸುಬ್ಬು ಏನಾಯಿತು? ಎಂದಾಗ ಯಾವದೋ ಒಂದು "Membership ಫೀಸ್" ಅಂತ ಅನಾಮತ್ತಾಗಿ ೭೫೦೦ /- ರೂಪಾಯಿಗಳ ನಾಮ ಹಾಕಿದ್ದರು. ಬಿಲ್ ಕೋಡ್ ನಲ್ಲಿ "Honey Moon Special Offer" ಎಂದಿತ್ತು. ಚೆಡಿಸುವದಕ್ಕೆ ಏನೋ Honey Moon ಆಯಿತೇನೋ ನಿನ್ನ ತಮಿಳ್ ಸಖಿಯ ಜೊತೆ, ಎಂದಾಗ ಕೆನ್ನೆಗೆ ಬಾರಿಸುವಸ್ಟು ಕೋಪದಿಂದ ದುರುಗುಟ್ಟಿದ್ದ . ಆನ೦ತರ ನಾನೇ ಬ್ಯಾಂಕ್ ಗೆ ಫೋನ್ ಮಾಡಿ ಏನಪ್ಪಾ ಇದು ಯಾವ ಆಫರ್ ಅಂತ ಕೇಳಿದಾಗ, ನೀವೇ ಒಪ್ಪಿದ ಮೇಲೆ ಈ ಆಫರ್ ನಿಮಗೆ ಕೊಟ್ಟಿದ್ದು ಸರ್, ಅಂತ ಹೇಳಿದರು . ಆ ಆಫರ್ ಕತೆಯೋ ಕೇಳಬೇಡಿ "Married Couple" ಗಳಿಗೆ ಮಾಡಿಸಿದ್ದು. ಪ್ರತಿ ತಿಂಗಳು ೪ ದಿನಗಳು ಹಿಲ್ ಸ್ಟೇಷನಲ್ಲಿ ವಾಸ , ತಿಂಡಿ ತೀರ್ಥ ಎಲ್ಲವನ್ನು ಭರಿಸುವ ಆಫರ್. ನನಗೆ ಮದುವೆನೆ ಆಗಿಲ್ಲ ಕಣಮ್ಮ ಎಂದಾಗ. ಮತ್ತೆ ನೀವು ಏಕೆ ಒಪ್ಪಿಕೊಂಡಿರಿ ಎಂದಳು . ತಲೆ ತಿರುಗಿತ್ತು ಎನಮ್ಮಾ ನಾನು ಹೇಳಿದ್ದೇನು ನನ್ನ Talk Transcript ಏನು? ಅಂತ ನನಗೆ ಬೇಕು ಎಂದಾಗ phone cut ಮಾಡಿದಳು ...ಹೀಗೇ ನಡಿಯಿತು ನನ್ನ ಮತ್ತು ಬ್ಯಾಂಕ್ ಸಹೋದ್ಯೋಗಿಗಳೇ ನಡುವೆ ವಾಕ್ಯುಧ . ಕೊನೆಗೆ ೪ ಬರಿ ಹೆಡ್ ಆಫೀಸ್ ಗೆ ಮೇಲ್ ಮಾಡಿ. Consumer ಕೋರ್ಟ್ಗೆ ಹೋಗುತ್ತೇನೆ ಎಂದು ಹೆದರಿಸಿದ್ದಾಗ ಕೊನೆಗೆ ನನ್ನ(ಯಾನಿ ಸುಬ್ಬು) a/c ಸರಿ ಮಾಡಿ ಕಳುಹಿದರು.

ಈಗ ನಮ್ಮ ಸುಬ್ಬನಿಗೆ Ration ಕಾರ್ಡ್ ತೊಗೊಳ್ಳಿ ಅಂತ ಫೋನ್ ಮಾಡಿದರು...ಸಹ, ಹೆದರಿ ರಾಮಸಂದ್ರಕ್ಕೆ ಓಡುತ್ತಾನೆ .

ಏ... ಮಗ ... Pan Card ಮಾಡಿಸ್ಕೊಳ್ಳೋ ಅಂತ ನಾನು ಹೇಳಿದಾಗ. ನನಗೆ ಯಾವ ಕಾರ್ಡು ಗಿರ್ಡು ಬೇಡ ಎಂದಿದ್ದ ...

ಈಗ ಇವನ ಮದುವೆ ಫಿಕ್ಸ್ ಆಗಿದೆ. ಮ್ಯಾರೇಜ್ ಕಾರ್ಡ್ ಕೊಡ್ತಾನೋ ಇಲ್ಲೋ ಅಂತ ....ಕಾದುನೋಡಿ.

ಮೂರುಲೋಕದೊಳಗಿನ ಮುಂಗಾರುಮಳೆ...

ಮೊನ್ನೆ ಒಂದು ದಿವಸ ತುಂಬಾ ಕೆಲಸವಿದ್ದ ಕಾರಣ, ಸ್ವಲ್ಪ ಲೇಟಾಗಿ ಆಫೀಸ್ ಬಿಟ್ಟೆನು. ಜೊತೆಗೆ ಕುಲಕರ್ಣಿಯವರು ಇದ್ದರು. ಸಾರೀ ನಾನು ಕುಲಕರ್ಣಿಯಲ್ಲವಾ ಹೆಸರು ಹೇಳುತ್ತೇನೆ. ಸಂಜೀವ ಅಂತ, ಅವರು ನಮ್ಮ ಕೇರಿಯವರೇ ... ಸಾರೀ... ಊರಿನವರು ಮತ್ತು ಏರಿಯಾದವರು ಕೂಡ . ಧಾರವಾಡದವರಿಗೆ ಪ್ರಾಸಬದ್ದವಾಗಿ ಮಾತನಾಡುವದು ಸಹಜ ವಿಚಾರ . ಪ್ರಾಸವೆಂದ ಮೇಲೆ ಹಳೆಯ ಸ್ವಲ್ಪ ವಿಚಾರಗಳನ್ನು ಹೇಳ ಬಯಸುತ್ತೇನೆ. ಒಂದು ದಿವಸ ನನ್ನ ಗೆಳೆಯ ಏನೋ ಹುಡುಗಿ.. ಗಿಡುಗಿ.. ನೋಡಿದಿ ಏನೋ ಎಂದ(ಮದುವೆಗ್ರಿ). ಹುಡಿಗಿನ ನೋಡಿದ್ದೇನೆ ಗಿಡುಗನ್ನ ಬೇಕಾದರೆ ನಿನಗೆ ಕೊಡಿಸ್ತೀನಿ Ok ನಾ ... ಎನ್ದೆ ತುಂಬಾ ಕೊಪಿಸ್ಕೊಂಡ. ಹಾಗೇ ತಮಾಷೆಗೆ ಅಂತ ಸಮಾಧಾನ ಮಾಡಿ Gee party ಕೊಡಿಸಿದೆ , ಮತ್ತೆ ಕ್ಷಮಿಸಿ Tea Party. ಮತ್ತೊಂದು ದಿನ ಅತ್ತೆ ಮನೆಗೆ ಹೋಗುತ್ತಾ ಇದ್ದ್ವಿ ಪೇಡ , ಗಿಡ ತೊಗೊಂಡು ಹೋಗೋಣ ಎಂದರು ನನ್ನ ತಾಯಿ. ಅವರ ಮನೇಲಿ ಗಿಡ ತಿನೋಲ್ಲ ಅಂತೆ , ಪೇಡ ಏನೋ ತೊಗೊಂಡು ಹೋಗಬಹುದು, ಆದ್ರೆ ಎಲ್ಲರಿಗು ಸಕ್ಕರೆ ಕಾಯಿಲೆ, ಯಾಕೆ ಸುಮ್ಮನೆ ದುಡ್ಡು ವೇಸ್ಟ್ ಹಾಗೆ ಹೋಗೋಣ ಅನ್ದೆ. ನನ್ನ ತಾಯಿಯ ಪಿತ್ತ ನೆತ್ತಿಗೇರಿತ್ತು ಅದು ಪದ್ಧತಿ ಕಣೋ ಎಂದರು . ನನ್ನ Purseಗೆ 200 ರೂಪಾಯಿಗಳ ಕತ್ತರಿ ಬಿತ್ತು .

ಮತ್ತೆ ವಿಷಯಕ್ಕೆ ಬರೋಣ , ಅವತ್ತಿನ ಟ್ರಾಫಿಕ್ ತುಂಬಾ ಜೋರಾಗೆ ಇತ್ತು. ಆದರು ಕುಲಕರ್ಣಿಯವರಿಗೆ ಏನೋ ಅರ್ಜೆಂಟ್ ಇತ್ತೋ ಗೊತ್ತಿಲ್ಲ ಸಂದಿಗೊಂದಿ ಇಂದ ಗಾಡಿ ಓಡಿಸಿ ನೋಡುವಸ್ಟರಲ್ಲೇ ಮಾಯವಾಗಿಬಿಟ್ಟಿದ್ದರು. ನಾನು petrol, desiel ಗಳ ಸುವಾಸನೆಗಳ್ಳನ್ನು ಸವಿಯುತ್ತ ಸಾಗಿದ್ದೆ. ಸುರ್ರ .... ಎಂದು ಆಟೋಗಳು ಸಹ ನನ್ನ ಹಿಂದಿಕ್ಕಿ ಹೋಗಿದ್ದವು. ಆಗಲೇ ಯೋಚನೆ ಬಂದಿದ್ದು, ಅಭಿಮನ್ಯುವಿಗೆ ಏನಾದರು ಬೇ೦ಗಳೂರಿನಲ್ಲಿ ಡ್ರೈವ್ ಮಾಡಿ Practice ಇದ್ದರೆ , ಚಕ್ರವ್ಯೂಹವನ್ನು easy ಯಾಗಿ ಭೆಧಿಸುತ್ತಿದ್ದ ಅಂತ. ತುಂಬಾ ಮೋಡ ಕವಿದಿದ್ದರಿಂದ ನನಗು ಸ್ವಲ್ಪ ಬೇಗನೆ ಹೋಗಬೇಕೆಂದು ಅನಿಸಿ, Accelerator ತಿರುವಿದೆ ಅದು ನನ್ನ Accelerator ಅಥವಾ ಸೈಡ್ ನಲ್ಲಿರುವ ಹುಡುಗಿ Accelerator ಗೊತ್ತಾಗಲಿಲ್ಲ . ಅವಳು ಸಹ ನನ್ನನ್ನು ಹಿಂದಿಕ್ಕಿ ಹೋಗಿದ್ದಳು. ಇರಲಿ ಇದು ನನ್ನ Bike "ಹಣೆ ಬರಹ " ಇದನ್ನು ಚೇಂಜ್ ಮಾಡಲಾಗುವದಿಲ್ಲವೆಂದು ಸ್ವಲ್ಪ ದೂರ ಹೋಗುತ್ತಿದ್ದ ಹಾಗೆ ಮಳೆರಾಯ ಜೋರಾಗಿ ಬರತೊಡಗಿದ. ತೋಯಿಸಿಕೊಂಡು ಹೋಗುವದು ಇಷ್ಟವಿರಲಿಲ್ಲ ಒಂದು ಮರದ ಕೆಳಗೆ ಹೋಗಿನಿಂತೆ . ಆಗಲೇ Bike ಗೆ ಚರಂಡಿಯ ನೀರಿನಿಂದ ಸ್ನಾನವಾಗಿತ್ತು , Mostly ಚರಂಡಿಗೆ ಗೊತ್ತಿರಬೇಕು, ಈ ನನ್ನ ಮಗ Bike ನ್ನ ಎಷ್ಟು ದಿನಗಳ ಹಿಂದೆ Clean ಮಾಡಿದ್ದು ಅಂತ. ಮೇಲಿಂದ ಕಾಗೆ ,ಗುಬ್ಬಿ ಗಳು ಸೂಸು ಮಾಡಿದವೋ , ಅಥವಾ ಮಳೆಹನಿಗಳು ಮರದಿಂದ ನನ್ನನ್ನು ಸ್ನಾನ ಮಾಡಿಸಿದಾಗ ನನ್ನ Bike ಗೆ ಸಮಾಧಾನವಗಿರಬೇಕು , ನನ್ನನ್ನು ನೋಡಿ ನಗಹತ್ತಿತ್ತು (ನೀರಿನ ರಭಸದಿಂದ ನನ್ನ ಕಡೆಗೆ ಬೈಕ್ ಸರಿದಿತ್ತು ).ಸ್ವಲ್ಪ ಮಳೆ ನಿಂತ ಮೇಲೆ Bike ಸ್ಟಾರ್ಟ್ ಮಾಡಹತ್ತಿದೆನು . Bike ನಖರಾ ಮಾಡಲು ಶುರು ಮಾಡಿತ್ತು . ಚೆನ್ನಾಗಿ ಮಳೆ ಮತ್ತು ಚರಂಡಿ ನೀರಿನಿಂದ ಮಿಂದ Bike ಚಳಿಯಿಂದ ನಡುಗಲಾರಮ್ಬಿಸಿತ್ತು. ಬಟ್ಟೆಯಿಂದ ಚೆನ್ನಾಗಿ ಕ್ಲೀನ್ ಮಡಿ ಕಿಕ್ ಹೊಡೆದು Bike ಸ್ಟಾರ್ಟ್ ಮಾಡಿ ಹೊರಟೆ. ನನ್ನ ಕಿಕ್ಕ್ಗೆ ನಶೆ ಏರಿದ ಕುಡುಕನಂತೆ ಹೊರಟಿತ್ತು . ಸ್ವಲ್ಪ ದೂರ ಹೋಗುವಸ್ಟರಲ್ಲೇ ನನಗೆ ಪಾತಾಳ ಲೋಕದ ದರ್ಶನವಾಗಿತ್ತು , ನೀರಿದ್ದರಿಂದ ಗೊತ್ತಾಗದೆ ತೆಗ್ಗಿನಲ್ಲಿ Bike ಓಡಿಸಿದ್ದೇ . "ಬದುಕಿದೆಯಾ ಬಡಜೀವವೇ " ಎಂದು ಶ್ರೀರಾಮನನ್ನು ಮನಸ್ಸಿನಲ್ಲಿ ನೆನಸಿಕೊಂಡೆನು.( ನಾನೊಬ್ಬನೇ ಏಕೆ ನೆನೆಯಬೇಕು ನೀವೇ ಹೇಳಿ ? ನನ್ನ ಪ್ರೀತಿಯ ಶ್ರೀರಾಮನು ನೆನೆಯಲಿ ಎಂದು ). ಮತ್ತೆ ಸ್ವಲ್ಪ ದೂರ ಹೊಗುವಸ್ಟರಲ್ಲಿ ನನಗೆ ಸ್ವರ್ಗ ಲೋಕದ ದರ್ಶನ ಆಯಿತು. ಇದೇನಪ್ಪ, ಇದು ಎಲ್ಲ ಲೋಕಗಳ ಇವತ್ತೇ ದರ್ಶನ ಭಾಗ್ಯ ಸಿಗಬೇಕೆ ಎಂದುಕೊ೦ಡೆನು. ತಿರುಗಿ ನೋಡಿದಾಗೆ ತಲೆಯಲ್ಲಿ ನಕ್ಷತ್ರಗಳೇ ಓಡಾಡಿದವು ಅದು ದೊಡ್ಡದಾದ ನರಕಸದ್ರಶವಾದ "Hump". ಇರಲಿ ತೋಯಿಸಿಕೊಂಡು ಹೋದರು ಪರವಾಗಿಲ್ಲ ಸ್ಲೋ ಆಗಿಯೇ ಹೋಗೋಣ ಎಂದು ಹೊರಟು ಮನೆ ತಲುಪಿದೆ.

ಮನೆಗೆ ಹೋದ ತಕ್ಷಣ ನನ್ನ ಮಗ ನನ್ನ ಅವಸ್ಥೆ ನೋಡಿ ಅಪ್ಪ "ಚಂದಮಾಮ ಸೂಸು" ಎಂದ . ನಾನು ತಮಾಷೆಗೆ ರಾತ್ರಿ ಮಳೆ ಹುಯಿದರೆ ಚಂದಮಾಮ ಸೂಸು ಮಾಡುವನೆಂದು ಮತ್ತೆ ಬೆಳಿಗ್ಗೆ ಮಳೆ ಹುಯಿದರೆ ಸೂರ್ಯ ಸೂಸು ಮಾಡುವನೆಂದು ಹೇಳುತ್ತಿದ್ದೆ . ಆಗ ಅನ್ನಿಸಿತು ಇನ್ನು ಸ್ವಲ್ಪ ಹೊತ್ತೆನಾದರೂ ನಿಂತಿದ್ದರೆ ಭೂಮಿ ಮಾಮಿ ನು ಸೂಸು (ಚರಂಡಿ ನೀರಿನಿಂದ ) ಮಾಡುತ್ತಿದ್ದಳು ಎಂದು.

ಹೇಗಿದ್ದರೂ ತೊಯಿಸ್ಕೊಂಡು ಹೋಗಿದ್ದರಿಂದ ಹಾಗೆ ಸ್ವಲ್ಪ ಸೋಪ್ ಉಜ್ಜಿ Clean ಗೊಂಡು ಸೋಫಾ ಮೇಲೆ ವಕ್ಕರಿಸಿದೆ. ಸ್ವಲ್ಪ ನ್ಯೂಸ್ ನೋಡೋಣ ವೆಂದು Tv ಹಾಕಿದಾಗ "ಅಭಿಷೇಕ್" ಎನ್ನುವ ಹುಡುಗನ ನ್ಯೂಸ್ ತೋರಿಸುತ್ತಿದ್ದರು. ಅವನು ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ . ಗಂಟಲು ಗದ್ಗತಿತವಾಗಿ ಕರಳು ಕಿತ್ತು ಬಂದ ಹಾಗೆ ಅನ್ನಿಸಿ ಸಂಕಟ ತಡಿಯೋಕಾಗದೆ ಚಾನೆಲ್ ಚೇಂಜ್ ಮಾಡಿದೆ. U2 ನಲ್ಲಿಯ ಹಾಡು ತುಂಬಾ ಇಂಪಾಗಿ ಬರುತ್ತಾ ಇತ್ತು "ಹಳೆ ಪಾತ್ರೆ , ಹಳೆ ಕಬ್ಬಿಣ ......ಭೂಮಿನ ಭಾಡಿಗೆ ಕೊಡು". ಭೂಮಿ ಬಿಟ್ಟು ಹಾಕಿ , ಬೆ೦ಗಳೂರೆನಾದ್ರು ಸಿನಿಮಾದವರು ಭಾಡಿಗೆ ಕೇಳಬೇಕ್ಕಿತ್ತು ಅನ್ನಿಸಿತು. ಈ ಹಾಡಿನ ಹಾಗೆ ಚೆನ್ನಾಗಿ Maintain ಮಾಡುತ್ತಿದ್ದರೋ ಏನೋ ಅನ್ನಿಸಿತು .

ಆಮೇಲೆ ಫೋನ್ ಮಾಡಿ ಸಂಜೀವ ಅವರಿಗೆ ಕೇಳಿದಾಗ ಗೊತ್ತಾಯಿತು Signal Cross ಮಾಡುವಾಗ Traffic Police ಮಾವನ ಕಡೆ ಸಿಕ್ಕು 100 ರೂಪಾಯಿಗಳ ಪ್ರಸಾದ ಕೊಟ್ಟಿದ್ದಾರೆಂದು .ನಾನೇ ಪರವಾಗಿಲ್ಲ ಎಂದು ನನ್ನ ಮಮತೆಯ ಮಡದಿ ಮಾಡಿದ ಹೊಸರುಚಿಯನ್ನು ಸವಿಯುತ್ತ ನಿದ್ದೆಗೆ ಜಾರಿದೆ..

(Note:ನಿಮಗೂ ನನ್ನ ಹೆಂಡತಿಯ ಹೊಸರುಚಿಯೇನಾದ್ರು ಸವಿಯಬೇಕೆನ್ದಿದ್ದರೆ ಮಡದಿ ಹಾರಿಸಿದ Missile..... ಎಂಬ ನನ್ನ Article ಓದಿ).

ಮಡದಿ ಹಾರಿಸಿದ Missile.....


ಬೆಳಿಗ್ಗೆ "ಕೊಸಲ್ಯ (ಸಾರಿ.... ಕೌಸಲ್ಯ ಕೋಸು ಪಲ್ಯ ಅಂತ ತಿಳಿದುಕೊಂಡಿರಿ. ನನಗೆ ಸ್ವಲ್ಪ ಕರ್ಣ ದೋಷ. ನಿಮಗೆ ಸರಿಯಾಗಿ ತಿಳಿಯಿತಲ್ಲ ಅಷ್ಟು ಸಾಕು.) ಸುಪ್ರಜಾ ರಾಮ ... " ಆಗಲೇ ನನ್ನ ಮಡದಿಯ ಸುಪ್ರಭಾತ ಮುಗಿದು, ಅಷ್ಟೊತ್ತರ ನಾಮಾವಳಿ ನಡೆಯುತ್ತಿತ್ತು. "ಎಷ್ಟು ಸಾರಿ ನಿನಗೆ ಹೇಳುವದು ಹೀಗೆಲ್ಲ ಮಾಡಬೇಡ ಎಂದು". ದೇವರ ಮನೆ ಇಂದ ಕಣ್ಣಾಡಿಸಿದಾಗ ತಿಳಿಯಿತು ಆಗಲೇ ನಮ್ಮ ೨ ವರ್ಷದ ಕುಮಾರ ಕಂಠೀರವ ಸಬ್ಬಕ್ಕಿ ಉಪ್ಪಿಟ್ಟಿನಿಂದ ಅಭಿಷೇಕ ಮಾಡಿಕೊಂಡಿದ್ದನೆಂದು. ನಿನ್ನೆಯೇ ನನಗೆ ಲಾಲಿ ಹಾಡು ಆಗಿತ್ತು "೪ ದಿವಸಗಳಿಂದ ಹೇಳ್ತಾ ಇದ್ದೇನೆ ದಿನಸಿ ಯಾವಾಗ್ರಿ ತರ್ತಿರ" ಎಂದು. ಇವತ್ತೇನಾದರೂ ದಿನಸಿ ತರ್ದಿದ್ರೆ ನನಗೆ ಸಹಸ್ರನಾಮಾವಳಿ ಗ್ಯಾರಂಟೀ ಎಂದು ಗೊತ್ತಿದ್ದರಿಂದ ಮೊಬೈಲ್ನಲ್ಲಿ Reminder ಇಟ್ಟು ಆಫೀಸ್ಗೆ ಹೊರಟೆ.

ಆಫೀಸ್ನಲ್ಲಿ ದಿನಸಿ ಪಟ್ಟಿಯನ್ನು ತೆಗೆದೆ.. ಪಟ್ಟಿ ಹೀಗಿತ್ತು

ಇಡ್ಲಿ ರವ
ಅವಲಕ್ಕಿ
...
Missile
.....

ತಟ್ಟನೆ ಕಣ್ಣು ಅಲ್ಲಿಯೇ ಸ್ಟಾಪ್ ಆಗಿಬಿಟ್ಟಿತು ಏನಿದು Missile ಎಂದು ಯೋಚನೆ ಮಾಡಿದೆ. ನಾನೇನಾದರೂ ಡಾಕ್ಟರ ಆಗಿದ್ದರೆ ಅಥವಾ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರೆ ಅರ್ಥವಾಗುತಿತ್ತೇನೋ?. ಆದರೆ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್. ಏನೆಂದು ಹೊಳಿಲೆ ಇಲ್ಲ. ಈಗೆನಾದ್ರು ಅವಳಿಗೆ ಫೋನ್ ಮಾಡಿ ಕೇಳಿದ್ರೆ, "ನಾಲ್ಕು ದಿನಗಳು ಆಯಿತು ಏನ್ ಎಮ್ಮೆ ಮೆಯ್ತಿದ್ರಾ? ಸಾರೀ ಮೆಯಿಸ್ತಿದ್ರ ಅಂತ ಕೊಪಿಸ್ಕೊತಾಳೆ" (ಅವಳಿಗೂ ಗೊತ್ತು ನಾನು ಗೋವುಗಳ ಪಾಲ (ಯಾನಿ ಗೋಪಾಲ)). ನಾನೆ ಕಂಡುಹಿಡಿಯೋಣವೆಂದು ಇಂಟರ್ನೆಟ್ ಜಾಲಾಡಿದೆ. ನಾನು ಓದಿರೋ "Wren And Martin" ಮತ್ತು "Oxford Dictionary" ಕೂಡ ಏನು ಸಹಾಯಕ್ಕೆ ಬರಲಿಲ್ಲ. ಕೊನೆಯ ಪ್ರಯತ್ನವಾಗಿ ಎಲ್ಲ ಗೆಳೆಯರಿಗೆ SMS ಮಾಡಿ "ಮ್" ನಿಂದ start ಆಗುವ ಮತ್ತು "Missile" ಗೆ ಪ್ರಸಬದ್ದ ಆಗಿರೋ ದಿನಸಿ ವಸ್ತುಗಳೆನೆಂದು. ಒಂದೊಂದೇ ಉತ್ತರಗಳು ಬರಲಾರಂಬಿಸಿದವು. Masala, Masaladose, Mausambi,Mosaru, Moongdal,Munch,Manchuri, ಮಂಡಾಳ(ಕಡಲೆಪುರಿ),Meera Shikakai, Masala Vade etc... ಎಲ್ಲವನ್ನು ಕೇಳಿ Confirm ಮಾಡುವದಕ್ಕೆ ಹೆಂಡತಿಯನ್ನು ಒಂದೊಂದಾಗಿ ಫೋನ್ ಮಾಡಿ ಕೇಳಿದೆನು ಇವು ಏನಾದ್ರು ಬೇಕ ಅಂತ. ಎಲ್ಲಕ್ಕೂ ನಕಾರಾತ್ಮಕ ಉತ್ತರ. ಅವಳಿಗೂ ಸ್ವಲ್ಪ ಅನುಮಾನ ಬಂತು ಏಕೆ? ಎಂದಾಗ ಏನಿಲ್ಲ ಹಾಗೆ ಕೇಳಿದೆ ಎಂದೆ. ಆನಂತರ ಒಬ್ಬ ಮಿತ್ರನು ಫೋನ್ ಮಾಡಿ ಏನೋ ನಿನ್ನ ಹೆಂಡತಿ ಮಲೆಯಾಳಿ ಏನೋ ಎಂದ. ಏಕೆ? ಎಂದಾಗ murukku ಇರಬಹುದಾ? ಎಂದ. ಅದನ್ನು ನೋಟ್ ಮಾಡಿ ಮತ್ತೆ ಯಾವದಾದ್ರು ಶಬ್ದಗಳು ಇವೆಯಾ?. ಮೊಸಳೆ(Crocodile), ನಿನಗೆ ಬಾರಿಸುವದಕ್ಕೆ ಮುಸಲ(ಸಂಸ್ಕೃತದಲ್ಲಿ ದೊಣ್ಣೆ) ಎಂದ. ಕೆಟ್ಟ ಕೋಪ ಬಂತು. ಕೊನೆಗೆ ಕೇಳಿಯೇ ಬಿಡೋಣ ಎಂದು ಹೆಂಡತಿಗೆ ಫೋನ್ ಮಾಡಿ ಏನಿದು? ನೀನು ಬರ್ದಿರೋದು Missile ಎಂದಾಗ. ಅದು mixture ಎಂದು ತಿಳಿಯಿತು. ಬಿಜಾಪುರ ಕಡೆ ಅದನ್ನ "ಮಿಸಳ್" ಎಂದು ಕರೆಯುತ್ತಾರೆ.

ಮನಸ್ಸಿಗೆ ಮಸಾಲೆ ದೋಸೆ ತಿಂದಷ್ಟು ಸಂತೋಷವಾಯಿತು. ಮನೇಲಿ ಹೊಸ ರುಚಿಗಳ ಪ್ರಯೋಗ ಬೇರೆ ನಡೀತಾ ಇದೆ ಈ Missile ನನ್ನ ಹೊಟ್ಟೆ ಮೇಲೆ ಪ್ರಯೋಗ ಮಾಡಬಹುದು.

ಮದುವೆಯ ಹೊಸದರಲ್ಲೂ ಹೀಗೆ ಒಂದು ಹೊಸ ಪ್ರಯೋಗ ನನ್ನ ಹೊಟ್ಟೆ ಮೇಲೆ ನಡೀತು. ಹೊಸ ರುಚಿ ಅಂತ ಒಂದು ಬಣ್ಣ ಬಣ್ಣದ ತಿಂಡಿ ಮಾಡಿದ್ದಳು ನನ್ನ ಮಮತೆಯ ಮಡದಿ. ತಿಂಡಿಯ ಮೇಲೆ ಒಂದು ನಿಂಬೆ ಹಣ್ಣಿನ ಹೋಳು, ಸವತೆ ಹೋಳು, ಮತ್ತು ಗಜ್ಜರಿ piece ಗಳು ಸಹ ಇದ್ದವು. "ನವರತ್ನ ಕುರ್ಮಾ ಚೆನ್ನಾಗಿದೆ " ಎಂದೆನು. ರೋಟಿ ಅಥವಾ ಚಪಾತಿ ಇದ್ದರೆ ಕೊಡು ಎನ್ದೆನು. ಸಿಟ್ಟಿನಿಂದ "ನಾನು ಪಾಯಸ ಮಾಡಿದ್ದು" ಎಂದು ಮುಖ ತಿರುಚಿದಳು. ಮತ್ತೆ ಇದೇನೆ ನೆಂಚಿಕೊಳ್ಳಲು ನಿಂಬೆ, ಸವತೆ, ಗಜ್ಜರಿ piece ಗಳು ಏಕೆ?. ಎಂದಾಗ ಓ ಅದಾ ಅದು ಹಾಗೆ ಡಿಶ್ ಚೆನ್ನಾಗೆ ಕಾಣಲೆಂದು ಇಟ್ಟಿದ್ದು ಅದನ್ನೇ ನೆಂಚಿಕೊಂಡಿರ ಎಂದಳು. ಮರುದಿನ ಹೊಟ್ಟೆಯಲ್ಲಿರೋ ಮೂಳೆಗಳು ಸಡಿಲವಾಗಿಬಿಟ್ಟಿದ್ದವು.

ಈಗ ಅವಳಿಗೆ ಹೊಸ Testing Engineer ಸಿಕ್ಕಿದ್ದಾನೆ, ಅದಕ್ಕೆ ಇರಬೇಕು ನನ್ನ ಮಗ ಕನ್ಫ್ಯೂಸ್ ಆಗಿ ಅವಳು ಮಾಡಿದ Program( ಹೊಸ ರುಚಿಯನ್ನು) ನ್ನು Automatic testing ಮಾಡಿದ್ದಾನೆ(ತಲೆಯಿಂದ ತಿನ್ನಲು ಪ್ರಯತ್ನಿಸಿದ್ದಾನೆ).
ಏನೇ ಆಗಲಿ... ನಿಜವಾಗ್ಲೂ ಮೊದಲು ನನ್ನ ದೇಹದಲ್ಲಿ ಇದ್ದದ್ದು ಎಲವುಗಳು ಮಾತ್ರ, ಈಗ ಖಂಡವು ಇದೆ ಮಾಂಸವು ಇದೆ. ಇದು ನನ್ನ ಮಡದಿಯ ಹೊಸ ರುಚಿಯ Missile ಪ್ರಯೋಗದಿಂದಲೇ ಆಗಿರಬೇಕು.

ಮರುದಿನ ಮಾರುತಿ ಮಂದಿರಕ್ಕೆ ಹೋಗಿ ನನ್ನ ಮಡದಿಯ ಕಂಗ್ಲಿಷ್ ಅಲ್ಲಾ..ಸಾರೀ(Sorry) ಇಂಗ್ಲಿಷ್ ಸರಿ ಮಾಡೆಂದು ಬೇಡಿಕೊಂಡೆನು.

ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಲೇ ಹೊಟ್ಟೆನೋವು ಕಣೇ ಎಂದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕೋ ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು ನೂರಕ್ಕೆ ನೂರು ಬರಲೇಬೇಕು. ತಲೆಗೂ ಅಷ್ಟೇ ಯಾವಾಗಲು ಹೊಟ್ಟೇದೆ ಯೋಚನೆ. ಯಾಕೋ ಆದರು ಸ್ವಲ್ಪ ಅವಳು ಹೇಳಿರುವದನ್ನು ಅರಗಿಸಿಕೊಳ್ಳಲು ಆಗಲಿಲ್ಲಾ ಏಕಂದ್ರೆ ನಮ್ಮ ಅಪ್ಪ ಹೇಳ್ತಿದ್ರು ನಿನ್ನ ತಲೇಲಿ ಸಗಣಿ ಗೊಬ್ರನೆ ಇರೋದು ಅಂತ. ಈಗ ಶುರುವಾಯಿತು ನೋಡಿ ಗೊಬ್ರನ ಇಲ್ಲ ಹೊಟ್ಟೆನ ಅಂತ. ಸ್ವಲ್ಪ ತಲೆ ಕೆರೆದುಕೊಂಡೆ, ತಲೇಲಿ ಇರುವ ಹೊಟ್ಟು ಸ್ವಲ್ಪ ಕೆಳಗೆಡೆ ಬಿತ್ತು ಮಾತ್ರ. ಉತ್ತರ ಮಾತ್ರ ತನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿ ಮೂಕವಾಗಿ ಕುಳಿತುಬಿಟ್ಟಿತ್ತು....

ಕಡೆಗೆ ಒಬ್ಬ ತಲೆಯ ಡಾಕ್ಟರಗೆ ತೋರಿಸಿ ಬಿಡೋಣವೆಂದು ಯೋಚಿಸಿ, ಶನಿವಾರ ಬೆಳಿಗ್ಗೆ ಎದ್ದು ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ಹೊರಡೋಣ ಎನ್ನುವಾಗ, ನನ್ನ ಮಡದಿ ರೀ ಎಲ್ಲಿಗೆ ಹೋಗುತ್ತಾ ಇದ್ದೀರ ಎಂದು ಕೇಳಿ ಬಿಟ್ಟಳು . ಮತ್ತೆ ಅಪಶಕುನವೆಂದು ಸ್ವಲ್ಪ ಹೊತ್ತು ಕುಳಿತು, ಆಮೇಲೆ ಹೊರಡಲು ಅನುವಾದೆ. ಅಷ್ಟರಲ್ಲಿ ಮತ್ತೆ ಮಡದಿ ಸ್ವಲ್ಪ ಹುರಪು ಆದ ಮೇಲೆ ಹೋಗಿ ಎಂದಳು. ನನಗೆ ಅರ್ಥ ಆಗಲಿಲ್ಲ. ಏನು? ಎಂದೆ. ಬಿಸಿಲುಬಂದ ಮೇಲೆ ಹೋಗಿ ಎಂದಳು. ಮತ್ತೆ ಅಗಲೆ ಏನೋ? ಅಂದೇ ಎಂದು ಕೇಳಿದೆ. ಆದ ಆಡುಭಾಷೆ ಎಂದಳು. ನನಗೆ ತಿಳಿಯುವ ಹಾಗೆ ಹೇಳಬೇಕು ತಾನೇ ಎಂದೆ. ನಿಮ್ಮ ಕುರಿ ತಲೆಗೆ ಆಡು ಭಾಷೆ ಎಲ್ಲಿ ಹೊಳಿಬೇಕು ಎಂದು ಹೇಳಿ ನಗುತ್ತಾ ಅಡುಗೆ ಮನೆಗೆ ಹೊರಟು ಹೋದಳು.
ಕಡೆಗೆ ಧೈರ್ಯ ಮಾಡಿ ಹೊರಟು ನಿಂತೆ, ಅಷ್ಟರಲ್ಲಿ ನನ್ನ ಹೊಟ್ಟೆಯ ಕರೆ ಬಂದೆ ಬಿಟ್ಟಿತ್ತು. ಮತ್ತೆ ಎಲ್ಲವನ್ನು ಮುಗಿಸಿ ನನ್ನ Kinetic ಸ್ಟಾರ್ಟ್ ಮಾಡಿದೆ. ಡಾಕ್ಟರ ಬಳಿ ಹೋಗಿ ನನ್ನ ಎಲ್ಲಾ ದುಃಖವನ್ನು ತೋಡಿಕೊಂಡೆ. ಡಾಕ್ಟರ ಹೇಳಿದರು ನಿಜವಾಗಿಯೂ ಇದು ನನ್ನ ಕೇಸ್ ಅಲ್ಲ. ನೀನು ಹೊಟ್ಟೆಯ ಡಾಕ್ಟರ ಬಳಿ ಹೋಗು ಎಂದು ಕಳಿಹಿಸಿದರು. ಮತ್ತೆ ಬಂದ ದಾರಿಗೆ ಸುಂಕವಿಲ್ಲ ಅಂತ Kinetic ಏರಿ ಹೊಟ್ಟೆಯ ಡಾಕ್ಟರ ತಲುಪಿದೆ. ಅವರು ತಪಾಸಣೆ ಮಾಡಿ ೫ ಮಾತ್ರೆ ಬರದು ಕೊಟ್ಟರು, ಡಯಟಿಂಗ್ ಮತ್ತು ವ್ಯಾಯಾಮ ಮಾಡಲು ಹೇಳಿದರು. ಒಂದು ವಾರದ ನಂತರ ಬಂದು ಭೇಟಿಯಾಗಿ ಅಂತ ಹೇಳಿದರು.
ನಡಯಿತು ನನ್ನ ಹೊಟ್ಟೆ ನೋವನ್ನು ಹೊಡೆದೋಡಿಸುವ ಮಹಾ ಸಮರ. ಸಮರವೇನೋ ನಡೀತಾನೆ ಇತ್ತು ಆದರೆ ಹೊಟ್ಟೆನೋವು ಮಾತ್ರ ಕಮ್ಮಿ ಆಗಲಿಲ್ಲ. ಒಂದು ವಾರದ ನಂತರ ಹೋಗಿ ಮತ್ತೆ ಭೇಟಿಯಾಗಿ ಬಂದೆ. ಡಾಕ್ಟರ್ ಎಂಡೊಸ್ಕೊಪೀ ಮಾಡಿಸುತ್ತೇನೆ ಮುಂದಿನ ವಾರ ಬನ್ನಿ ಎಂದರು. ಮತ್ತೊಂದು ವಾರ ಬಿಟ್ಟು ಡಾಕ್ಟರ್ ಬಳಿ ಹೋದೆ. ಡಾಕ್ಟರ್ ದೊಡ್ಡ ಪೈಪ್ ತೆಗೆದುಕೊಂಡು ಗಂಟಲಲ್ಲಿ ಸಿಕ್ಕಿಸಲು ಹೋದರು. ಸರ್, ಇಷ್ಟು ದೊಡ್ಡದ್ದು ಎಂದೆ. ನಾನು ಆ ಚಿಕ್ಕ ಪೈಪ್ ಎಂದು ಕೊಂಡಿದ್ದೆ ಎಂದು ಚಿಕ್ಕ ಪೈಪ್ ತೋರಿಸಿದೆ. ಅದಕ್ಕೆ ಅವರು ನಗುತ್ತಾ ಅದು ಚಿಕ್ಕ ಮಕ್ಕಳಿಗೆ ಎಂದು ಗಂಟಲಲ್ಲಿ ತುರುಕಿದರು.
ಕಡೆಗೆ ಎಲ್ಲಾ ಪರೀಕ್ಷೆ ಮುಗಿದ ಮೇಲೆ, ರೀ ನಿಮ್ಮ ಕಡೆ ಒಂದೆರಡು ಲಕ್ಷ ಇದೆ ತಾನೇ ಎಂದರು. ಸರ್ ಎಂದೆ. ನಿಮಗೆ ಆಪರೇಶನ್ ಮಾಡಬೇಕು ಕಣ್ರೀ ಎಂದರು . ನಾನು ಗಾಬರಿ . ಏನು ಇಲ್ಲ ಕಣ್ರೀ ಸುಮ್ಮನೇ ತಮಾಷೆ ಮಾಡಿದೆ. ನಿಮಗೆ ಏನು ಆಗಿಲ್ಲ ಸುಮ್ಮನೇ ನಿಮ್ಮ ತಲೇಲಿ ಹಾಗೆ ಅನ್ನಿಸುತ್ತೆ ಅಷ್ಟೇ ಎಂದರು. ನನ್ನ ಹೆಂಡತಿ ಹೇಳಿದ ಮಾತು ನೆನಪು ಆಯಿತು. ಮೊದಲೇ ಇಷ್ಟೇ ಎಂದು ಗೊತ್ತಿದ್ದರೆ ಸುಮ್ಮನೇ ಇಲ್ಲಿ ಬರುತ್ತಿರಲಿಲ್ಲ ಎಂದುಕೊಂಡೆ. ಡಾಕ್ಟರ್ ಮತ್ತೆ ಒಂದು ವರ್ಷದವರೆಗೆ ಈ ಮಾತ್ರೆ ತೆಗೆದು ಕೊಳ್ಳಿ ಎಂದು ಹೇಳಿ ಕಳುಹಿಸಿದರು.
ಒಂದು ವರ್ಷ ಮಾತ್ರೆ ನುಂಗಿ ನುಂಗಿ ಹೊಟ್ಟೆಲೆ ಮಾತ್ರೆಗಳ ಫ್ಯಾಕ್ಟರಿನೆ ಹುಟ್ಟಿಕೊಂಡಿದೆ. ಇದನ್ನ ಹೇಗಾದರೂ ಮಾಡಿ ಕಂಡು ಹಿಡಿಯಲೇಬೇಕೆಂದು ಪಣ ತೊಟ್ಟು ಯೋಚಿಸ್ದಾಗ ಗೊತ್ತಾಯಿತು. ೪ ವರ್ಷಗಳ ಹಿಂದೆ ಹೊಟ್ಟೆನೋವನ್ದ್ರೆನೆ ಗೊತ್ತಿಲ್ದಿರೋ ನನಗೆ ಇದು ಹೇಗೆ ಬಂತು ಅಂತ. ಆಗ ನನ್ನನ್ನ ನಾನು ಯಾವುದಾದರು ಕೆಲಸದಲ್ಲಿ ತೊಡಗಿಸ್ಕೊಂಡು ಸ್ವಲ್ಪ ಬ್ಯುಸಿ ಇರ್ತಿದ್ದೆ. ಈಗ ಸ್ವಲ್ಪ ಆಲಸಿ ಆಗಿದ್ದೇನೆ ಅನ್ನಿಸುತ್ತೆ. ಅದಕ್ಕೆ ಹೊಟ್ಟೆ ತಲೆಲ್ಲಿ ಮನೆ ಮಾಡಿದೆ. ಆಗ ನೆನಪಾಗಿದ್ದು (Idle mind is devils workshop) ಅಂತ. ನನ್ನ ಮಟ್ಟಿಗೆ Devil ಅಂದ್ರೆ ಹೊಟ್ಟೇನೆ ಇರಬೇಕು.ಅದಕ್ಕೆ ನನ್ನನ್ನ ನಾನು ಬ್ಯುಸಿಯಾಗಿಟ್ಟು ಕೊಂಡಿದ್ದೇನೆ. ಈಗ ನಾನು ಎದೆ ತಟ್ಟಿ ನನ್ನ ಹೆಂಡತಿಗೆ ಹೇಳಬಹದು. ನನಗೆ ಹೊಟ್ಟೆನೋವಿಲ್ಲ ಅಂತ ಎದೆ ನೋವು ಬರದಿರಲೆಂದು ಆಶಿಸುತ್ತೇನೆ. ...

ಪಬ್ ಸುಬ್ಬನ ರಾಮಾಯಣ ...

ಇದೇನೋ ಇದು ಬೆಂಗಳೂರಿಗೆ ಆದಿಮಾನವರು ಬಂದಿದ್ದಾರೆ ಎಂದ ಸುಬ್ಬು. ಲೇ ಮಗನೇ.. ಅವರು ಆದಿಮಾನವರು ಅಲ್ಲ, ಅವರು ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದಾರೆ ಎಂದೆ. ಮತ್ತೆ ಅವರೇಕೆ ಅರೇ ಬೆತ್ತಲೆಯಾಗಿ ಇರುವದು ಎಂದ ಸುಬ್ಬು. ಲೋ ಅದು Latest Fashion ಕಣೋ. ನಿಜವಾಗ್ಲೂ ಅವ್ನು ತನ್ನ ಊರು ರಾಮಸಂದ್ರ ಬಿಟ್ಟು ಯಾವ ಊರನ್ನು ನೋಡಿರಲಿಲ್ಲ ಪಾಪ. ಅವ್ನಿಗೆ ರಾಮಸಂದ್ರದಲ್ಲಿರೋ ಫ್ಯಾಷನ್ ಎಂದರೆ ಲಂಗ ದಾವಣಿಯಲ್ಲಿರೋ ಹುಡುಗಿಯರು ಮಾತ್ರ.

ಕಲ್ತಿರೋದು PUC II Science ಮತ್ತು ಒಂದ ವರ್ಷದ Computer Course. ಮನೆಯಲ್ಲಿ ಕಷ್ಟ ಇರೋದ್ರಿಂದ ಓದಿಗೆ ಒಂದು ದೊಡ್ಡದಾದ ಒಂದೊವರೆ ನಮಸ್ಕಾರ ಹಾಕಿ ನೌಕರಿ ಸೇರಿದ. ಮನೆ ಜವಾಬ್ದಾರಿ ಅವನ ಹೆಗಲಿಗೆ ಬಿತ್ತು. ಕಷ್ಟ ಪಟ್ಟು ಬೇರೆಯವರಿಂದ ಕೇಳಿ ಕಲಿತು ಅದೇನೋ Java,Oracle ಮಣ್ಣು ಮಸಿ ಅಂತ ಕಲಿತಿದ್ದ ಮತ್ತು ಅದ್ರಲ್ಲಿ ಸ್ವಲ್ಪ ಜಾಸ್ತಿನೆ Knowledge ಇತ್ತು. Correspondance ಆಗಿ ಎಂ.ಸಿ.ಎ ಮಾಡ್ತಾ ಇದ್ದಾನೆ. ಈಗ ಬೆಂಗಳೂರಿನಲ್ಲಿ ಒಂದು ದೊಡ್ಡ Company ಯಲ್ಲಿ ನೌಕರಿ ಸಿಕ್ಕಿದೆ ಸಂಬಳ ಕೂಡ ಸ್ವಲ್ಪ ಜಾಸ್ತಿನೇ ಇತ್ತು.

ಮತ್ತೊಂದು ದಿನ ಲಿಪ್ಸ್ಟಿಕ್ ಹಚ್ಚಿಕೊಂಡಿರುವ ಹುಡುಗಿ ನೋಡಿ, ನೋಡೋ ಮಗ ಅಲ್ಲಿ ಸಕತ್ ಹೀರೋಯಿನ್ ಬರ್ತಾ ಇದ್ದಾಳೆ ಅಂತ ಉದ್ಗರಿಸಿದ. Latest Fashion ಫ್ಯಾಷನ್ ಅಂತ ಎಷ್ಟು ಸಾರಿ ಹೇಳುವದು ನಿನಗೆ ಎಂದೆ. ಮರುದಿನ ಬೆಳಿಗ್ಗೆ ಅವನಿಗೆ ಹಾಕಿಕೊಳ್ಳಲು ನನ್ನ ಜೀನ್ಸ್ ಪ್ಯಾಂಟ್ ಕೊಟ್ಟೆ. ಇದೇನೋ ಇದು ಯಾವ ಗೋಣಿ ಚೀಲದಿಂದ ಹೊಲಿಸಿದ್ದೀಯ ಮತ್ತೆ ಅದೇ ಅಸಮಾಧಾನದ ಮಾತು. ಕೆಟ್ಟ ಕೋಪ ಬಂದು ಇದನ್ನ ಸುಮ್ಮನೆ ಹಾಕಿಕೊಂಡು ಹೋಗು ಎಂದೆ.

ಮತ್ತೊಂದು ದಿನ ಚಿಕ್ಕ ಮಗುವನ್ನು ಒಂದು ನುಕುವ ಗಾಡಿಯಲ್ಲಿ ತೆಗೆದುಕೊಂಡು ಹೊರಟಿರುವಾಗ ತನ್ನಲ್ಲಿ ಇದ್ದ ದುಡ್ಡನ್ನು ಹಾಕಲು ಹೋಗಿದ್ದ. ಅವರು ನನ್ನನ್ನು ಮತ್ತು ಸುಬ್ಬನನ್ನು ತುಂಬಾ ಕೋಪದಿಂದ ನೋಡಿದ್ದರು.

ಸ್ವಲ್ಪ ದಿನಗಳು ಕಳೆದ ಮೇಲೆ ಸುಬ್ಬುನ ವೇಷ ಭೂಷಣಗಳೇ ಬದಲಾಗಿ ಹೋಗಿದ್ದವು. ದಿನವು ಒಂದು ಹೊಸ ಉಡುಗೆ, ಜೀನ್ಸ್ ಅಂದ್ರೆ ಗೊತ್ತಿಲ್ದೆ ಇರುವ ಈ ಮಹಾರಾಯನಿಗೆ ಎಲ್ಲಾ ಬ್ರಾಂಡಗಳ ಪರಿಚಯವಾಗಿತ್ತು. ಏನೋ ಸುಬ್ಬು ಜೀನ್ಸ್ ಶಾಪ್ ತೇಗಿಬೇಕು ಅಂತ ಮಾಡಿದ್ದೀಯಾ ಎಂದೆ. ಏನು ಸದ್ದೇ ಇಲ್ಲ. ಆಗಲೇ ಬೆಂಗಳೂರಿನ ಹವೆ ಬಿಸಿದೆ ನನ್ನ ಮಗಿನಿಗೆ ಅಂತ ಸುಮ್ಮನಾದೆ. ಮತ್ತೆ ಒಂದು ದಿನ ತಿಂಡಿಗೆ ಚಾಪಾತಿ ಮಾಡಿದ್ದೆ. ನನಗೆ ಬೇಡ ಎಂದು ಹೋಟೆಲ್ ಹೋಗಿ ಉಪ್ಪಿಟ್ಟು ತಿಂದಿದ್ದ. ಮುಂದೆ ಒಂದು ದಿನ ಬ್ರಿಗೆಡ್ ರೋಡಿನಲ್ಲಿ ರೋಲ್ಸ್ ತಿನ್ನುತ್ತದ್ದ. ಒಂದು ಸಂಜೆ Coffee Day ನಲ್ಲಿ ಒಂದು ಮಿನಿ ಸ್ಕರ್ಟ್ ಹುಡುಗಿ ಜೊತೆ ಕೈ ಮೇಲೆ ಕೈ ಹಾಕ್ಕೊಂಡು ಬಂದ. ಅವನಿಗೆ ನಾನು ಅಲ್ಲಿದ್ದೇನೆ ಅಂತ ತಿಳಿದಿರಲಿಲ್ಲ. ಮೂಲೇಲಿ ಕುಳಿತುಕೊಂಡು ಅದೇನೋ ಜೋರಾಗಿ ನಗುತ್ತಿದ್ದರು. ಅಕಸ್ಮಾತ್ತಾಗಿ ನನ್ನನ್ನ ನೋಡಿ ಆಸಾಮಿ ನಾಪತ್ತೆ. ಇರಲಿ ಕೇಳಿಯೇ ಬಿಡೋಣ ಅಂತ ಅವಳ ಬಳಿ ಹೋದೆ. ಅವ್ನ ಬಗ್ಗೆ ವಿಚಾರಿಸಿದಾಗ ಅವ್ಳು ಓ ಅವ್ನ "ಪಬ್ ಸುಬ್ಬ" ಅಂದ್ಲು ನನಗ ಆಶ್ಚರ್ಯ ಕಾಫಿ, ಟೀ ನು ಮುಸಿಲ್ಲಿದ ಸುಬ್ಬು ಆಗಲೇ ಸಿಕ್ಕಿದ್ದು Coffee Day ನಲ್ಲಿ ಅದು ಹುಡುಗಿ ಜೊತೆಯಲಿ. ಮತ್ತೆ ಅಂಕಿತ ನಾಮ "ಪಬ್ ಸುಬ್ಬ" . ಏನೋ ಸ್ವಲ್ಪ ಮಾತನಾಡಿಸಿದ ತಪ್ಪಿಗೆ ಅವಳ ಬಿಲ್ಲು ನಾನೇ ಕೊಡಬೇಕಾಯಿತು.

ಒಂದು ಸಂಜೆ ಅಳುತ್ತ ಮನೆಗೆ ಬಂದ ಸುಬ್ಬು. ಕೇಳಿದೆ ಏಕೆ? ಅಳುತ್ತಾ ಇದ್ದೀಯಾ ಅಂತ. ಸವಿತಾ ಈಗ ನನ್ನ ಮಗುವಿನ ತಾಯಿ ಎಂದ. ಯಾರೋ ಆ ಸವಿತಾ ಆ Coffee Day ಹುಡ್ಗಿನೇನೋ ಎಂದು ಕೇಳಿದೆ. ಇಲ್ಲಾ ಅವಳು ನನ್ನ ಗರ್ಲ್ ಫ್ರೆಂಡ್ ಮಾತ್ರ ಅವಳ ಹೆಸರು ಮೇನಕ ಅಂತ ಅಂದ. ಒಳ್ಳೆ ಪಂಚಾಯ್ತಿನೆ ಮಾಡಿದ್ದೀಯಾ ಅಂದೆ. ನಿಜವಾಗ್ಲೂ ಅದಲ್ಲ ಪ್ರಾಬ್ಲಮ್, ಮತ್ತೇನು ಮೇನಕನಿಗು ಶಾಕುಂತಲ ಕರುಣಿಸಿದ್ದೀಯಾ ಏನು? ಎಂದೆ ತಮಾಷೆಗೆ. ಇಲ್ಲಾ ಕಂಪನಿಯವರು ಪಿಂಕ್ ಸ್ಲಿಪ್ ಬೇರೆ ಕೊಡ್ತಾ ಇದ್ದಾರೆ ಅಂತ ಗೋಳಾಡಿದ. ಇನ್ನು ಇವನ ಮನೆಯಲ್ಲಿ ಮದುವೆಗೆ ಬಂದಿರೋ ಇಬ್ಬರು ತಂಗಿಯರು ಬೇರೆ ಇದ್ದಾರೆ. ಇವನ ರಾಮಾಯಣ ಕೇಳಿ ಅಳಬೇಕೋ, ನಗಬೇಕೋ ತಿಳಿಯಲಿಲ್ಲ.

ಧಾರವಾಡ ಪೆದ್ದನ.... ಮೈಸೂರು ಶಾಕ್ ....

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಸುದ್ದಿ ಆಗುವಷ್ಟು ದೊಡ್ಡವನೇನು ನಾನಲ್ಲ ಬಿಡ್ರಿ. ಬಿಡ್ರಿ ಅಂದಿದ್ದಕ್ಕೆ, "ಎಲ್ಲೇ ಹಿಡುಕೊಂಡೆ ನಿನ್ನ ಲೇ" ಅಂತ ಮಾತ್ರ ಕೇಳಬ್ಯಾಡ್ರಿ. ಇದು ನಮ್ಮ ಭಾಷಾ ಸೊಗುಡು. ಸೊಗಡೋ ಅಥವಾ ಸುಡುಗಾಡೋ... ಅರ್ಥ ಆದ್ರ ಸಾಕು ಅಂತೀರೇನು.. ಅದು ಖರೇನ.. ಯಾಕಂದ್ರ ನಾನು ಧಾರವಾಡದವ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬಂದಿದ್ದ. ಅವರ ಭಾಷೆ ನೋಡಿ, ಅಂದ್ರ ಕೇಳಿ ನನಗ ಅಲ್ಲೇ ಹೊಂದಾಣಿಕಿ ಆಗೋದ ಸ್ವಲ್ಪ ತ್ರಾಸ(ಕಷ್ಟ) ಆತು. ಯಾಕಂದ್ರ ನಾವು ಯಾವುದ ವಿಷ್ಯ ಇರಲಿ ಬಹಳ ಎಳಯನ್ಗಿಲ್ಲ. ಆದ್ರ ಮೈಸೂರಿನವರು ರಬ್ಬರ್ ಏಳದ ಹಂಗ ಏಳಿತಾರ ರೀ...ನಾವು ಆರಾಮ ಇದ್ದೀಯೇನಲೇ ಅಂತ, ನನ್ನ ಪ್ರೀತಿ 'ರಾಮ'ನ ಹೆಸರನ್ನು ಸೇರಿಸಿಕೊಂಡು ಕ್ಷೇಮ ಸಮಾಚಾರ ಕೇಳಿದ್ರ, ಇವರು "ಏನ ಸರ್ ಚೆನ್ನಾಗಿದ್ದೀರಾ?" ಎಂದು ಕೇಳ್ತಾರ ಅದು ಪೂರ್ತಿ ಎಳ್ದು. ಎಳ್ದು ಅಂದ್ರ ತಮ್ಮ ಕಡೆ ಜಗ್ಗಿ ಅಲ್ಲ ಮತ್ತ. ಭಾಷೆ ಮಾತ್ರ ಎಳ್ದು ಅಂತ ಹೇಳಿದೆ.. ತಪ್ಪು ತಿಳ್ಕೋಬ್ಯಾಡ್ರಿ.

ನಮ್ಮ ಭಾಷಾ ಅಂದ್ರ ಏನು? ಅಂತ ತಿಳ್ದಿರಿ. ಎಲ್ಲಾದುಕ್ಕೂ ತಪ್ಪದ "ರೀ" ಹಚ್ಛ್ತೇವ್ರಿ. ರೀ ಬರ್ರೀ... ಎರಡು ಬಾರಿ ರೀ ಅಂದವ್ಯಲ್ಲ ಹಂಗ. ಇಲ್ಲಿ ಅವರು.. ಇಲ್ಲಿ ಬನ್ನಿ...ಕುಳಿತುಕೊಳ್ಳಿ.. ಹಿಂಗ. ಸ್ವಲ್ಪ ಮರ್ಯಾದಿ ಕಡಿಮೀನ...ಮತ್ತ ಸಂಬಂದಕ್ಕೆ ಭಾಳ ಒತ್ತ ಕೊಡ್ತೆವ್ರೀ.. ಬೇಕಂದ್ರ ಯಾರಾದರೂ ಚಡ್ಡಿ ದೊಸ್ತಗೆ ಕೆಳ್ರಿ...( ಆ ***^^&$ ಮಗನ ಈ ##@$^^ ಮಗನ ಎನ್ನದೇ ಮಾತನಾಡೂವುದಿಲ್ಲ). ಅದ ಜಗಳ ಮಾಡುಬೇಕಾರ ಈ ಸಂಬಂದ ಬಂತೋ...ಅದರ ಕಥೀನ ಬ್ಯಾರೆ ತಗಿರಿ....ತಗಿರಿ ಅಂದ್ರ ಚಿತ್ರ ಅಂತ ತಿಳ್ಕೊಂಡಿರಿ ಮತ್ತ. ಕಥೆನೆ ಬೇರೆ ಬಿಡಿ ಅಂತಿರಲ್ಲ ಅದ.

ನಮ್ಮ ಊರನ್ಯಾಗ ಪೇಂಟರ್ ಗೋಳು ಭಾಳ ಇದ್ದಾರ. ಅದೇನು ದೊಡ್ಡ ಮಹಾ...ನಮ್ಮ ಉರಿನ್ಯಾಗು, ಇದ್ದಾರ ಅಂತೀರೇನು....ಆದ್ರ ಒಂದು ಫರ್ಕ್ ಏನು ಅಂದ್ರ....ಎಲ್ಲರೂ ಕೆಂಪ್ ಪೈಂಟ್ ಹೊಡಿತಾರ...ಮತ್ತ ಡಿಸೈನ್ ಸಹಿತವಾಗಿ.... ಅಂದ್ರ ಎಲಿ,ಅಡಿಕಿ,ಹೊಗೆ ಸೊಪ್ಪಿನಿಂದ...ಆಮೇಲೆ ನಮಗ ಘಳಿಗೊಮ್ಮೆ ಚಹಾ ಬೇಕ.. ಬೇಕ ನೋಡ್ರೀ ಮತ್ತ....

ನಾನು ಎಲ್ಲಿ ಇದ್ದೆ ಮೈಸೂರುನ್ಯಾಗ ಅಲ್ಲ ...ಮೊದ್ಲ ಹೋದ ಮ್ಯಾಲೆ ಬೆಟ್ಟಿಯಾಗಿದ್ದು ಗೌಡ್ರನ್ನ ಬಾಳ ಒಳ್ಳೆ ಮನ್ಶ್ಯರೀ, ಆದ್ರ ಅವನ್ದು ನಂದು ಸ್ವಲ್ಪ ಹೊಂದಾಣಿಕಿ ಆಗ್ಲಿಲ್ಲ.ತಪ್ಪು ತಿಳ್ಕೋಬ್ಯಾಡ್ರಿ ಮತ್ತ. ನಮ್ಮ ಭಾಷಾ ಅವ್ರಿಗೆ ಛಲೋ ಅನ್ನಿಸಲಿಲ್ಲ. ನಾವು ಎಲ್ಲಾನು Short Cut ನ್ಯಾಗ ಮತ್ತು Fast ಆಗಿ ಮಾತಾಡ್ತೆವಿ. ಅದು ಅವ್ರಿಗೆ ಅರ್ಥ ಆಗ್ಲಿಲ್ಲ ಅಂತ ಅನ್ಸ್ಥದ. ಗೌಡ್ರನ್ನ ಬಾಳ(ಬಾಲ) ಒಳ್ಳೆ ಮನ್ಶ್ಯರೀ(ಮುಷ್ಯ) ಅಂತ ಅರ್ಥ ಮಾಡ್ಕೋ೦ಡಿರಬೇಕು ಪಾಪ. ಅದಕ್ಕ ನನ್ನ ಮಹಿಷಾಸುರನಂಗ ಕಾಣ್ತಿದ್ರು. ಅವ್ರ ಭಾಷೆ ನನಗ ಸ್ವಲ್ಪ ಕಿರ್ಕಿರೀನ ಇತ್ತು. ಅವ್ರು ಯಾವಾಗಲು "ಹಿಂಸೆ" ಅನ್ನೋ ಪದ ಬಳಸ್ತಿದ್ರು. ನಮ್ ಕಡೆ ಹಿಂಸೆ ಅಂದ್ರ ಬಹಳ ಅಪಾರ್ಥವಾಗಿ ತಿಳಿದ್ಕೊಳ್ತಿವಿ.(ಪ್ರಾಣಿ ಹಿಂಸೆ ಅನ್ನೋ ತರಾ...)

ನಾನು ಒಂದು ದಿನ ಏನ್ರೀ ಗೌಡ್ರೇ ನಾಷ್ಟಾ ಆತ್ರಿ ಎಂದು ಕೇಳಿದೆ. ಎಲ್ಲಿ ಏನು ನಷ್ಟ ಆಯಿತು ಎಂದು ಘಾಬರಿ ಆಗಿ ಕೇಳಿಕೊಂಡು ಬಂದುಬಿಟ್ಟರು ಪಾಪ. ನಾಷ್ಟಾ ಅಂದ್ರ ತಿಂಡಿ ರೀ ಸರ್ ಎಂದು ಹೇಳಿದ ಮೇಲೆ ಆಯಿತು ಎಂದು ಹೇಳಿ ಹೋದ್ರು. ಅವರ ಭಾಷಾ ನಾವು ಅರ್ಥ ಮಾಡ್ಕೋತಿದ್ದೀವಿ, ಅದ್ರ ಆವ್ರು ನಮ್ಮ ಭಾಷಾ ಅಪಾರ್ಥ ಮಾಡ್ಕೋತಿದ್ರು.

ಹಿಂಗ ೬ ತಿಂಗಳ ತ್ರಾಸ ಅಲ್ಲ.... ಹಿಂಸೆ(ಕಷ್ಟ) ಅನುಭವಿಸಿ ಕೊನೆಗೆ ಬಳ್ಳಾರಿಗೆ ವರ್ಗಾವಣೆ ಆಯಿತು.

ಅದರಲ್ಲೋ ಒಂಥರಾ ಮಜಾನೇ ಇತ್ತನ್ನಿ. ಅವರದ್ದು ಒಂಥರಾ ಮೈಸೂರು ಪಾಕ್ (ಸ್ವಲ್ಪ ದಿನ ಮೈಸೂರು ಶಾಕ್ ಅನ್ನಿಸಿದರೂ ....) ಇದ್ದಂಗ ಭಾಷಾ... ಆದ್ರೆ ನಮ್ದು ಧಾರವಾಡ ಪೇಡ. ಎರಡು ಚಲೊನ ಅಲ್ಲೇನೆ ..... ಆದ್ರ ಈ ಧಾರವಾಡ ಪೆದ್ದನಿಗೆ ಅರ್ಥ ಆಗಬೇಕಲ್ಲ.