Sunday, September 13, 2009

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ...

ನಿನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ Grand Finale ಕಾರ್ಯಕ್ರಮ ಪ್ರಸಾರವಾಗುತಿತ್ತು. ಈ ಕಾರ್ಯಕ್ರಮವನ್ನು ನಾನು ಶುರು ಆದಾಗಿನಿಂದ ನೋಡುತ್ತಾ ಬಂದಿದ್ದೇನೆ. ಆ ಚಿಕ್ಕ ಪುಟಾಣಿಗಳನ್ನೂ ನೋಡಿದಾಗ, ನನಗೆ ತುಂಬಾ ಖುಷಿಯಾಗುತ್ತಿತ್ತು. ಅದಕ್ಕಿಂತಲೂ ಮತ್ತೊಂದು ವಿಶೇಷ ಎಂದರೆ ಜನಪ್ರಿಯ ಸಂಗೀತ ದಿಗ್ಗಜ ಮಹಾನ ಸಂಗೀತ ನಿರ್ದೇಶಕ "ಹಂಸಲೇಖ" ಮಹಾ ಗುರು ಆಗಿದ್ದು. ಅವರು ನನಗೆ ತುಂಬಾ ಇಷ್ಟವಾಗುವ ಮ್ಯೂಸಿಕ್ ಕಂಪೋಸರ್. ಮತ್ತೆ ನನಗೆ ಮನಸ್ಸಿಗೆ ಹಿಡಿಸಿದ ಒಂದು ವಿಷಯ ಎಂದರೆ ಅವರ ನಗು. ಅವರ ನಗು ನೋಡಿದಾಗ ಹೂವು ಅರಳಿದ ಹಾಗೆ ಅನ್ನಿಸುತಿತ್ತು. ನಿಜವಾಗಿಯೂ ಅವರ ಹಾಡುಗಳು ತುಂಬ ಸುಮಧುರವಾಗಿವೆ....

1. ಹುಟ್ಟೊದ್ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ
2. ಈ ಭೂಮಿ ಬಣ್ಣದ ಬುಗುರಿ
3. ಓ ಗುಲಾಬಿಯೇ! ಓಹೋ ಗುಲಾಬಿಯೇ ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ? ಓಹೋ!
4. ಯಾಹು ಯಾಹೂ!! ಇಂದು ಬಾನಿಗೆಲ್ಲ ಹಬ್ಬ

ಮತ್ತೆ ಪ್ರೇಮಲೋಕದ ಹಾಡುಗಳು ...ವರ್ಣಿಸೋದಕ್ಕೆ ಆಗುವದಿಲ್ಲ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ ಎಂಬುದು ಸಂತೋಷದ ವಿಷಯ.

ಅವರು ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಹಲವಾರು.

ಅವರಿಗೆ ನನ್ನದೊಂದು ಸಾಷ್ಟಾಂಗ ನಮಸ್ಕಾರ.

ಚಿತ್ರ ಕೃಪೆ: ಅಂತರ್ಜಾಲ.

2 comments:

  1. ಆತ್ಮೀಯ ಗೋಪಾಲರೆ,

    ಹಂಸಲೇಖ-ರವಿಚಂದ್ರನ್ ಜೋಡಿಯಲ್ಲಿ ದಶಕಗಳ ಕಾಲ ಮೂಡಿ ಬಂದ ಸಂಗೀತ,
    ಕನ್ನಡ ಚಿತ್ರಗಳಿಗೆ ಆಡಿಯೋ ಕ್ಯಾಸೆಟ್ ಗಳಲ್ಲಿಯೂ ಒಂದು ಮಾರುಕಟ್ಟೆ ಇದೆ ಅಂತ ತೋರಿಸಿ ಕೊಟ್ಟದ್ದು ಈಗ ಇತಿಹಾಸ.

    ಅಣ್ಣಯ್ಯ ಚಿತ್ರದ "ಅಮ್ಮಾ ಊರೆನೇ ಅಂದರೂ ನೀ ನನ್ನಾ ದೇವರು!!!"
    ಕಲಾವಿದ ದ "ಪ್ರೇಮಾ ಪ್ರೇಮಾ!!"
    ;
    ;
    ;
    ಹಾಗೆ ನೋಡಿದ್ರೆ, ಇವರಿಬ್ಬರ ಜೋಡಿಯ ಯಾವುದೇ ಹಾಡು ನನಗೆ ಇಷ್ಟ.

    ReplyDelete
  2. ತುಂಬಾ ಧನ್ಯವಾದಗಳು. ಅಣ್ಣಯ್ಯ ಚಿತ್ರದ ಹಾಡು ನನಗು ತುಂಬಾ ಇಷ್ಟ. ನೆನಪಿಸಿದಕ್ಕೆ ತುಂಬಾ ಧನ್ಯವಾದಗಳು.

    ReplyDelete