Wednesday, September 23, 2009

ತರ್ಲೆ ಮಂಜ(ಗ)ನ ಮರನ(ಣ) ಪತ್ರ....

ನಮ್ಮ ಶಾಲೆಯಲ್ಲಿ ಗಿರೀಶನೆಂಬ ತೊದಲು ಮಾತನಾಡುವ ಸಹಪಾಠಿ ಇದ್ದ. ಅವನಿಗೆ ನಾವೆಲ್ಲರೂ "ತೊತಲೇ" ಎಂದೇ ಕರೆಯುತ್ತಿದ್ದೆವು. ಈ ಹೆಸರು ಅವನಿಗೆ ಬಳುವಳಿಯಾಗಿ ಬಂದಿದ್ದು ಅವರ ಮನೆಯವರಿಂದಲೇ. ಇವ ತುಂಬಾ ಜಿಪುಣ(ಜುಗ್ಗ) ಒಂದು ನಯಾ ಪೈಸೇನು ಯಾರಿಗೂ ಕೊಡುತ್ತಿರಲಿಲ್ಲ. ಅದಕ್ಕೆ ಕೆಲವರು ಇವನಿಗೆ "ಜುಗ್ಗ ತೋತಲ್ಯಾ" ಎಂದು ಕರೆಯುವದು ಉಂಟು. ಅವರ ಮನೆಯವರು (ಅಪ್ಪ, ತಾತ) ಎಲ್ಲರು ತುಂಬಾ ಜಿಪುಣರು. ಮಾತನಾಡಿಸಿದರೆ ಮೈಮೇಲೆ ಬರುವುದು(ಎಲ್ಲಿ ದುಡ್ಡು ಕಿಳುತ್ತಾರೆ ಜನ ಎಂದು) ಎಂದು ಮಾತು ಸ್ವಲ್ಪ ಕಡಿಮೇನೆ. ಆದರೆ ಗಿರೀಶ ಮಾತ್ರ ತೊದಲು ಮಾತಿನ ಬಂಟ. ಅವನು ಚಿಕ್ಕವನಿದ್ದಾಗ ಅವನ ತಾತನ(ಅಜ್ಜ) ಹತ್ತಿರ ಅಡಿಕೆ ಕೇಳಿ ಪಡೆದು ತಿನ್ನುತ್ತಿದ್ದನಾದ್ದರಿಂದ ಇವನ ಮಾತು ತೊದಲುತಿತ್ತು.

ಒಂದು ದಿವಸ ಶಾಲೆಯಲ್ಲಿ ಕಾರ್ಯಕ್ರಮ ಏರ್ಪಾಟು ಮಾಡಿದ್ದೆವು. ಅದು ಕುರುಡು ಮಕ್ಕಳಿಗೆ ಹಣ ಸಹಾಯ ಮಾಡಲು ಮಾಡಿರುವ ಕಾರ್ಯಕ್ರಮ. ಶಾಲೆಯಲ್ಲಿ ಎಲ್ಲರು ಹಣ ನೀಡಿದ್ದರು, ಆದರೆ ಈ ಗಿರೀಶ ಮಾತ್ರ ಏನು ಕೊಟ್ಟಿರಲಿಲ್ಲ. ಅದಕ್ಕೆ ನಮ್ಮ ಮಂಜ ಏನಾದರು ಮಾಡಿ ಇವನ ಹತ್ತಿರ ಹಣ ಕೀಳ ಬೇಕು ಎಂದು ತುಂಬಾ ಪ್ರಯತ್ನ ಪಟ್ಟ. ಆದರೆ ಏನು ಸಹಾಯವಾಗಲಿಲ್ಲ.

ಒಂದು ದಿವಸ ನನ್ನ ಬಳಿ ಬಂದ ಮಂಜ "ಲೇ ಇವತ್ತು ಗ್ಯಾರಂಟೀ ಗಿರೀಶ ಹತ್ತಿರ ದುಡ್ಡು ವಸೂಲಿ ಮಾಡುತ್ತೇನೆ" ಎಂದ. ನೀನು ನನ್ನ ಜೊತಿ ಬಾ ಎಂದ. ನಾನು ಮತ್ತೆ ಮಂಜ ಗಿರೀಶನ ಮನೆಗೆ ಹೋದೆವು. ನಾನು ಮತ್ತು ಮಂಜ ಮನೆಗೆ ಬಂದು ಘ೦ಟೆ ಆದರು ನೀರು ಸಹ ಬೇಕು ಎಂದು ಕೇಳಿರಲಿಲ್ಲ ಗಿರೀಶ. ನಾನು ಮತ್ತೆ ಮಂಜ ದುಡ್ಡಿಗೆ ಪೀಡಿಸುತ್ತಲೇ ಇದ್ದೆವು. ಮತ್ತೆ ಅವನಿಗೆ ಕೆರಳಿಸಿ ನಿನಗೆ ನಿಜವಾಗಿಯು ದುಡ್ಡು ಕೊಡಲು ಇಷ್ಟ ಇಲ್ಲ ಎಂದರೆ ಈ ಸರ್ಟಿಫಿಕೇಟ್ ನೀನು ಮಾಡಿಸು ಸಾಕು ಎಂದ. ಅದೇನು ದೊಡ್ಡ ಮಹಾ ವಿಷಯ ನಾನು ಮಾಡಿಸುತ್ತೇನೆ ಎಂದ. ಮಾಡಿಸಲಿಲ್ಲ ಅಂದರೆ ನೀನು ನನಗೆ 300 ರೂಪಾಯಿ ಕೊಡಬೇಕು. ಇಲ್ಲದಿದ್ದರೆ ನಾನು ನಿನಗೆ ಕೊಡುತ್ತೇನೆ ಎಂದ ಮಂಜ. ನೀನು ತೋರಿಸು ಎಂದ ಗಿರೀಶ. ಆನಂತರ ಇಬ್ಬರು ಒಪ್ಪಂದಕ್ಕೆ ಒಪ್ಪಿಕೊಂಡರು. ಮಂಜ ಅದನ್ನು ತೋರಿಸಲೇ ಇಲ್ಲ. ಅವನು ಗಿರೀಶನ ತಾತ ಬರುವ ಸಮಯ ಕಾಯುತ್ತಿದ್ದ. ಗಿರೀಶನ ತಾತ ಬಂದೊಡನೆಯೇ ತೆಗೆದು ಕೋ ಮಾಡಿಸು ಈ ಸರ್ಟಿಫಿಕೇಟ್ ನಿನಗೆ ನಿಜವಾಗಿಯು ಸಾಮರ್ಥ್ಯ ಇದ್ದರೆ ಎಂದ. ಅದೇನು ಮಹಾ ದುಡ್ಡು ಕೊಡದೆ ಹೋದರೆ ಸಾಕು ಏನು ಬೇಕಾದರು ಮಾಡಿಸುವೆ ಎಂದು ಗಿರೀಶ ಮಂಜನ ಕೈನಲ್ಲಿ ಇರುವ ಸರ್ಟಿಫಿಕೇಟ್ ತೆಗೆದು ಕೊಂಡು ನೋಡ ಹತ್ತಿದ. ಅದು ಮಂಜನ ತಾತನ ಮರಣ ಪತ್ರ ಆಗಿತ್ತು. ಗಿರೀಶನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಅಷ್ಟರಲ್ಲೇ ಗಿರೀಶನ ತಾತ ಬಂದು ಏನು ಅದು ಎಂದಾಗ. ಅದು.. ಅದು.. ಎಂದು ತೊದಲುತ್ತ ಗಿರೀಶ ಮರನ ಪತ್ರ ಎಂದ. ಅವರ ತಾತನಿಗೆ ತಿಳಿಯಲಿಲ್ಲ. ಆಗ ಮಂಜ ಅವನನ್ನು ತಡೆದು ಇದು ಮರಗಳನ್ನು ಕಡೆಯುವದನ್ನು ತಡೆಯುವದಕ್ಕಾಗಿ ಮಾಡಿರುವ ಪತ್ರ ಎಂದು ಸುಧಾರಿಸಿದ. ಗಿರೀಶ ಮೊದಲೇ ಪ್ರಾಮಿಸ್ ಮಾಡಿದ್ದರಿಂದ ಸುಮ್ಮನೆ ದೊಡ್ದು ಕೊಟ್ಟ.

ಮತ್ತೆ ಅನಂತರ ನಮ್ಮ ಮಂಜ ಸುಮ್ಮನಿರದೆ ಗಿರೀಶನನ್ನು ಅವನ ತಾತನ ಮುಂದೆ ತುಂಬಾ ಹೊಗಳಿದ. ತುಂಬಾ ಚೆನ್ನಾಗಿ ಹಾಡುತ್ತಾನೆ ತಾತ ನಿಮ್ಮ ಗಿರೀಶ ಅವನದು ಒಂದು ಸಂಗೀತ ಕಾರ್ಯಕ್ರಮ ಇದೆ. ಅವನದು ಕೋಗಿಲೆ ಕಂಠ ಎಂದ. ನಾನು ಒಳಗೊಳಗೇ ನಗುತ್ತಿದ್ದೆ. ನೀವು ಬನ್ನಿ ಎಂದು ಆಹ್ವಾನ ಕೊಟ್ಟ. ಅವನ ತಾತನಿಗು ಗೊತ್ತು ಇವ ತೊತಲೇ ಅಂತ ಅದಕ್ಕೆ ಅವರ ತಾತ ಹಾಗಾ ಆದರು ನನಗೆ ತುಂಬಾ ಕೆಲಸ ಇವೆ ಅದಕ್ಕೆ ಬರಲು ಆಗುವದಿಲ್ಲ ಎಂದ. ಇವನ ಮೊಮ್ಮಗನ ಹೊಗಳಿಕೆ ಇಂದ ನಮಗೆ ಕಾಫಿ ಲಭಿಸಿತು.

ಅನಂತರ ನನಗೆ ಮತ್ತೆ ಮಂಜನಿಗೆ ಗಿರೀಶ ಕಾರ್ಯಕ್ರಮದಲ್ಲಿ ಹಾಡಲು ಅವಕಾಶ ಕೊಡು ಎಂದು ಪೀಡಿಸಲು ಆರಂಬಿಸಿದ. ನಾವು ಎಷ್ಟೇ ಹೇಳಿದರು ಕೇಳಲಿಲ್ಲ. ನಾನು ಹಾಡೇ ಹಾಡುತ್ತೇನೆ ಇಲ್ಲ ಅಂದರೆ ನನ್ನ ದುಡ್ಡು ನನಗೆ ವಾಪಸ ಕೊಡು ಎಂದು ಪೀಡಿಸ ಹತ್ತಿದ. ಕೊನೆಗೆ ಬೇರೆ ದಾರಿ ಇಲ್ಲದೆ ಒಪ್ಪಿಕೊಂಡೆವು.

ಕಾರ್ಯಕ್ರಮ ಶುರು ಆಯಿತು. ಗಿರೀಶ ತನ್ನ ಹೊಸ ಡ್ರೆಸ್ ಹಾಕಿಕೊಂಡು ಸ್ಟೇಜ್ ಮೇಲೆ ಬಂದು ನಿಂತ. ಮತ್ತೆ ಮೈಕ್ ಹಿಡಿದು ಶುರು ಮಾಡಿದ.

"ಬಿಸಿಲಾದೆಲೆ ಏನು ಮಲೆ ಆದರೇನು.." ಎಂದು ಹಾಡಲು ಶುರು ಮಾಡಿದ. ಎಲ್ಲರು ನಕ್ಕಿದ್ದೆ ನಕ್ಕಿದ್ದು.

ಒಂದಕ್ಕೆ ಮುಕ್ತಾಯವಗಿದ್ದರೆ ಸರಿ ಇತ್ತು.

"ಬಾಲು ಬೇಲಕಾಯಿತು.. "

ಹೀಗೆ ಇವನ ಹಾಡುಗಲು(ಳು) ಪೂರ್ತಿ ನಗೆಯ ಅಲೆ ಎಬ್ಬಿಸಿಬಿಟ್ಟಿದ್ದವು. ಕಾರ್ಯಕ್ರಮ ಮುಗಿದರು ತುಂಬಾ ದಿನಗಳವರೆಗೆ ನಮ್ಮ ಗಿರೀಶನ ಹಾಡುಗಳನ್ನು ತುಂಬಾ ಜನರು ಮೆಲಕು ಹಾಕುತ್ತಿದ್ದರು.

4 comments:

  1. ಗೋಪಾಲ್, ತೊತಲುವಿಕೆ ಬಹುಶಃ ಎಲ್ಲ ಮಕ್ಕಳಲ್ಲೂ ಇರುತ್ತೆ, ಬೆಳೆದಂತೆ ಇದು ಹಸನು ಮತ್ತು ನೈಜತೆಗೆ ತಿರುಗುತ್ತೆ, ಈ ಮಾರ್ಪಾಡಿನ ಅವಧಿ ಕಡಿಮೆಯಿದ್ದಷ್ಟು ಒಳ್ಳೆಯದು..ಅಸಾಮಾನ್ಯ ಆದರೆ ಅಂತಹವರನ್ನು ತೊತಲ ...ಅಂತೀವಿ,,ನಿಮ್ಮ ಮಂಜನಹಾಗೆ..
    ನಮ್ಮ ಸ್ನೇಹಿತನೊಬ್ಬ ಇದ್ದ ಅವನಿಗೆ ಡ..ಬರುತ್ತಿರಲಿಲ್ಲ ಯ ಅಂತಿದ್ದ..
    ಅದನ್ನ ಹೊಡೆದು ಪುಡಿ-ಪುಡಿ ಮಾಡು ಅಂದರೆ
    ಹೊಯೆದು ಪುಯಿ-ಪುಯಿ ಮಾಯು...ಅಂತಿದ್ದ
    ದಿನ ನಿತ್ಯದಲ್ಲಿನ ಹಾಸ್ಯ ಚನ್ನಾಗಿ ಮೂಡಿ ಬರ್ತಾಯಿದೆ...ಅಭಿನಂದನೆ

    ReplyDelete
  2. ಗೊಪಲಾರೆ,
    ನಿಮ್ಮ ಗೆಳಯ ಗಿರೀಶ ಹಠ ಮಾಡಿ ಹಾಡು ಹೇಳಿದ್ದೂ..ನಷ್ಟ ಹಾಗ್ಲಿಲ್ಲ ಅಲ್ಲಾ...
    ಕೆಲ್ವಬ್ರು ತೊತಲೇ ಗಳಿಗೆ ತೊತಲೇ ಅಂತ ಕರೆದ್ರೆ ದೊಡ್ಡ ಜಗಳಾನೆ ಮಾಡ್ತಾರೆ, ಅಂದ್ರೆ ಗಿರೀಶ್ ರವರು, ವೃತಾ ಕೋಪ ಮಾಡ್ಕೊಳಲ್ಲಾ ಅನ್ಸುತ್ತೇ,
    ಚನ್ನಾಗಿದೆ, ಅಭಿನಂದನೆಗಳು.

    ReplyDelete
  3. ಧನ್ಯವಾದಗಳು ಲೋದ್ಯಾಶಿಯವರೇ.

    ReplyDelete