Thursday, September 24, 2009

ತರ್ಲೆ ಮಂಜ(ಗ)ನ ಓದುವ ಹವ್ಯಾಸ ....

ಮೊನ್ನೆ ನಾನು ಮತ್ತು ಮಂಜ ಸುಮ್ಮನೆ ಪೇಟೆಯಲ್ಲಿ ಸುತ್ತುತ್ತಿದ್ದಾಗ ಮಂಜ ಒಮ್ಮೆಲೇ "ಅವರಪ್ಪನ" ಎಂದ. ಅದು ಯಾರಿಗೆ ಅಂದ ಎಂದು ನಾನು ನೋಡಿದಾಗ ಅದು "ಆವಾರಾಪನ" ಎಂಬ ಚಲನ ಚಿತ್ರದ ಪೋಸ್ಟರ್ ಆಗಿತ್ತು. ಹೀಗೆ ಬೇರೆ ಬೇರೆ ಭಾಷೆಯ ಬೋರ್ಡ್ ಮತ್ತು ಚಿತ್ರಗಳನ್ನೂ ಕೆಟ್ಟದಾಗಿ ಓದುವ ಹವ್ಯಾಸ ನಮ್ಮ ಮಂಜನಿಗೆ.

ಹೀಗೆ ಅವ ಯಾವುದಾದರು tolet ಎಂಬ ನೋಡಿದ ಅಂದರೆ ಅನ್ನುವದು toilet ಅಂತ. ಮತ್ತೆ ಒಂದು "ಕಸ್ತೂರಿ ಕಿರಾಣಿ" ಅಂಗಡಿ ಇತ್ತು. ಅವ ಎಲ್ಲ ರೇಟ್ ಜ್ಯಾಸ್ತಿ ಇರುತಿತ್ತು ಅದಕ್ಕೆ ಇವ ಅವನಿಗೆ ಹಜಾಮರ ಅಂಗಡಿ ಅಥವಾ ಕಷ್ಟ ಮಾಡಿಸಿ ಕೊಳ್ಳಲಿಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿತ್ತಿದ್ದ. ಅದು ಏಕೆ ಎಂದು ಕೇಳಿದಾಗ ಕಸ್ತೂರಿನ (ಕಷ್ಟರಿ ಮಾಡಿದ್ದ ಕಷ್ಟ ಎಂದರೆ ಹಜಾಮತಿ ಎಂಬ ಅರ್ಥ) ಎಂದು ಮಾಡಿದ್ದ.

ಮೆತ್ತೆ ಒಂದು ದಿವಸ "ಹೆತ ಹೆತ ಹೋಗಯ್ಯ" ಎಂದು ಓದಿ ಬಿಟ್ಟ. ಅದು ಹೊತೆ ಹೊತೆ ಹೋಗಯಾ ಎಂಬ ಹಿಂದಿ ಧಾರವಾಹಿ ಇತ್ತು.

ಮತ್ತೆ ಒಂದು ದಿವಸ ಹಿಂದಿ ಹುಡುಗಿ ಚೇತನ ನಮ್ಮ ಶಾಲೆಗೆ ಸೇರಿಕೊಂಡಿದ್ದಳು. ಅವಳ ಹಿಂದೆ ತುಂಬಾ ಹುಡುಗರು ಬಿದಿದ್ದರು. ಅವಳು ಮಾತ್ರ ರಾಜೀವನನ್ನು ಬಿಟ್ಟು ಬೇರೆ ಯಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ರಾಜೀವನಿಗೆ ಹಿಂದಿ ಬರುತ್ತಿರಲಿಲ್ಲ. ನಮ್ಮ ಮಂಜನಿಗೆ ಹಿಂದಿ ಚೆನ್ನಾಗಿ ಬರುತಿತ್ತು. ಅವಳು ಬರೆದು ಕೊಡುವ ಹಿಂದಿ ಪ್ರೇಮ ಪತ್ರ ನಮ್ಮ ಮಂಜ ಓದಿ ರಾಜೀವನಿಗೆ ಹೇಳುತ್ತಿದ್ದ.

ಒಂದು ದಿವಸ ಅವಳ ಪ್ರೇಂ ಪತ್ರ ಬಂದಿತ್ತು. ಅವಳು ಹೀಗೆ ಬರೆದಿದ್ದಳು.

ಮೈ ತುಮ್ಸೆ ಬಹುತ್ ಪ್ಯಾರ ಕರತಿ ಹು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಮಂಜ ಓದಿ ಹೇಳಿದ. ಹಾಲಾ ಕಿ ಹಮಾರಾ ಜಾತ ಅಲಗ್ ಅಲಗ್ ಹೈ ಫಿರ್ ಭಿ ತುಮ್ಸೆ ಶಾದಿ ಕರುಂಗಿ. ಎಂದರೆ ನೀನು ನಾಳೆ ಹಳದಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಮತ್ತೆ ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಮತ್ತೆ ಮೀಸೆ ಬೋಳಿಸಿ, ಕಿವಿಯಲ್ಲಿ ರಿಂಗ್ ಹಾಕಿಕೊಂಡು ಬಂದರೆ ಮಾತ್ರ ಮದುವೆ ಆಗುತ್ತೇನೆ ಎಂದು ಮಂಜ ಹೇಳಿದ.

ಹಾಗೆ ನಮ್ಮ ರಾಜೀವ ಮರುದಿವಸ ಅದೇ ವೇಷದಲ್ಲಿ ಶಾಲೆಗೆ ಹಾಜರ ಆಗಿದ್ದ. ಅದನ್ನು ನೋಡಿ ನಾವಲ್ಲದೆ ಚೇತನನು ಬಿದ್ದು ಬಿದ್ದು ನಕ್ಕಿದ್ದಳು.

ಆನಂತರ ನಮ್ಮ ಮಂಜನ ಜೊತೆ ದೊಡ್ಡ ಜಗಳ ಮಾಡಿದ್ದ ರಾಜೀವ. ಅನಂತರ ನಮ್ಮ ರಾಜೀವ ಹಿಂದಿ ಕಲಿಯುವ ಪುಸ್ತಕ ತಂದು ಒಂದೇ ತಿಂಗಳಲ್ಲಿ ಹಿಂದಿ ಕಲೆತಿದ್ದ.

ಮಂಜನಿಗೆ ಹಿಂದಿ ಹೇಗೆ ಬರುತಿತ್ತು ಎಂದರೆ ಮಂಜ ಒಂದು ವರ್ಷ ಮಧ್ಯಪ್ರದೇಶದಲ್ಲಿ ಕಲೆತಿದ್ದ. ಮಧ್ಯಪ್ರದೇಶದಲ್ಲಿ ಮಂಜ ಇದ್ದಾಗ, ಪರೀಕ್ಷೆ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಪ್ರಬಂಧ ಕೇಳಿಯೇ ಕೇಳುತ್ತಿದ್ದರು. ಮಂಜ ಎಲ್ಲ ಪ್ರಬಂಧ ಓದಿ ಕೊಂಡು ಹೋಗಿದ್ದ. ಆದರೆ ಪರೀಕ್ಷೆಯಲ್ಲಿ ಅವನು ಓದಿದ ಪ್ರಬಂಧ ಬಿಟ್ಟು ಬೇರೆ ಗಾಯ( गाय ಅಂದರೆ ಆಕಳು) ಬಗ್ಗೆ ಪುಟಕ್ಕೆ ಮೀರದಂತೆ ಬರೆಯಿರಿ ಎಂದು ಬಂದಿತ್ತು. ಮಂಜನಿಗೆ ಎಷ್ಟೇ ಯೋಚಿಸಿದರು ಏನು ಹೋಳಿಲೆ ಇಲ್ಲ. ಆಗ ಹೀಗೆ ಬರೆದ ನಮ್ಮ ತರ್ಲೆ ಮಂಜ....

गाय मेरा माता है - ಗಾಯ್ ಮೇರಾ ಮಾತಾ ಹೈ (ಆಕಳು ನನ್ನ ಮಾತೆ)
आगे कुछ नहीं आता है - ಆಗೇ ಕುಚ್ ನಹಿ ಆತಾ ಹೈ (ಮುಂದೆ ಬೇರೇನೂ ಗೊತ್ತಿಲ್ಲ)

ಅದನ್ನು ನೋಡಿದ ನಮ್ಮ ಮಾಸ್ತರಿಗೆ ಕೋಪ ಬಂದಿತ್ತು. ಅವರು ಹೀಗೆ ಬರೆದರು...

भैस मेरा बाप है - ಭೈಸ್ ಮೇರಾ ಬಾಪ್ ಹೈ (ಕೋಣ ನನ್ನ ಅಪ್ಪ)
अंक देना पाप है - ಅಂಕ ದೇನಾ ಪಾಪ ಹೈ (ಅಂಕ ಕೊಡುವದು ತಪ್ಪು)

ಮತ್ತೆ ಒಂದು ದಿವಸ ಪಕ್ಕದ ಮನೆ ನಾರಾಯಣ ಮೂರ್ತಿಗಳಿಗೆ ಒಂದು ಪತ್ರ ಬಂದಿತ್ತು. ಅದನ್ನು ನಮ್ಮ ಮಂಜ ತೆಗೆದುಕೊಂಡು ಹೋಗಿ ಅವರ ಮನೆಗೆ ಕೊಟ್ಟು ನೋಡಿ ಸರ್ ರಮಾ ಎನ್ನುವವರ ಪತ್ರ ಬಂದಿದೆ ಎಂದು ಅವರ ಮಡದಿಯ ಮುಂದೆ ಹೇಳಿ ಕೊಟ್ಟು ಬಿಟ್ಟ. ಎರಡು ದಿನ ಅವರ ಮನೆಯಲ್ಲಿ ರಸ್ತೆ ಬೀದಿಗೆ ಕೇಳುವ ಹಾಗೆ ಜಗಳವೋ ಜಗಳ ... ಅನಂತರ ಗೊತ್ತಾಗಿದ್ದು ಅದು ರಮಾ(rama) ಅಲ್ಲ ರಾಮ(rama) ಅವರಿಂದ ಬಂದ ಪತ್ರ.

ಏನೇ ಆದರು ನಮ್ಮ ಮಂಜ ಮಾತ್ರ ಈಗಲೂ ಸಹ ಓದುವ ಹವ್ಯಾಸ ಮಾತ್ರ ಬಿಟ್ಟಿಲ್ಲ.

9 comments:

  1. ಗೊಪಲಾರೆ,ಪ್ರೀತಿಯ ಪ್ರಬಲ್ಯಾ ಎಷ್ಟೊಂದು ದೊಡ್ಡದಲ್ಲವೇ? ಒಂದೇ ತಿಂಗಳಲ್ಲಿ ಒಂದು ಹೊಸ ಭಾಷೆಯನ್ನೇ ಕಳಿಸಿ ಬಿಡುತ್ತೆ.

    ಮತ್ತೆ ಮಂಜನ ಆಟ ಚನ್ನಾಗಿದೆ

    ReplyDelete
  2. ನಿಜ, ಪ್ರೀತಿಯ ಶಕ್ತಿ ಅಪಾರ. ತುಂಬಾ ಧನ್ಯವಾದಗಳು ಸರ್.

    ReplyDelete
  3. ಲೋದ್ಯಾಶಿಯವರೇ ಇನ್ನು ಸ್ವಲ್ಪ ಆಟ ಸೇರಿಸಿದ್ದೇನೆ ದಯವಿಟ್ಟು ನೋಡಿ ....

    ReplyDelete
  4. ಹಹ..! ಮಂಜನ ತರ್ಲೆಗಳು ಹಲವರನ್ನು ಪೇಚಿಗೆ ಸಿಲುಕಿಸಿದ್ದವು ಎಂದಾಯ್ತು... ಚೆನ್ನಾಗಿದೆ.. :)

    ReplyDelete
  5. ಗೊಪಲಾರೆ ಈಗ ಇನ್ನೂ ಸಕತ್ತಾಗಿದೆ. ಮಂಜನ ಮರ್ಯಾದೆ ಇನ್ನೂ ಜಾಸ್ತಿ ಆಯ್ತು .

    ReplyDelete
  6. ಗೋಪಾಲ್‍ರವರೆ...

    ನಿಮ್ಮ ತರ್ಲೆ ಮಂಜ ಬಹಳ ಇಷ್ಟವಾಗಿಬಿಟ್ಟ...
    ನಿಮ್ಮ ಬರವಣಿಗೆಯೂ ಚೆನ್ನಾಗಿದೆ...

    ನಿಮ್ಮ ಹಳೆಯ ಲೇಖನಗಳನ್ನೂ ಒಟ್ಟಿಗೆ ಓದಿ ಮುಗಿಸಿದೆ...
    ಇನ್ನಷ್ಟು ಬರೆಯಿರಿ...

    ಚಂದದ ಲೇಖನಗಳಿಗಾಗಿ
    ನಮ್ಮನ್ನು ನಗಿಸಿದ್ದಕ್ಕಾಗಿ..
    ಅಭಿನಂದನೆಗಳು..

    ReplyDelete
  7. ಧನ್ಯವಾದಗಳು ಪ್ರಕಾಶಣ್ಣ....

    ReplyDelete