Monday, September 14, 2009

ತರ್ಲೆ ಮಂಜ(ಗ)ನ ಜಾಹಿರಾತು....

ನಿನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ Grand Finale ಕಾರ್ಯಕ್ರಮ ಪ್ರಸಾರವಾಗುತಿತ್ತು. ಆಗ ನಮ್ಮ ಮಂಜ ಮನೆಗೆ ಹೆಂಡತಿಯೊಂದಿಗೆ ಹಾಜರ ಆದ. ಮತ್ತೆ ಸ್ನೇಹ ಸಮಾಚಾರಗಳು ಆದ ಮೇಲೆ, ಕಾಫಿ ಹೀರುತ್ತ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೆವು. ನಮ್ಮ ಮಂಜ ಹಾಗೆ ಚೇಷ್ಟೆ ಮಾಡುತ್ತ ಕುಳಿತಿದ್ದ. ಮಂಜನಿಗೆ ಇನ್ನೊಂದು ಚಟ ಎಂದರೆ ಎಲ್ಲಾ ಜಾಹಿರಾತು ಮತ್ತು ಕಾರ್ಯಕ್ರಮಗಳನ್ನು ಜೋರಾಗಿ ಎಲ್ಲರಿಗು ಕೇಳಿಸುವ ಹಾಗೆ ಓದುವ ಹವ್ಯಾಸ. ಅವನ ಜೊತೆ ಚಲನಚಿತ್ರಕ್ಕೆ ಹೋದರೂ, ಚಿತ್ರ ಮಾತ್ರ ನಾವು ವೀಕ್ಷಿಸುತ್ತಿದ್ದೆವು. ಉಳಿದೆಲ್ಲ ಸೌಂಡ್ ಮಾತ್ರ ನಮ್ಮ ಮಂಜನದೆ.

ಆಗಲೇ ಒಂದು ಜಾಹಿರಾತು ತೋರಿಸುತ್ತಿದ್ದರು. ಅದನ್ನು ನಮ್ಮ ಮಂಜ "ಗಂಡಸು ನೀರನ್ನು ಮೃದುವಾಗಿಸುತ್ತೆ." ಎಂದು ಓದಿಬಿಟ್ಟ. ಅದು "ಗಡಸು ನೀರು" ಆಗಿತ್ತು. ಆಗ ನನ್ನ ಹೆಂಡತಿ ಸುಮ್ಮನಿರದೆ "ಹಾಗಾದರೆ ಮನೆ ಕೆಲಸ ಎಲ್ಲ ನಿಮ್ಮದೇ ಎಂದಾಯಿತು". ಎಂದಳು ತಮಾಶೆಯಾಗಿ. ಆಗ ಮಂಜ "ನಾವು ನಮ್ಮ ವಿಷಯ ಹೇಳುತ್ತಾ ಇಲ್ಲ. ನಿಮ್ಮ ಮನೆಯವರ ವಿಚಾರನೇ" ಎಂದ. ನನ್ನ ಹೆಂಡತಿ ಏನು ಮಾತನಾಡದೆ ಸುಮ್ಮನಾಗಿ ಬಿಟ್ಟಳು. ಅವಳಿಗೂ ಗೊತ್ತು ಇವ ತರ್ಲೆ ಅಂತ.

ಈ ಜಾಹಿರಾತು ವಿಷಯ ಬಂದ ಮೇಲೆ ಹಳೆಯ ಒಂದು ಮಂಜನ ವಿಚಾರನ ಹೇಳೋಕ್ಕೆ ಇಷ್ಟ ಪಡುತ್ತೇನೆ. ಒಂದು ದಿವಸ ಶಾಲೆಯಲ್ಲಿ Annual Function ಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಮಾಡಬೇಕೆಂದು ಮಾಸ್ತರ್ ಹೇಳಿದ್ದರು.

ಮಂಜ ಒಂದು ಜಾಹಿರಾತು ಮಾಡುತ್ತೇನೆ ಎಂದು ಹೇಳಿ ಮಾಸ್ತರ್ ಒಪ್ಪಿಸಿದ್ದ. ನಾನು ಮತ್ತೆ ಮಂಜ ಜಾಹಿರಾತು ಪ್ರಾಕ್ಟೀಸ್ ಮಾಡುತ್ತಿದ್ದಾಗ, ಸುಬ್ಬ ಬಂದು ಮಂಜನಿಗೆ ನನಗು ಏನಾದರು ಹೇಳು ಮಾಡುತ್ತೇನೆ ಎಂದ. ಮಂಜ ಅವನಿಗೆ ನೀನು ಹಿಂದಿನಿಂದ ಅಂಡರ್ ವೆರ್ ಧರಿಸಿ ಒಂದು ಕ್ಯಾಟ್ ವಾಕ್ ಮಾಡಿದರೆ ಸಾಕು ಎಂದ. ಅದಕ್ಕೆ ನಮ್ಮ ಸುಬ್ಬ ಸುತರಾಂ ಒಪ್ಪಲಿಲ್ಲ. ಆಯಿತು ನೀನು ಪ್ಯಾಂಟ್ ಮೇಲೆ ಆದರು ಧರಿಸಿ ಕ್ಯಾಟ್ ವಾಕ್ ಮಾಡು ಎಂದ. ಅದು ಹೇಗೆ ಸಾಧ್ಯ ಅದು ಹುಡುಗಿಯರ ಎದುರಿಗೆ ಎಂದು ಖ್ಯಾತೆ ತೆಗೆದ. ಅದಕ್ಕೆ ನಮ್ಮ ಮಂಜ ನೋಡು ಫ್ಯಾಂಟಮ್,ಸೂಪರ್ ಮ್ಯಾನ್ , ಹಿ ಮ್ಯಾನ್ ನೋಡಿದ್ದಿಯಲ್ಲ. ಅವರೆಲ್ಲ ಹಾಗೆ ಧರಿಸಿ ಹೇಗೆ ಹೀರೋ ತರಹ ಕಾಣಿಸುತ್ತಾರೆ. ನೀನು ಹಾಗೆ ಧರಿಸು ನೀನು ಹೀರೋ ಆಗುತ್ತೀಯ. ಎಲ್ಲಾ ಹುಡುಗಿಯರು ನಿನ್ನ ಹಿಂದೆ ಬೀಳುತ್ತಾರೆ ಎಂದ. ಅದಕ್ಕೆ ಸುಬ್ಬ "ಆ ಚೇತನಾ" ಎಂದ. ಅದಕ್ಕೆ ಮಂಜ "ಓ ಅವಳು ಕೂಡ" ಎಂದ. ಅದಕ್ಕೆ ಸುಬ್ಬ ಒಪ್ಪಿದ.

ಕಾರ್ಯಕ್ರಮಗಳ ಮಧ್ಯ ನಡುವೆ ನಮ್ಮದೊಂದು ಜಾಹೀರಾತು ಇತ್ತು. ಆಗ ತಾನೆ ಮಂಜ ಸುಬ್ಬನಿಗೆ ಒಂದು designer ಅಂಡರ್ ವೆರ್ ತಂದು ಕೊಟ್ಟಿದ್ದ. ಅದು ಥೇಟ ಪಟ್ಟಿ ಪಟ್ಟಿಯಾಗಿ ಹುಲಿಯ ಚರ್ಮದ ಹಾಗೆ ಇತ್ತು.

ರೇಡಿಯೋದಲ್ಲಿ ಬರುವ ಒಂದು ಜಾಹಿರಾತನ್ನು ಚೇಂಜ್ ಮಾಡಿ ಹೀಗೆ ಮಾಡಿದ್ದ. ನಮ್ಮ ಜಾಹೀರಾತು ಹೀಗೆ ಇತ್ತು.

ನಾನು: ಏನ್ ಶಂಕ್ರಣ್ಣ ಇಷ್ಟೊಂದು ಆಳವಾಗಿ ಯೋಚಿಸ್ತಾ ಇದ್ದೀಯ?.
ಮಂಜ(ಶಂಕ್ರಣ್ಣ ): ಏನಿಲ್ಲ ಮಕ್ಕಳಿಗೆ ಮತ್ತೆ ಮೊಮ್ಮಕ್ಕಳಿಗೆ ಯಾವ ಅಂಡರ್ ವೆರ್ ತೊಗೋಬೇಕು ಅಂತ ಯೋಚಿಸ್ತಾ ಇದ್ದೀನಿ.
ನಾನು: ಅದಕ್ಕೆ ಯಾಕ ಯೋಚಿಸಬೇಕು?. ಸುರ ಅಂಡರ್ ವೆರ್ ತೋಗೊಂಡ್ರ ಆಯಿತು. ನಮ್ಮಜ್ಜನ ಕಾಲದಾಗ ತೋಗೊಂಡಿದ್ವು ಇನ್ನು ಗಟ್ಟಿ ಮುಟ್ಟಿ ಅದಾವ ನೋಡು.

ಆಗ ನಮ್ಮ ಸುಬ್ಬ ಹಿಂದಿನಿಂದ ಪಟ್ಟಿ ಪಟ್ಟಿ ಅಂಡರ್ ವೆರ್ ಪ್ಯಾಂಟ್ ಮೇಲೆ ಧರಿಸಿ ಕ್ಯಾಟ್ ವಾಕ್ ಮಾಡುತ್ತ ಬಂದ. ಅಂಡರ್ ವೆರ್ ಎಲ್ಲಡೆ ಹರಿದು ಹೋಗಿತ್ತು. ಆ ಹರಿದಿರೋ ಅಂಡರ್ ವೆರ್ ನೋಡಿ ಎಲ್ಲರು ನಗಲು ಶುರು ಮಾಡಿಬಿಟ್ಟರು. ನನಗು ಮತ್ತೆ ಮಂಜನಿಗೆ ಕೂಡ ನಗು ತಡಿಯಲಾಗಲಿಲ್ಲ. ಜೋರಾಗಿ ನಕ್ಕು ಬಿಟ್ಟೆವು. ಆನಂತರ ಗೊತ್ತಾಯಿತು ಮಂಜ ಕೊಡಿಸಿದ ಅಂಡರ್ ವೆರ್ ನ ಇಲಿಗಳು ಕಚ್ಚಿ ತಿನ್ದಿದ್ದವು.

ಆಗಿನಿಂದ ನಮ್ಮ ಸುಬ್ಬನಿಗೆ ನಾವು ಎಲ್ಲರು "ಆರಾಮಾಗಿ ಇದ್ದೀಯ" ಅಥವಾ "ಚೆನ್ನಾಗಿ ಇದ್ದೀಯ ಅನ್ನುವ ಬದಲು "ಗಟ್ಟಿ ಮುಟ್ಟಿ ಇದ್ದೀಯ" ಎಂದು ಕೇಳುತ್ತಿದ್ದೆವು.

ಒಂದು ದಿವಸ ಸುಬ್ಬನಿಗೆ ಮಂಜ ಫೋನ್ ಮಾಡಿದ್ದ. ಫೋನ್ ಯಾರು ಎತ್ತಿದ್ದಾರೆ ಎಂದು ಯೋಚಿಸದೆ. "ಎನಲೇ ಗಟ್ಟಿ ಮುಟ್ಟಿ ಇದ್ದಿಯೇನೋ" ಎಂದು ಕೇಳಿದ್ದ. ಫೋನ್ ಎತ್ತಿದ್ದು ಅವನ ಹೆಂಡತಿ. ಅವಳು ಇವನಿಗೆ "ಮುಟ್ಟ ಆಗ್ಯಾನ ಸಿರಿ ತೆಗೆದುಕೊಂಡ ಬಾ" ಎಂದು ತರಾಟೆಗೆ ತೆಗೆದುಕೊಂಡಿದ್ದಳು. ಏಕೆಂದರೆ ಸುಬ್ಬನಿಗೆ ಒಂದು ಚಿಕ್ಕ Accident ಅಗತ್ತು.

ಆಗಿನಿಂದ ನಾವೆಲ್ಲರೂ ಅವನಿಗೆ "ಆರಾಮಾಗಿ ಇದ್ದೀಯ" ಅಥವಾ "ಚೆನ್ನಾಗಿ ಇದ್ದೀಯ" ಎಂದೇ ಕೇಳಲು ಶುರು ಮಾಡಿದೆವು.

4 comments:

  1. ಆತ್ಮೀಯ ಗೋಪಾಲರೆ,
    ಅಭಿನಂದನೆಗಳು,

    ನಾವು ಕಾಲೇಜ್ನಲ್ಲಿ ಅಂತಿಮ ವರ್ಷದ ಡಿಗ್ರಿಲಿ, ಇದ್ದಾಗ, ಒಂದು ವಿಶೇಷ ಫ್ಯಾಷನ್ ಶೋ ಮಾಡಿದ್ವಿ,
    ಅದ್ರಲ್ಲಿ ನಾನು ಕೂಡ ಪ್ಯಾಂಟ್ ಮೇಲೆ ಚಡ್ಡಿ ಹಾಕ್ಕಂಡಿದ್ದೆ.
    ಅದು ಈಗ ಜ್ಞಾಪ್ಕ ತರ್ಸಿದ್ರಿ.

    ReplyDelete
  2. ಗೋಪಾಲ್ರೇ,
    ನಿಮ್ಮ ಬ್ಲಾಗ್ ಗೆ ಹಾಗೇ ಟಹಲ್ತಾ ಬಂದೆ...ಓಹ್..ಹಾಸ್ಯಕ್ಕೆ ಮೀಸಲಾಗಿರೋ ನಿಮ್ಮ ಬ್ಲಾಗ್ ಟೈಟಲ್ಲೇ ನನ್ನ ಏಳ್ಕೊಂಡ್ ಬಂತ್ ಅಂದ್ರ್ ನಿಮಗೆ ಅಚ್ಚರಿ ಆಗ್ಲಿಕ್ಕಿಲ್ಲ...
    ಅಂದಹಾಗೆ ನನ್ನ ಬ್ಲಾಗ್ಗೆ ಒಮ್ಮೆ ಬನ್ರಲಾ...
    www.jalanayana.blogspot.com
    ನನ್ನ ಐಕಾನ್ ಕ್ಲಿಕ್ಕ್ಸಿದ್ರ್ ಫೇಲ್ ಆಯ್ತು ಅಂದ್ರ್ ಈ ಲಿಂಕುರೀ...

    ReplyDelete
  3. ತುಂಬಾ ಧನ್ಯವಾದಗಳು ಲೋದ್ಯಾಶಿಯವರೇ. ತುಂಬಾ ಹಾಸ್ಯಮಾಯವಾಗಿರಬಹುದು ನಿಮ್ಮ Fashion show :).

    ReplyDelete
  4. ತುಂಬಾ ಧನ್ಯವಾದಗಳು ಜಲನಯನರವರೆ. ಫೇಲ್ ಆಗೋಕ್ಕೆ Chance ಇಲ್ಲ ಬಿಡಿ.ಟೈಟಲ್ ಮೆಚ್ಚಿದಕ್ಕೆ ಧನ್ಯವಾದಗಳು.

    ReplyDelete