Monday, March 22, 2010

ಮಂಜ ಕಂಡು ಹಿಡಿದ ಕೆಲವು ವಿಷಯಗಳು

ಮಂಜ ಎಲ್ಲದರಲ್ಲಿಯೂ ತುಂಬಾ ತಮಾಷೆ. ಅವನು ಶಾಲೆಯಲ್ಲಿ ಕಂಡು ಹಿಡಿದ ಕೆಲವು ವಿಷಯಗಳು ...

Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.
ಯಾವತ್ತಾದರೂ ಹೋಟೆಲಿಗೆ ಹೋಗುವ ವಿಷಯ ಬಂದರೆ ನಮ್ಮ ಮಂಜ ಲೇ ಇವತ್ತು mathemetics ಓದಬೇಕು ಕಣ್ರೋ ಎಂದು ಹೇಳುತ್ತಿದ್ದ.
Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.
Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.
Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.
Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ
Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.
physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).
chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.
sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.
biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.

ಮತ್ತೆ ನಿವೇನಾದರು ಕಂಡು ಹಿಡಿದಿದ್ದಿರಾ? ಮತ್ತೆ ನಮೂದಿಸಿ....

2 comments:

  1. ನನ್ನದೂ ಜೀಯಾಲಾಜಿ -ಬದುಕುವ ಪರಿ
    ಚೆನ್ನಾಗಿದೆ ತಮ್ಮ ಜೋಡಣೆಗಳು.

    ReplyDelete
  2. ಜೀಯಾಲಾಜಿ -ಬದುಕುವ ಪರಿ "ಸೂಪರ್."
    ಸಕ್ಕತ್ , ಧನ್ಯವಾದಗಳು ಮತ್ತು ವಂದನೆಗಳು ಸರ್,

    ReplyDelete