ಟಿವಿ ಇದ್ದರೆ ನಿಮಗೆ ನನ್ನ ಮಾತೆ ಕಿವಿಗೆ ಬೀಳುವದಿಲ್ಲ ಎಂದು ಬೈದು ಕೊಳ್ಳುತ್ತಿದ್ದಳು. ನಾನು ನೋಡುತ್ತಿದ್ದ ಸಿನಿಮಾದಲ್ಲಿ ಹೀರೊ ಇಬ್ಬರು ಹೆಂಡತಿಯರನ್ನು ಮದುವೆ ಆಗಿದ್ದ. ನನಗೆ ಒಂದೇ ಸಂಭಾಳಿಸಲು ಆಗುತ್ತಿಲ್ಲ. ಇವನು ಎರಡೆರಡು ಸಂಭಾಳಿಸುತ್ತಾನಲ್ಲ ಭೇಷ್... ಭೇಷ್ .. ಎಂದೆ. ಸಿನಿಮಾಕ್ಕೂ ಮತ್ತೆ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸ. ರೀssss.. ಪ್ರಕಾಶ್ ಮಾಮಾ ಫೋನ್ ಮಾಡಿದ್ದರು, ತುಂಬಾ ಖುಷಿಯಲ್ಲಿ ಇದ್ದರು ಎಂದಳು ಮಡದಿ. ಅದು ಹೇಗೆ ಹೇಳುತ್ತಿ ಅವರೇನು ನಿನಗೆ ಕಾಣಿಸುತ್ತರಾ? ಫೋನ್ ನಲ್ಲಿ ಎಂದೆ. ಅವರ ಮಾತು ಕೇಳಿ ರೀ .. ಎಂದಳು. ನಿಮ್ಮನ್ನು ಕೇಳಿದರು ಎಂದಳು. ರೀ ಒಂದು ಸಂತೋಷದ ವಿಚಾರ ಮಾಮಾನ ಎಂಗೇಜ್ಮೆಂಟ್ ಅಂತೆ. ನಾನು ತುಂಬಾ ಖುಶಿಯಿಂದ ಹೌದಾ? ಎಂದೆ. ಪಾಪ ತುಂಬಾ ಕಷ್ಟ ಪಟ್ಟು ೬ ಜನ ಅಕ್ಕ - ತಂಗಿಯರ ಮದುವೆ ಮಾಡಿದ್ದಾರೆ. ಕಡೆಗೂ ಅವರ ಮದುವೆ ಫಿಕ್ಸ್ ಆಗಿದ್ದು ಕೇಳಿ ತುಂಬಾ ಖುಷಿ ಆಯಿತು ಎಂದೆ.
ಪ್ರಕಾಶ್ ಮಾಮಾ ನನಗಿಂತ ೨೫ ವರ್ಷ ದೊಡ್ಡವರು. ನೋಡಿಕೊಳ್ಳಲು ಯಾರು ಇರಲಿಲ್ಲ. ತಂದೆ - ತಾಯಿ ತೀರಿ ೪ ವರ್ಷ ಆಗಿತ್ತು. ತುಂಬಾ ಕಷ್ಟ ಜೀವಿ. ತನ್ನ ಎಲ್ಲಾ ಆಸೆ ಆಕಾಂಕ್ಷೆ ತೊರೆದು ಮನೆಗಾಗಿ ದುಡಿದವರು. ಅಪ್ಪ - ಅಮ್ಮ ಏನು ಆಸ್ತಿ ಮಾಡಿರಲಿಲ್ಲ. ಅವರು ಮಾಡಿರುವ ಏಕೈಕ ಆಸ್ತಿ ಎಂದರೆ ೨ ಅಕ್ಕಂದಿರು, ೪ ತಂಗಿಯರು. ಈಗೀಗ ಸ್ವಲ್ಪ ಕಣ್ಣು ಮತ್ತೆ ಕಿವಿ ಮಂದಾಗಿತ್ತು. ಈಗ ಎಂಗೇಜ್ಮೆಂಟ್ ಮಾಡುವದಾದರೂ ನಾವೇ ಮಾಡಬೇಕು.ನಾನು ಎಂಗೇಜ್ಮೆಂಟ್ ಹೋಗುವದರ ಸಲುವಾಗಿ ಟಿಕೆಟ್ ಬುಕ್ ಮಾಡಿದೆ. ಎಲ್ಲ ಕೆಲಸಗಳನ್ನು ನಾನು ಮತ್ತು ನನ್ನ ಮಡದಿ ಮಾಡಲು ಆಗುವದಿಲ್ಲ ಎಂದು, ನನ್ನ ಗೆಳೆಯರಾದ ಸುಬ್ಬ, ಮಂಜ ಮತ್ತು ಮನೋಜನನ್ನು ಕರೆದುಕೊಂಡು ಹೋದೆ.
ಎಂಗೇಜ್ಮೆಂಟ್ ದಿವಸ ಬಂದೆ ಬಿಟ್ಟಿತು. ಹಣ್ಣುಗಳನ್ನು ತಂದಿರಲಿಲ್ಲ ಹೀಗಾಗಿ ಹಣ್ಣುಗಳನ್ನು ತರಲು ಮಂಜನಿಗೆ ಹೇಳಿದೆ. ಮತ್ತೆ ನಾವು ಕುಳಿತುಕೊಂಡೆವು. ಆಗ ರಾಮಾಚಾರ್ಯರು ನೀವು ನಡುವೆ ಕುಳಿತುಕೊಳ್ಳಿ ಎಂದರು. ರೀ .. ಸುಮ್ಮನಿರಿ ಇದು ನಮ್ಮ ಮಾಮಾನ ಎಂಗೇಜ್ಮೆಂಟ್ ಎಂದು ತೋರಿಸಿದಾಗ ಸುಮ್ಮನಾದರು. ಮತ್ತೆ ಮಂತ್ರ ಎಲ್ಲವನ್ನು ಮುಗಿಸಿದರು. ಹಣ್ಣು ಕೊಡುವ ಶಾಸ್ತ್ರ ಮುಗಿಸಿ ಎಂದರು ಶಾಸ್ತ್ರಿಗಳು. ಹಣ್ಣುಗಳನ್ನು ನಾವು ಕೊಡಬೇಕಾಗಿತ್ತು. ಅಷ್ಟರಲ್ಲಿ ಮಂಜ ಬಂದ. ಹಣ್ಣು ತಂದಿದ್ದ ಆದರೆ ಅವನು ತಂದಿದ್ದು 2 ಖಾರಬೂಜ ,2 ಹಲಸಿನ ಹಣ್ಣು, ಮತ್ತೆ 2 ಕಲ್ಲಂಗಡಿ ಹಣ್ಣು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದಿತ್ತು. ಇದೇನೋ ಹಣ್ಣು ತೆಗೆದುಕೊಂಡು ಬಾ ಎಂದರೆ ಎಂದು ಗದರಿಸಿದ್ದೆ. ಕಡೆಗೆ ಅದನ್ನೇ ತೆಗೆದುಕೊಂಡು ಒಂದು ದೊಡ್ಡ ಪಾತ್ರೆಯಲ್ಲಿ ಇಟ್ಟು ನನ್ನ ಕೈಗೆ ಕೊಟ್ಟರು. ಆ ಭಾರದಿಂದ ಧಪ್ ಎಂದು ನೆಲಕ್ಕೆ ಉರುಳಿದೆ. ಮತ್ತೆ ಸುಬ್ಬ ಮತ್ತೆ ಮಂಜ ಸೇರಿ ನನ್ನನ್ನು ಎತ್ತಿದರು. ಒಂದು ಕಲ್ಲಂಗಡಿ ಹಣ್ಣು ಎರಡು ಹೋಳು ಆಗಿತ್ತು. ಅದನ್ನೇ ಎಲ್ಲರಿಗೂ ಜೂಸ್ ಮಾಡಲು ಕಳುಹಿಸಿದೆವು. ಹಾಗೂ ಹೀಗೂ ಮತ್ತೆ ನಾವೆಲ್ಲರೂ ಕೂಡಿ ಅದನ್ನು ನಮ್ಮ ಬೀಗರ ಕೈಗೆ ಕೊಟ್ಟೆವು. ಪಾಪ ಒಬ್ಬರೇ ಹೇಗೆ ಅದನ್ನು ಹಿಡಿಯಲು ಆಗುತ್ತೆ. ನನ್ನ ಅರ್ಧ ಕೂಡ ಇರಲಿಲ್ಲ ನಮ್ಮ ಬೀಗರು. ಅವರು ನನ್ನ ತಲೆಗೆ ಡಿಕ್ಕಿ ಹೊಡೆದು ಬಿಟ್ಟರು. ನನ್ನ ತಲೆಗೆ ಒಂದು ಗುಮ್ಮಟಿ ಆಗಿತ್ತು.
ಕಡೆಗೆ ಎಲ್ಲ ಶಾಸ್ತ್ರ ಮುಗಿದ ಮೇಲೆ ಉಟಕ್ಕೆ ಕುಳಿತಿದ್ದೆವು. ನಮ್ಮ ಮಾಮಾ ಕಣ್ಣು ಕಾಣಲಾರದೇ ಉಂಡಿ ತನ್ನ ಮಡದಿಗೆ ತಿನ್ನಿಸುವ ಬದಲು ನನಗೆ ತಿನ್ನಿಸಲು ಶುರು ಮಾಡಿದ್ದ. ನಾನು ಮತ್ತೆ ಅದನ್ನು ಅವನ ಹೆಂಡತಿಗೆ ತಿನ್ನಿಸಲು ಹೇಳಿದೆ. ಮತ್ತೆ ತಿನ್ನಿಸಿದ. ಆದರೆ ಅವನ ಮಡದಿ ನನ್ನ ಹೆಂಡತಿಯ ಎಲೆ ಮೇಲೆ ಇರುವ ಉಂಡಿ ತೆಗೆದು ಮಾಮಾನಿಗೆ ತಿನ್ನಿಸುತ್ತಿದ್ದಳು. ಎಲ್ಲರೂ ಇವರನ್ನು ನೋಡಿ ನಗುತ್ತಿದ್ದರು.
ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು. ನಾನು ನನ್ನ ಮಡದಿಗೆ ಹೇಳಿದೆ ಸುಮ್ಮನೇ ಇದೆಲ್ಲವೂ ಬೇಕಿತ್ತಾ. ರಿಜಿಸ್ಟರ್ ಆಫೀಸ್ ನಲ್ಲಿ ಮದುವೆನೇ ಮಾಡಬಹುದಿತ್ತು ಎಂದೆ. ಆಗ ಏನೋ ಮಾವ ಆಸೆ ಪಟ್ಟರು. ಅವರಿಗೆ ಎಲ್ಲವೂ ಶಾಸ್ತ್ರೋಕ್ತವಾಗಿ ಆಗಬೇಕು. ಅದಕ್ಕೆ ಏನು ಈಗ ಎಂದಳು. ಅಲ್ಲ ಕಣೆ ..ಇದು ಒಂದು ತರಹ ಓಲ್ಡ್ ಏಜ್ ಮೆಂಟ್ ಅನ್ನಬಹುದು..ಎಂದಾಗ ನನ್ನ ಮಡದಿಗೂ ನಗು ತಡಿಯಲು ಆಗಲಿಲ್ಲ.
ಹಹ್ಹಹ್ಹಾ ... ಚೆನ್ನಾಗಿದೆ...
ReplyDeletehahaha too good
ReplyDeleteಧನ್ಯವಾದಗಳು ಮೇಡಂ ಮತ್ತು ಹೆಗ್ಡೆ ಸರ್,
ReplyDeleteವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
he he he..good one..J
ReplyDeleteRaaghu.
ಧನ್ಯವಾದಗಳು Raaghu ಸರ್,
ReplyDeleteಹೇ ಹೇ ....ಯಂಗ ಎಜ -ಓಲ್ಡ್ ಏಜ್ ಮೆಂಟ್ ಚೆನ್ನಾಗಿದೆ..
ReplyDeleteಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.
ReplyDelete