ಏನೋ?. ಇದು ನೀನು ಲೇಖನ ಬರೆದು ಅದನ್ನು ತಿಳಿ ಹಾಸ್ಯ ಎನ್ನುವ ವರ್ಗಕ್ಕೆ ಸೇರಿಸಿದ್ದೀಯಾ? ಎಂದು ನನ್ನ ಗೆಳೆಯ ಸಂದೀಪ ಫೋನ್ ಮಾಡಿದ್ದ. ಏನೋ, ಏನಾದರೂ ತಪ್ಪಾಯಿತೇನೋ ಎಂದು ಕೇಳಿದೆ. ಮತ್ತೆ ಏನು? ಹಾಸ್ಯ ಎಂದರೆ ಏನು?. ನೀನು ಬರೆದ ಮೇಲೆ ನಾವು ತಿಳಿದು ಕೊಳ್ಳಬೇಕೇನು? ಎಂದು ಕೇಳಿದ. ಆಗ ಅರ್ಥ ಆಯಿತು ಅವನು ಏನು ಹೇಳುತ್ತಿದ್ದಾನೆ ಅಂತ. ನಿನ್ನ ಲೇಖನದಲ್ಲೇನು ವಿಶೇಷ ಇಲ್ಲ. ನಿನ್ನ ಲೇಖನ ಬೆಂಗಳೂರು ಭಾಷೆಯಲ್ಲಿ ಇರುತ್ತೆ. ಅದು ನನ್ನ ಹಾಗೆ ಇರುವ ಧಾರವಾಡ ಜನಕ್ಕೆ ಹೇಗೆ ಅರ್ಥ ಆಗಬೇಕು ಎಂದ. ಯಾಕೆ ನೀನು ಚಲನ ಚಿತ್ರ ಮತ್ತೆ ಧಾರಾವಾಹಿ ನೋಡುವದಿಲ್ಲವಾ? ಎಂದು ಕೇಳಿದೆ. ಹಾಗೇನಿಲ್ಲ ನೋಡುತ್ತೇನೆ ಆದರೆ ನೋಡುವದು ಬೇರೆ , ಲೇಖನ ಬೇರೆ ಎಂದ. ಆಗ ಇವನು ಹೇಳುವದು ಸ್ವಲ್ಪ ನಿಜ ಎನ್ನಿಸಿ ನಾನು ಲೇಖನ ಬರೆಯುವದನ್ನು ನಿಲ್ಲಿಸಬೇಕು ಎಂದು ತೀರ್ಮಾನಕ್ಕೆ ಬಂದೆ. ಇನ್ನೂ ಮುಂದೆ ಬರೆದರು ತಿಳಿ ಹಾಸ್ಯ ಎಂದು ವರ್ಗಕ್ಕೆ ಸೇರಿಸುವ ದುಃಸಾಹಸಕ್ಕೆ ಕೈ ಹಾಕುವದಿಲ್ಲ ಎಂದು ತೀರ್ಮಾನಕ್ಕೆ ಬಂದೆ.
ಆಯಿತು ಇನ್ನೂ ಬರೆಯುವದಿಲ್ಲ ಮಹಾರಾಯ. ಮತ್ತೆ ಏನು ವಿಶೇಷ? ಎಂದು ಕೇಳಿದೆ. ಏನು ಇಲ್ಲ ಹಾಗೆ ಫೋನ್ ಮಾಡಿದ್ದು ಎಂದ. ಆಗ ನೀನು ಮಂಜನ ಬಗ್ಗೆ ತುಂಬಾ ಬರೆದಿದ್ದೀಯ. ಹೀಗೆ ಮಾಡಿದರೆ ನಿನಗೆ ಅವನು ಮಾನ-ನಷ್ಟ ಮೊಕದ್ದಮೆ ಹಾಕುತ್ತಾನೆ ಎಂದು ಹೆದರಿಸಿದ. ಅಯ್ಯೋ ದಾರಿಯಲ್ಲಿ ಹೋಗುವ ಮಾರಿ ಕರೆದು ತಂದು ಮನೆಯಲ್ಲಿ ಕೂಡಿಸಿದ ಹಾಗೆ ಆಯಿತು ಎಂದು ಅನ್ನಿಸಿತು. ನಾನು ಮೊದಲು ಮಂಜನ ಪರ್ಮಿಶನ್ ಕೇಳಬೇಕಿತ್ತು. ಆದರೆ ಕೇಳಲಿಲ್ಲ. ಅದಕ್ಕೆ ಏನು ತಪ್ಪು ಎಂದೆ. ಅಷ್ಟರಲ್ಲಿ ಜೋರಾಗಿ ನಗುವ ಶಬ್ದ.... ಮಂಜ ಕೂಡ ಅವನ ಬಳಿ ಇದ್ದ. ಇದು ಇವನದೇ ಕರಾಮತ್ತು ಎಂದು ನನಗೆ ತಿಳಿದಿತ್ತು.
ಮತ್ತೆ ಏನು ಇಲ್ಲ ಮಹಾರಾಯ ಇನ್ನೊಂದು ಬಾರಿ ಹಾಗೆ ಬರೆಯುವ ಮುಂಚೆ ನಮಗೆ ತಿಳಿಯಾಗಿ ಪಾರ್ಟೀ ಕೊಡಿಸಬೇಕು ಎಂದು ಇಬ್ಬರು ಫೋನಿನಲ್ಲಿ ಹೇಳಿದರು. ನಿನ್ನನ್ನ ಹೀರೊ ಮಾಡಿದಕ್ಕೆ ನನಗೆ ಸಿಗಬೇಕಾಗಿದ್ದೆ ಈ ಶಿಕ್ಷೆ ಎಂದು ಅಂದುಕೊಂಡು ಒಪ್ಪಿಗೆ ಸೂಚಿಸಿ ಆಯಿತು. ಮತ್ತೆ ಮಂಜ ಇನ್ನೂ ಮುಂದೆ ಏನಾದರೂ ಬರೆದರೆ ಅದನ್ನು ತಿಳಿ ಸಾರು ಮತ್ತೆ ತಿಳಿ ಮಜ್ಜಿಗೆ ವರ್ಗಕ್ಕೆ ಸೇರಿಸು ಎಂದು ಆಜ್ಞೆ ಮಾಡಿ ಫೋನ್ ಇಟ್ಟರು.
ತಿಳಿ ಹಾಸ್ಯ. ಕೆಲವರಿಗೆ ಮಾತ್ರ ಅರ್ಥವಾಗುವುದು ತಿಳಿಯಾದ ಹಾಸ್ಯ. ಉಳಿದವರಿಗೆ ಅದು ತಿಳಿಯದ ಹಾಸ್ಯ. ಎಂದು ಎಲ್ಲೋ ಬ್ಲಾಗ್‌ನಲ್ಲಿ ಓದಿದ ನೆನಪು. ಹಾಗೆ ಏನಾದರೂ ಆಗಿದೆ ಎಂದು ಫೋನ್ ಬಂದಾಗ ತುಂಬಾ ಘಾಬರಿ ಪಟ್ಟಿದ್ದೆ.
ಅವನು ಮಾತನಾಡಿದ್ದು ಬೆಂಗಳೂರು ಭಾಷೆಯಲ್ಲೇ ಅಲ್ಲವೇ, ಹಾಸ್ಯ ಬರೆಯುವ ನೆಪದಲ್ಲೇ ನಾನೇ ಅಪಹಾಸ್ಯವಾಗಿ ಬಿಟ್ಟೆನೇ ಎಂದು ನನ್ನ ಪೆದ್ದು ತಲೆಗೆ ಎರಡು ಮೊಟಕಿದೆ. ನೋಡುವಾ ಧಾರವಾಡ ಭಾಷೆಯಲ್ಲಿ ಏನಾದರೂ ಬರೆಯಲು ಹೊಳೆಯುವುದೇ ಎಂದು.
ಎಲ್ಲರೂ ಇದನ್ನು ವಿದಾಯದ ಲೇಖನ ಎಂದು ತಪ್ಪಾಗಿ ತಿಳಿದಿದ್ದೀರಾ. ಇದು ನನ್ನ ಮತ್ತು ಮಂಜನ ನಡುವೆ ಪಾರ್ಟೀ ಕೊಡಿಸುವ ಬಗ್ಗೆ ಇರುವ ವಿವಾದ ಲೇಖನ. ಏಕೆ? ಎಂದಿರೋ. ಈಗ ಫೈನಾನ್ಸ್ ಖಾತೆ ನನ್ನಲ್ಲಿ ಇಲ್ಲ. ಅದು ೫ ವರ್ಷದ ಹಿಂದೆ ನನ್ನಿಂದ ನನ್ನ ಹೆಂಡತಿಗೆ ವರ್ಗಾವಣೆ ಆಗಿದೆ. ಹೋಮ್ ಮಿನಿಸ್ಟ್ರೀ , ಆಹಾರ ಖಾತೆ ಎಲ್ಲವೂ ನನ್ನ ಬಳಿ ಇಲ್ಲ. ಆಹಾರ ಸರಬರಾಜು ಮತ್ತೆ ಸಾರಿಗೆ ಸಂಸ್ಥೆ ಮಾತ್ರ ನನ್ನಲ್ಲಿ ಉಳಿದಿದೆ. ಅವನ ತಿಳಿಯಾದ ಪಾರ್ಟೀ, ನನಗೆ ತಿಳಿಯಲಾರದು ಪೂರ್ತಿ. ಇನ್ನೂ ಅದನ್ನು ಅಪ್ರೂವ್ ಮಾಡಲು ಕಳುಹಿಸಿದರೆ ೩ ವರ್ಷ ಬೇಕು ಅದನ್ನು ಜಾರಿಗೆ ತರಲು. ಏಕೆಂದು ನಿಮಗೆ ಮೊದಲೇ ತಿಳಿದಿದೆ(ಕಾನೂನು ಮತ್ತೆ ಸಲಹೆ ಖಾತೆ ಕೂಡ ನನ್ನಲ್ಲಿ ಇಲ್ಲ).
ಇದನ್ನು ನೀವೆಲ್ಲರೂ ವಿವಾದದ ಮತ್ತು ವಿದಾಯದ ಲೇಖನದಂತೆ ಪರಿಗಣಿಸದೇ,ವಿನೋದದ ಲೇಖನ ಎಂದು ಪರಿಗಣಿಸಿ. ಈ ಪೀಡಿಯನ್ನು ಧಾರವಾಡ ಪೇಡಾದಂತೆ ಸ್ವೀಕರಿಸುತ್ತೀರಿ ಎಂದು ...
ಎಲ್ಲರಿಗೂ ಕ್ಷಮೆ ಕೋರುತ್ತ ...:):). ನಿಮ್ಮ ಒದೆಗಳನ್ನು(ಪ್ರತಿಕ್ರಿಯೆಗಳನ್ನು) ನಿರೀಕ್ಷಿಸುತ್ತಾ. ನಿಮ್ಮ ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ ಎಂದು ಹಾರೈಸುತ್ತಾ.
ಈ ಲೇಖನದ ವಿದಾಯದೊಂದಿಗೆ ಮಾತ್ರ ....:):)
ಇಂತಿ ನಿಮ್ಮ
ವಿಧೇಯ
ಲೇಖನ ಚೆನ್ನಾಗಿದೆ.
ReplyDeleteಧಾರವಾಡ ಭಾಷೆ ತುಂಬಾ ಚಂದದ ಭಾಷೆ.
ಬೇಗ ಬರವಣಿಗೆ ಶುರು ಮಾಡಿ.
ನಿಮ್ಮವ,
ರಾಘು.
ಧನ್ಯವಾದಗಳು ಸರ್,
ReplyDeleteಚೆಂದದ ಹಾಸ್ಯಭರಿತ ಲೇಖನ
ReplyDeleteವಿನೋದದ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್.
ReplyDelete