ಮಧ್ಯ ನನ್ನ ಜೊತೆ ಜೊತೆಗೆ ಇರುವ ವಸ್ತು. ಘಾಬರಿ ಆಯಿತಾ?. ಕೇಳಿ ನನ್ನ ಜೊತೆ ಇರುವ ಮಧ್ಯ ಮತ್ತು ಅಂತರದ ಕಥೆ (ವ್ಯಥೆ).
ನನ್ನ ಅಕ್ಕ ಮತ್ತು ತಂಗಿಯ ಮಧ್ಯ ನಾನು ಜನಸಿದ್ದು. ಮಧ್ಯ ಹುಟ್ಟಿದ ಮಾತ್ರಕ್ಕೆ ಆ ನಾಮಧೇಯಕ್ಕೆ(ಮಧ್ಯ - ಹೆಂಡಕ್ಕೆ ಅಲ್ಲ ಸ್ವಾಮಿ...ನಡುವೆ) ನೈವೇದ್ಯ ಆಗಿದ್ದು ಮಾತ್ರ ಹಲವು ಬಾರಿ. ಶಾಲೆಗೆ ಸೇರಿದೆ ಅಲ್ಲಿ ಕೂಡ ಈ ಮಧ್ಯ ನನ್ನ ಬಿಡಲಿಲ್ಲ. ನಾನು ಇಬ್ಬರು ಹುಡುಗರ ಮಧ್ಯ ನನ್ನ ಆಸನ. ಅಡ್ಡ ಕತ್ತರಿಯಲ್ಲಿ ಅಡಿಕೆ ಆದ ಹಾಗೆ, ಹಾಗೂ.. ಹೀಗೂ... ಮಿಸುಗುವ ಹಾಗಿಲ್ಲ ಕೂಡ. ಮತ್ತೆ ಪರೀಕ್ಷೆಯಲ್ಲಿ ಕೂಡ ಇದೆ ಕಥೆ... ಯಾವತ್ತೂ ಎರಡನೆ ಶ್ರೇಯಾಂಕದಲ್ಲಿ ಉತ್ತೀರ್ಣ ಆಗುತ್ತಿದ್ದೆ. ಮೊದಲನೇಯವನಾಗುವದು ಕನಸಿನ ಮಾತಾಗಿತ್ತು. ಹೇಗಾದರೂ ಮಾಡಿ ಈ ಬಾರಿ ಕೆಟ್ಟದಾಗಿ ಬರೆದು, ಮೂರನೇ ಶ್ರೇಯಂಕಕ್ಕೆ ಹೋಗಬೇಕು ಎಂದು ಯೋಚಿಸಿ ಪರೀಕ್ಷೆ ಬರೆದೆ. ನನ್ನ ಗೆಳೆಯ ಶ್ರವಣ ತನ್ನ ಮೂರನೇ ಶ್ರೇಯಾಂಕದ ಆಸನ ಭದ್ರವಾಗಿ ಹಿಡಿದು ಕುಳಿತು ಬಿಟ್ಟಿದ್ದ. ಆಗ ಅನ್ನಿಸಿತು ಇವನು ಯಾರೋ ರಾಜಕಾರಣಿ ಮಗನೆ ಇರಬೇಕು ಎಂದು.. ಕಡೆಗೆ ಮತ್ತೆ ಎರಡನೆ ಶ್ರೇಯಾಂಕ ಲಭಿಸಿತು. ಆಗ ಅನ್ನಿಸಿತು ಈ ಮಧ್ಯ ತುರುವ ಕೆಲಸಕ್ಕಿಂತ ಅಂತರದಲ್ಲಿ ಇರುವುದು ಉತ್ತಮ ಎಂದು.
ಒಂದು ದಿನ ನಾನು ಒಬ್ಬರ ಮನೆಗೆ ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದೆ. ಅಲ್ಲಿ ಕೂಡ ನನಗೆ ಮಧ್ಯದ ಆಸನ ದೊರೆಯಿತು. ಮತ್ತೆ ಊಟ ಹಾಕಿದರು. ನನಗೆ ನನ್ನ ದೇಹದ ಮಧ್ಯ ಭಾಗ(ಹೊಟ್ಟೆ) ಕೆಟ್ಟಿದ್ದರಿಂದ, ನಾನು ಮೊಸರನ್ನ ತಿಂದರೆ ಆಗುತ್ತೆ ಎಂದು, ಸಲ್ಪ ಸಾರು ಅನ್ನ ಊಟ ಮಾಡಿದೆ. ಚಪಾತಿ ಎಲ್ಲ ಆದ ಮೇಲೆ ಮತ್ತೆ ಸಾರು ಅನ್ನ ಬಂತು ನಾನು ಹಾಕಿಸಿ ಕೊಳ್ಳಲಿಲ್ಲ. ನಾನು ಮೊಸರನ್ನಕ್ಕೆ ಕಾಯುತ್ತಿದ್ದೆ. ಕಡೆಗೆ ಮೊಸರನ್ನ ಬರಲೇ ಇಲ್ಲ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲಿಲ್ಲ ಮತ್ತು ಹೊಟ್ಟೆ ಹಸಿದ ಹಾಗೆ ಕೂಡ ಅನ್ನಿಸಲಿಲ್ಲ. ಹಾಗೆ ಅರ್ಧ ಹೊಟ್ಟೆಯಲ್ಲಿ ಊಟ ಮುಗಿಸಿ ಬಂದು ಬಿಟ್ಟೆ.
ಇನ್ನೂ ಬಸ್ಸಿನಲ್ಲಿ ಪ್ರಯಾಣಿಸುವಾಗ ಕೂಡ ಪ್ರತಿ ಬಾರಿ ಸಿಗುವದು ನಡುವಿನ ಆಸನನೆ. ನಡುವೆ ಮಧ್ಯಂತರ ಕೂಡ ಕಡಿಮೆನೆ ಸಿಗುತಿತ್ತು. ಮೊದಲು ನಾನು ತುಂಬಾ ತೆಳ್ಳಗೆ ಇದ್ದೇ. ಹೀಗಾಗಿ ನಾನು ಎಷ್ಟೇ ತಿಣುಕಿದರು ಅಕ್ಕ ಪಕ್ಕ ಕುಳಿತ ಜನ ಮೀಸುಗುತ್ತಿದ್ದಿಲ್ಲ. ಈಗ ಸ್ವಲ್ಪ.... ಕ್ಷಮಿಸಿ ತುಂಬಾ ಸುಧಾರಿಸಿದ್ದೇನೆ.
ಇದೇಕೋ ತ್ರಿಶಂಕು ಸ್ವರ್ಗ ಸ್ತಿತಿ ನನಗೆ ಹಲವು ಬಾರಿ ಅನುಭವಿಸಿದ್ದೇನೆ. ಇದುವರೆಗೆ ಯಾವುದೆ ನೌಕರಿ ಸೇರಿದರು, ನನ್ನ ಹಿಂದೆ-ಮುಂದೆ ಒಬ್ಬರು ಸೇರುತ್ತಾರೆ. ಮತ್ತೆ ಅದು ನನ್ನ ಮೇಲಿನ ವರ್ಗಕ್ಕೆ ಮತ್ತು ಕೆಳಗಿನ ವರ್ಗಕ್ಕೆ. ಅದು ನನ್ನ ಸಂಬಳಕ್ಕೂ ಅನ್ವಯ ಕೂಡ ಆಗಿರುತ್ತೆ. ಮೊದಲ ಬಾರಿ ನಾನು ಒಂದು ನೌಕರಿ ಸೇರಿದೆ ಅಲ್ಲಿ ಕೂಡ ಎಲ್ಲರೂ ಒಂದೇ ಸಂಸಾರದ ಜನ ಕೆಲಸ ಮಾಡುತ್ತಿದ್ದರು. ಅವರ ನಡುವೆ ನಾನು ಅಂತರ ಪಿಶಾಚಿ. ಅವರು ಎಲ್ಲರೂ ಒಂದೇ ಬಾಷೆ ಮಾತನಾಡುತ್ತಿದ್ದರೆ, ನಾನು ಮಾತ್ರ ತಲೆ ಕೆರೆದುಕೊಳ್ಳುತ್ತ ಕೂಡುತ್ತಿದ್ದೆ. ಕಡೆಗೆ ಅದು ಬೇಡ ಎಂದು ಬಿಟ್ಟು ಬಿಟ್ಟೆ.
ಮುಂದೆ ಬ್ಯಾಂಕ್ ಪರೀಕ್ಷೆಗೆ ಅರ್ಜಿ ಹಾಕಿದೆ. ಅಲ್ಲಿ ನಾನು ತುಂಬಾ ಚೆನ್ನಾಗಿ ಮಾಡುತ್ತಿದ್ದ ಒಂದು ಭಾಗ ಎಂದರೆ "ODD MAN OUT". ಕಡೆಗೆ ಪರೀಕ್ಷೆ ಫಲಿತಾಂಶ ಬಂದಾಗ ಅವರು ನನ್ನನ್ನು "ODD MAN OUT" ಮಾಡಿದ್ದರು.
ಮುಂದೆ ಮತ್ತೊಂದು ನೌಕರಿಗೆ ಸೇರಿದೆ. ಅಲ್ಲಿ ಕೂಡ ಎಲ್ಲಾ ಜನರು ಒಂದೇ ಜಾತಿಯ ಜನ. ನಾನು ಜಾತಿ ಭೇಧದ ಮಧ್ಯ ಬೆಂದು ಬಳಲಿ ಬೆಂಡಾಗಿ ಹೋಗಿದ್ದೆ. ಹಾಗೂ ಹೀಗೂ ಹೆಣಗಿ ಮತ್ತೊಂದು ನೌಕರಿ ಸೇರಿದ್ದೇನೆ. ಇಲ್ಲಿ ಕೂಡ ದಿನವೂ ಸ್ಯಾಂಡ್‌ವಿಚ್ ಆಗಿದ್ದು ಮಾತ್ರ ಸತ್ಯ. ಬಾಸ್ ತಮಿಳಿಗ ಮತ್ತೆ ನನ್ನ ಕೆಳಗೆ ಕೆಲಸ ಮಾಡುವ ಇಬ್ಬರು ತಮಿಳಿಗರು.
ಇನ್ನೂ ಮನೇಲಿ ಹೆಂಡತಿ,ಮಗನ ನಡುವೆ ದಿನವೂ ಸಾಂಡ್‌ವಿಚ್ ಆಗುತ್ತಾ ಇದ್ದೇನೆ. ಇನ್ನೂ ಬೈಕ್ ನಲ್ಲಿ ಹೋಗುವಾಗ ಸಹಿತ ನನ್ನ ಅಕ್ಕ ಮತ್ತು ಪಕ್ಕ ಜನ ಎಲ್ಲಿಂದಲೋ ಬಂದೆ ಬಿಟ್ಟಿರುತ್ತಾರೆ. ಮತ್ತೆ ಕೆಲವೇ ಕ್ಷಣಗಳಲ್ಲಿ ನನಗೆ ಟಾಟಾ ಹೇಳಿ ಅಂತರ ಪಿಶಾಚಿ ಹಾಗೆ ಬಿಟ್ಟು ಹೋಗಿರುತ್ತಾರೆ. ನಡುವೆ ಅಂತರವಿರಲಿ ಎಂದು ಎಲ್ಲಾ ಬಿ ಎಂ ಟಿ ಸಿ ಬಸ್ಸುಗಳ ಮೇಲೆ ಬರೆದಿರುತ್ತಾರೆ. ಹಾಗೆಯೇ ನನ್ನ ಬೈಕ್ ಮೇಲೆ ನಡುವೆ(ಮಧ್ಯ) ಅಂತರವಿದೆ ಎಂದು ಲಗತ್ತಿಸಲೇ ಎಂದು ಯೋಚನೆ ಕೂಡ ಮಾಡುತ್ತೇನೆ.
ಇದು ನನ್ನ ಜನ್ಮದಿಂದ ಆಂಟಿ ... ಕ್ಷಮಿಸಿ ಅಂಟಿಕೊಂಡು ಬಂದದ್ದು. ಅದು ಹೇಗೆ? ಎಂದರೆ ತುಂಬಾ ಅಂತರದಲ್ಲಿ ಇರುವ ನನ್ನ ರಾಶಿ ಮೀನಾ(ಮೀನ)... ಕಡೆಯ ರಾಶಿ...ಮತ್ತೆ ನಕ್ಷತ್ರ ಪೂರ್ವಾ ಬಾ ಹತ್ತಿರ (ಪೂರ್ವಾಭಾದ್ರ) ಮತ್ತು ರೇವತಿ ಮಧ್ಯ ತುರುವ ಉತ್ತರಾ ಬಾ ಹತ್ತಿರ(ಉತ್ತರಾಭಾದ್ರ)... :-):-)
ನನ್ನ ಜೀವನದ ಪ್ರತಿ ಧೈಯದ(ಗೋಲ್) ನಡುವೆ ಕೂಡ ಏನಾದರೂ ಸೇರಿ ಇರುತ್ತದೆ. ಉಧಾಹರಣೆಗೆ ನನ್ನ ಹೆಸರು ಗೋಪಾಲ್(GOPAL) ತಾನೇ, ಅದರಲ್ಲಿನ 'ಪಾ'(P) ತೆಗೆಯದ ಹೊರತು ಗೋಲ್(GOAL) ಆಗೋಲ್ಲ...
ಮತ್ತೆ ಒಂದು ಪ್ರಬಂದ ಸ್ಪರ್ದೆಗೆ ನನ್ನ ಲೇಖನ ಕಳುಹಿಸಿದ್ದೇನೆ. ನಾನು ಎರಡನೆ ಶ್ರಯಾಂಕ (ಮಧ್ಯ) ಅಥವಾ "ODD MAN OUT"(ಅಂತರ) ಮಾತ್ರ ಬರಬಾರದು ಎಂದು ದಿನವೂ ಶ್ರೀ ರಾಮನನ್ನು ಸ್ಮರಿಸುತ್ತಿದ್ದೇನೆ. ಈ ಮಧ್ಯ ಮತ್ತು ಅಂತರದ ಸಜೇ ಇನ್ನೂ ಎಷ್ಟು ದಿವಸ ನಡೆಯುವುದೋ ಆ ಭಗವಂತನೇ ಬಲ್ಲ ....
first bandre kombu barutte..
ReplyDeletelast adre maryade hogutte..
so, middle nalli irode bestu.. :P
ನಿಜ ಸರ್,
ReplyDeleteಧನ್ಯವಾದಗಳು ಮತ್ತು ವಂದನೆಗಳು.:):-).